ಪ್ರತಿಷ್ಠಿತ ಬ್ರಾಂಡ್ ಅಂಗಡಿಗಳಲ್ಲಿ ಕಳ್ಳರ ಕೈಚಳಕ

  • TV9 Web Team
  • Published On - 10:40 AM, 10 Jun 2020
ಪ್ರತಿಷ್ಠಿತ ಬ್ರಾಂಡ್ ಅಂಗಡಿಗಳಲ್ಲಿ ಕಳ್ಳರ ಕೈಚಳಕ
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೇ ರಾತ್ರಿ 4 ಪ್ರತಿಷ್ಠಿತ ಬ್ರಾಂಡ್ ಅಂಗಡಿಗಳಲ್ಲಿ 2 ಲಕ್ಷ ನಗದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ವಿಠ್ಠಲ್ ಮಲ್ಯ ರಸ್ತೆಯ ಎರಡು ಅಂಗಡಿಗಳು ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ 1 ಅಂಗಡಿ ಸೇರಿದಂತೆ 4 ಅಂಗಡಿಗಳಲ್ಲಿ ಕಳ್ಳರು ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ಜೂನ್ 7ರಂದು ತಡರಾತ್ರಿ ಕಳ್ಳರು ಮೊದಲು ಎರಡು ಅಂಗಡಿಗಳಲ್ಲಿ ಗಾಜುಗಳನ್ನು ಹೊಡೆದು ಕಳ್ಳತನಕ್ಕೆ ಮುಂದಾಗಿದ್ರು ಆದ್ರೆ ಅವರಿಗೆ ಏನು ಸಿಕಿಲ್ಲ. ನಂತರ ಮತ್ತೆರಡು ಅಂಗಡಿಗೆ ಎಂಟ್ರಿ ಕೊಟ್ಟು ಭರ್ಜರಿಯಾಗಿ ಸಿಕ್ಕಿದ್ದನ್ನೆಲ್ಲ ಲೂಟಿ ಮಾಡಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ನಗದು ಕದ್ದು ಪರಾರಿಯಾಗಿದ್ದಾರೆ. ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದಾರೆ.