ನಂಬ್ತೀರೋ, ಬಿಡ್ತೀರೋ! ಒಂಬತ್ತು ವರ್ಷದ ಈ ಯೂಟ್ಯೂಬರ್​ ಗಳಿಕೆ ₹ 217 ಕೋಟಿ

ಯೂಟ್ಯೂಬ್​ ನಲ್ಲಿ ಆಟಿಕೆಗಳ ವಿಮರ್ಶೆ ಮತ್ತು ಮಕ್ಕಳು ಭಾಗವಹಿಸುದನ್ನು ನೋಡುತ್ತಿದ್ದ ರಿಯಾನ್​ಗೆ ತಾನ್ಯಾಕೆ ಯೂಟ್ಯೂಬ್​ನಲ್ಲಿಲ್ಲ ಅನ್ನಿಸಿತು. ಆಗ 2015ರ ಮಾರ್ಚ್​ನಲ್ಲಿ ತಾನೂ ಯೂ ಟ್ಯೂಬ್​ಗಾಗಿ ವಿಡಿಯೋಗಳನ್ನು ತಯಾರಿಸಲು ಪ್ರಾರಂಭಿಸಿದ.

  • TV9 Web Team
  • Published On - 21:17 PM, 19 Dec 2020
ನಂಬ್ತೀರೋ, ಬಿಡ್ತೀರೋ! ಒಂಬತ್ತು ವರ್ಷದ ಈ ಯೂಟ್ಯೂಬರ್​ ಗಳಿಕೆ ₹ 217 ಕೋಟಿ
ರಿಯಾನ್ ಕಾಜಿ

ಟೆಕ್ಸಾಸ್​ನ ರಿಯಾನ್ ಕಾಜಿಗೆ ಕೇವಲ ಒಂಬತ್ತು ವರ್ಷ. ಈಗಿವನು 2020ರ ಅತೀ ಹೆಚ್ಚು ಸಂಭಾವನೆ ಪಡೆಯುವ ಯೂಟ್ಯೂಬರ್ ಆಗಿದ್ದು, 29.5 ಮಿಲಿಯನ್ ಡಾಲರ್ (₹ 217) ಗಳಿಸಿ ಅಚ್ಚರಿ ಮೂಡಿಸಿದ್ದಾನೆ. ರಿಯಾನ್ಸ್ ವರ್ಲ್ಡ್ ಯೂ ಟ್ಯೂಬ್ ಚಾನೆಲ್ ಮೂಲಕ ಯೂಟ್ಯೂಬಿಗೆ ಪರಿಚಿತನಾದ ಇವನು ನಿಕೆಲೋಡಿಯನ್‌ನಲ್ಲಿ ಟಿವಿ ಸರಣಿಯೊಂದರ ಒಪ್ಪಂದಕ್ಕೂ ಈಗ ಸಹಿ ಹಾಕಿ ಸುದ್ದಿಯಾಗಿದ್ದಾನೆ.

ಯೂಟ್ಯೂಬ್​ ನಲ್ಲಿ ಆಟಿಕೆಗಳ ವಿಮರ್ಶೆ ಮತ್ತು ಮಕ್ಕಳು ಭಾಗವಹಿಸುದನ್ನು ನೋಡುತ್ತಿದ್ದ ರಿಯಾನ್​ಗೆ ತಾನ್ಯಾಕೆ ಯೂಟ್ಯೂಬ್​ನಲ್ಲಿಲ್ಲ ಅನ್ನಿಸಿತು. ಆಗ 2015ರ ಮಾರ್ಚ್​ನಲ್ಲಿ ತಾನೂ ಯೂ ಟ್ಯೂಬ್​ಗಾಗಿ ವಿಡಿಯೋಗಳನ್ನು ತಯಾರಿಸಲು ಪ್ರಾರಂಭಿಸಿದ. ಆಗ ಗುವಾನ್ ಎಂಬ ಅಡ್ಡಹೆಸರನ್ನು ಅವನ ತಂದೆ ತಾಯಿ ತೆರೆಯ ಮೇಲೆ ಕಾಜಿ ಎಂದು ಬದಲಾಯಿಸಿದರು. ಕ್ರಮೇಣ ಅವನ ವಿಡಿಯೋಗಳು ಖ್ಯಾತಿ ಪಡೆಯುತ್ತ ಹೋದವು. ಈಗ 9 ಯೂ ಟ್ಯೂಬ್ ಚಾನೆಲ್​ಗಳನ್ನು ನಡೆಸುತ್ತಿದ್ದಾನೆ. 41.7 ಮಿಲಿಯನ್ ಚಂದಾದಾರರನ್ನು ಹೊಂದಿದ್ದು 12.2 ಮಿಲಿಯನ್​ಗೂ ಹೆಚ್ಚು ವೀಕ್ಷಣೆಯನ್ನು ಇವು ಪಡೆದುಕೊಂಡಿವೆ.

ಒಟ್ಟು ಅರವತ್ತು ವಿಡಿಯೋಗಳ ಪೈಕಿ, ಸರ್ಪ್ರೈಝ್ ಎಗ್ ಚಾಲೆಂಜ್ (ಬೃಹದಾಕಾರದ ಮೊಟ್ಟೆ) ವಿಡಿಯೋ 2 ಬಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ವೀಕ್ಷಣೆಗೊಂಡಿದೆ. ಆದಾಗ್ಯೂ, ವಿಡಿಯೋಗಳ ಪ್ರಾಯೋಜಕರ ವಿವರವನ್ನು ಸೂಕ್ತವಾಗಿ ಪ್ರಕಟಗೊಳಿಸಿಲ್ಲ ಎಂಬ ಆರೋಪದ ಮೇಲೆ ಯುಎಸ್ ಫೆಡರಲ್ ಟ್ರೇಡ್ ಕಮಿಷನ್ ತನಿಖೆಯ ಬೆದರಿಕೆಯನ್ನು ಕಾಜಿ ಮತ್ತವನ ಕುಟುಂಬ ಎದುರಿಸುತ್ತಿದೆ.

ರಿಯಾನ್ ಟಾಯ್ಸ್ ರಿವ್ಯೂ ವೀಡಿಯೊಗಳಲ್ಲಿ ಶೇ.9 ರಷ್ಟು ವಿಡಿಯೋಗಳು ಪ್ರೀ ನರ್ಸರಿ ಮಕ್ಕಳನ್ನು ಗುರಿಯಾಗಿಟ್ಟುಕೊಂಡಿವೆ. ವಾಣಿಜ್ಯ ಆಧಾರಿತ ವಿಡಿಯೋಗಳು ಎಂದು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿರುತ್ತವೆ ಮತ್ತು ಅದರಲ್ಲಿ ಬಳಸುವ ಆಹಾರೋತ್ಪನ್ನಗಳು ಮಕ್ಕಳ ಆರೋಗ್ಯಕ್ಕೆ ಮಾರಕವಾಗಿವೆ ಎಂದು ಅನೇಕರು ಆರೋಪಿಸಿರುವುದು ಈಗಾಗಲೇ ವರದಿಗಳಾಗಿ ಪ್ರಕಟಗೊಂಡಿವೆ.

ಲಾಸ್ ವೇಗಾಸ್‌ನ ನೆವಾಡಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನಗಳ ಸಹಾಯಕ ಪ್ರಾಧ್ಯಾಪಕ ಬೆಂಜಮಿನ್ ಬರೋಸ್, ಸಾಮಾಜಿಕ ಜಾಲತಾಣ ಬಳಕೆಯ ಇತ್ತೀಚಿನ ವಿದ್ಯಮಾನಗಳ ಅಧ್ಯಯನದಲ್ಲಿ ತೊಡಗಿಕೊಂಡಿದ್ದು, ‘ವಿಡಿಯೋ ನೋಡುತ್ತ ಮಾಡುತ್ತ ಬೆಳೆದ ಈ ಹುಡುಗ, ವಾಲ್​ಮಾರ್ಟ್, ಟಾರ್ಗೆಟ್, ಅಮೇಝಾನ್ ಗೆ ಚೈಲ್ಡ್ ಇನ್​ಫ್ಲ್ಯೂಯೆನ್ಸರ್ ಆಗಿದ್ದು ನಿಜಕ್ಕೂ ವಿಚಿತ್ರ ಆಘಾತವನ್ನೇ ನೀಡಿದೆ. ಇವನ ಅಥವಾ ಇಂಥ ವಿಡಿಯೋಗಳನ್ನು ನೋಡಿದ ನನ್ನ ಮಕ್ಕಳು ಕೂಡ, ಅವನ ತಂದೆ-ತಾಯಿಯ ಹಾಗೆಯೇ ನಮಗೂ ವಿಡಿಯೋ ಮಾಡಲು ಪ್ರೋತ್ಸಾಹಿಸಿ ಎಂದು ದುಂಬಾಲು ಬಿದ್ದರು. ಆಗಲೇ ನಾನೂ ಕೂಡ ಈ ವಿಡಿಯೋಗಳನ್ನು ನೋಡಲು ಶುರು ಮಾಡಿದೆ. ಕೊಳ್ಳುಬಾಕ ಸಂಸ್ಕೃತಿಗೆ ದಾರಿ ಮಾಡಿಕೊಡುತ್ತ ಮಕ್ಕಳ ಕ್ರಿಯಾಶೀಲತೆಯನ್ನು ಹೇಗೆ ಹತ್ತಿಕ್ಕುತ್ತದೆ ಎನ್ನುವ ಅಂಶ ಗೋಚರವಾಗುತ್ತ ಹೋಯಿತು. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ‘ಪ್ರಭಾವಿ ಮಕ್ಕಳ’ ವಿಡಿಯೋಗಳನ್ನು ವೀಕ್ಷಿಸುತ್ತಿರುವ ಮಕ್ಕಳ ಮನಸ್ಸು ನಡೆವಳಿಕೆಗಳು ಮತ್ತು ಪರಿಣಾಮಗಳ ಬಗ್ಗೆ ಪೋಷಕರು ಅವಶ್ಯವಾಗಿ ಗಮನಿಸುತ್ತಿರಬೇಕು.’ ಎಂದಿದ್ದಾರೆ.

ಆದರೆ ಸೋಶಿಯಲ್ ಮೀಡಿಯಾದ ಸಾಕಷ್ಟು ಪ್ರಭಾವಿ ವ್ಯಕ್ತಿಗಳು ಕೊರೋನಾದಂಥ ಸಂಕಷ್ಟದ ಸಮಯದಲ್ಲಿ ಕಲೆ ಮತ್ತು ಇತರೇ ಉಪಯುಕ್ತ ವಿಷಯಗಳ ಕುರಿತು ವಿಡಿಯೋ ಪ್ರದರ್ಶಿಸಿ ಸಾಕಷ್ಟು ಹಣವನ್ನೂ ಗಳಿಸಿದ್ದಾರೆ ಹಾಗೆಯೇ ಅದನ್ನು ಸಾಮಾಜಿಕ ಸಂಸ್ಥೆಗಳಿಗೆ ದಾನವನ್ನೂ ಮಾಡಿದ್ದಾರೆ. ಆ ಪಟ್ಟಿ ಈ ಕೆಳಗಿನಂತಿದೆ.

ಟಾಪ್​ ಟೆನ್ ಯೂ ಟ್ಯೂಬಿಗರು

ರಿಯಾನ್ ಕಾಜಿ 29.5 ಮಿಲಿಯನ್ ಡಾಲರ್, ಮಿಸ್ಟರ್ ಬೀಸ್ಟ್ 24 ಮಿಲಿಯನ್ ಡಾಲರ್, ಡ್ಯೂಡ್ ಪರ್ಫೆಕ್ಟ್ 23 ಮಿಲಿಯನ್ ಡಾಲರ್, ಕೋಬಿ ಕಾಟನ್, ಕೋರಿ ಕಾಟನ್, ಗ್ಯಾರೆಟ್ ಹಿಲ್ಬರ್ಟ್, ಕೋಡಿ ಜೋನ್ಸ್ ಮತ್ತು ಟೈಲರ್ ಟೋನಿ ಈ ಐವರ ತಂಡ ಸ್ಟಂಟ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು 160,000 ಡಾಲರ್, ರೆಟ್ ಮತ್ತು ಲಿಂಕ್, ಚಾರ್ಲ್ಸ್ ಲಿಂಕನ್ 20 ಮಿಲಿಯನ್ ಡಾಲರ್. ಮಾರ್ಕಿಪ್ಲೈರ್ 19.5 ಮಿ. ಡಾಲರ್, ಪ್ರಿಸ್ಟನ್ ಅರ್ಸೆಮೆಂಟ್ 19 ಮಿ. ಡಾಲರ್, ನಾಸ್ತ್ಯಾ 18.5 ಮಿ. ಡಾಲರ್. ಬಿಲಿಪ್ಪಿ 17 ಮಿ.ಡಾಲರ್, ಡೇವಿಡ್ ಡಾಬ್ರಿಕ್ 12 ಮಿ. ಡಾಲರ್, ಜೆಫ್ರೀ ಲಿನ್ ಸ್ಟೀನಿನಿಂಜರ್ 15 ಮಿ. ಡಾಲರ್.