ಮಲಪ್ರಭೆ ಬಳಿ ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿ: ಮೂವರು ನೀರುಪಾಲು

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ನಗರದ ಕಿರೇಸೂರು ಬಳಿಯ ಮಲಪ್ರಭಾ ಕಾಲುವೆಯಲ್ಲಿ ನಡೆದಿದೆ. ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿಯಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

  • TV9 Web Team
  • Published On - 22:25 PM, 22 Jan 2021
ಮಲಪ್ರಭೆ ಬಳಿ ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿ: ಮೂವರು ನೀರುಪಾಲು
ಮೃತರಿಗಾಗಿ ಪೊಲೀಸರ ಶೋಧಕಾರ್ಯ

ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ನಗರದ ಕಿರೇಸೂರು ಬಳಿಯ ಮಲಪ್ರಭಾ ಕಾಲುವೆಯಲ್ಲಿ ನಡೆದಿದೆ. ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿಯಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಸದ್ಯ, ನೀರುಪಾಲಾದ ಮೂವರಿಗಾಗಿ ಪೊಲೀಸರು ಮತ್ತು ಕಿರೇಸೂರು ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ, ಘಟನೆ ವೇಳೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇತ್ತ, ನಗರದಲ್ಲಿ ಮನೆ ಕಾಂಪೌಂಡ್​ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಂಪೌಂಡ್​ ಕುಸಿದು ಈರಪ್ಪ ಸಂಕನಗೌಡ್ರ ಎಂಬುವವರು ದುರ್ಮರಣ ಹೊಂದಿದ್ದಾರೆ. ಮನೆ ಪಾಯ ತೆಗೆಯುವುದಕ್ಕೆ ಬಂದಿದ್ದ ಕಾರ್ಮಿಕ ಈರಪ್ಪ ಸಾವನ್ನಪ್ಪಿದ್ದಾರೆ.