ಸಬ್ಸಿಡಿ ದರದಲ್ಲಿ ಮದ್ಯ ಹಂಚಲು ರಾಜ್ಯ ಸರ್ಕಾರ ಚಿಂತನೆ !

  • TV9 Web Team
  • Published On - 14:10 PM, 31 Dec 2019
ಸಬ್ಸಿಡಿ ದರದಲ್ಲಿ ಮದ್ಯ ಹಂಚಲು ರಾಜ್ಯ ಸರ್ಕಾರ ಚಿಂತನೆ !

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿರುವ ಮದ್ಯಪ್ರಿಯರಿಗೆ ಅಬಕಾರಿ ಸಚಿವ ಹೆಚ್​. ನಾಗೇಶ್​ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಇಂದು ಮದ್ಯರಾತ್ರಿ 2 ಗಂಟೆಯವರೆಗೆ ಸಿಗಲಿದೆ ಎಣ್ಣೆ ಎಂದು ಘೋಷಿಸಿರುವ ಸಚಿವ ನಾಗೇಶ್, ಬಡ ಜನರು ಹೆಚ್ಚು ಬಳಸುವ ಮದ್ಯವನ್ನು ಸಬ್ಸಿಡಿ ದರದಲ್ಲಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದಿದ್ದಾರೆ.

ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟ ಮದ್ಯ ಸರಬರಾಜು ಮಾಡುವ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ. ಬಿಯರ್ ಮಾರಾಟ ಕಡಿಮೆ ಮಾಡಿ ಹಾಟ್ ಲಿಕ್ಕರ್​ ಹೆಚ್ಚು ಮಾರಾಟ ಮಾಡುವಂತೆ ಅಬಕಾರಿ ಅಧಿಕಾರಿಗಳು ಮಾರಾಟಗಾರರ ಮೇಲೆ ಒತ್ತಡ ಹೇರುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಅಬಕಾರಿ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ನ್ಯೂ ಇಯರ್ ಪ್ರಯುಕ್ತ ಇಂದು ಮಧ್ಯರಾತ್ರಿ 2 ಗಂಟೆಯವರೆಗೆ ಮದ್ಯ ನೀಡಲು ಅನುಮತಿ ಕೊಡಲಾಗಿದೆ. ಮೊದಲು ಸಿಎಲ್ 2 ಲೈಸೆನ್ಸ್ ಪಡೆದವ್ರಿಗೆ ರಾತ್ರಿ 11 ಗಂಟೆಯವರಿಗೆ ಹಾಗು ಸಿಎಲ್ 7 ಲೈಸೆನ್ಸ್ ಇರುವವರಿಗೆ ಮಧ್ಯರಾತ್ರಿ 1 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಆದ್ರೀಗ 2 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ವಿಕಾಸಸೌಧದಲ್ಲಿ ಸಚಿವ ನಾಗೇಶ್​ ಹೇಳಿದ್ದಾರೆ.