ಒಂದೇ ಒಂದು ಮನೆ ಕಟ್ಟಿಸಿಕೊಡಿ ಸರ್ -ಸೂರಿಗಾಗಿ ಕಣ್ಣೀರಿಟ್ಟ ದಿವ್ಯಾಂಗ ಯುವಕ
ತುಮಕೂರು: ಕರುಣಾಹೀನ ಕೊರೊನಾ ಮಹಾಮಾರಿಯ ನಡುವೆ ಮಾನವೀಯತೆ ಸಹ ನಿಧಾನವಾಗಿ ಕಾಣೆಯಾಗುತ್ತಿದೆ ಎಂದು ಅನ್ನಿಸುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಒಂದು ಘಟನೆ ಜಿಲ್ಲೆಯ ಪಾವಗಡ ತಾಲೂಕು ಕಚೇರಿಯಲ್ಲಿ ಬೆಳಕಿಗೆ ಬಂದಿದೆ. ವಸತಿ ಯೋಜನೆಯಡಿ ಮನೆಗಾಗಿ ಅರ್ಜಿ ಹಾಕಿರುವ ದಿವ್ಯಾಂಗ ಯುವಕ ಗಣೇಶ್ ಬಾಬು ಕಳೆದ 5 ವರ್ಷದಿಂದ ಸೂರಿಗಾಗಿ ಮನವಿ ಮಾಡುತ್ತಲೇ ಬಂದಿದ್ದಾನೆ. ಆದರೆ, ಈವರೆಗೂ ಯಾವುದೇ ಅಧಿಕಾರಿಗಳು ಆತನ ಮನವಿಗೆ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ. ಇದರಿಂದ, ತೀವ್ರ ಮನನೊಂದ ಗಣೇಶ್ ಇಂದು ತಾಲೂಕು ಕಚೇರಿಯ ಅಧಿಕಾರಿಗಳ ಮುಂದೆ […]

ತುಮಕೂರು: ಕರುಣಾಹೀನ ಕೊರೊನಾ ಮಹಾಮಾರಿಯ ನಡುವೆ ಮಾನವೀಯತೆ ಸಹ ನಿಧಾನವಾಗಿ ಕಾಣೆಯಾಗುತ್ತಿದೆ ಎಂದು ಅನ್ನಿಸುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಒಂದು ಘಟನೆ ಜಿಲ್ಲೆಯ ಪಾವಗಡ ತಾಲೂಕು ಕಚೇರಿಯಲ್ಲಿ ಬೆಳಕಿಗೆ ಬಂದಿದೆ.
ವಸತಿ ಯೋಜನೆಯಡಿ ಮನೆಗಾಗಿ ಅರ್ಜಿ ಹಾಕಿರುವ ದಿವ್ಯಾಂಗ ಯುವಕ ಗಣೇಶ್ ಬಾಬು ಕಳೆದ 5 ವರ್ಷದಿಂದ ಸೂರಿಗಾಗಿ ಮನವಿ ಮಾಡುತ್ತಲೇ ಬಂದಿದ್ದಾನೆ. ಆದರೆ, ಈವರೆಗೂ ಯಾವುದೇ ಅಧಿಕಾರಿಗಳು ಆತನ ಮನವಿಗೆ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ.
ಇದರಿಂದ, ತೀವ್ರ ಮನನೊಂದ ಗಣೇಶ್ ಇಂದು ತಾಲೂಕು ಕಚೇರಿಯ ಅಧಿಕಾರಿಗಳ ಮುಂದೆ ಕಣ್ಣೀರು ಸುರಿಸಿದ. ನಾನು ಈಗ ಬೀದಿಯಲ್ಲೇ ವಾಸಿಸುತ್ತಿದ್ದೇನೆ ಸಾರ್. ನೀವೇ ಒಮ್ಮೆ ಬಂದು ನೋಡಿ. ಆಗಲೂ ನಿಮಗೆ ನಂಬಿಕೆ ಬರದಿದ್ದರೆ ನನ್ನನ್ನ ಬೂಟು ಕಾಲಲ್ಲಿ ಒದೀರಿ ಸರ್. ಆದರೆ, ದಯವಿಟ್ಟು ನನಗೆ ಸೂರು ಕೊಡಿಸಿ ಸಾರ್ ಎಂದು ಬಿಕ್ಕಳಿಸಿ ಅಳುತ್ತಾ ಅಧಿಕಾರಿಗಳನ್ನ ಅಂಗಲಾಚಿದ ದೃಶ್ಯ ನೆರೆದವರ ಮನ ಕಲುಕಿತು.
Published On - 8:16 pm, Mon, 27 July 20