ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 27-01-2021

 • TV9 Web Team
 • Published On - 20:55 PM, 27 Jan 2021
ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 27-01-2021
ಚಿರತೆ ( ಪ್ರಾತಿನಿಧಿಕ ಚಿತ್ರ)

ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್​ಸೈಟ್​ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.

LIVE NEWS & UPDATES

The liveblog has ended.
 • 27 Jan 2021 20:55 PM (IST)

  ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ಎಮ್.ಕೆ. ಪ್ರಾಣೇಶ್ ಆಯ್ಕೆ

  ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ಎಮ್.ಕೆ. ಪ್ರಾಣೇಶ್ ಆಯ್ಕೆ ಆಗಿದ್ದಾರೆ.  ನಾಳೆ ನಾಳೆ ನಾಮಪತ್ರ ಸಲ್ಲಿಕೆ ಆಗಲಿದೆ. ಸಭಾಪತಿ ಸ್ಥಾನ ಜೆಡಿಎಸ್ ಗೆ ಬಿಡಲು ನಿರ್ಧಾರ ಮಾಡಲಾಗಿದೆ. ಸಭಾಪತಿಯಾಗಿ ಬಸವರಾಜ ಹೊರಟ್ಟಿ ಬಹುತೇಕ ಖಚಿತವಾಗಿದೆ.

 • 27 Jan 2021 18:40 PM (IST)

  FDA ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ: ಸಿಎಆರ್​ ಕಾನ್ಸ್​ಟೇಬಲ್ ವಶ

  ಪರೀಕ್ಷೆಗೂ ಮುನ್ನ FDA ಕೀ ಆನ್ಸರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಸಿಎಆರ್​ ಕಾನ್ಸ್​ಟೇಬಲ್ ಮುಸ್ತಾಕ್ ಕ್ವಾಟಿ ನಾಯ್ಕ್​ರನ್ನು ಸಿಸಿಬಿ ನಿನ್ನೆ ತಡರಾತ್ರಿ ವಶಪಡಿಸೊಕೊಂಡಿದೆ.

   

 • 27 Jan 2021 18:37 PM (IST)

  ಕೆಲವು ದಿನಗಳ ಕಾಲ ಕೆಂಪುಕೋಟೆಗೆ ಪ್ರವೇಶ ನಿರ್ಬಂಧ

  ದೆಹಲಿಯ ಕೆಂಪುಕೋಟೆ ಮೇಲೆ ನಡೆದ ದಾಳಿ ಹಿನ್ನೆಲೆ ಕೆಲವು ದಿನಗಳ ಕಾಲ ಕೆಂಪುಕೋಟೆಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಂಪುಕೋಟೆಯ ಟಿಕೆಟ್ ಕೌಂಟರ್, ಸೆಕ್ಯೂರಿಟಿ ಕೌಂಟರ್, ಮೆಟಲ್ ಡಿಟೆಕ್ಟರ್​, ಸ್ಕ್ಯಾನಿಂಗ್ ಯಂತ್ರ ಧ್ವಂಸವಾಗಿದೆ. ಹೀಗಾಗಿ ಎಲ್ಲವನ್ನೂ ಮೊದಲಿನ ಸ್ಥಿತಿಗೆ ತರಲು ಕಾಲಾವಕಾಶ ಬೇಕಾದ್ದರಿಂದ ಜನರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

   

 • 27 Jan 2021 18:32 PM (IST)

  ಕಾಂಗ್ರೆಸ್​​ನವರು ಸುಮ್ಮನೇ ಆರೋಪಿಸುವುದು ಸರಿಯಲ್ಲ: ನಿರಾಣಿ

  ಸಿಎಂ, ಈಶ್ವರಪ್ಪ ಕುಟುಂಬಸ್ಥರ ವಿರುದ್ಧ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿ ಮಾತನಾಡಿದ ಗಣಿ & ಭೂವಿಜ್ಞಾನ ಸಚಿವ ನಿರಾಣಿ  ಕಾಂಗ್ರೆಸ್​​ನವರು ಸುಮ್ಮನೇ ಆರೋಪಿಸುವುದು ಸರಿಯಲ್ಲ. ಅಕ್ರಮವಾಗಿದ್ದರೆ ಯಾರೇ ದೊಡ್ಡವರಾಗಿದ್ದರೂ ಕ್ರಮ ನಿಶ್ಚಿತ. ಯಾರು ಎಷ್ಟೇ ದೊಡ್ಡವರಾಗಿರಲಿ ಕ್ರಮ ಅನಿವಾರ್ಯ ಎಂದು ತಿಳಿಸಿದ್ದಾರೆ.

   

 • 27 Jan 2021 18:28 PM (IST)

  ರಾಜ್ಯದ 5 ಕಂದಾಯ ವಲಯಗಳ ಜೊತೆ ಸಭೆ ನಡೆಸಿದ ನಿರಾಣಿ

  ಸಭೆ ನಡೆಸಿದ ಗಣಿ ಸಚಿವ ಮುರುಗೇಶ್ ನಿರಾಣಿ, 15 ದಿನಗಳಿಗೊಮ್ಮೆ ಅದಾಲತ್ ನಡೆಸಲು ನಿರ್ಧರಿಸಿದ್ದೇವೆ. ಒಂದೊಂದು ಕಂದಾಯ ವಿಭಾಗದಲ್ಲಿ ಅದಾಲತ್​​ ನಡೆಸುತ್ತೇವೆ. ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆ ಪಟ್ಟಿ ಮಾಡುತ್ತೇವೆ. ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಗಣಿಗಾರಿಕೆ ಅವಶ್ಯಕ. ಆದರೆ ಅಕ್ರಮ ಗಣಿಗಾರಿಕೆಗೆ ಅವಕಾಶವನ್ನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

   

 • 27 Jan 2021 18:24 PM (IST)

  500ಕ್ಕೂ ಅಧಿಕ ಖಲಿಸ್ಥಾನಿ ಟ್ವಿಟ್ಟರ್ ಅಕೌಂಟ್ ಅಮಾನತು

  ಹಿಂಸೆ ಪ್ರಚೋದಿಸುವ ಮಾಹಿತಿ ಮತ್ತು ಪೋಸ್ಟರ್​​ ಹಾಕಿದ್ದ ಹಿನ್ನೆಲೆ ಅಕೌಂಟ್​ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಟ್ವಿಟ್ಟರ್, 500ಕ್ಕೂ ಹೆಚ್ಚು ಖಲಿಸ್ತಾನ ಟ್ವಿಟ್ಟರ್​​ ಖಾತೆಗಳನ್ನು ಅಮಾನತುಗೊಳಿಸಿದೆ.

 • 27 Jan 2021 15:55 PM (IST)

  ದೆಹಲಿ ಹಿಂಸಾಚಾರ: ರೈತರಿಂದ ಪೊಲೀಸರ ವಾಹನ ಧ್ವಂಸ

  ದೆಹಲಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ವಾಹನಗಳನ್ನು ರೈತರು ಧ್ವಂಸ ಮಾಡಿದ್ದಾರೆ.

 • 27 Jan 2021 15:50 PM (IST)

  ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಆಯುಷ್ಮಾನ್ ಪ್ರಶಸ್ತಿಯ ಗರಿ

  ಉತ್ತಮ ಸೇವೆ ಒದಗಿಸಿದ ಆಸ್ಪತ್ರೆಗಳಲ್ಲಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಪ್ರಥಮ ಸ್ಥಾನಗಿಟ್ಟಿಸಿಕೊಂಡಿದೆ. ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರು ನಗರ ಡಿಸಿ ಶಿವಮೂರ್ತಿ, ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರಿಗೆ ಕಿದ್ವಾಯಿ ಗಂಥಿ ಸಂಸ್ಥೆಗೆ ಆಯುಷ್ಮಾನ್ ಪ್ರಶಸ್ತಿ ನೀಡಿದ್ದಾರೆ.

 • 27 Jan 2021 15:32 PM (IST)

  ಬಳ್ಳಾರಿ: ಜಿಲ್ಲೆ ವಿಭಜನೆ ಬಗ್ಗೆ ಮೊದಲಿಂದಲೂ ನಾವು ಖಂಡಿಸಿದ್ದೇವೆ ಎಂದು ಕಾಂಗ್ರೆಸ್​ ಶಾಸಕ ಬಿ.ನಾಗೇಂದ್ರ ಹೇಳಿಕೆ

  ಜಿಲ್ಲೆ ವಿಭಜನೆ ಬಗ್ಗೆ ಮೊದಲಿಂದಲೂ ನಾವು ಖಂಡಿಸಿದ್ದೇವೆ. ನಿನ್ನೆ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ವಿರೋಧಿಸಿದ್ದೇನೆ. ನಮ್ಮ ಸರ್ಕಾರ ಬಂದ್ರೆ ಅಖಂಡ ಜಿಲ್ಲೆಯಾಗಿ ಉಳಿಸುತ್ತೇವೆ. ನನ್ನ ರಾಜೀನಾಮೆಯಿಂದ ಅಖಂಡ ಜಿಲ್ಲೆ ಉಳಿಯುವುದಾದರೆ, ಈ ಕ್ಷಣದಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್​ ಶಾಸಕ ಬಿ.ನಾಗೇಂದ್ರ ಹೇಳಿಕೆ ನೀಡಿದ್ದಾರೆ.

 • 27 Jan 2021 15:16 PM (IST)

  ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭ

  ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. 15ನೇ ವಿಧಾನಸಭೆಯ 9ನೇ ಅಧಿವೇಶನ ಆರಂಭಗೊಳ್ಳಲಿದೆ. ಫೆಬ್ರವರಿ 5 ರವರೆಗೆ 7 ದಿನಗಳ ಕಾಲ ಕಲಾಪ ನಡೆಯಲಿದೆ. ಜಂಟಿ ಅಧಿವೇಶನ ಉದ್ದೇಶಿಸಿ ನಾಳೆ ರಾಜ್ಯಪಾಲರ ಭಾಷಣ ನಡೆಯಲಿದೆ. ರಾಜ್ಯಪಾಲರಿಗೆ ಇಂದು ಅಧಿಕೃತವಾಗಿ ಆಹ್ವಾನ ನೀಡಿದ್ದೇವೆ. ರಾಜ್ಯಪಾಲರ ಭಾಷಣದ ಬಳಿ ಸಂತಾಪ ಸೂಚನೆ ಇರುತ್ತದೆ ಎಂದು ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

 • 27 Jan 2021 15:14 PM (IST)

  ದೆಹಲಿ ಹಿಂಸಾಚಾರ ಪ್ರಕರಣ: ಐವರು ರೈತ ಮುಖಂಡರ ಮೇಲೆ FIR ದಾಖಲು

  ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಐವರು ಮುಖಂಡರ ವಿರುದ್ಧ FIR ದಾಖಲಾಗಿದೆ. ರೈತ ಸಂಘಟನೆಗಳ ಮುಖಂಡರಾದ ಡಾ.ದರ್ಶನ್​ ಪಾಲ್, ರಾಕೇಶ್ ಟಿಕಾಯತ್, ಜೋಗಿಂದರ್, ಬೂಟಾ ಸಿಂಗ್ ಹಾಗೂ ರಾಜೇಂದ್ರ ಸಿಂಗ್ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ.

 • 27 Jan 2021 14:55 PM (IST)

  ಕೊಬ್ಬರಿ ಕ್ವಿಂಟಾಲ್​ಗೆ 10,335 ನಿಗದಿ: 2020ಕ್ಕೆ ಹೋಲಿಸಿದರೆ 375 ರೂ. ಹೆಚ್ಚಳ

  ಕ್ವಿಂಟಾಲ್ ಕೊಬ್ಬರಿಗೆ ಎಂಎಸ್‌ಪಿ 10,335 ನಿಗದಿ ಮಾಡಿದೆ.ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನಿಗದಿ ಮಾಡಿದೆ. 2020ಕ್ಕೆ ಹೋಲಿಸಿದರೆ 375 ರೂ. ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆ ನೀಡಿದ್ದಾರೆ.

 • 27 Jan 2021 14:47 PM (IST)

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಕೊಲ್ಕತ್ತಾದ ಅಪೊಲೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ

  ಎದೆ ನೋವಿನಿಂದ ಬಳಲುತ್ತಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಕೊಲ್ಕತ್ತಾದ ಅಪೊಲೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

 • 27 Jan 2021 14:41 PM (IST)

  ಫೆಬ್ರವರಿ 19ರಿಂದ IPL ಆಟಗಾರರ ಬಿಡ್ಡಿಂಗ್

  ಫೆಬ್ರವರಿ 19ರಿಂದ ಐಪಿಎಲ್ ಆಟಗಾರರ ಬಿಡ್ಡಿಂಗ್ ನಡೆಯುತ್ತದೆ. ಐಪಿಎಲ್ ಸೀಸನ್ 14ಕ್ಕೆ ಆಟಗಾರರ ಬಿಡ್ಡಿಂಗ್ ನಡೆಯಲಿದೆ.

 • 27 Jan 2021 14:38 PM (IST)

  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಂದ ಗಡಿ ವಿವಾದ ಕುರಿತ ಪುಸ್ತಕ ಬಿಡುಗಡೆಗೊಂಡಿದೆ

  ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ಕುರಿತ ಪುಸ್ತಕ ಬಿಡುಗಡೆಗೊಂಡಿದ್ದು, ಮಹಾರಾಷ್ಟ್ರ ರಾಜ್ಯ ಸರ್ಕಾರದಿಂದ ಪುಸ್ತಕ ಬಿಡುಗಡೆಗೊಂಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುಸ್ತಕ ಬಿಡುಗಡೆಗೊಳಿಸಿದ್ದಾರೆ.

 • 27 Jan 2021 14:36 PM (IST)

  ಚೀನಾ: 59 ಚೀನೀ ಅಪ್ಲಿಕೇಶನ್‌ಗಳ ನಿಷೇಧದ ಭಾರತದ ನಿರ್ಧಾರ ಚೀನಾದ ಸಂಸ್ಥೆಗಳಿಗೆ ನೋವುಂಟು ಮಾಡುತ್ತದೆ

  59 ಚೀನೀ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ಹೇರುವ ಭಾರತ ಸರ್ಕಾರದ ನಿರ್ಧಾರವು ವಿಶ್ವ ವಾಣಿಜ್ಯ ಸಂಸ್ಥೆಯ ನ್ಯಾಯಯುತ ವ್ಯವಹಾರ ನಿಯಮಗಳ ಉಲ್ಲಂಘನೆಯಾಗಿದೆ. ಮತ್ತು ಇದು ಚೀನಾದ ಸಂಸ್ಥೆಗಳಿಗೆ ನೋವುಂಟು ಮಾಡುತ್ತದೆ ಎಂದು ಚೀನಾ ಹೇಳಿದೆ.

 • 27 Jan 2021 14:23 PM (IST)

  ಕೆಂಪು ಕೋಟೆಯಲ್ಲಿ ಪ್ರತಿಭಟನಾಕಾರರು ಆಕ್ರಮಣಶೀಲರಾಗಿದ್ದರು: ಪಿಸಿ ಯಾದವ್

  ಅನೇಕ ಜನರು ಅಲ್ಲಿಗೆ ಪ್ರವೇಶಿಸಿದಾಗ ನಮ್ಮನ್ನು ಕೆಂಪು ಕೋಟೆಯಲ್ಲಿ ನಾವಿದ್ದೆವು. ನಾವು ಅವರನ್ನು ಕೋಟೆಯಿಂದ ಹೊರ ಹಾಕಲು ಪ್ರಯತ್ನಿಸಿದ್ದೆವು. ಆದರೆ ಅವರಲ್ಲಿ ತಾಳ್ಮೆ ಇರಲಿಲ್ಲ. ಅವರು ತುಂಬಾ ಆಕ್ರಮಣಕಾರಿ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಪಿಸಿ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.

 • 27 Jan 2021 14:11 PM (IST)

  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ : ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯೆ

  ಮಹಾರಾಷ್ಟ್ರ ಸಿಎಂ ಉದ್ಧವ್ ಉದ್ಧಟತನದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ, ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಕುಂಭಕರ್ಣ ನಿದ್ದೆಗೆ ಜಾರಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

 • 27 Jan 2021 14:08 PM (IST)

  ಕೊಡಗು: ಒಂದೇ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

  ಕೊಡಗು ಜಿಲ್ಲೆ ಗರಗಂದೂರು ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಜನವರಿ 11 ರಿಂದ ಕಾಲೇಜು ಆರಂಭವಾಗಿತ್ತು. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಸಿಬ್ಬಂದಿ ಮತ್ತು ಉಪನ್ಯಾಸಕರಿಗೆ ಆತಂಕ ಹೆಚ್ಚಾಗಿದೆ.

 • 27 Jan 2021 14:03 PM (IST)

  ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ: ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಹೇಳಿಕೆ

  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯಿಂದ ಮತ್ತೆ ಉದ್ಧಟತನ ತೋರಿದಂತಿದೆ. ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ ಎಂದು ಮಾತನಾಡಿದ್ದಾರೆ. ಮರಾಠ ಭಾಷಿಕರ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ, ಅಲ್ಲಿಯವರೆಗೂ ನಾನು ಸುಮ್ಮನೆ ಕೂರುವುದಿಲ್ಲವೆಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ.

 • 27 Jan 2021 14:01 PM (IST)

  ದೆಹಲಿ ಹಿಂಸಾಚಾರ ಪ್ರಕರಣ: ಸಂಜೆ 4 ಗಂಟೆಗೆ ದೆಹಲಿ ಪೊಲೀಸರಿಂದ ಸುದ್ದಿಗೋಷ್ಠಿ ಮುಂದೂಡಿಕೆ

  ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೆ 4 ಗಂಟೆಗೆ ದೆಹಲಿ ಪೊಲೀಸರಿಂದ ಸುದ್ದಿಗೋಷ್ಠಿ ನಡೆಯಲಿದೆ. ವಿಶೇಷ ಪೊಲೀಸ್ ಆಯುಕ್ತರಿಂದ ಸುದ್ದಿಗೋಷ್ಠಿ ನಡೆಯಲಿದೆ.

 • 27 Jan 2021 13:50 PM (IST)

  ಸಿ.ಪಿ ಮೊಹಂತಿ ಫೆಬ್ರವರಿ 1 ರಂದು ಮುಂದಿನ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ

  ಲೆಫ್ಟಿನೆಂಟ್ ಜನರಲ್ ಸಿ.ಪಿ ಮೊಹಂತಿ ಫೆಬ್ರವರಿ 1 ರಂದು ಮುಂದಿನ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಪ್ರಸ್ತುತ ದಕ್ಷಿಣ ಸೇನಾ ಕಮಾಂಡರ್ ಆಗಿದ್ದಾರೆ ಮತ್ತು ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸೈನಿ ಅವರ ಅಧಿಕಾರ ವಹಿಸಿಕೊಂಡಿದ್ದಾರೆ.

 • 27 Jan 2021 13:47 PM (IST)

  ಗುಜರಾತ್: ಕೊವಿಡ್​ ಮಾರ್ಗಸೂಚಿಗಳನ್ನು ಅನುಸರಿಸಿ ಫೆಬ್ರವರಿ 1 ರಿಂದ 9 ಮತ್ತು 11 ನೇ ತರಗತಿಗಳು ಆರಂಭ

  ಕೊವಿಡ್​ ಮಾರ್ಗಸೂಚಿಗಳನ್ನು ಅನುಸರಿಸಿ ಫೆಬ್ರವರಿ 1 ರಿಂದ 9 ಮತ್ತು 11 ನೇ ತರಗತಿಗಳ ಶಾಲೆಗಳು ಪ್ರಾರಂಭವಾಗುತ್ತವೆ ಎಂದು ಗುಜರಾತ್ ಶಿಕ್ಷಣ ಸಚಿವ ಭೂಪೇಂದ್ರಸಿಂಗ್ ಚೂಡಾಸಮಾ ಹೇಳಿದ್ದಾರೆ.

 • 27 Jan 2021 13:37 PM (IST)

  ಮೈಸೂರು: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಧರಣಿ

  ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಲ್ಲಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಧರಣಿಗೆ ಕುಳಿತಿದ್ದಾರೆ. ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ವೇತನ ನೀಡುತ್ತಿಲ್ಲ. ಗುತ್ತಿಗೆದಾರರು ಅನ್ಯಾಯ ‌ಮಾಡುತ್ತಿದ್ದಾರೆಂದು ಅಶೋಕಪುರಂ ಉದ್ಯಾನವನದಿಂದ ಪ್ರತಿಭಟನಾ ಮೆರವಣಿಗೆ ಹೊರಟಿದೆ.

 • 27 Jan 2021 13:34 PM (IST)

  ಬಜೆಟ್ ದಿನ ರೈತರ ಸಂಸತ್​ ಮುತ್ತಿಗೆ ಕೈಬಿಡುವ ಸಾಧ್ಯತೆ!

  ಬಜೆಟ್ ದಿನ ರೈತರ ಸಂಸತ್​ ಮುತ್ತಿಗೆ ಕೈಬಿಡುವ ಸಾಧ್ಯತೆ ಇದೆ. ಸಂಸತ್​ವರೆಗೆ ಮೆರವಣಿಗೆ ತೆರಳಿ ಮುತ್ತಿಗೆಗೆ ನಿರ್ಧರಿಸಿದ್ದರು. ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರ ಘಟನೆ ಬಳಿಕ, ಸಂಸತ್​ ಮುತ್ತಿಗೆ ಕೈಬಿಡುವ ಬಗ್ಗೆ ರೈತ ಸಂಘಟನೆಗಳ ಚಿಂತನೆ ನಡೆಯುತ್ತಿದೆ.

 • 27 Jan 2021 13:29 PM (IST)

  ಗಡಿವಿವಾದ ಕುರಿತ ಪುಸ್ತಕ ಬಿಡುಗಡೆ ವಿಚಾರ: ಗೋಕಾಕ್‌ನ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ

  ಮಹಾರಾಷ್ಟ್ರ ಸರ್ಕಾರದ ವತಿಯಿಂದ ಗಡಿವಿವಾದ ಕುರಿತ ಪುಸ್ತಕ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪುಸ್ತಕ ಬಿಡುಗಡೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಕೈಗೊಂಡಿದೆ.
  ಬೆಳಗಾವಿ ಜಿಲ್ಲೆ ಗೋಕಾಕ್‌ನ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕರವೇ ಗೋಕಾಕ್ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ.

 • 27 Jan 2021 13:26 PM (IST)

  ದೆಹಲಿ ಹಿಂಸಾಚಾರ ಪ್ರಕರಣ: 200 ಜನರನ್ನು ವಶಕ್ಕೆ ಪಡೆದ ಪೊಲೀಸರು

  ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 200 ಜನರನ್ನು ವಶಕ್ಕೆ ಪಡೆದಿದ್ದಾರೆ.

 • 27 Jan 2021 13:24 PM (IST)

  ತೆಲಂಗಾಣ ಕೋವಿಡ್ ಪಟ್ಟಿ

  ತೆಲಂಗಾಣದಲ್ಲಿ ಜನವರಿ 26 ರಂದು 147 ಹೊಸ ಕೊವಿಡ್ ಪ್ರಕರಣಗಳು ಕಂಡುಬಂದಿದೆ. ಹಾಗೂ ಓರ್ವರು ಸಾವನ್ನಪ್ಪಿದ್ದಾರೆ.

  ಸಕ್ರಿಯ ಕೊವಿಡ್ ಪ್ರಕರಣಗಳು 2,819

 • 27 Jan 2021 13:21 PM (IST)

  ಕೇರಳ: ಶಾಲೆಯನ್ನು ಉದ್ಛಾಟಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ

  ಕೇರಳದ ಮಲಪುರಂನ ವಂದೂರಿನಲ್ಲಿನ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆ ಕಟ್ಟಡವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಉದ್ಘಾಟಿಸಿದರು.

 • 27 Jan 2021 13:03 PM (IST)

  ‘ಮಾಸಾಶನ ಅಭಿಯಾನ’ಕ್ಕೆ ಚಾಲನೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ

  ಮನೆ ಬಾಗಿಲಿಗೆ ‘ಮಾಸಾಶನ ಅಭಿಯಾನ’ಕ್ಕೆ ಚಾಲನೆ ಹಿನ್ನೆಲೆಯಲ್ಲಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಯೋಜನೆಗಳು ಸಿಗಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಆಶಯ ಸಹ ಹೌದು. ಪಿಂಚಣಿಗಾಗಿ ಫಲಾನುಭವಿಗಳು ಬಹಳ ಕಷ್ಟ ಪಡುತ್ತಿದ್ದರು.ಅದನ್ನ ತಪ್ಪಿಸಲು ಮಹತ್ವದ ಯೋಜನೆ ಜಾರಿ ಮಾಡಿದ್ದೇವೆ.ಸದ್ಯ ಈ ಯೋಜನೆ ವೃದ್ಧರಿಗೆ ಮಾತ್ರ ಅನ್ವಯ ಆಗಲಿದೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

 • 27 Jan 2021 12:50 PM (IST)

  FDA ಉತ್ತರ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ತನಿಖೆ ಇಲ್ಲಿಗೆ ಮುಕ್ತಾಯ ಆಗಲ್ಲ: ಬಸವರಾಜ ಬೊಮ್ಮಾಯಿ

  ಪರೀಕ್ಷೆಗೂ ಮುನ್ನ FDA ಉತ್ತರ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಪ್ರಕರಣದ ತನಿಖೆ ಇಲ್ಲಿಗೇ ಮುಕ್ತಾಯ ಆಗಲ್ಲ. ತಪ್ಪಿತಸ್ಥರು ಯಾರೇ ಆದರೂ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

 • 27 Jan 2021 12:47 PM (IST)

  ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ FIR ದಾಖಲು ಹಿನ್ನೆಲೆ: ರದ್ದು ಮಾಡಲು ಆಗ್ರಹಿಸಿ ಕಾಂಗ್ರೆಸ್ ರ‍್ಯಾಲಿ

  ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ FIR ದಾಖಲು ಹಿನ್ನೆಲೆಯಲ್ಲಿ, FIR ರದ್ದು ಮಾಡಲು ಆಗ್ರಹಿಸಿ ಬೆಂಗಳೂರಿನ ಜಯನಗರದಲ್ಲಿ ಕಾಂಗ್ರೆಸ್ ರ‍್ಯಾಲಿ ಕೈಗೊಳ್ಳಲಾಗಿದೆ.

 • 27 Jan 2021 12:44 PM (IST)

  ಅದು ನಾಯಿಯಲ್ಲ ಚಿರತೆಯೇ.. ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಸಿಬ್ಬಂದಿ

  ಕಳೆದ ನಾಲ್ಕು ದಿನಗಳ ಹಿಂದೆ ಚಿರತೆಯೊಂದು ಬೆಂಗಳೂರು ದಕ್ಷಿಣ ಭಾಗದ ಅಪಾರ್ಟ್​ಮೆಂಟ್​ನೊಳಕ್ಕೆ ನುಸುಳಿದೆ. ಅದು ರಾತ್ರಿ ವೇಳೆ ನುಸುಳಿದ್ದರಿಂದ ಕತ್ತಲೆಯಲ್ಲಿ ಸಿಸಿಟಿವಿಯಲ್ಲಿ ಕಂಡುಬಂದ ಪ್ರಾಣಿ ಚಿರತೆಯಲ್ಲ; ನಾಯಿ ಎಂದು ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಯಾಮಾರಿದ್ದರು. ಆದರೆ ಈಗ ಅಪಾರ್ಟ್​ಮೆಂಟ್​ನೊಳಕ್ಕೆ ನುಸುಳಿರುವುದು ಚಿರತೆಯೇ ಸರಿ ಎಂಬುದು ಪಕ್ಕಾ ಆಗಿದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.

 • 27 Jan 2021 12:30 PM (IST)

  ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಿಂಚಣಿ ಬರಲಿದೆ: ಕಂದಾಯ ಸಚಿವ ಆರ್.ಅಶೋಕ್

  ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಿಂಚಣಿ ಬರಲಿದೆ.ಇಷ್ಟು ವರ್ಷದಲ್ಲಿ ಈ ಯೋಜನೆ ಯಾಕೆ ಜಾರಿಗೆ ತಂದಿಲ್ಲ ಎಂದು ತಿಳಿಯುತ್ತಿಲ್ಲ. ಹಿಂದಿನ ಸರ್ಕಾರ ಈ ಯೋಜನೆ ಜಾರಿಗೆ ತರಬೇಕಿತ್ತು. ಆದ್ರೆ ಅವರು ಇದರ ಕಡೆ ಗಮನ ಹರಿಸಿಲ್ಲ.ಈಗ ನಾವು ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿಕೆ ನೀಡಿದ್ದಾರೆ.

 • 27 Jan 2021 12:23 PM (IST)

  ಬೆಳಗಾವಿ ತೈಮಾಸಿಕ ಕೆಡಿಪಿ ಸಭೆ ಆರಂಭ: ಜನಪ್ರತಿನಿಧಿಗಳ ನಿರಾಸಕ್ತಿ

  ಬೆಳಗಾವಿ ಜಿಲ್ಲೆಯ ತೈಮಾಸಿಕ ಕೆಡಿಪಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ‌ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಆರಂಭವಾಗಿದ್ದು, 18 ಶಾಸಕರ ಪೈಕಿ ಕೇವಲ ಐದು ಜನ ಶಾಸಕರು ಮಾತ್ರ ಹಾಜರಾಗಿದ್ದು, ಉಳಿದವರು ಗೈರು ಹಾಜರಾಗಿದ್ದಾರೆ. ಕೆಡಿಪಿ ಸಭೆಗೆ ಜಿಲ್ಲೆಯ ಜನಪ್ರತಿನಿಧಿಗಳ ನಿರಾಸಕ್ತಿ ಕಾಣಿಸುತ್ತಿದೆ.

 • 27 Jan 2021 12:21 PM (IST)

  ಮನೆ ಬಾಗಿಲಿಗೆ ಮಾಸಾಶನ ಅಭಿಯಾನಕ್ಕೆ ಸಿಎಂ ಚಾಲನೆ

  ಮನೆ ಬಾಗಿಲಿಗೆ ಮಾಸಾಶನ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ನವೋದಯ ಆ್ಯಪ್, ತಂತ್ರಾಂಶ ಲೋಕಾರ್ಪಣೆ ಮಾಡಲಾಗಿದೆ. ಕಂದಾಯ ಸಚಿವ ಆರ್ ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಭಾಗಿ‌ಯಾಗಿದ್ದಾರೆ.

 • 27 Jan 2021 12:17 PM (IST)

  ಶಶಿಕಲಾ ನಟರಾಜನ್‌ಗೆ ವಿಕ್ಟೋರಿಯಾದಲ್ಲೇ ಚಿಕಿತ್ಸೆ ಮುಂದುವರೆಯುತ್ತೆ

  ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆ ಹಿನ್ನೆಲೆ, ಸದ್ಯ ಶಶಿಕಲಾ ನಟರಾಜನ್‌ಗೆ ವಿಕ್ಟೋರಿಯಾದಲ್ಲೇ ಚಿಕಿತ್ಸೆ ಮುಂದುವರೆಯುತ್ತದೆ. ವಿಕ್ಟೋರಿಯಾ ಆಸ್ಪತ್ರೆ ಡೀನ್​ ಜಯಂತಿ ಹೇಳಿಕೆ ನೀಡಿದ್ದಾರೆ.

 • 27 Jan 2021 12:11 PM (IST)

  ಶಶಿಕಲಾ ನಟರಾಜನ್‌ಗೆ 8 ದಿನಗಳ ಕಾಲ ಚಿಕಿತ್ಸೆ ಅಗತ್ಯ

  ಶಶಿಕಲಾ ನಟರಾಜನ್‌ಗೆ 8 ದಿನಗಳ ಕಾಲ ಚಿಕಿತ್ಸೆ ಅಗತ್ಯವಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಶಿಕಲಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆ ಹಿನ್ನೆಲೆಯಲ್ಲಿ, ಖಾಸಗಿ ಆಸ್ಪತ್ರೆಯಲ್ಲಿ ವಿ.ಕೆ.ಶಶಿಕಲಾಗೆ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.

 • 27 Jan 2021 12:08 PM (IST)

  4 ವರ್ಷಗಳ ಬಳಿಕ ಜೈಲಿನಿಂದ ಶಶಿಕಲಾ ಬಿಡುಗಡೆ: ಆಸ್ಪತ್ರೆಯಿಂದ ಡಿಸ್ಚಾರ್ಜ್​ ಯಾವಾಗ?

  ಜೈಲಿನಿಂದ ವಿ.ಕೆ.ಶಶಿಕಲಾ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಂಡಿದೆ. 4 ವರ್ಷಗಳ ಬಳಿಕ ಜೈಲಿನಿಂದ ಶಶಿಕಲಾ ಬಿಡುಗಡೆಯಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ಶಶಿಕಲಾ ಆಸ್ಪತ್ರೆಯಿಂದ ಬಿಡುಗಡೆಯಾಗ್ತಾರಾ ಎಂದು ಕಾದು ನೋಡಬೇಕಿದೆ.

 • 27 Jan 2021 12:05 PM (IST)

  ಗಡಿ ವಿವಾದ ಪುಸ್ತಕ ಬಿಡುಗಡೆಗೆ ಮುಂದಾದ ಮಹಾರಾಷ್ಟ್ರ ಸರ್ಕಾರ :ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿ ಹೇಳಿಕೆ

  ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ಸರ್ಕಾರದಿಂದ ಪುಸ್ತಕ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಇರುವಾಗ ಪುಸ್ತಕ ಬಿಡುಗಡೆ ನ್ಯಾಯಾಂಗ ನಿಂದನೆಯಾಗುತ್ತೆ. ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ, ಕರ್ನಾಟಕ ಸರ್ಕಾರ ಪುಸ್ತಕ ತರಿಸಿ ಪರಿಶೀಲನೆ ನಡೆಸಬೇಕು. ನಂತರ ಪುಸ್ತಕವನ್ನೇ ದಾಖಲೆಯಾಗಿಟ್ಟುಕೊಂಡು ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು ಎಂದು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿ ಹೇಳಿಕೆ.

 • 27 Jan 2021 12:00 PM (IST)

  ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರದಿಂದ ಪುಸ್ತಕ ಬಿಡುಗಡೆ.. ಫಡ್ನವೀಸ್ ಸಹ ಭಾಗಿ: ತಾರಕಕ್ಕೇರುತ್ತ ಅಸಮಾಧಾನ?

  ಮತ್ತೆ ಗಡಿ ಕಿಡಿ ಹೊತ್ತಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರುವ ಹಾಗೆ ಕಾಣಿಸುತ್ತಿದೆ. ಏಕೆಂದರೆ ಇಂದು ವಿವಾದಿತ ಪುಸ್ತಕ ಬಿಡುಗಡೆಗೆ ಮಹಾರಾಷ್ಟ್ರ ಸರ್ಕಾರದ ಸಿದ್ಧತೆ ಮಾಡಿಕೊಂಡಿದೆ. ಗಡಿ ವಿವಾದ ಕುರಿತ ಪುಸ್ತಕ ಬಿಡುಗಡೆ ಮಾಡಲು ಮುಂದಾಗಿದೆ.

 • 27 Jan 2021 11:56 AM (IST)

  ಸಚಿವ ಪ್ರಹ್ಲಾದ್ ಪಟೇಲ್ ಕೆಂಪು ಕೋಟೆಗೆ ಭೇಟಿ

  ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಕೆಂಪು ಕೋಟೆಗೆ ಭೇಟಿ ನೀಡಿದ್ದಾರೆ.

 • 27 Jan 2021 11:54 AM (IST)

  ಕೆಂಪು ಕೋಟೆಯಲ್ಲಿ ಹೆಚ್ಚಿದ ತೀವ್ರತೆ ಹಿನ್ನೆಲೆ: ಅಲ್ಲಲ್ಲಿ ಮುರಿದ ಬಿದ್ದ ಗಾಜಿನ ಚೂರುಗಳು

  ನಿನ್ನೆ(ಜ.26) ನಡೆದ ಪ್ರತಿಭಟನೆಯ ತೀವ್ರತೆಯಿಂದಾಗಿ,ದೆಹಲಿಯ ಕೆಂಪು ಕೋಟೆಯಲ್ಲಿನ ಟಿಕೆಟ್ ಕೌಂಟರ್ ಧ್ವಂಸಗೊಂಡಿದೆ. ಕೋಟೆಯಲ್ಲಿ ಮುರಿದ ಗಾಜಿನ ಚೂರುಗಳು, ಚದುರಿದ ಕಾಗದದ ತುಂಡುಗಳು ಕಂಡು ಬಂದಿದೆ.

 • 27 Jan 2021 11:43 AM (IST)

  ಜೆ.ಜಯಲಲಿತಾ ಅವರ ಸ್ಮಾರಕ ಅನಾವರಣಗೊಂಡಿದೆ

  ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸ್ಮಾರಕವನ್ನು ಮರೀನಾ ಬೀಚ್‌ನಲ್ಲಿ ಅನಾವರಣಗೊಳಿಸಿದರು.

 • 27 Jan 2021 11:35 AM (IST)

  ದೆಹಲಿಯಲ್ಲಿ ಹಿಂಸಾಚಾರ ಹಿನ್ನೆಲೆ: ಇಂದು ಮಧ್ಯಾಹ್ನ 2.30ಕ್ಕೆ ಸುದ್ದಿಗೋಷ್ಠಿ

  ದೆಹಲಿಯಲ್ಲಿ ನಿನ್ನೆ ರೈತರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 22 FIR ದಾಖಲಿಸಲಾಗಿದೆ. ಈ ಕುರಿತಂತೆ ದೆಹಲಿ ಪೊಲೀಸರು ಮಧ್ಯಾಹ್ನ 2.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

 • 27 Jan 2021 11:21 AM (IST)

  ಶಶಿಕಲಾ ಬಿಡುಗಡೆ ಹಿನ್ನಲೆ: ವಿಕ್ಟೊರಿಯಾ ಆಸ್ಪತ್ರೆ ಮುಂದೆ ಸಿಹಿ ಹಂಚಿಕೆ

  ಶಶಿಕಲಾ ಬಿಡುಗಡೆ ಹಿನ್ನಲೆಯಲ್ಲಿ ವಿಕ್ಟೊರಿಯಾ ಆಸ್ಪತ್ರೆ ಮುಂದೆ ಸಿಹಿ ಹಂಚಿಕೆ ಮಾಡಲಾಗುತ್ತಿದೆ. ಶಶಿಕಲಾ ವಾಂಗ ಎಂದು ಘೋಟಷಣೆ ಕೂಗುವ ಮುಖಾಂತರ ಸಿಹಿ ಹಂಚಿಕೆ ಮಾಡುತ್ತಿದ್ದಾರೆ.

 • 27 Jan 2021 11:19 AM (IST)

  ‘ಸಮಾಜ ನಿರ್ಲಕ್ಷಿಸಿದಾಗ ಅಧಃಪತನ ಆರಂಭ’ – ಯು.ಟಿ.ಖಾದರ್ ಟ್ವೀಟ್

  ದೆಹಲಿಯ ಬೀದಿಬೀದಿಗಳಲ್ಲಿ ರೈತರು ಹೋರಾಟ ಮಾಡ್ತಿದ್ದಾರೆ. ಸಾವು ನೋವುಗಳು ಸಂಭವಿಸುತ್ತಿರುವುದು ನಿಜಕ್ಕೂ ದುಃಖಕರ ಸಂಗತಿ. ಅಂದು ಮಾತೆತ್ತಿದರೆ ಡಾ.ಸಿಂಗ್‌ರನ್ನ ಮೌನಿಬಾಬಾ ಎನ್ನುತ್ತಿದ್ದರು, ಬಿಜೆಪಿಗರು ಇಂದು ಮೌನಿಯಾಗಿರುವುದು ಏಕೆ?. ‘ಸಮಾಜ ನಿರ್ಲಕ್ಷಿಸಿದಾಗ ಅಧಃಪತನ ಆರಂಭ’ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ನೆನಪಿಸಲು ಬಯಸುತ್ತೇನೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಟ್ವೀಟ್ ಪ್ರಶ್ನೆ ಒಡ್ಡಿದ್ದಾರೆ.

 • 27 Jan 2021 11:15 AM (IST)

  ನವದೆಹಲಿಯಲ್ಲಿ ಇಂಟರ್‌ನೆಟ್ ಕಡಿತ ಹಿನ್ನೆಲೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ

  ನವದೆಹಲಿಯಲ್ಲಿ ಇಂಟರ್‌ನೆಟ್ ಕಡಿತ ಮಾಡಿದ್ದ ಹಿನ್ನೆಲೆಯಲ್ಲಿ, ವಕೀಲರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗಿದೆ. ‘ಸುಪ್ರೀಂ’ ಕಲಾಪಕ್ಕೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳಬೇಡಿ. ಹಾಜರಾಗದ ಕಾರಣಕ್ಕೆ ಆದೇಶ ಹೊರಡಿಸಬೇಡಿ ಎಂದು ಸುಪ್ರೀಂಕೋರ್ಟ್ ವಕೀಲರ ಅಸೋಸಿಯೇಷನ್‌ನಿಂದ ಪತ್ರ ಬರೆಯಲಾಗಿದೆ.

 • 27 Jan 2021 11:13 AM (IST)

  ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸ

  ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಯೋಧರಿಗೆ ಗಂಭೀರ ಗಾಯವಾಗಿದೆ.

 • 27 Jan 2021 11:11 AM (IST)

  ದೆಹಲಿ: ರಾತ್ರಿ ಪೂರ್ತಿ ನಿದ್ದೆ ಇಲ್ಲದೆ ಪೊಲೀಸರ ಕಣ್ಗಾವಲು

  ಕೆಂದ್ರ ಸರ್ಕಾರ ಗಡಿಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿದ್ದು, ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ನಿಟ್ಟಿನಲ್ಲಿ ರಾತ್ರಿ ಪೂರ್ತಿ ನಿದ್ದೆ ಇಲ್ಲದೆ ಪೊಲೀಸರ ಕಣ್ಗಾವಲಾಗಿ ಕಾಯುತ್ತ ಕುಳಿತಿದ್ದಾರೆ.

 • 27 Jan 2021 11:03 AM (IST)

  ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 12,689 ಜನರಿಗೆ ಕೊರೊನಾ

  ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 12,689 ಜನರಿಗೆ ಕೊರೊನಾ ದೃಢಪಟ್ಟಿದೆ.ಹಾಗೂ 24 ಗಂಟೆಯಲ್ಲಿ ಕೊರೊನಾಗೆ 137 ಜನರು ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟೂ 20,29,480 ಜನರಿಗೆ ಲಸಿಕೆ ನೀಡಲಾಗಿದೆ.

 • 27 Jan 2021 10:49 AM (IST)

  ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ

  ಪ್ರಧಾನಿ ನೇತೃತ್ವದಲ್ಲಿಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಂಪುಟ ಸಭೆಯಲ್ಲಿ ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆ ನಡೆಯಲಿದೆ. ಗಲಾಟೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.

 • 27 Jan 2021 10:45 AM (IST)

  ನಿರ್ದಿಷ್ಟ ಸಮುದಾಯದ ವಿರುದ್ಧ ಪಿತೂರಿ ನಡೆಯುತ್ತಿದೆ: BKU ನಾಯಕ ರಾಕೇಶ್ ಟಿಕಾಯತ್

  ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಅನಕ್ಷರಸ್ಥರು ಟ್ರ್ಯಾಕ್ಟರ್‌ಗಳನ್ನು ಓಡಿಸಿದ್ದರು. ಟ್ರ್ಯಾಕ್ಟರ್‌ಗಳನ್ನು ಓಡಿಸುವವರಿಗೆ ಮಾರ್ಗಗಳು ಗೊತ್ತಿರಲಿಲ್ಲ. ಪೊಲೀಸರು ದೆಹಲಿ ಕಡೆಗೆ ಹೋಗುವ ಮಾರ್ಗ ತಿಳಿಸಿದ್ದರು. ಹೀಗಾಗಿ ರೈತರು ದೆಹಲಿಗೆ ಹೋಗಿ ಮನೆಗೆ ವಾಪಸಾಗಿದ್ದಾರೆ. ಕೆಲ ರೈತರಿಗೆ ತಿಳಿಯದೆ ಕೆಂಪುಕೋಟೆ ಕಡೆ ಹೋಗಿದ್ದಾರೆ. ಕೆಂಪುಕೋಟೆ ಮೇಲೆ ಸಿಖ್ ಧರ್ಮ ಧ್ವಜ ಹಾರಿಸಿದ್ದು ತಪ್ಪು. ಅವರು ಮಾಡಿದ ತಪ್ಪಿಗೆ ದಂಡ ತೆರಲೇಬೇಕು. ನಿರ್ದಿಷ್ಟ ಸಮುದಾಯದ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ದೆಹಲಿಯಲ್ಲಿ ಭಾರತೀಯ ಕಿಸಾನ್​ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.

 • 27 Jan 2021 10:37 AM (IST)

  ದೇಶದಲ್ಲಿ ನಿನ್ನೆ(ಜ.26) 5,50,426 ಕೊವಿಡ್ ಸ್ಯಾಂಪಲ್​ ಟೆಸ್ಟ್

  ದೇಶದಲ್ಲಿ ನಿನ್ನೆ 5,50,426 ಕೊವಿಡ್ ಸ್ಯಾಂಪಲ್​ ಟೆಸ್ಟ್​ಗೆ ಮುಂದಾಗಿದ್ದು, ಈವರೆಗೆ ಒಟ್ಟು 19,36,13,120 ಸ್ಯಾಂಪಲ್​ ಟೆಸ್ಟ್​ ಮಾಡಲಾಗಿದೆ. ಈ ಕುರಿತಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವರದಿ ಮಾಡಿದೆ.

 • 27 Jan 2021 10:31 AM (IST)

  ವಿಧಾನಪರಿಷತ್ ಸಭಾಪತಿ ಸ್ಥಾನ ವಿಚಾರ: ಸಿಎಂ ಭೇಟಿಗೆ ಹೊರಟ ಬಸವರಾಜ ಹೊರಟ್ಟಿ

  ವಿಧಾನಪರಿಷತ್ ಸಭಾಪತಿ ಸ್ಥಾನ ವಿಚಾರದ ಹಿನ್ನೆಲೆಯಲ್ಲಿ, ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ವಿಧಾನಪರಿಷತ್ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ತೆರಳಲಿದ್ದಾರೆ. ಪರಿಷತ್ ಸಭಾಪತಿ ಸ್ಥಾನ ಜೆಡಿಎಸ್‌ಗೆ ಪಡೆಯಲು ನಿರ್ಧಾರಕ್ಕೆ ಸಂಬಂಧಿಸಿದಂತೆ, ಮುಖ್ಯಂತ್ರಿಯವರ ಬಳಿ ಮನವಿ ಮಾಡಲು ಹೊರಟಿದ್ದಾರೆ.

 • 27 Jan 2021 10:27 AM (IST)

  ಹುಣಸೋಡು ಸ್ಪೋಟ: ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ

  ಶಿವಮೊಗ್ಗ ತಾಲೂಕಿನ ಹುಣಸೋಡುನಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನಾ ಸ್ಥಳಕ್ಕೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಘಟನೆ ಸಂಬಂಧ ಮಾಹಿತಿಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಡೆಯಲಿದ್ದಾರೆ.

 • 27 Jan 2021 09:51 AM (IST)

  ಆಂಧ್ರದ ತಿರುಮಲ‌‌ದ ಬಾಲಾಜಿ ದೇವಾಲಯಕ್ಕೆ ಕಳೆದ 24 ಗಂಟೆಗಳಲ್ಲಿ‌ ಭಾರಿ‌ ಆದಾಯ

  ಆಂಧ್ರದ ತಿರುಮಲ‌‌ದ ಬಾಲಾಜಿ ದೇವಾಲಯಕ್ಕೆ ಕಳೆದ 24 ಗಂಟೆಗಳಲ್ಲಿ‌ ಭಾರಿ‌ ಆದಾಯ ಹರಿದು ಬಂದಿದೆ. ಭಕ್ತರಿಂದ ಹುಂಡಿಯಲ್ಲಿ 2.95 ಕೋಟಿ ಸಂಗ್ರಹವಾಗಿದೆ. 48,504 ಭಕ್ತರಿಂದ ಬಾಲಾಜಿಯ ದರ್ಶನವಾಗಿದ್ದು, 16,910 ಭಕ್ತರು ತಲೆ ಮುಡಿ ಸಮರ್ಪಿಸಿರುವುದು ತಿಳಿದು ಬಂದಿದೆ.

 • 27 Jan 2021 09:49 AM (IST)

  ಭಾರತದಿಂದ ಶ್ರೀಲಂಕಾಕ್ಕೆ ಕೊವಿಡ್ ಲಸಿಕೆ ರಫ್ತು

  ಭಾರತದಿಂದ ಶ್ರೀಲಂಕಾಕ್ಕೆ ಕೊವಿಡ್ ಲಸಿಕೆ ರಫ್ತು ಮಾಡಲಾಗಿದೆ. 5 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ರಫ್ತು ಮಾಡಲಾಗಿದ್ದು, ಈವರೆಗೆ ಭಾರತದಿಂದ 8 ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಲಾಗಿದೆ.

 • 27 Jan 2021 09:45 AM (IST)

  ನಿನ್ನೆ ನಡೆದ ಗಲಾಟೆಯಲ್ಲಿ 86 ಪೊಲೀಸರಿಗೆ ಗಾಯ: FIR ದಾಖಲು

  ನಿನ್ನೆ ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ಗಲಾಟೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆ ಬಳಿ ಪೊಲೀಸರ ಬಿಗಿ ಭದ್ರತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ ನಡೆದ ಗಲಾಟೆಯಲ್ಲಿ 86 ಪೊಲೀಸರು ಗಾಯಗೊಂಡಿದ್ದು, ಗಾಯಾಳು ಪೊಲೀಸ್‌ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಸಾಚಾರ ಸಂಬಂಧ FIR ದಾಖಲಿಸಲಾಗಿದೆ. ಪಾಂಡವ್‌ನಗರ್, ಸೀಮಾಪುರಿ, ನಜಾಫ್‌ಗಢ್, ಗಾಜಿಪುರ ದ್ವಾರಕಾ, ಉತ್ತಮ್‌ನಗರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 • 27 Jan 2021 09:38 AM (IST)

  ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾಗೆ ಸಿಗುತ್ತಾ ಜೈಲಿನಿಂದ ಬಿಡುಗಡೆ ಭಾಗ್ಯ?

  4 ವರ್ಷ ಶಿಕ್ಷೆ ಅನುಭವಿಸಿದ ಜಯಲಲಿತಾ ಆಪ್ತೆ ಶಶಿಕಲಾಗೆ ಇಂದು ಜೈಲುವಾಸ ಅಂತ್ಯವಾಗಲಿದೆ. ಆದರೆ ಶಶಿಕಲಾ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಯಲ್ಲಿ ಜೈಲಿನ ಕೆಲ ಪ್ರಕ್ರಿಯೆಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದ್ದು ಜೈಲಾಧಿಕಾರಿಗಳು ಗುಣಮುಖರಾದ ನಂತರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿತ್ತು. ಆದ್ರೆ ಶಶಿಕಲಾ ಪರ ವಕೀಲರು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಜೈಲಿನಿಂದ ಹೊರ ಕರೆತರಲು ಮುಂದಾಗಿದ್ದಾರೆ. ಹೀಗಾಗಿ ಜೈಲಧಿಕಾರಿಗಳ ಸಮ್ಮುಖದಲ್ಲಿ ಆಸ್ಪತ್ರೆಗೆ ತೆರಳಿ ಶಶಿಕಲಾ ಸಹಿ ಪಡೆದು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆಯಿದೆ.

 • 27 Jan 2021 09:25 AM (IST)

  ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

  ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಕಳೆದ ವಾರದಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗುತ್ತಲೇ ಇತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 27 ಹಾಗೂ ಡೀಸೆಲ್​ಗೆ 25 ಪೈಸೆ ಹೆಚ್ಚಳವಾಗಿದೆ.

 • 27 Jan 2021 09:15 AM (IST)

  ನಿನ್ನೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ: ಕೋಟೆಯ ಗುಮ್ಮಟ ಹತ್ತಿ ಧ್ವಜ ಕೆಳಗಿಳಿಸಿದ ಪ್ರತಿಭಟನಾಕಾರರು

  ದೆಹಲಿಯಲ್ಲಿ ನಿನ್ನೆ ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಪ್ರತಿಭಟನಾಕಾರರ ಗುಂಪೊಂದು ಕೋಟೆಯ ಗುಮ್ಮಟವನ್ನು ಹತ್ತಿ ಧ್ವಜವನ್ನು ಕೆಳಗಿಳಿಸಿದೆ.

 • 27 Jan 2021 09:09 AM (IST)

  ದೆಹಲಿಯಲ್ಲಿ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ಮುಚ್ಚಲಾಗಿದೆ

  ದೆಹಲಿಯಲ್ಲಿ ನಿನ್ನೆ ರೈತರ ಪ್ರತಿಭಟನೆಯ ಕಾವು ಹೆಚ್ಚಾದ್ದರಿಂದ ಮೆಟ್ರೋ ಸ್ಟೇಷನ್​ಗಳನ್ನು ಮುಚ್ಚಲಾಗಿತ್ತು. ಈ ನಿಟ್ಟಿನಲ್ಲಿ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಉಳಿದೆಲ್ಲ ನಿಲ್ದಾಣಗಳು ತೆರೆದಿವೆ.

 • 27 Jan 2021 08:54 AM (IST)

  ಜಯಲಲಿತಾರ ‘ವೇದ ನಿಲಯಂ’ ನಿವಾಸ ಜ.28ರಂದು ಸ್ಮಾರಕವಾಗಿ ಅನಾವರಣ

  ಜಯಲಲಿತಾ ಅವರ ‘ವೇದ ನಿಲಯಂ’ ನಿವಾಸವನ್ನು ಪೋಸ್ ಗಾರ್ಡನ್​ ಸ್ಮಾರಕವಾಗಿ ಅನಾವರಣಗೊಳಿಸುವ ಬಗ್ಗೆ ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಜನವರಿ 28ರಂದು ಸ್ಮಾರಕ ಅನಾವರಣ ಮಾಡಲಿದೆ.

 • 27 Jan 2021 08:34 AM (IST)

  ಸುಪ್ರೀಂ ಕೋರ್ಟ್​ನಲ್ಲಿ ಇಂದು ಬಿ.ಎಸ್.​ವೈ, ನಿರಾಣಿ ಅರ್ಜಿ ವಿಚಾರಣೆ

  ದೇವನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣಿ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್​ನಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಲಿದೆ.

 • 27 Jan 2021 08:27 AM (IST)

  ಲಡಾಕ್​ನಲ್ಲಿ ತಡರಾತ್ರಿ ಲಘು ಭೂಕಂಪ

  ಲಡಾಕ್​ನಲ್ಲಿ ತಡರಾತ್ರಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ ತೀವ್ರತೆ 3.6ರಷ್ಟು ದಾಖಲಾಗಿದೆ.

 • 27 Jan 2021 08:22 AM (IST)

  ಪಂಜಾಬ್‌ ಚಿತ್ರನಟ ದೀಪ್‌ ಸಿಧು ನೇತೃತ್ವದಲ್ಲಿ ಕೆಂಪುಕೋಟೆಯಲ್ಲಿ ಸಿಖ್ ಧರ್ಮ ಧ್ವಜ

  ಕೆಂಪುಕೋಟೆಯಲ್ಲಿ ಸಿಖ್ ಧರ್ಮ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದರ ನೇತೃತ್ವ ವಹಿಸಿದ್ದು ಪಂಜಾಬ್‌ ಚಿತ್ರನಟ ದೀಪ್‌ ಸಿಧು ಎಂದು ತಿಳಿದು ಬಂದಿದೆ. ಇವರು ಬಿಜೆಪಿ ಸಂಸದ ಸನ್ನಿ ಡಿಯೋಲ್ ಬೆಂಬಲಿಗರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತಯಾಚನೆ ಹಾಗೂ ಸನ್ನಿ ಡಿಯೋಲ್ ಪರ ಪ್ರಚಾರ ಮಾಡಿದ್ದರು. ಸಿಧು ನಡವಳಿಕೆ ಗಮನಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಧರಣಿಯಿಂದ ಹೊರಗಿಟ್ಟಿದ್ದರು. ಈತ ರೈತ ಹೋರಾಟದ ಶತ್ರು ಎಂದು ಓರ್ವ ರೈತ ನಾಯಕರು ಹೇಳಿದ್ದರು. ಸದ್ಯ ದೀಪ್‌ ಸಿಧು ವಿರುದ್ಧ, ರೈತ ಸಂಘಟನೆ ತನಿಖೆಗೆ ಆಗ್ರಹಿಸಿರುವುದು ಕೇಳಿ ಬರುತ್ತಿದೆ.