Kannada News Live| ಫೆ.1ರಿಂದ 9ನೇ ತರಗತಿ ಮತ್ತು ಪ್ರಥಮ PU ಆರಂಭ: ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿ | 28-01-2021

 • TV9 Web Team
 • Published On - 18:37 PM, 28 Jan 2021
Kannada News Live| ಫೆ.1ರಿಂದ 9ನೇ ತರಗತಿ ಮತ್ತು ಪ್ರಥಮ PU ಆರಂಭ: ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿ | 28-01-2021
ಸಚಿವ ಎಸ್​. ಸುರೇಶ್​ ಕುಮಾರ್​

ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್​ಸೈಟ್​ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.

LIVE NEWS & UPDATES

The liveblog has ended.
 • 28 Jan 2021 18:37 PM (IST)

  ಗಂಗೂಲಿಗೆ 2 ನೇ ಬಾರಿ ಆಂಜಿಯೋಪ್ಲ್ಯಾಸ್ಟಿ

  ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಕೋಲ್ಕತ್ತಾದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ 2 ನೇ ಬಾರಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಸೌರವ್​ ಗಂಗೂಲಿಗೆ ಇಂದು ಎರಡು ಸ್ಟೆಂಟ್​ ಅಳವಡಿಕೆ ಮಾಡಲಾಗಿದೆ.

 • 28 Jan 2021 18:33 PM (IST)

  ಕೆಂಪುಕೋಟೆಯಲ್ಲಿ ಹೋರಾಟಗಾರರು ಧ್ವಜಾರೋಹಣ ಮಾಡಿಲ್ಲ; ರಾಕೇಶ್ ಟಿಕಾಯತ್

  ಗಾಜೀಪುರ ಗಡಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಕೆಂಪುಕೋಟೆಯಲ್ಲಿ ಹೋರಾಟಗಾರರು ಧ್ವಜಾರೋಹಣ ಮಾಡಿಲ್ಲ. ದೆಹಲಿಯ ಕೆಂಪುಕೋಟೆಯಲ್ಲಿ ಯಾರಿದ್ದರೆಂದು ತನಿಖೆ ಆಗಲಿ ಎಂದು ಹೇಳಿದರು.

 • 28 Jan 2021 18:29 PM (IST)

  ರಿಡಿಫೈನಿಂಗ್ ಇಂಡಿಯಾಸ್ ಇಂಡಿಜೀನಿಯಸ್ ನಾಲೆಡ್ಜ್ ಪುಸ್ತಕ ಬಿಡುಗಡೆ

  ಟುವರ್ಡ್ಸ್ ಬೆಟರ್ ಇಂಡಿಯಾ ಸಂಸ್ಥೆ ಹೊರ ತಂದಿರುವ ರಿಡಿಫೈನಿಂಗ್ ಇಂಡಿಯಾಸ್ ಇಂಡಿಜೀನಿಯಸ್ ನಾಲೆಡ್ಜ್ ಪುಸ್ತಕವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ B.L.ಸಂತೋಷ್ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.

 • 28 Jan 2021 18:22 PM (IST)

  ರೂಪಾಂತರ ಕೊರೊನಾ: ಸೋಂಕಿತರ ಸಂಖ್ಯೆ 165ಕ್ಕೆ ಏರಿಕೆ

  ಭಾರತದಲ್ಲಿ ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ 165ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

 • 28 Jan 2021 18:18 PM (IST)

  ಮನಗೂಳಿ ಅಂತಿಮ ದರ್ಶನಕ್ಕೆ ಸಿಎಂ ಆಗಮಿಸುವ ಸಾಧ್ಯತೆ

  ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿಯವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ನಿವಾಸದಲ್ಲಿ ವ್ಯವಸ್ಥೆಯಾಗಿದ್ದು, ಸಿಎಂ ಯಡಿಯೂರಪ್ಪ ಆಗಮಿಸುವ ಸಾಧ್ಯತೆಯಿದೆ. ಈ ಕುರಿತು ಅಧಿಕೃತ ಪ್ರಕಟಣೆ ಬಾಕಿಯಿದೆ.

 • 28 Jan 2021 18:09 PM (IST)

  ಇಡೀ ವಿಶ್ವವನ್ನು ದೊಡ್ಡ ಅಪತ್ತಿನಿಂದ ಭಾರತ ಪಾರು ಮಾಡಿದೆ: ಮೋದಿ

  ಕೊರೊನಾ ಪೀಡಿತರ ಸಂಖ್ಯೆ ಈಗ ವೇಗವಾಗಿ ಕುಸಿಯುತ್ತಿದೆ. ಮಾಸ್ಕ್, ಪಿಪಿಇ ಕಿಟ್ ವಿದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ಭಾರತ ಅನೇಕ ದೇಶಗಳಿಗೆ ಲಸಿಕೆ ರಫ್ತು ಮಾಡಿ ಜನರ ಜೀವ ರಕ್ಷಿಸುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

 • 28 Jan 2021 18:03 PM (IST)

  ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಳವಿಕಾ ಹೆಗ್ಡೆಗೆ ಜಾಮೀನು

  ಕಾಫಿ ಡೇ ಸಿದ್ದಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ವಿರುದ್ಧ ಲಕ್ಷ್ಮೀ ವಿಲಾಸ್ ಬ್ಯಾಂಕ್ ನಾಲ್ಕು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿತ್ತು. ಇದೀಗ ಬೆಂಗಳೂರಿನ 26ನೇ ಎಸಿಎಂಎಂ ಕೋರ್ಟ್​ನಿಂದ ಮಾಳವಿಕಾಗೆ ಜಾಮೀನು ಸಿಕ್ಕಿದೆ.

 • 28 Jan 2021 17:56 PM (IST)

  ಸಿಂದಗಿ ಪಟ್ಟಣ ತಲುಪಿದ ಎಂ.ಸಿ.ಮನಗೂಳಿ ಪಾರ್ಥಿವ ಶರೀರ

  ವಿಜಯಪುರ ಜಿಲ್ಲೆಯ ಸಿಂದಗಿಯ ನಿವಾಸದಲ್ಲಿ ಎಂ.ಸಿ.ಮನಗೂಳಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.ಅಂತಿಮ ದರ್ಶನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ.ನಾಳೆ ಬೆಳಿಗ್ಗೆ ತಾಲೂಕಾ ಶಿಕ್ಷಣ ಪ್ರಸಾರ ಮಂಡಳಿಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

 • 28 Jan 2021 17:48 PM (IST)

  ವರ್ಲ್ಡ್ ಎಕನಾಮಿಕ್ ಫೋರಂ ಉದ್ದೇಶಿಸಿ ಮೋದಿ ಭಾಷಣ

  ಕೊರೊನಾ ಸೋಂಕಿನ ವಿರುದ್ಧ ಭಾರತ ಹೋರಾಟ ನಡೆಸಿದೆ. ಕೊರೊನಾ ನಿಯಂತ್ರಣದಲ್ಲಿ ವಿಶ್ವಕ್ಕೇ ಮಾದರಿಯಾಗಿದ್ದೇವೆ. ವಿಶ್ವದಲ್ಲೇ ಅತಿ ದೊಡ್ಡ ಲಸಿಕಾ ಅಭಿಯಾನ ಆರಂಭಿಸಿದ್ದೇವೆ. ಭವಿಷ್ಯದಲ್ಲಿ ಇನ್ನಷ್ಟು ಲಸಿಕೆ ಉತ್ಪಾದನೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 • 28 Jan 2021 17:28 PM (IST)

  ಪ್ರತಿಭಟನೆ ವಾಪಸ್‌ ಪಡೆದ ಕಿಸಾನ್ ಮಹಾಪಂಚಾಯತ್‌

  ದೆಹಲಿಯ ರಾಜಸ್ಥಾನ-ಹರಿಯಾಣ ಗಡಿ ಪ್ರದೇಶ ಶಹಜಹಾನ್‌ಪುರದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತಿದ್ದವು. ಆದರೆ ಇದೀಗ ಕಿಸಾನ್ ಮಹಾಪಂಚಾಯತ್ ಪ್ರತಿಭಟನೆ ವಾಪಸ್​ ಪಡೆದಿದೆ.‌

 • 28 Jan 2021 17:23 PM (IST)

  ರೈತರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ: ಕುರುಬೂರು ಶಾಂತಕುಮಾರ್

  ಕೆಂಪುಕೋಟೆಗೆ ನುಗ್ಗಿ ನಡೆದ ಅಹಿತಕರ ಘಟನೆಗೆ ಸಮಾಜಘಾತುಕ ವ್ಯಕ್ತಿಗಳು ಕಾರಣರಾಗಿದ್ದಾರೆ.ರೈತರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ರೈತರು 60 ದಿನದಿಂದ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಆದರೆ ಜನವರಿ 26ರಂದು ನಡೆದ ಘಟನೆ ದುರದೃಷ್ಟಕರ. ಬಾವುಟ ಹಾರಿಸಿದ್ದು ತಾನೇ ಎಂದು ಸಿಧು ಒಪ್ಪಿಕೊಂಡಿದ್ದಾನೆ. ಇಂತಹವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕು. ಕೇಂದ್ರ ಗುಪ್ತಚರ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು ಏಕೆ ಎಂದು ಪ್ರಶ್ನಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಇದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕೆಂದು ಆಗ್ರಹಿಸಿದರು.

 • 28 Jan 2021 17:11 PM (IST)

  ತೀರ್ಪು ನಮ್ಮ ಪರ ಬರುವ ಸಂಪೂರ್ಣ ವಿಶ್ವಾಸವಿದೆ; ಡಿಸಿಎಂ ಲಕ್ಷ್ಮಣ ಸವದಿ

  ಮಹಾರಾಷ್ಟ್ರ ಅನಗತ್ಯವಾಗಿ ಗಡಿ ವಿವಾದ ಸೃಷ್ಟಿಸುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗೊಂದಲದಲ್ಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅನಗತ್ಯವಾಗಿ ಕೇಸ್ ಹಾಕಿದ್ದಾರೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮವಾಗಿದೆ. ತೀರ್ಪು ನಮ್ಮ ಪರ ಬರುವ ಸಂಪೂರ್ಣ ವಿಶ್ವಾಸವಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

 • 28 Jan 2021 17:06 PM (IST)

  ಶಾಲಾ ಶುಲ್ಕ ನಿಗದಿಗೆ ಪ್ರತ್ಯೇಕ ಸಲಹಾ ಸಮಿತಿ ಬೇಕಿದೆ: ಸುರೇಶ್​ ಕುಮಾರ್

  ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿದ ಬಳಿಕ ಶುಲ್ಕ ನಿಗದಿ ಬಗ್ಗೆ ನಿರ್ಧಾರವಾಗುತ್ತದೆ ಎಂದು ಹೇಳಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಶಾಲಾ ಶುಲ್ಕ ನಿಗದಿಗೆ ಪ್ರತ್ಯೇಕ ಸಲಹಾ ಸಮಿತಿ ಬೇಕಿದೆ ಎಂದರು.

 • 28 Jan 2021 17:01 PM (IST)

  ಸಿಬಿಎಸ್‌ಇ ವೇಳಾಪಟ್ಟಿ ಫೆಬ್ರವರಿ 2ರಂದು ಪ್ರಕಟ

  ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿಯನ್ನು ಫೆಬ್ರವರಿ 2ರಂದು ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

 • 28 Jan 2021 16:55 PM (IST)

  ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ರೈಲ್ವೆ ಚಳವಳಿಗೆ ನಿರ್ಧಾರ

  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಿ ಜನವರಿ 30ರಂದು ಕನ್ನಡ ಚಳವಳಿ ಒಕ್ಕೂಟದಿಂದ ರೈಲ್ವೆ ಚಳವಳಿಗೆ ನಿರ್ಧರಿಸಲಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

 • 28 Jan 2021 16:51 PM (IST)

  ಸದನ ಸಲಹಾ ಸಮಿತಿಗೆ ಪತ್ರ ಬರೆಯಲಿರುವ ವಿಪಕ್ಷ ನಾಯಕ

  ಸಮಿತಿಯಲ್ಲಿ ಚರ್ಚೆಯಾದ ವಿಷಯಗಳು ಅನುಷ್ಠಾನವಾಗಲ್ಲ. ಅಲ್ಲಿ ಚರ್ಚೆ ಮಾಡಿ ಅಂತಿಮವಾಗಿ ಬೇರೆ ನಿರ್ಧಾರ ಮಾಡುತ್ತಾರೆ ಎಂದು ವಿಪಕ್ಷ ನಾಯಕ ಸ್ಪೀಕರ್‌ಗೆ ಪತ್ರ ಬರೆಯುತ್ತಾರೆ ಎಂಬ ಮಾಹಿತಿ ತಿಳಿದಿದೆ.

 • 28 Jan 2021 16:47 PM (IST)

  ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

  ಜೆಡಿಎಸ್‌ನವರು ತಾವು ಜಾತ್ಯತೀತ ಎಂದು ಹೇಳಿಕೊಳ್ಳುತ್ತಾರೆ.ತಾವು ಜಾತ್ಯತೀತ ಎಂದು ಎಲ್ಲೆಡೆ ತಮಟೆ ಹೊಡಿಯುತ್ತಾರೆ.ಜೆಡಿಎಸ್ ರಾಹುಲ್ ಗಾಂಧಿಯಿಂದ ಮತ್ತು ಬಿಜೆಪಿಯಿಂದ ಬಿ ಟೀಂ ಎಂದು ಹೇಳಿಸಿದ್ದೀನಿ ಅಂತಾರೆ ಎಂದು ಹೇಳಿಕ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಉಪಸಭಾಪತಿ ಚುನಾವಣೆಯಲ್ಲಿ ಜೆಡಿಎಸ್‌ನವರ ಬಣ್ಣ ಬಯಲಾಗುತ್ತದೆ ಎಂದು ಹೇಳಿದ್ದಾರೆ.

 • 28 Jan 2021 16:43 PM (IST)

  ಸರ್ಕಾರದ ನಿಲುವು ಖಂಡಿಸಿ ಭಿತ್ತಿಪತ್ರ ಪ್ರದರ್ಶಿಸಿದ್ದೇವೆ: ಸಿದ್ದರಾಮಯ್ಯ

  ವರ್ಷಕ್ಕೆ ಒಮ್ಮೆ ಸುವರ್ಣಸೌಧದಲ್ಲಿ ಅಧಿವೇಶನ ಮಾಡಬೇಕು. ಇಂದು ಸರ್ಕಾರದ ನಿಲುವು ಖಂಡಿಸಿ ಭಿತ್ತಿಪತ್ರ ಹಿಡಿದು ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

 • 28 Jan 2021 16:40 PM (IST)

  ಎಸ್​ಎಸ್​ಎಲ್​ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

  ಎಸ್​ಎಸ್​ಎಲ್​ಸಿ 2021 ಪರೀಕ್ಷೆ ಜೂನ್ 14ರಿಂದ ಆರಂಭವಾಗಲಿದೆ ಎಂದು ವಿಧಾನಸೌಧದಲ್ಲಿ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿ ತಿಳಿಸಿದ್ದಾರೆ.

  ಜೂನ್ 14 -ಪ್ರಥಮ ಭಾಷೆ
  ಜೂನ್ 16 -ಗಣಿತ, ಸಮಾಜಶಾಸ್ತ್ರ
  ಜೂನ್ 18 -ದ್ವಿತೀಯ ಭಾಷೆ ಇಂಗ್ಲಿಷ್ ಅಥವಾ ಕನ್ನಡ
  ಜೂನ್ 21  -ವಿಜ್ಞಾನ
  ಜೂನ್ 23 -ತೃತೀಯ ಭಾಷೆ
  ಜೂನ್​ 25 -ಸಮಾಜ ವಿಜ್ಞಾನ ಪರೀಕ್ಷೆ

  ಈ ಬಾರಿ ಪರೀಕ್ಷೆ ಅವಧಿ 3 ಗಂಟೆ 15 ನಿಮಿಷ

 • 28 Jan 2021 16:39 PM (IST)

  ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಿದೆ; ಪ್ರಕಾಶ್ ರಾಥೋಡ್

  ಬೆಳಗಾವಿಯಲ್ಲಿ 2 ವರ್ಷದಿಂದ ಅಧಿವೇಶನವನ್ನು ನಡೆಸಿಲ್ಲ. ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ಸರ್ಕಾರದ ಧೋರಣೆ ಖಂಡಿಸಿ ರಾಜ್ಯಪಾಲರ ಭಾಷಣದ ವೇಳೆ ಭಿತ್ತಿಪತ್ರ ಪ್ರದರ್ಶಿಸಿದ್ದೇವೆ ಎಂದು ರಾಜ್ಯಪಾಲರ ಭಾಷಣದ ವೇಳೆ ಭಿತ್ತಿಪತ್ರ ಪ್ರದರ್ಶಿಸಿದ್ದೇವೆ ಎಂದು ಕಾಂಗ್ರೆಸ್ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.

 • 28 Jan 2021 16:35 PM (IST)

  25 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಿಕೆ

  ಜನವರಿ 28ರ ಮಧ್ಯಾಹ್ನ 2 ಗಂಟೆವರೆಗೆ 25,07,556 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

 • 28 Jan 2021 16:23 PM (IST)

  ಫೆ.1ರಿಂದ 9ನೇ ತರಗತಿ ಮತ್ತು ಪ್ರಥಮ PU ಆರಂಭ: ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿ

  ಫೆ.1ರಿಂದ 9ನೇ ತರಗತಿ, ಪ್ರಥಮ PU ತರಗತಿ ಆರಂಭವಾಗುತ್ತದೆ. 6 ರಿಂದ 8ನೇ ತರಗತಿ ಆರಂಭಿಸುವ ಬಗ್ಗೆ ಕಾದು ತೀರ್ಮಾನಿಸುತ್ತೇವೆ. ಫೆ.2ನೇ ವಾರದವರೆಗೆ ಕಾದು ತೀರ್ಮಾನ ಕೈಗೊಳ್ಳುತ್ತೇವೆ. 1 ರಿಂದ 5ನೇ ತರಗತಿ ಆರಂಭಿಸುವ ಬಗ್ಗೆ ಸದ್ಯಕ್ಕೆ ತೀರ್ಮಾನವಿಲ್ಲ. ಉಳಿದ ತರಗತಿಗಳ ಆರಂಭಿಸುವ ಬಗ್ಗೆ ಮುಂದೆ ನಿರ್ಧಾರ ಮಾಡುತ್ತೇವೆ. ಮಕ್ಕಳ ಹಾಜರಾತಿ ಹಾಗೂ ಶಾಲೆ ವಾತಾವರಣ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಸಹ ಪಡೆಯುತ್ತೇವೆ ಎಂದು ವಿಧಾನಸೌಧದಲ್ಲಿ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

 • 28 Jan 2021 14:15 PM (IST)

  ದೆಹಲಿ ಕರಿಯಪ್ಪ ಮೈದಾನದಲ್ಲಿ NCC ರ‍್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಭಾಷಣ

  ಕೊರೊನಾ ಸಮಯದಲ್ಲಿ NCC ಕೆಡೆಟ್‌ಗಳ ಸೇವೆ ಶ್ಲಾಘನೀಯವಾದದ್ದು, NCCಗೆ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. 175 ಕರಾವಳಿ ಭಾಗ, ಗಡಿ ಜಿಲ್ಲೆಗಳಲ್ಲಿ ಜವಾಬ್ದಾರಿ ನೀಡಲಾಗಿದೆ. ಇದಕ್ಕಾಗಿ 1 ಲಕ್ಷ NCC ಕೆಡೆಟ್‌ಗಳಿಗೆ ಸೇನೆಯಿಂದ ತರಬೇತಿ ನಡೆಯುತ್ತಿದೆ. 3 ಸೇನಾಪಡೆಗಳಿಂದ ತರಬೇತಿ ನೀಡಲಾಗುತ್ತಿದೆ ಎಂದು NCC ರ‍್ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

 • 28 Jan 2021 13:56 PM (IST)

  ಭಾರತಕ್ಕೆ ಬೆದರಿಕೆಯೊಡ್ಡುವ ಯಾವುದೇ ಶಕ್ತಿಯನ್ನು ಎದುರಿಸಲು ಭಾರತ ಸಮರ್ಥವಾಗಿದೆ: ಪ್ರಧಾನಿ ಮೋದಿ

  ವೈರಸ್​ ಆಗಿರಲಿ ಅಥವಾ ಗಡಿ ಭಾಗದಲ್ಲಿನ ಬೆದರಿಕೆಯೇ ಆಗಿರಲಿ ಅದನ್ನು ದಿಟ್ಟತನದಿಂದ ಎದುರಿಸಲು ಭಾರತ ಸನ್ನದ್ಧವಾಗಿದೆ ಎಂದು ತೋರಿಸಿದೆ. ವೈರಸ್​ ವಿರುದ್ಧ ಹೋರಾಟ ಅಥವಾ ಭಾರತಕ್ಕೆ ಬೆದರಿಕೆಯೊಡ್ಡುವ ಯಾವುದೇ ಶಕ್ತಿ ಇರಲಿ ಅದನ್ನು ಎದುರಿಸಲು ಭಾರತ ಸಮರ್ಥವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.

 • 28 Jan 2021 13:42 PM (IST)

  ದೆಹಲಿ ಹಿಂಸಾಚಾರ: ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್ !

  ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ, ರೈತರ ಹೆಸರಿನಲ್ಲಿ ಕಾಂಗ್ರೆಸ್ ಗಲಭೆ ಸೃಷ್ಟಿ ಮಾಡುತ್ತಿದೆ. ಅಧಿಕಾರಕ್ಕೋಸ್ಕರ ಗಲಭೆ ಸೃಷ್ಟಿ ಮಾಡುತ್ತಿದೆ ಎಂದು ಚಾಮರಾಜನಗರದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

 • 28 Jan 2021 13:08 PM (IST)

  ಮೈಸೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

  ಮೈಸೂರಿನಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕುದುರೆ ಸವಾರಿ ಮಾಡುವ ಮೂಲಕ ವಿನೂತನ ಧರಣಿ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 • 28 Jan 2021 13:06 PM (IST)

  ನನಗೆ ಸಚಿವರ ಸಹಾನುಭೂತಿ ಬೇಕಿಲ್ಲ: ಹೆಚ್​.ವಿಶ್ವನಾಥ್ ಹೇಳಿಕೆ

  ನನಗೆ ಸಚಿವರ ಸಹಾನುಭೂತಿ ಬೇಕಿಲ್ಲ. ನಮ್ಮ 17 ಜನರ ಟೀಂ ಸಿಎಂ ಜೊತೆ ಮಾತನಾಡಬೇಕಿತ್ತು. ಅದು ಬಿಟ್ಟು ಅವರ ಬಾಯಿಮಾತಿನ ಸಹಾನುಭೂತಿ ಬೇಕಿಲ್ಲ.ನನ್ನನ್ನು ಒಬ್ಬಂಟಿಯಲ್ಲ ಎಂದು ಹೇಳಿದ್ದಕ್ಕೆ ಅಭಿನಂದಿಸುತ್ತೇನೆ. ನಾವೆಲ್ಲ ಜತೆಗೇ ಇದ್ದೇವೆ, ಆದ್ರೆ ಅವರು ಮಂತ್ರಿಯಾಗಿದ್ದಾರೆ. ಎಲ್ಲವೂ ಪವರ್ ಪಾಲಿಟಿಕ್ಸ್ ಬಿಡಿ. ಪಕ್ಷ ನನಗೆ ಸಭಾಪತಿ ಹುದ್ದೆ ಕಲ್ಪಿಸಿದರೆ ನೋಡೋಣ ಎಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗಾಪುರದಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್​.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

 • 28 Jan 2021 13:01 PM (IST)

  ಸಚಿವರಾಗುವ ವಿಶ್ವನಾಥ್ ಕನಸಿಗೆ ಸುಪ್ರೀಂಕೋರ್ಟ್​ ತಡೆ

  ಎಂಎಲ್​ಸಿ ಎಚ್​.ವಿಶ್ವನಾಥ್​ ವಿರುದ್ಧ ಹೈಕೋರ್ಟ್​ ನೀಡಿದ್ದ ಅನರ್ಹತೆ ತೀರ್ಪನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ. ನಾಮ ನಿರ್ದೇಶನದ ಆಧಾರದಲ್ಲಿ ವಿಶ್ವನಾಥ್​ಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬುದನ್ನು ಪುನರುಚ್ಚರಿಸಿದೆ.

  MLC ಹೆಚ್​.ವಿಶ್ವನಾಥ್​

 • 28 Jan 2021 12:35 PM (IST)

  ದೆಹಲಿ: ಗಾಯಾಳು ಪೊಲೀಸರನ್ನು ಭೇಟಿಯಾದ ಅಮಿತ್ ಶಾ

  ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ಪೊಲೀಸರನ್ನು ಭೇಟಿಯಾದ ಅಮಿತ್ ಶಾ ಭೇಟಿಯಾಗಿದ್ದಾರೆ. ದೆಹಲಿ ಸಿವಿಲ್ ಲೈನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಆರೋಗ್ಯ ವಿಚಾರಿಸಿದ್ದಾರೆ.

 • 28 Jan 2021 12:24 PM (IST)

  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ವಾಪಾಸ್ ಹೊರಟ ಇಂದ್ರಜಿತ್ ಲಂಕೇಶ್

  ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಂದ್ರಜಿತ್​ ಲಂಕೇಶ್​ಗೆ ಸಿಸಿಬಿ ನೋಟೀಸು ನೀಡಿತ್ತು. ಆದರೆ ಇಂದು ಭದ್ರತೆಯಲ್ಲಿ ನಿಯೋಜನೆ ಹಿನ್ನಲೆಯಲ್ಲಿ ವಿಚಾರಣೆ ಮುಂದೂಡಿಕೆ ಮಾಡಿದ್ದು, ನಿಗದಿ ಮಾಡಿ ತಿಳಿಸಿದ ದಿನ ವಿಚಾರಣೆಗೆ ಹಾಜರಾಗಲಿರುವ ಹೇಳಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದಾರೆ.

 • 28 Jan 2021 12:09 PM (IST)

  ಎಂ.ಸಿ ಮನಗೂಳಿ ವಿಧಿವಶ: ನಾಳೆ ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ

  ಬೆಂಗಳೂರಿನಿಂದ ಸಿಂದಗಿಗೆ ಎಂ.ಸಿ ಮನಗೂಳಿ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ತರುತ್ತಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರ ಮಾಹಿತಿ ನೀಡಿದ್ದಾರೆ.
  ಮನಗೂಳಿ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತ್ಯ ಕ್ರಿಯೆ ನಡೆಸಲು ಚಿಂತನೆ ನಡೆಸಲಾಗಿದೆ.

 • 28 Jan 2021 12:02 PM (IST)

  ಜಂಟಿ ಅಧಿವೇಶನ: ರಾಜ್ಯಪಾಲರ ಮಾತು ಮುಕ್ತಾಯ

  ವಿಧಾನ ಮಂಡಲ ಜಂಟಿ ಅಧಿವೇಶನದ ಉದ್ದೇಶಿಸಿ ರಾಜ್ಯಪಾಲ ವಿ.ಆರ್ ವಾಲಾ ಭಾಷಣ ಮುಕ್ತಾಯಗೊಂಡಿದ್ದು, ವಿಧಾನಸಭೆಯಿಂದ ರಾಜ್ಯಪಾಲರ ನಿರ್ಗಮಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ಕಾನೂನು ಸಚಿವ, ವಿಧಾನಸಭೆ ಸ್ಪೀಕರ್ ಸೇರಿದಂತೆ ವಿಧಾನಪರಿಷತ್​ ಸಭಾಪತಿ ರಾಜ್ಯಪಾಲರನ್ನು ಬಿಳ್ಕೊಟ್ಟಿದ್ದಾರೆ.

 • 28 Jan 2021 11:58 AM (IST)

  ಜಂಟಿ ಅಧಿವೇಶನ: ರಾಜ್ಯದ 14,320 ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ

  ರಾಜ್ಯದ 14,320 ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಮಾಡಲಾಗಿದೆ. ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ, ಸೌಭಾಗ್ಯ ಯೋಜನೆಯಡಿ ಮನೆಗಳಿಗೆ ವಿದ್ಯುತ್ ಸೌಲಭ್ಯ ಮಾಡಲಾಗಿದೆ. ರೈತರಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇದಕ್ಕಾಗಿ 11,250 ಕೋಟಿ ರೂಪಾಯಿ ಸಹಾಯ ಧನ ನೀಡಲಾಗಿದೆ. ಶಿಕ್ಷಕರು, ಪೋಷಕರಿಗಾಗಿ ಸಹಾಯವಾಣಿ (ಯೂಟ್ಯೂಬ್ ಚಾನಲ್) ಏರ್ಪಡಿಸಲಾಗಿದೆ. 150 ಸರ್ಕಾರಿ ಕೈಗಾರಿಕಾ ಸಂಸ್ಥೆಗಳ ಉನ್ನತೀಕರಣ ಮಾಡಲಾಗಿದ್ದು, 325 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗಿದೆ. ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗಿದೆ. ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,132 ಕೋಟಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ, ಇದಕ್ಕಾಗಿ 600 ಕೋಟಿ ರೂ. ಮಂಜೂರು ಮಾಡಿದ್ದು, 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 8,015 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯದ ಜೊತೆ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಾಗಿದೆ.

 • 28 Jan 2021 11:52 AM (IST)

  ಜಂಟಿ ಅಧಿವೇಶನ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ

  ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ V.R.ವಾಲಾ ಭಾಷಣ
  110 ಗ್ರಾಮಗಳಿಗೆ ಒಳಚರಂಡಿ ಸೌಲಭ್ಯಕ್ಕೆ ಅನುದಾನ ಮಾಡಲಾಗಿದ್ದು, 1,000 ಕೋಟಿ ರೂಪಾಯಿ ನೀಡಲಾಗಿದೆ. ನಗರೋತ್ಥಾನ ಯೋಜನೆಯಡಿ 1,598 ಕಾಮಗಾರಿ ಹಮ್ಮಿಕೊಂಡಿದ್ದು, 263 ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಸರ್ಕಾರ 35 ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. 3.15 ಲಕ್ಷ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಹಾಗೂ ಅಮೃತ್ ಯೋಜನೆಯಡಿ 306 ಕಾಮಗಾರಿ ಪೂರ್ಣಗೊಂಡಿದ್ದು, ಇದಕ್ಕಾಗಿ ಒಟ್ಟು 1,680 ಕೋಟಿ ರೂಪಾಯಿ ವೆಚ್ಚವಾಗಿದೆ. 7 ಸ್ಮಾರ್ಟ್ ಸಿಟಿಗಳಲ್ಲಿ 162 ಯೋಜನೆಗಳು ಪೂರ್ಣಗೊಂಡಿದ್ದು, 400 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪೂರ್ಣವಾಗಿದೆ. ಹಾಗೂ 6,233 ಕೋಟಿ ರೂ.ನ 345 ಯೋಜನೆ ಪ್ರಗತಿಯಲ್ಲಿದೆ. ದೇಶದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ರಾಜ್ಯಪಾಲರು ಮಾತನಾಡಿದರು.

 • 28 Jan 2021 11:40 AM (IST)

  ಜಂಟಿ ಅಧಿವೇಶನ: ಮಳೆಯಾಶ್ರಿತ ಪ್ರದೇಶದ ರೈತರಿಗೆ ಅನೂಕೂಲ ಮಾಡಿಕೊಡಲಾಗಿದೆ

  46,378 ಮಳೆ ನೀರು ಕೊಯ್ಲು ನಿರ್ಮಿಸಲಾಗಿದೆ. ಪ್ರಧಾನಿ ಕೃಷಿ ಸಿಂಚಾಯಿ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶದ 2.76 ಲಕ್ಷ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. 2.10 ಕೋಟಿ ಜಮೀನುಗಳ ಬೆಳೆ ಸಮೀಕ್ಷೆ ಮಾಡಿದ್ದು, ಇದರಲ್ಲಿ 80 ಲಕ್ಷ ರೈತರೇ ಖುದ್ದು ಸಮೀಕ್ಷೆ ಮಾಡಿದ್ದಾರೆ. 32,878 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆ ಮಾಡಲಾಗಿದೆ. ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು, ಮಂಡ್ಯ, ಕೊಪ್ಪಳ, ಬೆಳಗಾವಿ, ಉಡುಪಿ ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬುವುದಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಮಾತನಾಡಿದರು.

 • 28 Jan 2021 11:35 AM (IST)

  16.45 ಲಕ್ಷ ಕಾರ್ಮಿಕರಿಗೆ 824 ಕೋಟಿ ಹಣಕಾಸು ನೆರವು : ರಾಜ್ಯಪಾಲ

  ಆಟೋ ಚಾಲಕರು, ಮಡಿವಾಳರಿಗೆ ಹಣಕಾಸು ನೆರವು ನೀಡಲಾಗಿದೆ. 63,59,000 ಫಲಾನುಭವಿಗಳಿಗೆ ಹಣಕಾಸು ನೆರವು ಹಾಗೂ 5,372 ಕೋಟಿ ರೂಪಾಯಿ ನೀಡಲಾಗಿದೆ. 16.45 ಲಕ್ಷ ಕಾರ್ಮಿಕರಿಗೆ 824 ಕೋಟಿ ರೂ. ನೀಡಲಾಗಿದೆ. 11,770 ಚರ್ಮ ಕುಶಲ ಕರ್ಮಿಗಳಿಗೆ ತಲಾ 5 ಸಾವಿರ ರೂ. ಧನ ಸಹಾಯ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರಿಗೆ ತಲಾ 2,000 ಹೆಚ್ಚುವರಿ ಹಣ ನೀಡಿದ್ದೇವೆ. ಇದಕ್ಕಾಗಿ ಒಟ್ಟು 1,020 ಕೋಟಿ ರೂಪಾಯಿ ನೀಡಲಾಗಿದೆ. ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ನೀಡಿ 61,379 ಮೆಟ್ರಿಕ್ ಟನ್ ಭತ್ತ, 1.93 ಮೆಟ್ರಿಕ್ ಟನ್ ರಾಗಿ ಹಾಗೂ 9,256 ಮೆಟ್ರಿಕ್ ಟನ್ ಜೋಳ ಖರೀದಿ ಮಾಡಲಾಗಿದೆ ಎಂದು ರಾಜ್ಯಪಾಲರು ಮಾತನಾಡಿದರು.

 • 28 Jan 2021 11:27 AM (IST)

  ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

  80 ಲಕ್ಷಕ್ಕಿಂತ ಹೆಚ್ಚು RTPCR ಟೆಸ್ಟ್ ನಡೆಸಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೊವಿಡ್ ಟೆಸ್ಟ್ ಮಾಡಲಾಗಿದೆ. 1.36 ಲಕ್ಷ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. 248 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ. ದಾಸೋಹ ಯೋಜನೆಯಡಿ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ. 8,919 ಕುಟಂಬಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿ, 5 ಕೆಜಿ ಗೋಧಿ ವಿತರಣೆ ಮಾಡಲಾಗಿದೆ ಎಂದು ರಾಜ್ಯಪಾಲ ವಿ. ಆರ್​ ವಾಲಾ ಮಾತನಾಡಿದರು.

 • 28 Jan 2021 11:17 AM (IST)

  ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ: ರಾಜ್ಯಪಾಲ ವಿ.ಆರ್ ವಾಲಾ

  ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದ ಆಸ್ಪತ್ರೆಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ ಜೊತೆಗೆ ಲಾಕ್​ಡೌನ್​ ವೇಳೆ ಜನರಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಸಮಸ್ಯೆ ಆಗದಂತೆ ಸರ್ಕಾರ ಕ್ರಮ ಕೈಗೊಂಡಿತ್ತು. ಸಂಕಷ್ಟದಲ್ಲಿದ್ದ ಜನರಿಗೆ ನಮ್ಮ ಸರ್ಕಾರ ಪರಿಹಾರ ಕಲ್ಪಿಸಿತ್ತು. ರಾಜ್ಯ ಸರ್ಕಾರ ರೈತರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ನೀಡಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಹೆಚ್ಚಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಅಭಿವೃದ್ಧಿ ಸಾಧಿಸಿದ್ದೇವೆ. ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ವಿ.ಆರ್​ ವಾಲಾ ಮಾತನಾಡಿದರು.

 • 28 Jan 2021 11:12 AM (IST)

  ವಿಧಾನ ಮಂಡಲ ಜಂಟಿ ಅಧಿವೇಶನ: ಕಾಂಗ್ರೆಸ್ ವಿರೋಧದ ನಡುವೆ ರಾಜ್ಯಪಾಲರ ಮಾತು

  ಕಾಂಗ್ರೆಸ್ ವಿರೋಧದ ನಡುವೆ ರಾಜ್ಯಪಾಲರ ಭಾಷಣ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧ ರಾಜ್ಯದ ಜನರು ಹೋರಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರ ಯಶಸ್ವಿ ಕಂಡಿದೆ. ಸರ್ಕಾರದ ನಿಯಮಗಳನ್ನ ಜನ ಅಚ್ಚುಕಟ್ಟಾಗಿ ಪಾಲಿಸಿದ್ದಾರೆ. ರಾಜ್ಯದಲ್ಲಿರೋ ಕೊರೊನಾ ವಾರಿಯರ್ಸ್‌ಗೆ ಧನ್ಯವಾದ. ಕೊರೊನಾಗೆ ಬಲಿಯಾದ ವಾರಿಯರ್ಸ್‌ಗೆ 30 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ರಾಜ್ಯಪಾಲ ವಿ.ಆರ್​ ವಾಲಾ ಮಾತನಾಡಿದರು.

 • 28 Jan 2021 11:10 AM (IST)

  ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರ ಮಾತಿಗೆ ಕಾಂಗ್ರೇಸ್​ನಿಂದ ವಿರೋಧ

  ಇಂದಿನಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭಗೊಂಡಿದೆ. ಈ ವೇಳೆ ರಾಜ್ಯಪಾಲರು ಮಾತನಾಡಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗಿದೆ. ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.

 • 28 Jan 2021 11:05 AM (IST)

  ಮಹಾರಾಷ್ಟ್ರ ಸಿಎಂ ಹೇಳಿಕೆ ಖಂಡಿಸುತ್ತೇನೆ: ಸಚಿವೆ ಶಶಿಕಲಾ ಜೊಲ್ಲೆ

  ಮಹಾರಾಷ್ಟ್ರ ಸಿಎಂ ಹೇಳಿಕೆ ಖಂಡಿಸುತ್ತೇನೆ. ಈ ರೀತಿ ಹೇಳಿಕೆ ನೀಡುವುದು ತಪ್ಪು. ವಿವಿಧತೆಯಲ್ಲಿ ಏಕತೆ ಇಂದ ಕೂಡಿರುವ ದೇಶ ನಮ್ಮದು. ಹಾಗೆ ನೋಡಿದ್ರೆ ಸೊಲ್ಲಾಪುರ, ಮುಂಬೈ ನಮಗೆ ಸೇರಲಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ. ಅವರು ಬಾಲ ಬಿಚ್ಚಿದ್ರೆ ನಾವು ಕೈ ಕಟ್ಟಿ ಕೂರುವುದಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.

 • 28 Jan 2021 10:59 AM (IST)

  ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ.ಕೊಂಡಯ್ಯ ನಾಮಪತ್ರ ಸಲ್ಲಿಕೆ

  ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ.ಕೊಂಡಯ್ಯ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

 • 28 Jan 2021 10:56 AM (IST)

  ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿಯ ಪ್ರಾಣೇಶ್ ನಾಮಪತ್ರ ಸಲ್ಲಿಕೆ

  ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿಯ ಪ್ರಾಣೇಶ್ ನಾಮಪತ್ರ ಸಲ್ಲಿಸಿದ್ದಾರೆ.ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸೇರಿದಂತೆ ಬಿಜೆಪಿ ಹಿರಿಯ ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ.

 • 28 Jan 2021 10:47 AM (IST)

  ಸಿಖ್ ಧರ್ಮ ಧ್ವಜ ಹಾರಿಸಿದ್ದ ದೀಪ್ ಸಿಧು ನಾಪತ್ತೆ

  ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದವರ ವಿರುದ್ಧ FIR ದಾಖಲಿಸಲಾಗಿದ್ದು, ಪೊಲೀಸರು ದೀಪ್ ಸಿಧು ವಿರುದ್ಧ FIR ದಾಖಲಿಸಿದ್ದಾರೆ. ಸಿಖ್ ಧರ್ಮ ಧ್ವಜ ಹಾರಿಸಿದ್ದ ದೀಪ್ ಸಿಧು ನಾಪತ್ತೆಯಾಗಿದ್ದಾರೆ.

 • 28 Jan 2021 10:45 AM (IST)

  ಸಚಿವ ಸುರೇಶ್ ಕುಮಾರ್ ನಿರ್ಲಕ್ಷ್ಯ ಖಂಡಿಸಿ ಜ. 31ರಂದು ಪೋಷಕರ ಪ್ರತಿಭಟನೆ

  ಖಾಸಗಿ ಶಾಲೆಗಳ ಶುಲ್ಕ ನಿಗಧಿ ನಿರ್ಧಾರ ಮಾಡದ ಹಿನ್ನೆಲೆಯಲ್ಲಿ ವಿವಿಧ ಪೋಷಕ ಸಂಘಟನೆಗಳು ಪ್ರತಿಭಟನೆಗೆ ನಿರ್ಧಾರ ಕೈಗೊಂಡಿದ್ದಾರೆ. ಇದೇ ಭಾನುವಾರ ಜನವರಿ 31ರಂದು ಬೀದಿಗಿಳಿದು ಪೋಷಕರು ಹೋರಾಟ ಮಾಡಲಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಯಲು ನಿರ್ಧರಿಸಿದ್ದಾರೆ.

 • 28 Jan 2021 10:42 AM (IST)

  ದೆಹಲಿ ಟ್ರ್ಯಾಕ್ಟರ್ ರ‍್ಯಾಲಿ: ರೈತ ಮುಖಂಡರಿಗೆ ದೆಹಲಿ ಪೊಲೀಸರಿಂದ ನೋಟಿಸ್

  ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ 20 ರೈತ ಮುಖಂಡರಿಗೆ ದೆಹಲಿ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. 3 ದಿನಗಳಲ್ಲಿ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದ್ದು,
  ಯೋಗೇಂದ್ರ ಯಾದವ್, ಬಲ್‌ದೇವ್ ಸಿಂಗ್ ಸಿರ್ಸಾ, ಬಲ್ಬೀರ್ S. ರಾಜೇವಾಲ್ ಸೇರಿ 20 ಜನರಿಗೆ ನೋಟಿಸ್ ನೀಡಲಾಗಿದೆ.

 • 28 Jan 2021 10:05 AM (IST)

  ದೇಶದಲ್ಲಿ 153 ಜನರಲ್ಲಿ ರೂಪಾಂತರಿ ಕೊರೊನಾ ಪತ್ತೆ

  ದೇಶದಲ್ಲಿ 153 ಜನರಲ್ಲಿ ರೂಪಾಂತರಿ ಕೊರೊನಾ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

 • 28 Jan 2021 10:03 AM (IST)

  ವಿಧಾನಮಂಡಲ ಜಂಟಿ ಅಧಿವೇಶನ: ವಿಧಾನಸೌಧಕ್ಕೆ ತೆರಳಿದ BSY

  ಇಂದು ವಿಧಾನಮಂಡಲ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವಿಧಾನದೌಧಕ್ಕೆ ತೆರಳಿದ್ದಾರೆ. ತಮ್ಮ ಅಧಿಕೃತ ನಿವಾಸ ಕಾವೇರಿಯಿಂದ ಬಿ.ಎಸ್ ಯಡಿಯೂರಪ್ಪ ತೆರಳಿದ್ದಾರೆ.

 • 28 Jan 2021 10:01 AM (IST)

  ದೆಹಲಿ: ಗಾಯಗೊಂಡ ಪೊಲೀಸರನ್ನು ಭೇಟಿ ಮಾಡಲಿರುವ ಅಮಿತ್ ಶಾ

  ದೆಹಲಿ ಗಲಭೆಯಲ್ಲಿ 300ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನದ ಬಳಿಕ ಸಿವಿಲ್ ಲೈನ್ಸ್ ಹಾಸ್ಪಿಟಲ್​ನಲ್ಲಿ ಪೊಲೀಸರನ್ನು ಭೇಟಿ ಮಾಡಲಿದ್ದಾರೆ.

 • 28 Jan 2021 09:55 AM (IST)

  ದೆಹಲಿ ಹಿಂಸಾಚಾರಕ್ಕೆ ಸಂಬಧಿಸಿ ಕಾರಣರಾದವರನ್ನು ಗುರುತಿಸಿ ಶಿಕ್ಷಿಸಬೇಕು: ಭಾರತೀಯ ವಿಧಾನ ಪರಿಷತ್

  ದೇಶದ ಹೆಮ್ಮೆ, ಗೌರವ ಮತ್ತು ಸಾರ್ವಭೌಮತ್ವದ ಸಂಕೇತಗಳಾಗಿರುವ ಕೆಂಪು ಕೋಟೆ ಮತ್ತು ರಾಷ್ಟ್ರೀಯ ಧ್ವಜಕ್ಕೆ ಅಗೌರವ ತಂದಿರುವುದನ್ನು ಕ್ಷಮಿಸಲು ಆಗುವುದಿಲ್ಲ. ವಿವಿಧ ರಾಜಕೀಯ ಮತ್ತು ಇತರ ಸಂಘಟನೆಗಳ ಪ್ರಚೋದಕರು ಸೇರಿದಂತೆ ಈ ಘಟನೆಗೆ ಕಾರಣರಾದ ಎಲ್ಲರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಭಾರತೀಯ ವಿಧಾನ ಪರಿಷತ್ ಹೇಳಿದೆ.

 • 28 Jan 2021 09:46 AM (IST)

  ಪಶ್ಚಿಮ ದೆಹಲಿಯಲ್ಲಿ ಲಘು ಭೂಕಂಪ

  ಪಶ್ಚಿಮ ದೆಹಲಿಯಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 2.8ರಷ್ಟು ದಾಖಲಾಗಿದೆ.

 • 28 Jan 2021 09:40 AM (IST)

  ಭಾರತದ ಈವರೆಗಿನ ಕೊವಿಡ್ ಸ್ಯಾಂಪಲ್ಸ್ ಟೆಸ್ಟ್ ಪಟ್ಟಿ

  ದೇಶದಲ್ಲಿ ನಿನ್ನೆ 7,25,653 ಕೊವಿಡ್ ಸ್ಯಾಂಪಲ್ಸ್ ಟೆಸ್ಟ್ ಮಾಡಲಾಗಿದ್ದು, ದೇಶದಲ್ಲಿ ಈವರೆಗೆ 19,43,38,773 ಸ್ಯಾಂಪಲ್ಸ್ ಟೆಸ್ಟ್ ಮಶಾಡಲಾಗಿದೆ. ಕೊವಿಡ್ ಟೆಸ್ಟ್ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR)‌ ಮಾಹಿತಿ ನೀಡಿದೆ.

 • 28 Jan 2021 09:36 AM (IST)

  ಸಿಂದಗಿ ಕ್ಷೇತ್ರದ ಶಾಸಕ ಎಂ.ಸಿ ಮನಗೂಳಿ ವಿಧಿವಶ

  ಸಿಂದಗಿ ಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ(85) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನಗೂಳಿ ಉಸಿರಾಟದ ಸಮಸ್ಯೆಯಿಂದ ಜನವರಿ 9ರಂದು ಏರ್ ಲಿಪ್ಟ್ ಮುಖಾಂತರ ಕಲಬುರ್ಗಿಯ ಏರ್ಪೋರ್ಟ್ ನಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ತಡರಾತ್ರಿ 1 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

 • 28 Jan 2021 09:31 AM (IST)

  ದೆಹಲಿ ಹಿಂಸಾಚಾರ: ದೆಹಲಿ ಪೊಲೀಸರಿಂದ ಸುದ್ದಿಗೋಷ್ಠಿ

 • 28 Jan 2021 09:28 AM (IST)

  2021 ಮುಗಿಯುವವರೆಗೂ ಮಾಸ್ಕ್ ಧರಿಸುವಂತೆ ತಜ್ಞರ ಸಲಹೆ

  ಕೊರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುವುದು ಸೂಕ್ತ. ಹೀಗಾಗಿ 2021 ಅಂತ್ಯದವರೆಗೂ ಮಾಸ್ಕ್ ಕಡ್ಡಾಯ ಮಾಡಿ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದು ಮುಂದುವರೆಸಿ. ಮಾಸ್ಕ್‌ನಿಂದ ಅಸ್ತಮಾ, ಅಲರ್ಜಿಯಂಥಹ ಕಾಯಿಲೆಗಳು ಕಡಿಮೆಯಾಗುತ್ತವೆ ಎಂದು ರಾಜ್ಯ ಆರೋಗ್ಯ ಇಲಾಖೆಗೆ ಸಲಹೆ ತಜ್ಞರು ಸಲಹೆ ನೀಡಿದ್ದಾರೆ.

 • 28 Jan 2021 09:26 AM (IST)

  ದಾವಣಗೆರೆ: ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಟ್ರ್ಯಾಕ್ಟರ್‌ಗಳಿಗೆ ರಿಫ್ಲೆಕ್ಟರ್‌ ಅಳವಡಿಕೆ

  ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ಗಳಿಗೆ ರಿಫ್ಲೆಕ್ಟರ್‌ಗಳ ಅಳವಡಿಕೆ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ರಿಫ್ಲೆಕ್ಟರ್‌ಗಳ ಅಳವಡಿಕೆ ಮಾಡಲಾಗಿದೆ.

 • 28 Jan 2021 09:23 AM (IST)

  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹ

  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿಯಿಂದ 15ನೇ ದಿನದ ಪಾದಯಾತ್ರೆ ಆರಂಭಗೊಂಡಿದೆ. ಬಸವ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.

 • 28 Jan 2021 09:22 AM (IST)

  ಬೆಂಗಳೂರು: ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪ, ನಾಲ್ವರ ಬಂಧನ

  ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯ ಮಾಲೀಕ ವೀರೇಶ್ ಸೇರಿದಂತೆ ಜಾನ್ ಕೆನಡಿ, ನರ್ಮಲ್ ಬಾಬು ಸೇರಿ ನಾಲ್ವರ ಬಂಧನಕ್ಕೊಳಗಾಗಿದ್ದಾರೆ. ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿ ₹34 ಲಕ್ಷ ವಸೂಲಿ ಮಾಡಿದ್ದರು. ಬಳಿಕ ಮತ್ತೆ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ತಮಿಳುನಾಡು ಮೂಲದ ಶೇಖರ್ ದೂರು ಆಧರಿಸಿ ಅರೆಸ್ಟ್ ಮಾಡಲಾಗಿದೆ.

 • 28 Jan 2021 09:19 AM (IST)

  ಬಿ. ಶ್ರೀರಾಮುಲು ಮನೆಯ ವಿದ್ಯುತ್ ಬಿಲ್ ಪಾವತಿಸದ ಕಾರಣ 95 ಸಾವಿರಕ್ಕೂ ಹೆಚ್ಚು ರೂಪಾಯಿ ಬಾಕಿ ಉಳಿದಿದೆ

  ರಾಜ್ಯದ ಕೆಲ ಪ್ರಭಾವಿ ಸಚಿವರು ತಮ್ಮ ಮನೆ, ಸರ್ಕಾರಿ ಕಟ್ಟಡಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಲಕ್ಷ ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಹಾಗೆಯೇ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಗದಗ ಹೊಸ ಬಸ್ ನಿಲ್ದಾಣ ಬಳಿಯ ಮನೆಯ ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಬಿ.ಶ್ರೀರಾಮುಲು ಸುಮಾರು 3 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೆ 95 ಸಾವಿರಕ್ಕೂ ಹೆಚ್ಚು ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಹಾಗೂ ಕನ್ನಡ ಸಾಹಿತ್ಯ ಭವನದ 1.13 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಇದೆ.

 • 28 Jan 2021 09:16 AM (IST)

  ನಾಗರಹೊಳೆ ಪಕ್ಷಿ ಗಣತಿ ಯಶಸ್ವಿ: 6 ಹೊಸ ಜಾತಿಯ ಪಕ್ಷಿಗಳು ಪತ್ತೆ

  ಮೈಸೂರಿನ ನಾಗರಹೊಳೆ ಪಕ್ಷಿ ಗಣತಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿ ಪಕ್ಷಿ ಗಣತಿಯಲ್ಲಿ 6 ಹೊಸ ಜಾತಿಯ ಪಕ್ಷಿಗಳು ಪತ್ತೆಯಾಗಿವೆ. ಬ್ಲಾಕ್ ರೆಡ್ ಸ್ಟಾರ್ಟ್, ಗ್ರೀನಿಷ್ ವಾರ್ ಬ್ಲರ್, ಗ್ರೇಟರ್ ಸ್ಪಾಟೆಡ್ ಈಗಲ್, ಸ್ಪಾಟ್ ಬೆಲ್ಲಿಡ್ ಈಗಲ್ ಔಲ್, ನೀಲಗಿರಿ ಫ್ಲವರ್ ಪಿಕ್ಕರ್ ಮಾಂಟಾಗೂ ಹ್ಯಾರಿಯರ್ ಪಕ್ಷಿ ಪತ್ತೆಯಾಗಿವೆ. 8 ವಲಯಗಳಲ್ಲಿ ನಡೆದ ಸಮೀಕ್ಷೆಯಲ್ಲಿ, 75 ಜನ ಪಕ್ಷಿ ತಜ್ಞರು ಸ್ವಯಂ ಸೇವಕರು, 36 ಜನ ವಿದ್ಯಾರ್ಥಿಗಳು ಅಧಿಕಾರಿಗಳು ಸಿಬ್ಬಂದಿ ಭಾಗಿಯಾಗಿದ್ದು,ಸತತ ನಾಲ್ಕು ದಿನಗಳ ಕಾಲ ಪಕ್ಷಿ ಸಮೀಕ್ಷೆ ನಡೆಸಲಾಗಿದೆ. ಒಟ್ಟು 270 ಪ್ರಭೇದದ ಪಕ್ಷಿಗಳು ಪತ್ತೆಯಾಗಿದೆ.

 • 28 Jan 2021 08:41 AM (IST)

  ಏಪ್ರಿಲ್‌ ಅಂತ್ಯಕ್ಕೆ ಹೆಮ್ಮಾರಿ ಆಟ ಅಂತ್ಯ?

  ಒಂದು ಎರಡು ಅಂತಾ ರಾಜ್ಯದೊಳಗೆ ಕಾಲಿಟ್ಟಿದ್ದ ಕೊರೊನಾ, ಇಡೀ ಕರುನಾಡನ್ನೇ ಕಂಟ್ರೋಲ್‌ಗೆ ತೆಗೆದುಕೊಂಡು ಬಿಡ್ತು. ಅದ್ರಲ್ಲೂ ಬೆಂಗಳೂರನ್ನೇ ರಾಜಧಾನಿ ಮಾಡಿಕೊಂಡು ಅಬ್ಬರಿಸ ತೊಡಗಿತ್ತು. ಹೀಗೆ ಹತ್ತು ತಿಂಗಳಿಂದ ಆರ್ಭಟಿಸಿದ್ದ ಕೊರೊನಾ ಮರೆಯಾಗು ಸಮಯ ಬಂದಿದೆ. ಗಂಟುಮೂಟೆ ಸಮೇತ ಕಾಲ್ಕಿಳ್ಳೋ ದಿನ ಹತ್ತಿರವಾಗ್ತಿದೆ. ಎರಡು ತಿಂಗಳಿಂದ ಇಳಿಮುಖದ ಗ್ರಾಫ್‌ ನೋಡಿರೋ ತಜ್ಞರು, ಕ್ರೂರಿಯ ಸ್ಥಿತಿ ಹೀಗೆ ಮುಂದುವರಿದ್ರೆ ಏಪ್ರಿಲ್‌ ಅಂತ್ಯಕ್ಕೆ ಕೊರೊನಾದಿಂದ ಮುಕ್ತವಾಗ್ತೀವಿ ಅಂತಿದ್ದಾರೆ.

 • 28 Jan 2021 08:35 AM (IST)

  ಸಿಂದಗಿ ಪಟ್ಟಣ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಸಕ ಎಮ್​.ಸಿ ಮನಗೂಳಿ ಅವರ ಪಾರ್ಥಿವ ಶರೀರ ದರ್ಶನ

  ಶಾಸಕ ಎಮ್​.ಸಿ ಮನಗೂಳಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ತರಲಾಗುತ್ತಿದೆ. ಸಿಂದಗಿ ಪಟ್ಟಣದಲ್ಲಿರುವ ಅವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 • 28 Jan 2021 08:32 AM (IST)

  FIR ದಾಖಲಾದ ಬೆನ್ನಲ್ಲೇ ರೈತ ಸಂಘಟನೆಗಳಲ್ಲಿ ಒಡಕು

  FIR ದಾಖಲಿಸಿದ ಬೆನ್ನಲ್ಲೇ ರೈತ ಸಂಘಟನೆಗಳಲ್ಲಿ ಒಡಕು ಮೂಡಿದೆ. ಎರಡು ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿವೆ. ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಭಾನು ಬಣ ಪ್ರತಿಭಟನೆಯಿಂದ ಹೊರ ಬಂದಿದೆ.

 • 28 Jan 2021 08:26 AM (IST)

  ಆಂಧ್ರದ ತಿರುಮಲ ದೇವಾಲಯ: ಸಂಜೆ ವಿಶೇಷ ಗರುಡ ಸೇವೆ‌ ಕಾರ್ಯಕ್ರಮ

  ಆಂಧ್ರದ ತಿರುಮಲ ದೇವಾಲಯದಲ್ಲಿ ಇಂದು ಪೌರ್ಣಮಿ ಹಿನ್ನೆಲೆ‌ ವಿಶೇಷ ಪೂಜೆಯಂದು ಸಂಜೆ ವಿಶೇಷ ಗರುಡ ಸೇವೆ‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು‌ ರಾತ್ರಿ 7ರಿಂದ‌ 9 ಗಂಟೆಯವರೆಗೆ‌ ಗರುಡ‌ ವಾಹನದ‌ ಮೇಲೆ ಮಲೆಯಪ್ಪ ಸ್ವಾಮಿ ಮೆರವಣಿಗೆ ನಡೆಯಲಿದೆ. ತಿರುಮಲದ ಮೂರು ಬೀದಿಗಳಲ್ಲಿ ಬಾಲಾಜಿಯ ಮೆರವಣಿಗೆ ಸಾಗಲಿದೆ.

 • 28 Jan 2021 08:19 AM (IST)

  ಸಚಿವ ಸುರೇಶ್ ಕುಮಾರ್ ಸಭೆ: ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸಲು ಚಿಂತನೆ

  ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಸಚಿವ ಸುರೇಶ್ ಕುಮಾರ್ ಸಭೆ ನಡೆಯಲಿದೆ. ಸಭೆಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಈಗಾಗಲೇ ಹತ್ತು ಮತ್ತು ಹನ್ನೆರಡನೇ ತರಗತಿಗಳು ಆರಂಭವಾಗಿದೆ. ಇದರ ಜೊತೆಗೆ ಆರರಿಂದ ಒಂಬತ್ತನೇ ತರಗತಿಗಳ ವಿದ್ಯಾಗಮ ಪ್ರಾರಂಭವಾಗಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸುವ ಕುರಿತಾಗಿ ಸಭೆ ನಡೆಯಲಿದೆ.

 • 28 Jan 2021 08:15 AM (IST)

  S.L.ಧರ್ಮೇಗೌಡ ಆತ್ಮಹತ್ಯೆ ಕೇಸ್: ಪರಿಷತ್‌ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ

  ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ಆತ್ಮಹತ್ಯೆ ಕೇಸ್​ಗೆ ಸಂಬಂಧಿಸಿ ಪರಿಷತ್‌ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. 2020ರ ಡಿಸೆಂಬರ್ 8 ರಂದು ಪರಿಷತ್​ನಲ್ಲಿ ನಡೆದಿದ್ದ ಗಲಾಟೆ ಬಗ್ಗೆ S.L.ಧರ್ಮೇಗೌಡ ತಮ್ಮ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ರೈಲ್ವೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಮುಂದಾಗಿದ್ದಾರೆ.

 • 28 Jan 2021 08:12 AM (IST)

  ದೆಹಲಿಯ ಕೆಂಪುಕೋಟೆ ಬಳಿಯ ಮೆಟ್ರೋ ಸ್ಟೇಷನ್ ಮುಚ್ಚಲಾಗಿದೆ

  ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಕೆಂಪುಕೋಟೆಗೆ ನುಗ್ಗಿ ಗಲಾಟೆ ಕೇಸ್​ಗೆ ಸಂಬಂಧಿಸಿ, ದೆಹಲಿಯ ಕೆಂಪುಕೋಟೆ ಬಳಿಯ ಮೆಟ್ರೋ ಸ್ಟೇಷನ್‌ಗಳಾದ ಜಾಮಾ ಮಸೀದಿ ಮೆಟ್ರೋ ಸ್ಟೇಷನ್ ಎಂಟ್ರಿ ಗೇಟ್​ಅನ್ನು ಮುಚ್ಚಲಾಗಿದೆ. ಲಾಲ್‌ ಕಿಲಾ ಮೆಟ್ರೋ ಸ್ಟೇಷನ್‌ನ ಎಲ್ಲ ಗೇಟ್‌ಗಳನ್ನು ಮುಚ್ಚಲಾಗಿದೆ.

 • 28 Jan 2021 08:06 AM (IST)

  ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲ: ಇಂದ್ರಜಿತ್​ ಲಂಕೇಶ್​​ರನ್ನು ವಿಚಾರಣೆಗೆ ಕರೆದ ಸಿಸಿಬಿ

  ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ, ಇಂದ್ರಜಿತ್​ ಲಂಕೇಶ್​​ಗೆ ಸಿಸಿಬಿ ಇಂದು ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ
  ಇಂದ್ರಜಿತ್ ವಿಚಾರಣೆ ನಡೆಸಲಿದ್ದಾರೆ.

 • 28 Jan 2021 08:02 AM (IST)

  ಇಂದು ಜಂಟಿ ಅಧಿವೇಶನ ಉದ್ದೇಶಿಸಿ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಭಾಷಣ

  ಇಂದಿನಿಂದ ಫೆ.5ರವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಿ.ಆರ್.ವಾಲಾ ಭಾಷಣ ಮಾಡಲಿದ್ದಾರೆ. ಭಾಷಣದ ಬಳಿಕ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚನೆ ನಡೆಯಲಿದೆ.