ಬೆಂಗಳೂರು: ಸರಣಿ ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿಯ ವಂಚನೆ ಪ್ರಕರಣಗಳು ಒಂದೊಂದಾಗಿ ಹುತ್ತದಿಂದ ಹೊರಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು ಯುವರಾಜ್ ವಿರುದ್ದ ಹೊಸದಾಗಿ ಎರಡು FIR ಗಳು ದಾಖಲಾಗಿವೆ.
Deal Swamy Yuvraj Fraud case 75 ಲಕ್ಷ ಹಣ ಪಡೆದು ವಂಚನೆ..
ವಂಚಕ ಸ್ವಾಮಿ ಅರೆಸ್ಟ್ ಆದ ಬೆನ್ನಲ್ಲೇ ಸಂತ್ರಸ್ತರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಒಂದೇ ದಿನ ವಂಚಕ ಸ್ವಾಮಿ ವಿರುದ್ದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎರಡು FIR ದಾಖಲಾಗಿವೆ. ಡಾಕ್ಟರ್ ನರಸಿಂಹ ಸ್ವಾಮಿ ಎಂಬುವರಿಂದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಸ್ವಾಮಿ ವಿರುದ್ದ ದೂರು ದಾಖಲಾಗಿದೆ. ವೈದ್ಯ ನರಸಿಂಹ ಸ್ವಾಮಿ ಮಗನಿಗೆ ಸರ್ಕಾರಿ AEE ಕೆಲಸ ಕೋಡಿಸ್ತೀನಿ ಎಂದು 75 ಲಕ್ಷ ಪಡೆದು ವಂಚನೆ ಎಸಗಿರುವುದಾಗಿ ಯುವರಾಜ್ ವಿರುದ್ದ ದೂರ ನೀಡಲಾಗಿದೆ.
ಎಷ್ಟೇ ದಿನ ಕಳೆದರೂ ಕೆಲಸ ಕೊಡಿಸ್ಲಿಲ್ಲ.. ಹಣ ವಾಪಸು ಕೊಡಿ ಎಂದು ಕೇಳಿದ್ದಕ್ಕೆ ರೌಡಿಗಳಿಂದ ಬೆದರಿಕೆ ಹಾಕಿಸಿದ್ದರಂತೆ. ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ವೈದ್ಯ ನರಸಿಂಹ ಸ್ವಾಮಿಗೆ ಬೆದರಿಕೆ ಹಾಕಿದ್ದರಂತೆ. ಹೀಗಾಗಿ ಕೆಲವು ದಿನಗಳವರೆಗೆ ವೈದ್ಯ ನರಸಿಂಹಸ್ವಾಮಿ ಸುಮ್ಮನಾಗಿದ್ದು, ಯುವರಾಜ್ ಸಿಸಿಬಿ ಬಲೆಗೆ ಬಿದ್ದ ಬಳಿಕ ಜಾನ್ಞಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಳಿಯನಿಗೆ ಸರ್ಕಾರಿ ಹುದ್ದೆ ಕೊಡಿಸುವುದಾಗಿ ಮಾವನಿಗೆ ವಂಚನೆ..
KMF ನಲ್ಲಿ ಮಾರ್ಕೇಟಿಂಗ್ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಗೋವಿಂದ್ ಎಂಬುವರಿದ ಹಣ ಪಡೆದು ವಂಚಿಸಿರುವುದಾಗಿ ದೂರು ದಾಖಲು. ಗೋವಿಂದ್ ಎಂಬುವವರ ಅಳಿಯ ವೇಣುಗೋಪಾಲ್ಗೆ KMF ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆ ಕೊಡಿಸುದಾಗಿ 30 ಲಕ್ಷ ಹಣ ಪಡೆದಿದ್ದನಂತೆ. ತಿಂಗಳಿಗೆ 80 ಸಾವಿರ ಸಂಬಳ ನೀಡುವ ಹುದ್ದೆಯಾಗಿದೆ ಎಂದು ಹೇಳಿ ಸ್ವಾಮಿ ಡ್ರೈವರ್ ಅಕೌಂಟ್ಗೆ 20 ಲಕ್ಷ ಹಾಗೂ ಯುವರಾಜ್ ಅಕೌಂಟ್ಗೆ 10 ಲಕ್ಷ ಹಣ ಡೆಪಾಸಿಟ್ ಮಾಡಿಸಿಕೊಂಡಿದ್ದನಂತೆ.
ಇಲ್ಲಿಯವರೆಗೂ ಯಾವುದೇ ಹುದ್ದೆ ಮತ್ತು ಹಣ ವಾಪಸ್ಸ್ ನೀಡದಿರುವ ಕಾರಣ ಈಗ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಗೋವಿಂದ್ ದೂರು ನೀಡಿದ್ದಾರೆ. ಸದ್ಯ ವಂಚಕ ಯುವರಾಜ್ ಸ್ವಾಮಿ ಸಿಸಿಬಿ ವಶದಲ್ಲಿ ಇದ್ದು, ಯುವರಾಜ್ ಸ್ವಾಮಿ ವಿರುದ್ದ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳ ದಾಖಲಾಗಿವೆ. ಹೀಗಾಗಿ ಎಲ್ಲಾ ಪ್ರಕರಣಗಳನ್ನು ವರ್ಗಾವಣೆ ಮಾಡಿಸಿಕೊಂಡು ಸಿಸಿಬಿ ತನಿಖೆ ನಡೆಸುತ್ತಿದೆ.
ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR.. B.L.ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ