ದೆಹಲಿಯಲ್ಲಿ ಇಬ್ಬರು ಶಂಕಿತ ಉಗ್ರಗಾಮಿಗಳ ಬಂಧನ

  • TV9 Web Team
  • Published On - 15:11 PM, 17 Nov 2020
ದೆಹಲಿಯಲ್ಲಿ ಇಬ್ಬರು ಶಂಕಿತ ಉಗ್ರಗಾಮಿಗಳ ಬಂಧನ

ದೆಹಲಿ: ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿರುವ ಘಟನೆ ನಿನ್ನೆ ರಾತ್ರಿ 10.15ರಲ್ಲಿ ನಡೆದಿದೆ. ಬಂಧಿತರು ಶಂಕಿತ ಉಗ್ರಗಾಮಿಗಳು ಎಂದು ಗುರುತಿಸಲಾಗಿದೆ. ಎರಡು ಅರೆ ಸ್ವಯಂಚಾಲಿತ ಪಿಸ್ತೂಲ್​ಗಳು ಮತ್ತು ಹತ್ತು ಸಿಡಿಮದ್ದು ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ.

ಇಬ್ಬರು ಶಂಕಿತರನ್ನು ಕಾಶ್ಮೀರದ ಬರಮುಲ್ಲಾದ ಅಬ್ದುಲ್ ಲತೀಫ್ (22) ಮತ್ತು ಕುಪ್ವಾರದ ಅಶ್ರಫ್ ಖಟಣ (20) ಎಂದು ಗುರುತಿಸಲಾಗಿದೆ. ದೆಹಲಿ ಪೊಲೀಸ್ ಉಪ ಆಯುಕ್ತ, ಸಂಜೀವ್ ಕುಮಾರ್ ಯಾದವ್, ಶಂಕಿತರನ್ನು ಸರಾಯಿ ಕಲೆ ಖಾನ್ ಬಳಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.