ಮುಂದಿನ ಸೋಮವಾರದಿಂದ.. ಬ್ರಿಟನ್​ ತಲುಪುವ ಎಲ್ಲಾ ಟ್ರಾವೆಲ್​ ಕಾರಿಡಾರ್​ ಬಂದ್​

ಕೊರೊನಾ ಕಾಲದಲ್ಲಿ ಬ್ರಿಟನ್​ ತಲುಪಲು ನಿಗದಿಪಡಿಸಲಾಗಿದ್ದ ಎಲ್ಲಾ ಟ್ರಾವೆಲ್​ ಕಾರಿಡಾರ್​ಗಳನ್ನು ಮುಂದಿನ ಸೋಮವಾರದಿಂದ ಬಂದ್​ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಕೊರೊನಾ ಮಹಾಮಾರಿಯ ವಿವಿಧ ಪ್ರಭೇದಗಳು ವಿಶ್ವದೆಲ್ಲೆಡೆ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್​ ಮಾಹಿತಿ ನೀಡಿದ್ದಾರೆ.

  • TV9 Web Team
  • Published On - 0:01 AM, 16 Jan 2021
ಮುಂದಿನ ಸೋಮವಾರದಿಂದ.. ಬ್ರಿಟನ್​ ತಲುಪುವ ಎಲ್ಲಾ ಟ್ರಾವೆಲ್​ ಕಾರಿಡಾರ್​ ಬಂದ್​
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌

ಕೊರೊನಾ ಕಾಲದಲ್ಲಿ ಬ್ರಿಟನ್​ ತಲುಪಲು ನಿಗದಿಪಡಿಸಲಾಗಿದ್ದ ಎಲ್ಲಾ ಟ್ರಾವೆಲ್​ ಕಾರಿಡಾರ್​ಗಳನ್ನು ಮುಂದಿನ ಸೋಮವಾರದಿಂದ ಬಂದ್​ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಕೊರೊನಾ ಮಹಾಮಾರಿಯ ವಿವಿಧ ಪ್ರಭೇದಗಳು ವಿಶ್ವದೆಲ್ಲೆಡೆ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್​ ಮಾಹಿತಿ ನೀಡಿದ್ದಾರೆ.

ಇದೀಗ, ವಿದೇಶದಿಂದ ಬ್ರಿಟನ್​ಗೆ ಆಗಮಿಸಲು ಇಚ್ಛಿಸುವವರು ವಿಮಾನ ಹತ್ತುವ ಮುನ್ನ ನೆಗೆಟಿವ್​ ಕೊವಿಡ್ ವರದಿ ನೀಡಬೇಕು ಎಂಬ ನಿಯಮವನ್ನು ಜಾರಿಮಾಡಲಾಗಿದೆ. ಈ ಹೊಸ ನಿಯಮಗಳು ಫೆಬ್ರವರಿ 15ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಬ್ರಿಟನ್​ ಪ್ರಧಾನಿ ಜಾನ್ಸನ್​ ತಿಳಿಸಿದ್ದಾರೆ. ಜೊತೆಗೆ ಇದೀಗ, ಇಂಗ್ಲೆಂಡ್​ಗೆ ಆಗಮಿಸುವವರು ಕಡ್ಡಾಯವಾಗಿ 10 ದಿನ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಬೇಕು ಎಂದು ಹೇಳಲಾಗಿದೆ.

ಏನಿದು ಟ್ರಾವೆಲ್​ ಕಾರಿಡಾರ್​?
ಕಳೆದ ಕೆಲವು ತಿಂಗಳಿಂದ ಅತಿ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದ ದೇಶಗಳಿಂದ ಇಂಗ್ಲೆಂಡ್​ಗೆ ಆಗಮಿಸುವವರಿಗೆ ಕ್ವಾರಂಟೈನ್​ ನಿಯಮವನ್ನು ರದ್ದುಪಡಿಸಿ ಬ್ರಿಟನ್​ ಸರ್ಕಾರ ಈ ಟ್ರಾವೆಲ್​ ಕಾರಿಡಾರ್​ ಎಂಬ ಯೋಜನೆಯನ್ನು ಜಾರಿಮಾಡಿತ್ತು. ಆದರೆ ಇದೀಗ, ಈ ಯೋಜನೆಯನ್ನು ಇಂಗ್ಲೆಂಡ್​ ಸರ್ಕಾರ ವಾಪಸ್​ ಪಡೆದಿದೆ.

ಕೊವಿಡ್​-19ಗೆ ರಾಜ್ಯದಲ್ಲಿಂದು ಮೂರು ಬಲಿ, 708 ಹೊಸ ಸೋಂಕಿತರು