ಮಾಹಿತಿ ತಂತ್ರಜ್ಞಾನದ ಹೊಸ ನಿಯಗಳನ್ನು ಪುನರ್​ಪರಿಶೀಲಿಸುವಂತೆ ಭಾರತ ಸರ್ಕಾರಕ್ಕೆ ವಿಶ್ವಸಂಸ್ಥೆ ಕಾರ್ಯಕಲಾಪ ವರದಿಗಾರರ ಪತ್ರ

ವಿಶ್ವಸಂಸ್ಥೆ ವರದಿಗಾರರ ಪತ್ರಕ್ಕೆ ಮತ್ತು ಅವರು ವ್ಯಕ್ತಪಡಿಸಿರುವ ಕಳವಳಗಳಿಗೆ ಉತ್ತರಿಸಿರುವ ಭಾರತ ಸರ್ಕಾರವು, ಸಮಂಜಸವೆನಿಸುವ ಮತ್ತು ಪ್ರಮಾಣೀಕರಿಸಬಹುದಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹೊಸ ಐಟಿ ನಿಯಮಗಳನ್ನು ರೂಪಿಸಲಾಗಿದೆ ಮತ್ತು ಗೌಪ್ಯತೆ ಮತ್ತು ಮಾಧ್ಯಮಗಳ ಸ್ವಾತಂತ್ರ್ಯದ ಹಕ್ಕನ್ನು ಸರ್ಕಾರ ಗೌರವಿಸುತ್ತದೆ ಎಂದು ಹೇಳಿದೆ.

ಮಾಹಿತಿ ತಂತ್ರಜ್ಞಾನದ ಹೊಸ ನಿಯಗಳನ್ನು ಪುನರ್​ಪರಿಶೀಲಿಸುವಂತೆ ಭಾರತ ಸರ್ಕಾರಕ್ಕೆ ವಿಶ್ವಸಂಸ್ಥೆ ಕಾರ್ಯಕಲಾಪ ವರದಿಗಾರರ ಪತ್ರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 20, 2021 | 1:19 AM

ನವದೆಹಲಿ: ಸಾಮಾಜಿಕ ಜಾಲತಾಣ, ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್ ಮತ್ತು ಡಿಜಿಟಲ್ ಸುದ್ದಿಸಂಸ್ಥೆಗಳನ್ನು ನಿಯಂತ್ರಣದಲ್ಲಿಡಲು ಭಾರತ ಸರ್ಕಾರ ಜಾರಿಗೊಳಿಸಿರುವ ಹೊಸ ಮಾಹಿತಿ ಮತ್ತು ತಂತ್ರಜ್ಞಾನ ನಿಯಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ವಿಶ್ವಸಂಸ್ಥೆ ಕಾರ್ಯಕಲಾಪ ವರದಿಗಾರರು ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ಅವರು ಮಾನವ ಹಕ್ಕುಗಳ ಮೇಲೆ ನಿರ್ಭಂದ ಹೇರುವ ಹೊಸ ನಿಯಮಮಗಳನ್ನು ಹಿಂಪಡೆಯವಂತೆ. ಕೆಲ ನಿಯಮಗಳನ್ನು ಪುನರ್​ಪರಿಶೀಲಿಸುವಂತೆ ಭಾರತ ಸರ್ಕಾರಕ್ಕೆ ತಿಳಿಸಿದ್ದಾರೆ. ನೀವು ಜಾರಿಗೊಳಿಸಿರುವ ಮಾಹಿತ ಮತ್ತು ತಂತ್ರಜ್ಞಾನ್ ಕಾಯ್ದೆಗಳು 2021 ಅಂತರರಾಷ್ಟ್ರೀಯ ಮಾನವ ಹಕ್ಕುಗಳ ರೂಢಿಗಳಿಗೆ ಅನುರೂಪವಾಗಿಲ್ಲ, ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂರಕ್ಷಣೆ ಮೇಲೆ ವಿಶೇಷ ವರದಿಗಾರರಾಗಿರುವ ಐರೀನ್ ಖಾನ್ ಅವರು ಸೇರಿದಂತೆ ವಿಶ್ವಸಂಸ್ಥೆಯ 8 ವರದಿಗಾರರು ಸದರಿ ಪತ್ರವನ್ನು ಭಾರತ ಸರ್ಕಾರಕ್ಕೆ ಬರೆದಿದ್ದಾರೆ. ಮೂಲ ವ್ಯಕ್ತಿಯನ್ನು ಪತ್ತೆ ಮಾಡುವುದು, ಮಧ್ಯವರ್ತಿ ಹೊಣೆಗಾರಿಕೆ ಮತ್ತು ಡಿಜಿಟಲ್ ಮಿಡಿಯಾ ಸಾರಾಂಶದ ಮೇಲೆ ಗಮನವಿಡುವುದು ಮೊದಲಾದವೆಲ್ಲ ಅಂತರರಾಷ್ಟ್ರೀಯ ಒಡಂಬಡಿಕೆಯಲ್ಲಿ ಹುದುಗಿರುವ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಡಿಯಲ್ಲಿ ಖಾಸಗಿತನ ಮತ್ತು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ವ್ಯಕ್ತಿಯೊಬ್ಬನನ್ನು ಘಾಸಿಗೊಳಿಸುವ ಅಥವಾ ಅವನ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುವ ಸುಳ್ಳುಸುದ್ದಿಗಳಿಗೆ ಸಂಬಂಧಿಸಿದಂತೆ ಪತ್ರವು ಹೀಗೆ ಹೇಳುತ್ತದೆ:

ಸಾಮಾಜಿಕ ಜಾಲತಾಣಗಳು ಭಾರಿ ಪ್ರಮಾಣದ ಸುದ್ದಿಯನ್ನು ನಿರ್ವಹಿಸಬೇಕಿರುವುದರಿಂದ, ಭಿನ್ನಾಭಿಪ್ರಾಯಾಗಳು ವ್ಯಕ್ತವಾಗುವ ಅಯಾಮಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕಾನೂನುನಡಿಯಲ್ಲಿ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಿತಿಗೊಳಿಸುವ ಒಂದು ವ್ಯಾಖ್ಯಾನವನ್ನು ನೀಡುವುದು ಮಹತ್ವಪೂರ್ಣ ಅಂಶವಾಗಿದೆ.

‘ರಾಜಕೀಯ ಅಥವಾ ಇತರ ನ್ಯಾಯಸಮ್ಮತವಲ್ಲದ ಆಧಾರದ ಮೇಲೆ ಕಾನೂನುಬದ್ಧ ಅಭಿವ್ಯಕ್ತಿಗಳನ್ನು ತೆಗೆದುಕೊಳ್ಳುವ ಸಾಧ್ಯತೆಯನ್ನು ತಡೆಯಲು ಸಾಕಷ್ಟು ನಿಖರವಾದ ವ್ಯಾಖ್ಯಾನವು ಅವಶ್ಯಕವಾಗಿದೆ. ಹೊಸ ನಿಯಮಗಳು ಸ್ವತಂತ್ರ ಮಾಧ್ಯಮ ವರದಿಗಾರಿಕೆಯ ಮೇಲೆ ಭೀತಿ ಹುಟ್ಟಿಸುವ ಪರಿಣಾಮವನ್ನು ಬೀರುವುದಿಲ್ಲ ಎಂದು ಇದು ಖಚಿತಪಡಿಸುತ್ತದೆ,’ಎಂದು ಪತ್ರದಲ್ಲಿ ಹೇಳಲಾಗಿದೆ.

“ಬಳಕೆದಾರರು ರಚಿಸಿದ ವಿಷಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಕ್ಷಿಪ್ರಗತಿಯಲ್ಲಿ ತೆಗೆದುಹಾಕುವ ಕಂಪನಿಗಳ ಮೇಲಿನ ಕಟ್ಟುಪಾಡುಗಳ ಬಗ್ಗೆ ನಾವು ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತೇವೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹಾಳುಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಪತ್ರದಲ್ಲಿ ವರದಿಗಾರರು ಹೇಳಿದ್ದಾರೆ,

‘ಮಧ್ಯವರ್ತಿಗಳು ತಮ್ಮ ಹೊಣೆಗಾರಿಕೆಯನ್ನು ಮಿತಿಗೊಳಿಸಲು ತೆಗೆದುಹಾಕುವಂಥ ವಿನಂತಿಗಳನ್ನು ಅನುಸರಿಸುತ್ತಾರೆ ಅಥವಾ ವಿಷಯವನ್ನು ನಿರ್ಬಂಧಿಸಲು ಡಿಜಿಟಲ್ ಗುರುತಿಸುವಿಕೆ ಆಧಾರಿತ ವಿಷಯ ತೆಗೆಯುವ ವ್ಯವಸ್ಥೆಗಳು ಅಥವಾ ಸ್ವಯಂಚಾಲಿತ ಸಾಧನಗಳನ್ನು ಅಭಿವೃದ್ಧಿಪಡಿಸುತ್ತಾರೆ ಎಂಬ ಆತಂಕ ನಮಗಿದೆ. ನಮ್ಮ ಹಿಂದಿನವರು ಒತ್ತಿ ಹೇಳಿದಂತೆ, ಈ ತಂತ್ರಗಳು ಸಾಂಸ್ಕೃತಿಕ ಸಂದರ್ಭಗಳನ್ನು ನಿಖರವಾಗಿ ಮೌಲ್ಯಮಾಪನ ಮಾಡಲು ಮತ್ತು ಗುರುತಿಸಲು ಅಸಾಧ್ಯವಾಗಿವೆ ಎನ್ನುವುದು ನ್ಯಾಯಸಮ್ಮತವಲ್ಲದ ವಿಷಯ. ಮೇಲೆ ತಿಳಿಸಲಾದ ಕ್ರಿಮಿನಲ್ ದಂಡಗಳೊಂದಿಗೆ ಸಣ್ಣ ಗಡುವನ್ನು, ನಿರ್ಬಂಧಗಳನ್ನು ತಪ್ಪಿಸಲು ಮುನ್ನೆಚ್ಚರಿಕೆಯಾಗಿ ಕಾನೂನು ಪೂರೈಕೆಗಳನ್ನು ತೆಗೆದುಹಾಕಲು ಸೇವಾ ಪೂರೈಕೆದಾರರಿಗೆ ಕಾರಣವಾಗಬಹುದು ಎಂಬ ಯೋವನೆ ನಮ್ಮನ್ನು ಕಾಡುತ್ತಿದೆ,’ ಎಂದು ಪತ್ರದಲ್ಲಿ ಹೇಳಲಾಗಿದೆ.

ಇದಲ್ಲದೆ, ವಿಶ್ವಸಂಸ್ಥೆಯ ಕಾರ್ಯಕಲಾಪ ವರದಿಗಾರರು ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್‌ಗಳು ಮಾಹಿತಿಯನ್ನು ಕೋಡ್​ ಬದಲಿಸುವ ಲಿಪೀಕರಣವನ್ನು ಉಲ್ಲಂಘಿಸುವ ಮೂಲಕ ಬಳಕೆದಾರರ ಗೌಪ್ಯತೆಯ ಹಕ್ಕಿಗೆ ಸಮಸ್ಯೆಯಾಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

‘ಸೆಕ್ಷನ್ 4 ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರನ ಗೌಪ್ಯತೆಯ ಹಕ್ಕಿನ ಜೊತೆ ರಾಜಿಯಾಗಬಹುದೆಂಬ ಕಳವಳ ನಮಗಿದೆ. ಬಳಕೆದಾರರ ದತ್ತಾಂಶವನ್ನು ಪಡೆಯಲು ಮತ್ತು ವಿಷಯವನ್ನು ನಿರ್ಬಂಧಿಸಲು ಆದೇಶಗಳನ್ನು ನೀಡುವ ಕಾರ್ಯನಿರ್ವಾಹಕ ಅಧಿಕಾರಿಗಳ ಸಾಮರ್ಥ್ಯ ನಮ್ಮನ್ನು ಮತ್ತಷ್ಟು ಕಳವಳಕಾರಿಯನ್ನಾಗಿ ಮಾಡುತ್ತದೆ. ಇದು ಯಾವುದೇ ನ್ಯಾಯಾಂಗ ಪರಿಧಿಯಾಚೆ ನಡೆಯುವಂಥಾಗಿರಬಹುದು. ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಮೇಲ್ವಿಚಾರಣಾ ಕಾರ್ಯವಿಧಾನ ಪರಿಣಾಮಕಾರಿಯಲ್ಲದ ಕಾರ್ಯವಿಧಾನದ ಸುರಕ್ಷತೆಗಳು ಮತ್ತು ಮೇಲ್ವಿಚಾರಣೆಯು ಹೊಣೆಗಾರಿಕೆಯ ಅವಕಾಶಗಳನ್ನು ಸೀಮಿತಗೊಳಿಸಲು ಮಾತ್ರ ಸಹಾಯ ಮಾಡುತ್ತದೆ. ಇದರಿಂದಾಗಿ ಇನ್ನಷ್ಟು ಮಾನವ ಹಕ್ಕುಗಳ ಉಲ್ಲಂಘನೆ ಉಂಟಾಗುತ್ತದೆ,’ ಎಂದು ಪತ್ರದಲ್ಲಿ ವರದಿಗಾರರು ಹೇಳಿದ್ದಾರೆ.

‘ಕೊನೆಯದಾಗಿ, ಈ ನಿಬಂಧನೆಗಳು ಮಹತ್ವದ ಸಾಮಾಜಿಕ ಮಾಧ್ಯಮದ ಮಧ್ಯವರ್ತಿಗೆ ಮಾತ್ರವಲ್ಲ, ಯಾವುದೇ ಮಧ್ಯವರ್ತಿಗೂ ಅನ್ವಯವಾಗುತ್ತವೆ ಎನ್ನುವ ಅಂಶ ನಮ್ಮನ್ನು ಚಿಂತೆಗೀಡು ಮಾಡಿದೆ. ವಾಸ್ತವವಾಗಿ, ನಿಯಮಗಳ ಸೆಕ್ಷನ್ 6, ಸಚಿವಾಲಯದ ಆದೇಶದ ಪ್ರಕಾರ, ಕಾರಣಗಳನ್ನು ಲಿಖಿತವಾಗಿ ದಾಖಲಿಸಲು, ಯಾವದಾದರೂ ಮಧ್ಯವರ್ತಿಯ ಅಗತ್ಯವಿರುತ್ತದೆ. ಇದು ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯಲ್ಲ, ಎಲ್ಲಾ ಅಥವಾ ಯಾವುದೇ ಕಟ್ಟುಪಾಡುಗಳನ್ನು ಅನುಸರಿಸಲು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಲಾಗುವ ಇಂತಹ ಅನಿಯಂತ್ರಿತ ವಿವೇಚನೆಯು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರರ ಗೌಪ್ಯತೆಯ ಹಕ್ಕಿಗೆ ಗಂಭೀರ ಅಪಾಯ ತಂದೊಡ್ಡುತ್ತದೆ,’ ಎಂದು ಪತ್ರದಲ್ಲಿ ಹೇಳಲಾಗಿದೆ.

ಅಂತಿಮವಾಗಿ ಬಾರತದ ಸರ್ಕಾರದ ಹೊಸ ಐಟಿ ನಿಯಮಗಳ ಮೂರನೇ ಭಾಗವು ಡಿಜಿಟಲ್ ಸುದ್ದಿ ಸಂಸ್ಥೆಗಳ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಗಾರರು ಅಭಿಪ್ರಾಯಪಟ್ಟಿದ್ದಾರೆ.

‘ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸುವ ಯಾವುದೇ ಅರ್ಥಪೂರ್ಣ ಸುರಕ್ಷತೆಗಳ ಅನುಪಸ್ಥಿತಿಯಲ್ಲಿ ವಿಷಯವನ್ನು ನಿರ್ಬಂಧಿಸಲು ಮತ್ತು ಆದೇಶಿಸಲು ನಿಯಮಗಳು ಸರ್ಕಾರಿ ಸಂಸ್ಥೆಗೆ ವ್ಯಾಪಕ ಅಧಿಕಾರವನ್ನು ನೀಡುತ್ತವೆ. ಇದಲ್ಲದೆ, ವೆಬ್‌ಸೈಟೊಂದನ್ನು ನಿರ್ಬಂಧಿಸುವುದು ಪ್ರಕಾಶನ ಅಥವಾ ಪ್ರಸರಣವನ್ನು ನಿಷೇಧಿಸುವುದಕ್ಕೆ ಹೋಲುವಂಥ ಒಂದು ಗರಿಷ್ಠ ಪರಮಾಣವಾಗಿದೆ. ಇದನ್ನು ಮಾನವ ಹಕ್ಕುಗಳ ಕುರಿತಾದ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಸಮರ್ಥಿಸಬಹುದು. ಪ್ರಾಯೋಗಿಕವಾಗಿ, ನಿರ್ಬಂಧಿಸುವ ಆದೇಶಗಳು ಸಾಕಷ್ಟು ಗುರಿಯನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ನ್ಯಾಯಸಮ್ಮತವಾದ ವಿಷಯಕ್ಕೆ ಪ್ರವೇಶದ ನಿರ್ಬಂಧವನ್ನು ಒಳಗೊಂಡಿರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ವೆಬ್‌ಸೈಟ್ ನಿರ್ಬಂಧಿಸುವುದು ಅನುಚಿತವಾಗಿದೆ,’ ಎಂದು ಪತ್ರದಲ್ಲಿ ವರದಿಗಾರರು ಹೇಳಿದ್ದಾರೆ.

ವಿಶ್ವಸಂಸ್ಥೆ ವರದಿಗಾರರ ಪತ್ರಕ್ಕೆ ಮತ್ತು ಅವರು ವ್ಯಕ್ತಪಡಿಸಿರುವ ಕಳವಳಗಳಿಗೆ ಉತ್ತರಿಸಿರುವ ಭಾರತ ಸರ್ಕಾರವು, ಸಮಂಜಸವೆನಿಸುವ ಮತ್ತು ಪ್ರಮಾಣೀಕರಿಸಬಹುದಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹೊಸ ಐಟಿ ನಿಯಮಗಳನ್ನು ರೂಪಿಸಲಾಗಿದೆ ಮತ್ತು ಗೌಪ್ಯತೆ ಮತ್ತು ಮಾಧ್ಯಮಗಳ ಸ್ವಾತಂತ್ರ್ಯದ ಹಕ್ಕನ್ನು ಸರ್ಕಾರ ಗೌರವಿಸುತ್ತದೆ ಎಂದು ಹೇಳಿದೆ. ಐಟಿ ನಿಯಮಗಳನ್ನು ಸಾಮಾಜಿಕ ಮಾಧ್ಯಮದ ಸಾಮಾನ್ಯ ಬಳಕೆದಾರರನ್ನು ಸಶಕ್ತಗೊಳಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು 2018 ರಲ್ಲಿ ಸರ್ಕಾರವು ನಾಗರಿಕ ಸಮಾಜ ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದೆ ಎಂದು ಭಾರತ ಸರ್ಕಾರ ಹೇಳಿದೆ.

ಇದನ್ನೂ ಓದಿ: ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದ ಟ್ವಿಟರ್; ದೆಹಲಿ ಹೈಕೋರ್ಟ್​ನಿಂದ ನೋಟಿಸ್ ಜಾರಿ