ದೆಹಲಿ: ಭಾರತದಲ್ಲಿ ಆರಂಭವಾಗಿರುವ ಕೊರೊನಾ ಲಸಿಕೆ ಹಂಚಿಕೆ ಕಾರ್ಯವನ್ನು ವಿಶ್ವದ ಅತಿದೊಡ್ಡ ಲಸಿಕಾ ವಿತರಣೆ ಅಭಿಯಾನ ಎಂದು ವಿಶ್ವಸಂಸ್ಥೆ ಮಕ್ಕಳ ನಿಧಿಯ (UNICEF) ಭಾರತೀಯ ಪ್ರತಿನಿಧಿಗಳು ಬಣ್ಣಿಸಿದ್ದಾರೆ. ಈ ಕುರಿತು UNICEF India ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಭಾರತ ಕೊರೊನಾ ಲಸಿಕೆ ವಿತರಣೆಯನ್ನು ಆರಂಭಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ. ಕೋಲ್ಡ್ಚೈನ್ ಸ್ಟೋರೇಜ್, ಸಾಗಾಟ ವ್ಯವಸ್ಥೆ, ತಂತ್ರಜ್ಞಾನ ನಿರ್ವಹಣೆ ಎಲ್ಲವೂ ವ್ಯವಸ್ಥಿತವಾಗಿದೆ. ಕೊರೊನಾ ಲಸಿಕೆ ನೀಡುವ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. ಎಲ್ಲರೂ ಅತ್ಯದ್ಭುತವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.