Budget 2021: ಬಜೆಟ್ ಮಂಡನೆ ಹೇಗೆ ನಡೆಯುತ್ತದೆ? ಎಲ್ಲಿ ವೀಕ್ಷಿಸಬಹುದು?

ಕೇಂದ್ರ ಬಜೆಟ್ 2021 ಲೋಕಸಭೆ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ. ಲೋಕಸಭೆ ಟಿವಿಯ ಯುಟ್ಯೂಬ್ ಮತ್ತು ಟ್ವಿಟರ್​ ಅಕೌಂಟ್​ಗಳಲ್ಲಿಯೂ ಲೈವ್ ಇರಲಿದೆ.

Budget 2021: ಬಜೆಟ್ ಮಂಡನೆ ಹೇಗೆ ನಡೆಯುತ್ತದೆ? ಎಲ್ಲಿ ವೀಕ್ಷಿಸಬಹುದು?
ನಿರ್ಮಲಾ ಸೀತಾರಾಮನ್
Rashmi Kallakatta

| Edited By: guruganesh bhat

Jan 31, 2021 | 2:45 PM

ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನವು ಶುಕ್ರವಾರದಿಂದ (ಜ.29) ಆರಂಭವಾಗಲಿದೆ. ಫೆಬ್ರುವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇದು ಅವರು ಮಂಡಿಸುವ ಮೂರನೇ ಬಜೆಟ್.

ಆರ್ಥಿಕ ಸಮೀಕ್ಷೆ ಯಾವಾಗ? ಅಧಿವೇಶನದ ಮೊದಲ ದಿನ (ಜ.29) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಪ್ರಸ್ತುತ ಪಡಿಸಲಿದ್ದಾರೆ. ಬಜೆಟ್ ಅಧಿವೇಶನದ ದಿನ ಪ್ರಸ್ತುತ ಪಡಿಸುವ ಆರ್ಥಿಕ ಸಮೀಕ್ಷೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಒಟ್ಟಾರೆ ಆರ್ಥಿಕ ಬೆಳವಣಿಗೆಯ ಸಾರಾಂಶ ಆಗಿರುತ್ತದೆ.

ಸಮೀಕ್ಷೆಯಲ್ಲಿ ಹಣದ ವಹಿವಾಟು, ಮೂಲ ಸೌಕರ್ಯ, ಕೃಷಿ, ಕೈಗಾರಿಕಾ ಉತ್ಪನ್ನ, ಉದ್ಯೋಗ, ಬೆಲೆ, ಆಮದು, ರಫ್ತು, ವಿದೇಶಿ ವಿನಿಮಯ ಮೊದಲಾದವುಗಳು ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬ ಮಾಹಿತಿಗಳು ಇರುತ್ತವೆ. ಈ ಬಾರಿ ದೇಶದಲ್ಲಿ ಕೊರೊನಾವೈರಸ್​ನಿಂದಾಗಿ ಉಂಟಾದ ಆರ್ಥಿಕ ಹೊಡೆತವು ಪ್ರಧಾನ ವಿಷಯವಾಗಲಿದೆ.

ಕೇಂದ್ರ ಬಜೆಟ್ 2021 ಎಲ್ಲಿ ವೀಕ್ಷಿಸಬಹುದು? ಕೇಂದ್ರ ಬಜೆಟ್ 2021 ಲೋಕಸಭೆ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ. ಲೋಕಸಭೆ ಟಿವಿಯ ಯುಟ್ಯೂಬ್ ಮತ್ತು ಟ್ವಿಟರ್​ ಅಕೌಂಟ್​ಗಳಲ್ಲಿಯೂ ಲೈವ್ ಇರಲಿದೆ. ಬಜೆಟ್ ಬಗ್ಗೆ ಕ್ಷಣಕ್ಷಣದ ಮಾಹಿತಿಗೆ https://tv9kannada.com ಗೆ ಭೇಟಿ ನೀಡಿ.

ಮುಖ್ಯ ಆರ್ಥಿಕ ಸಲಹೆಗಾರರು ಸುದ್ದಿಗೋಷ್ಠಿಯ ಲೈವ್​ ಮಾಹಿತಿ

Budget 2021: ಏನಿದು ಆರ್ಥಿಕ ಸಮೀಕ್ಷೆ? ಏನಿದರ ಮಹತ್ವ?

Budget 2021 ನಿರೀಕ್ಷೆ | ಉದ್ಯೋಗ ಕಳೆದುಕೊಂಡ ಮಹಿಳೆಯರಿಗೆ ಆಸರೆ ಸಿಗಬೇಕಿದೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada