ಯತ್ನಾಳ್ ಒಬ್ಬ ಆರ್ಡಿನರಿ ಶಾಸಕ.. ಇಂಥ ವಿಷಯಗಳನ್ನು ಮಾತಾಡಲು ಅವರು​​ ಯಾರು? -ಡಿ.ವಿ.ಸದಾನಂದಗೌಡ

ಇಂಥ ವಿಷಯಗಳನ್ನು ಮಾತನಾಡಲು ಯತ್ನಾಳ್​​ ಯಾರು? ಮಾತಾಡೋದು ಇದ್ರೆ ಪಕ್ಷದ ಚೌಕಟ್ಟಿನೊಳಗೆ ಮಾತಾಡಲಿ. ಯತ್ನಾಳ್​​ ಇಂತಹ ಹೇಳಿಕೆಗಳನ್ನ ಕೊಡುವುದನ್ನು ನಿಲ್ಲಿಸಲಿ ಎಂದು ಸದಾನಂದಗೌಡ ಹೇಳಿದರು.

ಯತ್ನಾಳ್ ಒಬ್ಬ ಆರ್ಡಿನರಿ ಶಾಸಕ.. ಇಂಥ ವಿಷಯಗಳನ್ನು ಮಾತಾಡಲು ಅವರು​​ ಯಾರು? -ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ (ಎಡ); ಬಸನಗೌಡ ಪಾಟೀಲ್​ ಯತ್ನಾಳ್​ (ಬಲ)
KUSHAL V

|

Dec 25, 2020 | 4:54 PM

ಬೆಂಗಳೂರು: ಸಂಪುಟ ವಿಸ್ತರಣೆ ಆಗುತ್ತೋ ಇಲ್ಲಾ ಬದಲಾವಣೆ ಆಗುತ್ತೋ ಗೊತ್ತಿಲ್ಲ ಎಂಬ ಯತ್ನಾಳ್​ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಿಟ್ಟಾಗಿದ್ದಾರೆ.

ಇಂಥ ವಿಷಯಗಳನ್ನು ಮಾತನಾಡಲು ಯತ್ನಾಳ್​​ ಯಾರು? ಮಾತಾಡೋದು ಇದ್ರೆ ಪಕ್ಷದ ಚೌಕಟ್ಟಿನೊಳಗೆ ಮಾತಾಡಲಿ. ಯತ್ನಾಳ್​​ ಇಂತಹ ಹೇಳಿಕೆಗಳನ್ನ ಕೊಡುವುದನ್ನು ನಿಲ್ಲಿಸಲಿ ಎಂದು ಸದಾನಂದಗೌಡ ಹೇಳಿದರು.

‘ಯತ್ನಾಳ್ ಒಬ್ಬ ಆರ್ಡಿನರಿ ಶಾಸಕ’ ಅವರ ಭವಿಷ್ಯದ ದೃಷ್ಟಿಯಿಂದ ಇಂಥ ಹೇಳಿಕೆಗಳನ್ನು ಕೊಡದಿರಲಿ. ಅವರು ಪಕ್ಷದ ಅಧ್ಯಕ್ಷರಲ್ಲ, ಯತ್ನಾಳ್ ಒಬ್ಬ ಆರ್ಡಿನರಿ ಶಾಸಕ. ಬೀದಿಯಲ್ಲಿ ಮಾತಾಡೋದು ಯತ್ನಾಳ್​ಗೆ ಶೋಭೆ ತರಲ್ಲ. ಕೆಲವರಿಗೆ ಕೆಲವು ಸಂದರ್ಭ, ಸಮಯ ಬರುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ಜೊತೆಗೆ, ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಕೆಲವರು ಹೀಗೆ ಮಾತಾಡ್ತಾರೆ ಎಂದು ಸಹ ಹೇಳಿದರು.

ಶಾಸಕ ಯತ್ನಾಳ್​ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಯತ್ನಾಳ್​ಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರ ಇದೆ. ಈ ಬೇಸರದಿಂದ ಯತ್ನಾಳ್ ಇಂತಹ ಹೇಳಿಕೆ ಕೊಡ್ತಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಎನ್.ರವಿಕುಮಾರ್ ಹೇಳಿದ್ದಾರೆ. ಯತ್ನಾಳ್ ಅವರ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ಸಂದರ್ಭದಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಅಮಿತ್​ ಶಾ ಭೇಟಿಯಿಂದ.. ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಆಗಬಹುದು -ಯತ್ನಾಳ್ ಹೊಸ ಬಾಂಬ್

‘ನಾನು ವಾಜಪೇಯಿ ಕಾಲದಲ್ಲಿ ಸಚಿವನಾಗಿದ್ದೆ, DVS ಈಗ ಸಚಿವರಾಗಿದ್ದಾರೆ.. ಯಾರು ಸೀನಿಯರ್ ಅಂತಾ ನೀವೇ ತಿಳಿದುಕೊಳ್ಳಿ’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada