ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಲು ಏನು ಕಾರಣ? ರಾಮ್ ಗೋಪಾಲ್ ವರ್ಮಾ ಹೇಳಿದ ಕಾರಣ ಓದಿ..

ಎರಡು ವರ್ಷಗಳ ಹಿಂದಿನವರೆಗೆ ಕನ್ನಡ ಚಿತ್ರರಂಗವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಯಾವಾಗ ಕೆಜಿಎಫ್ ತೆರೆಗಪ್ಪಳಿಸಿತೋ ಆಗಲೇ ಕನ್ನಡ ಚಿತ್ರರಂಗದ ಕುರಿತು ಗಂಭೀರ ಭಾವನೆ ಹುಟ್ಟಿತು. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್​ಗೆ ಅಭಿನಂದನೆಗಳು ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಾಡಿದ್ದಾರೆ.

  • TV9 Web Team
  • Published On - 16:15 PM, 16 Jan 2021
ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಲು ಏನು ಕಾರಣ? ರಾಮ್ ಗೋಪಾಲ್ ವರ್ಮಾ ಹೇಳಿದ ಕಾರಣ ಓದಿ..
ನಿರ್ದೇಶಕ ರಾಮ್​ಗೋಪಾಲ್ ವರ್ಮಾ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಸುದ್ದಿಯಲ್ಲಿರಲು ಇಷ್ಟಪಡುತ್ತಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಷಯಯದ ಕುರಿತು ಮಾಹಿತಿ ಹಂಚಿಕೊಳ್ಳುವ ಅವರು, ಈಗ ಕನ್ನಡ ಚಿತ್ರರಂಗ ಮತ್ತು ಕೆಜಿಎಫ್ ಸಿನಿಮಾ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಚಿತ್ರರಂಗದ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಎರಡು ವರ್ಷಗಳ ಹಿಂದಿನವರೆಗೆ ಕನ್ನಡ ಚಿತ್ರರಂಗವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಯಾವಾಗ ಕೆಜಿಎಫ್ ತೆರೆಗಪ್ಪಳಿಸಿತೋ ಆಗಲೇ ಕನ್ನಡ ಚಿತ್ರರಂಗದ ಕುರಿತು ಗಂಭೀರ ಭಾವನೆ ಹುಟ್ಟಿತು. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್​ಗೆ ಅಭಿನಂದನೆಗಳು ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಾಡಿದ್ದಾರೆ.

ಅವರ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ. 1970-80 ರ ದಶಕದಲ್ಲಿಯೇ ಕನ್ನಡ ಚಿತ್ರರಂಗ ಹೆಸರು ಮಾಡಿತ್ತು. ಆಗಲೇ, ಕನ್ನಡದಲ್ಲಿ ಅತ್ಯುತ್ತಮ ಸಿನಿಮಾಗಳು ಬಂದಿದ್ದವು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

2016 ರಲ್ಲಿ ಬಿಡುಗಡೆಯಾದ ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಚಿತ್ರವನ್ನು ಇದೇ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದರು. ಆದರೆ, ಈಗ ರಾಮ್ ಗೋಪಾಲ್ ವರ್ಮಾರ ಈ ಅಭಿಪ್ರಾಯವನ್ನು ಕೆಜಿಎಫ್ ಕುರಿತ ಹೊಗಳಿಕೆಯೆಂದು ಭಾವಿಸಬೇಕೋ, ಕನ್ನಡ ಚಿತ್ರರಂಗದ ಕುರಿತು ತೆಗಳಿಕೆ ಎಂದು ಭಾವಿಸಬೇಕೋ ತಿಳಿಯದೇ ಕನ್ನಡ ಚಿತ್ರಪ್ರೇಮಿಗಳು ಗೊಂದಲದಲ್ಲಿದ್ದಾರಂತೆ!

ಕೆಜಿಎಫ್​ ಕಥೆ ಹೇಳಿದ ಮಾಳವಿಕಾ ಅವಿನಾಶ್.. ಪಾರ್ಟ್​ 2 ಸೆಟ್​ ಅದೆಷ್ಟು ಅದ್ಧೂರಿ!