ಬೆಳಗಾವಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ಉದ್ಧವ್ ಠಾಕ್ರೆ ವಿರುದ್ಧ ವಾಟಾಳ್ ಹೋರಾಟ; ಜನವರಿ 23ಕ್ಕೆ ಬೆಳಗಾವಿ ಗಡಿ ಬಂದ್

ಧ್ವಜಸ್ತಂಭ ನೆಡಲು ಶಿವಸೇನೆ ಯತ್ನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಾಟಾಳ್ ಇದಕ್ಕೆಲ್ಲಾ ಕಾರಣ ಬೆಳಗಾವಿ ಜಿಲ್ಲೆ ರಾಜಕಾರಣಿಗಳು. ಶಿವಸೇನೆ ಪುಂಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

  • TV9 Web Team
  • Published On - 18:50 PM, 21 Jan 2021
ಬೆಳಗಾವಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ಉದ್ಧವ್ ಠಾಕ್ರೆ ವಿರುದ್ಧ ವಾಟಾಳ್ ಹೋರಾಟ; ಜನವರಿ 23ಕ್ಕೆ ಬೆಳಗಾವಿ ಗಡಿ ಬಂದ್
ವಾಟಾಳ್​ ನಾಗರಾಜ್​

ಬೆಂಗಳೂರು: ಬೆಳಗಾವಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ದ ಕನ್ನಡಪರ ಸಂಘಟನೆಗಳಿಂದ ಗಡಿಯಲ್ಲಿ ಪ್ರತಿಭಟನೆ ನಡೆಸಿವೆ. ಅತ್ತಿಬೆಲೆ ಗಡಿಭಾಗದಲ್ಲಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಸಾರಾ ಗೋವಿಂದ್, ಕುಮಾರ್, ಮಂಜುನಾಥ್ ದೇವಾ ಸೇರಿದಂತೆ‌ ಹಲವು ರಾಜ್ಯ ಮುಖಂಡರು ಭಾಗಿಯಾಗಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಭಗವಾ ಧ್ವಜಸ್ತಂಭ ನೆಡಲು ಶಿವಸೇನೆ ಯತ್ನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಾಟಾಳ್ ಇದಕ್ಕೆಲ್ಲಾ ಕಾರಣ ಬೆಳಗಾವಿ ಜಿಲ್ಲೆ ರಾಜಕಾರಣಿಗಳು. ಶಿವಸೇನೆ ಪುಂಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅತ್ತಿಬೆಲೆ ಗಡಿಯಲ್ಲಿ ಮಾತನಾಡಿದ ಅವರು  ನಾಳೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಿದ್ದು ನಾಡಿದ್ದು ನಾವು ಬೆಳಗಾವಿಗೆ ಹೋಗುತ್ತಿದ್ದೇವೆ. ಉದ್ದವ್ ಠಾಕ್ರೆಗೆ ಸರಿಯಾಗಿ ಬುದ್ದಿ ಕಲಿಸುತ್ತೇವೆ. ನಾಳೆ ಮೈಸೂರು‌ ಬ್ಯಾಂಕ್ ವೃತ್ತದಲ್ಲಿ ಕರಾಳ ದಿನ ಆಚರಣೆ ಮಾಡುತ್ತೇವೆ. ಬೆಳಗಾವಿ‌ ನಮ್ಮದು ನಮ್ಮದು. ತಮಿಳುನಾಡಿನ ಹೊಸೂರು, ತಾಲವಾಡಿ, ಊಟಿ ನಮ್ಮದು. ಜನವರಿ 23 ಬೆಳಗಾವಿ ಗಡಿ ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ನಿರ್ಧಾರ ಮಾಡಿವೆ ಎಂದಿದ್ದಾರೆ.

ಮರಾಠಿಗರು ಹೆಚ್ಚಿರುವ ಕರ್ನಾಟಕ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಲು ಬದ್ಧ: ವಿವಾದದ ಕಿಡಿ ಹೊತ್ತಿಸಿದ ಉದ್ಧವ್​