‘ಯಡಿಯೂರಪ್ಪ CDಗೆ ಹೆದರುವವರಲ್ಲ.. ಆದರೆ ಈ ಬಾರಿ ಅಂಜಿದಂತೆ, ಅಳುಕಿದಂತೆ ಕಾಣುತ್ತಿದ್ದಾರೆ’

CDಯಲ್ಲಿ ಏನಿದೆ ಅನ್ನೋದು ಯಡಿಯೂರಪ್ಪಗೆ ಮಾತ್ರ ಗೊತ್ತಿದೆ. ಯಡಿಯೂರಪ್ಪ CDಗೆ ಹೆದರುವವರಲ್ಲ. ಆದರೆ ಈ ಬಾರಿ ಅಂಜಿದಂತೆ, ಅಳುಕಿದಂತೆ ಕಾಣುತ್ತಿದ್ದಾರೆ. ಇದು ರಾಜಕೀಯ ಇತಿಹಾಸದಲ್ಲೇ ಮೊದಲು ಎಂದು ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

  • TV9 Web Team
  • Published On - 16:34 PM, 15 Jan 2021
‘ಯಡಿಯೂರಪ್ಪ CDಗೆ ಹೆದರುವವರಲ್ಲ.. ಆದರೆ ಈ ಬಾರಿ ಅಂಜಿದಂತೆ, ಅಳುಕಿದಂತೆ ಕಾಣುತ್ತಿದ್ದಾರೆ’
ಬಿ.ಎಸ್​. ಯಡಿಯೂರಪ್ಪ (ಎಡ); ವಾಟಾಳ್​ ನಾಗರಾಜ್​ (ಬಲ)

ಮೈಸೂರು: ರಾಜ್ಯದಲ್ಲಿ CD ಬ್ಲ್ಯಾಕ್‌ಮೇಲ್ ಆರೋಪ ವಿಚಾರವಾಗಿ ಸದ್ಯದ ಪರಿಸ್ಥಿತಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ನೇರ ಹೊಣೆ. ಹೀಗಾಗಿ, ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು. CD ಪ್ರಕರಣದ ತನಿಖೆಯನ್ನು CBIಗೆ ವಹಿಸಬೇಕು ಎಂದು ನಗರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಇದು ಇಡೀ ರಾಜ್ಯ ತಲೆ ತಗ್ಗಿಸುವಂಥ ವಿಚಾರ. CD ಮಾಡಿ ಮಂತ್ರಿ ಪದವಿ ಪಡೆದಿದ್ದಾರೆ. ಹೊಸದಾಗಿ ಮಂತ್ರಿ ಆದವರಲ್ಲಿ ಕೆಲವರು ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಬ್ಲ್ಯಾಕ್​ಮೇಲ್ ಮಾಡಿ ಮಂತ್ರಿ ಸ್ಥಾನ ಪಡೆದಿರೋದು ಅಕ್ಷಮ್ಯ ಅಪರಾಧ. ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಾಟಾಳ್​ ನಾಗರಾಜ್​ ಹೇಳಿದರು.

‘ಯಡಿಯೂರಪ್ಪ CDಗೆ ಹೆದರುವವರಲ್ಲ’
ಯಾರು CD ಬಗ್ಗೆ ಮಾತನಾಡುತ್ತಾರೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. CDಯಲ್ಲಿ ಏನಿದೆ ಅನ್ನೋದು ಯಡಿಯೂರಪ್ಪಗೆ ಮಾತ್ರ ಗೊತ್ತಿದೆ. ಯಡಿಯೂರಪ್ಪ CDಗೆ ಹೆದರುವವರಲ್ಲ. ಆದರೆ ಈ ಬಾರಿ ಅಂಜಿದಂತೆ, ಅಳುಕಿದಂತೆ ಕಾಣುತ್ತಿದ್ದಾರೆ. ಇದು ರಾಜಕೀಯ ಇತಿಹಾಸದಲ್ಲೇ ಮೊದಲು ಎಂದು ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರ ನೋಡಲಾರದಂತಹ CDಗಳು ಇವೆ -BSY ವಿರುದ್ಧ ಯತ್ನಾಳ್​ ಗುಡುಗು