ವಿಜಯಪುರ: ಇಂಚಗೇರಿ ಕರಿಬಸವೇಶ್ವರ ಹಿರೇಮಠದ ಸ್ವಾಮೀಜಿ ಲಿಂಗೈಕ್ಯ

  • Publish Date - 4:29 pm, Mon, 24 August 20 Edited By: sadhu srinath
ವಿಜಯಪುರ: ಇಂಚಗೇರಿ ಕರಿಬಸವೇಶ್ವರ ಹಿರೇಮಠದ ಸ್ವಾಮೀಜಿ ಲಿಂಗೈಕ್ಯ

ವಿಜಯಪುರ: ಜಿಲ್ಲೆಯ ಪ್ರತಿಷ್ಠಿತ ಇಂಚಗೇರಿ ಕರಿಬಸವೇಶ್ವರ ಹಿರೇಮಠದ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.

ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಗ್ರಾಮದ ಕರಿಬಸವೇಶ್ವರ ಹಿರೇಮಠದ ಮಠಾಧೀಶರಾದ 65 ವರ್ಷದ ಡಾ.ರೇಣುಕಾ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

ಹಲವು ದಿನಗಳಿಂದ ಸಕ್ಕರೆ ಕಾಯಿಲೆ ಮತ್ತು BP ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮೀಜಿಗೆ ಇಂದು ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನಗರಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಶ್ರೀಗಳು ಮಾರ್ಗ ಮಧ್ಯೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಶ್ರೀಗಳ ಪಾರ್ಥಿವ ಶರೀರ ಮರಳಿ ಮಠಕ್ಕೆ ತಂದ ಭಕ್ತರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ಅಂತ್ಯಕ್ರಿಯೆ ಸಮಯದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಮಠದ ಮೂಲಗಳಿಂದ ಮಾಹಿತಿ ದೊರೆತಿದೆ.