ಮಲಪ್ರಭೆಯ ಪ್ರವಾಹಕ್ಕೆ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಆತಂಕ, ಊರು ಬಿಡುತ್ತಿರುವ ಜನತೆ

  • TV9 Web Team
  • Published On - 20:17 PM, 16 Aug 2020
ಮಲಪ್ರಭೆಯ ಪ್ರವಾಹಕ್ಕೆ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಆತಂಕ, ಊರು ಬಿಡುತ್ತಿರುವ ಜನತೆ

ಗದಗ: ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಲಪ್ರಭಾ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಗದಗ ಜಿಲ್ಲೆಯ 25ಕ್ಕೂ ಹೆಚ್ಚು ಹಳ್ಳಿಗಳು ಈಗ ಆತಂಕದಲ್ಲಿವೆ.

ಹೌದು ಗದಗ ಜಿಲ್ಲೆಯ ನರಗುಂದ ತಾಲೂಕಿನ ನವಿಲು ತೀರ್ಥ ಡ್ಯಾಂನಿಂದ ಅಪಾರ ಪ್ರಮಾಣದ ನೀರು ರಿಲೀಸ್ ಮಾಡಲಾಗಿದೆ. ಯಾವ ಪರಿ ಅಂದ್ರೆ ಮಲಪ್ರಭಾ ನದಿ ಈಗ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಗದಗ ಜಿಲ್ಲೆಯಲ್ಲಿರುವ ನದಿ ತೀರದ ಗ್ರಾಮಗಳಾದ ವಾಸನ, ಕೊಣ್ಣೂರ, ಬೂದಿಹಾಳ ಗ್ರಾಮಗಳು ಸೇರಿ 25 ಕ್ಕೂ ಹೆಚ್ಚು ಗ್ರಾಮಗಳ ಜನತೆಯಲ್ಲಿ ಆತಂಕ ಶುರುವಾಗಿದೆ.

ಅದರಲ್ಲೂ ನರಗುಂದ ತಾಲೂಕಿನ ಲಖಮಾಪುರ ಗ್ರಾಮ ಈಗ ನಡುಗಡ್ಡೆಯಾಗಿ ಪರಿವರ್ತಿನೆಗೊಂಡಿದೆ. ಇಡೀ ಗ್ರಾಮವನ್ನು ನದಿ ನೀರು ಸುತ್ತುವರಿದಿದೆ. ಕ್ಷಣ ಕ್ಷಣಕ್ಕೂ ಪ್ರವಾಹದ ಅಬ್ಬರ ಹೆಚ್ಚುತ್ತಿದೆ. ಹೀಗಾಗಿ ಭಯದಿಂದ ಜನರು ಗ್ರಾಮ ಬಿಟ್ಟು ಬೇರೆಡೆ ಹೋಗುತ್ತಿದ್ದಾರೆ.