‘ಎಲ್ಲಿಯವರೆಗೂ ಹೋರಾಟ?.. ಎಣ್ಣೆ ಅಂಗಡಿ ಮುಚ್ಚೋವರೆಗೂ ಹೋರಾಟ’

  • Publish Date - 5:00 pm, Sat, 12 September 20
‘ಎಲ್ಲಿಯವರೆಗೂ ಹೋರಾಟ?.. ಎಣ್ಣೆ ಅಂಗಡಿ ಮುಚ್ಚೋವರೆಗೂ ಹೋರಾಟ’

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಇಟಗಿಹಾಳ ಗ್ರಾಮದಲ್ಲಿರುವ ಮದ್ಯದ ಅಂಗಡಿಯನ್ನು ಮುಚ್ಚುವಂತೆ ಗ್ರಾಮಸ್ಥರು ಧರಣಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ತಮ್ಮ ಗ್ರಾಮದಲ್ಲಿರುವ ವೈನ್​ ಶಾಪ್​ನ ಮುಚ್ಚಿಸಬೇಕೆಂದು ಗ್ರಾಮಸ್ಥರೆಲ್ಲಾ ಇಂದು ಪ್ರತಿಭಟನೆಗೆ ಮುಂದಾದರು. ವೈನ್ ಶಾಪ್ ಮುಂದೆ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ನಡೆಯಿತು. ಅಂಗಡಿ ಮುಚ್ಚುವಂತೆ ಘೋಷಣೆ ಕೂಗುತ್ತಾ ಧರಣಿ ಸಹ ನಡೆಸಿದರು. ಜೊತೆಗೆ, ಪರಿಸ್ಥಿತಿಯನ್ನು ಪರಿಶೀಲಿಸಲು ಸ್ಥಳಕ್ಕೆ ಬಂದ ಅಬಕಾರಿ ಇಲಾಖೆ ಅಧಿಕಾರಿಗಳ ವಾಹನಕ್ಕೆ ಮುತ್ತಿಗೆ ಸಹ ಹಾಕಿದರು.

ಅಧಿಕಾರಿಗಳ ವಾಹನ ತಡೆದು ತಮ್ಮ ಆಕ್ರೋಶ ಹೊರಹಾಕಿದ ಗ್ರಾಮಸ್ಥರು ವೈನ್ ಶಾಪ್ ಮುಚ್ಚುವುದಾಗಿ ಅಧಿಕೃತ ಆದೇಶ ಹೊರಡಿಸಬೇಕು ಅಂತಾ ಒತ್ತಾಯ ಸಹ ಮಾಡಿದರು.

Click on your DTH Provider to Add TV9 Kannada