ಇದು ನಿಜಾ! ಕೊರೊನಾ ತಂದ ಸಂಕಷ್ಟ.. ಮೊಬೈಲ್ ಬಳಕೆ ಜಾಸ್ತಿಯಾಗಿ ಏನೆಲ್ಲ ಚಟ ಅಂಟಿಕೊಡಿದೆ ಗೊತ್ತಾ?
ಕೊರೊನಾ ನಂತರ ಸ್ಮಾರ್ಟ್ಫೋನ್ ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹೆಚ್ಚಿದ ಸ್ಮಾರ್ಟ್ಪೋನ್ ಬಳಕೆ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಕೊರೊನಾ ನಂತರ ಸ್ಮಾರ್ಟ್ಫೋನ್ ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹೆಚ್ಚಿದ ಸ್ಮಾರ್ಟ್ಪೋನ್ ಬಳಕೆ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ಮೊಬೈಲ್ ದಾಸರು ಸ್ಮಾರ್ಟ್ಫೋನ್ ಕಂಪನಿ ವಿವೋ ಮತ್ತು ಸೈಬರ್ ಮೀಡಿಯಾ ರಿಸರ್ಚ್ ಜಂಟಿಯಾಗಿ ನಡೆಸಿದ ‘ಸ್ಮಾರ್ಟ್ಪೋನ್ ಬಳಕೆ ಮತ್ತು ಮನುಷ್ಯ ಸಂಬಂಧಗಳ ಮೇಲೆ ಬೀರುವ ಪರಿಣಾಮ 2020’ ಎಂಬ ಸಮೀಕ್ಷೆಯಲ್ಲಿ ಈ ವಿವರ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿನಿಂದ ಸ್ಮಾರ್ಟ್ಫೋನ್ಗಳ ಬಳಕೆಯಲ್ಲಿ ಆದ ಹೆಚ್ಚಳದ ಕುರಿತು ಸಮೀಕ್ಷೆ ವಿವರಿಸಿದೆ. ಮೊದಲಿಗಿಂತ ಹೆಚ್ಚು ಜನ ಸ್ಮಾರ್ಟ್ಫೋನ್ಗಳಿಗೆ ದಾಸರಾಗಿ ಬದಲಾಗಿದ್ದಾರೆ. ಈ ವಿಷಯ ತಿಳಿದಿದ್ದರೂ ಸ್ಮಾರ್ಟ್ಪೋನ್ನ ಅತಿ ಬಳಕೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ವರದಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿವೋ ಇಂಡಿಯಾದ ನಿಪುಮ್ ಮಾರ್ಯಾ, ಸ್ಮಾರ್ಟ್ಪೋನ್ಗಳ ಬಳಕೆ ಸಂಬಂಧಗಳಲ್ಲಿ ಬಿರುಕು ಉಂಟುಮಾಡುತ್ತಿದೆ. ಇದು ನಮ್ಮ ಕಂಪನಿ ನಂಬಿರುವ ಮೌಲ್ಯಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ. ಲಾಕ್ಡೌನ್ ಮತ್ತು ವರ್ಕ್ ಫ್ರಾಮ್ ಹೋಮ್ ಕುಟುಂಬದ ಜೊತೆ ಇರಲು ಹೆಚ್ಚು ಸಮಯ ನೀಡಿದೆ.
ಜೊತೆಗೆ ಸ್ಮಾರ್ಟ್ಫೋನ್ಗಳನ್ನು ಬಳಸುವ ಸಮಯದಲ್ಲೂ ಭಾರೀ ಏರಿಕೆ ಕಂಡಿದೆ ಎನ್ನುತ್ತದೆ ಸಮೀಕ್ಷೆ. 2019ರಲ್ಲಿ ಒಂದು ದಿನದಲ್ಲಿ ಸರಾಸರಿ 4.30 ಘಂಟೆ ಸ್ಮಾರ್ಟ್ಫೋನ್ ಬಳಸಲಾಗುತ್ತಿತ್ತು. ಆದರೆ ಒಂದೇ ವರ್ಷದಲ್ಲಿ ದಿನಕ್ಕೆ ಸ್ಮಾರ್ಟ್ಫೋನ್ ಬಳಕೆಯ ಅವಧಿ 7 ಗಂಟೆಗೆ ಏರಿಕೆಯಾಗಿದೆ.
ಸಮೀಕ್ಷೆಯಲ್ಲಿ ಇನ್ನೂ ಏನೇನಿದೆ? ಇಷ್ಟೇ ಅಲ್ಲದೇ, ಈ ಸಮೀಕ್ಷೆ ಇನ್ನೂ ಹಲವು ವಿಷಯಗಳನ್ನು ಬಹಿರಂಗಪಡಿಸಿದೆ. ಕಚೇರಿ ಕೆಲಸಗಳನ್ನು ತೊಡಗಿಸಿಕೊಳ್ಳುವ ಅವಧಿಯಲ್ಲೂ ಗಮನಾರ್ಹ ಏರಿಕೆಯಾಗಿದೆ. ಜನರು ಸುಮಾರು ಶೇ. 7ರಷ್ಟು ಹೆಚ್ಚು ತಮ್ಮ ಕಚೇರಿಯ ಕೆಲಸಗಳಲ್ಲಿ ಕಳೆಯುತ್ತಿದ್ದಾರೆ. ಈ ಮೊದಲು ಶೇ 63ರಷ್ಟಿದ್ದ ಈ ಅವಧಿ ಶೇ. 12ರಷ್ಟು ಹೆಚ್ಚಳವಾಗಿದೆ.
OTT ಬಳಕೆಯ ಅವಧಿಯಲ್ಲೂ ಶೇ 59ರಷ್ಟು ಹೆಚ್ಚಳವಾಗಿದೆ ಎನ್ನುತ್ತದೆ ಸಮೀಕ್ಷೆ. ಇತರ ವಿಡಿಯೋಗಳನ್ನು ವೀಕ್ಷಿಸುವ ಸಮಯದಲ್ಲಿ ಶೇ. 56, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಶೇ. 55, ಮೊಬೈಲ್ ಗೇಮಿಂಗ್ ಬಳಕೆಯ ಅವಧಿಯಲ್ಲಿ ಶೇ. 45ರಷ್ಟು ಹೆಚ್ಚಳವಾಗಿದೆ. ಇವೆಲ್ಲವುಗಳಿಗಿಂತಲೂ ಹೆಚ್ಚು, ವರ್ಕ್ ಫ್ರಂ ಹೋಮ್ನಲ್ಲಿ ಶೇ. 75ರಷ್ಟು ಹೆಚ್ಚಳ ಕಂಡುಬಂದಿದೆ ಎನ್ನುತ್ತದೆ ಸಮೀಕ್ಷೆ.
ಬಿಟ್ಟರೂ ಬಿಡಲಾರೆ ಈ ಮಾಯೆ! ಸ್ಮಾರ್ಟ್ಪೋನ್ಗಳ ಅತಿ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದು ಬಹುತೇಕರಿಗೆ ತಿಳಿದಿದೆ. ತಮ್ಮ ಪ್ರೀತಿಪಾತ್ರರ ಜೊತೆಗಿನ ಸಂಬಂಧದಲ್ಲಿ ಪರಿಣಾಮ ಬೀರುತ್ತಿದೆ ಎಂದು ತಿಳಿದಿದ್ದರೂ ಬಿಡಲಾಗದು ಎಂದೇ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಂಟೆಗೆ 5 ಬಾರಿಯಾದರೂ ಕಾರಣವಿಲ್ಲದೇ ಸ್ಮಾರ್ಟ್ಫೋನ್ ನೋಡುವ ರೂಢಿ ಮಾಡಿಕೊಂಡಿದ್ದಾರೆ. ಅಲ್ಲದೇ ನಿದ್ದೆಯಿಂದ ಎಚ್ಚೆತ್ತ 15 ನಿಮಿಷದೊಳಗೆ ಸ್ಮಾರ್ಟ್ಫೋನ್ ಬಳಸುತ್ತಾರೆ ಎಂದೂ ಸಮೀಕ್ಷೆ ಹೇಳಿದೆ.
ಮೊಬೈಲ್ ಇಲ್ಲದಿದ್ದರೆ ಹಾಳಾಗುತ್ತೆ ಮೂಡ್ ! ಶೇ. 74ರಷ್ಟು ಜನರಿಗೆ ಸ್ಮಾರ್ಟ್ಫೋನ್ ಇಲ್ಲದಿದ್ದರೆ ಮೂಡ್ ಕೆಡುತ್ತದೆ ಎನ್ನುತ್ತದೆ ಸಮೀಕ್ಷೆ. ಹಿಂದಿನ ವರ್ಷ ಈ ಪ್ರಮಾಣ ಶೇ 33ರಷ್ಟಿತ್ತು. ಅರ್ಧಕ್ಕಿಂತ ಹೆಚ್ಚು ಏರಿಕೆಯಾಗಲು ಕೊರೊನಾ, ಲಾಕ್ಡೌನ್ ಕಾರಣ ಎಂದೂ ಸಮೀಕ್ಷೆ ಹೇಳಿದೆ.