ಸುಖಾಸುಮ್ಮನೆ ತಮ್ಮ ಕಾಡು ಬಿಟ್ಟು ಆಚೆ ಬಂದ ಅಲೆಮಾರಿ ಆನೆಗಳ ಹಿಂಡನ್ನು ತವರಿಗೆ ಕರೆದೊಯ್ಯುವ ಕಾರ್ಯಾಚರಣೆ ಸಂಪೂರ್ಣ
ರವಿವಾರಂದು ಅನೆಗಳ ಹಿಂಡು ಯುವಾನ್ ಜಿಯಾಂಗ್ ಗ್ರಾಮದ ಹೊರಭಾಗದಲ್ಲಿ ಬಯಲು ಪ್ರದೇಶದಲ್ಲಿದ್ದವು. ಇದು ಜಿಹುವಾಂಗ್ಬನ್ನ ದಾಯೊ ಕಾಡಿಗೆ ಸುಮಾರು 200 ಕಿಮೀ ದೂರದಲ್ಲಿದೆ. ಅಂದರೆ, ಇಷ್ಟೊತ್ತಿಗಾಗಲೇ ಅವು ತಮ್ಮ ಕಾಡು ಸೇರಿಕೊಂಡಿದ್ದರೆ ಆಶ್ಚರ್ಯವಿಲ್ಲ.
ವಿಡಿಯೋನಲ್ಲಿ ಕಾಣುತ್ತಿರುವ 14 ಅಲೆಮಾರಿ ಅನೆಗಳ ಹಿಂಡು ಅದ್ಯಾವ ಕಾರಣಕ್ಕೆ ತಾವು ವಾಸವಾಗಿದ್ದ ಕಾಡನ್ನು ಬಿಟ್ಟವೆನ್ನವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ 17 ತಿಂಗಳುಗಳ ಸುದೀರ್ಘ ಪಯಣದ ನಂತರ ಅವರು ತಮ್ಮ ಮೂಲ ವಾಸಸ್ಥಾನಕ್ಕೆ ವಾಪಸ್ಸಾಗುತ್ತಿವೆ. ಈ ಏಷ್ಯನ್ ಆನೆಗಳು ವಿಭಿನ್ನ ಗಾತ್ರದವುಗಳಾಗಿದ್ದು ಕಳೆದ ಹಲವಾರು ದಿನಗಳಿಂದ ಅವುಗಳನ್ನು ಚೀನಾದ ಬೇರೆ ಬೇರೆ ಪ್ರದೇಶ, ಕಾಡು ಮತ್ತು ನದಿಗಳನ್ನು ದಾಟಿಸಿ ಅವುಗಳ ಮೂಲ ಜಿಹುವಾಂಗ್ಬನ್ನ ದಾಯೊ ಪ್ರದೇಶದಲ್ಲಿರುವ ಕಾಡಿಗೆ ಮರಳುವ ಹಾಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ರವಿವಾರಂದು ಅನೆಗಳ ಹಿಂಡು ಯುವಾನ್ ಜಿಯಾಂಗ್ ಗ್ರಾಮದ ಹೊರಭಾಗದಲ್ಲಿ ಬಯಲು ಪ್ರದೇಶದಲ್ಲಿದ್ದವು. ಇದು ಜಿಹುವಾಂಗ್ಬನ್ನ ದಾಯೊ ಕಾಡಿಗೆ ಸುಮಾರು 200 ಕಿಮೀ ದೂರದಲ್ಲಿದೆ. ಅಂದರೆ, ಇಷ್ಟೊತ್ತಿಗಾಗಲೇ ಅವು ತಮ್ಮ ಕಾಡು ಸೇರಿಕೊಂಡಿದ್ದರೆ ಆಶ್ಚರ್ಯವಿಲ್ಲ.
ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಆನೆಗಳ ಹಿಂಡು ಸುಮಾರು 500 ಕಿಮೀಗಳಷ್ಟು ದೂರವನ್ನು ಕ್ರಮಿಸಿ ತವರಿಗೆ ವಾಪಸ್ಸಾಗುತ್ತಿವೆ. ಈ ಕಾರ್ಯಾಚರಣೆಗೆ ಹಿಡಿದ ಸಮಯ ಬರೋಬ್ಬರಿ 17 ತಿಂಗಳು. ಪಯಣ ನಿಧಾನಗೊಂಡಿದ್ದಕ್ಕೆ ಒಂದು ಗರ್ಭಿಣಿ ಆನೆ ಹಿಂಡಿನಲ್ಲಿದ್ದಿದ್ದು ಕಾರಣವೆನ್ನಲಾಗಿದೆ. ಇದು ಕಳೆದ ನವೆಂಬರ್ನಲ್ಲಿ ಮರಿ ಹಾಕಿದೆ. ಈ ಹಿಂಡಿನಲ್ಲಿ ಅದನ್ನು ನೀವು ನೋಡಬಹುದು.
ಆನೆಗಳನ್ನು ತಮ್ಮ ಮೂಲ ನೆಲಗೆ ವಾಪಸ್ಸು ಕರೆದೊಯ್ಯಲು 374 ವಾಹನಗಳು, ತುರ್ತು ಸೇವೆಯ 410 ಸಿಬ್ಬಂದಿ ಮತ್ತು 14 ಡ್ರೋನ್ಗಳನ್ನು ಬಳಸಲಾಗಿದೆ ಎಂದು ಏಎಫ್ಪಿ ಹೇಳಿದೆ.
ಆನೆಗಳ ಪಯಣದ ಅನೇಕ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಈ ಕಾರ್ಯಾಚರಣೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಂದು ವಿಶ್ವ ಆನೆಗಳ ದಿನ, ಅವುಗಳ ಬಗ್ಗೆ ಮಾತಾಡದಿದ್ದರೆ ಪ್ರಮಾದವಾಗುತ್ತದೆ!
ಇದನ್ನೂ ಓದಿ: ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಲು ತಯಾರಾಗಿದ್ದೀರಾ? ಎಲ್ಲಿ ನೀವು ಹಾಡಿರುವ ರಾಷ್ಟ್ರಗೀತೆ ವಿಡಿಯೋ?