ನಾವು ಮುಂಬೈ ಪಡೆದೇ ತೀರುತ್ತೇವೆ: ಡಿಸಿಎಂ ಲಕ್ಷ್ಮಣ್​ ಸವದಿ

ಎಂಇಎಸ್​ ಬಗ್ಗೆ ಮಾತನಾಡಿದ ಡಿಸಿಎಂ, ಎಂಇಎಸ್​ನಲ್ಲಿರುವವರನ್ನು ನಮ್ಮ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು, ಆ ಸಂಘಟನೆಯನ್ನು ಸಂಪೂರ್ಣವಾಗಿ ಮುಗಿಸುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ.

  • TV9 Web Team
  • Published On - 19:31 PM, 27 Jan 2021
ನಾವು ಮುಂಬೈ ಪಡೆದೇ ತೀರುತ್ತೇವೆ: ಡಿಸಿಎಂ ಲಕ್ಷ್ಮಣ್​ ಸವದಿ
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬೆಳಗಾವಿ: ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ ಎಂದು ಹೇಳಿರುವ ಉದ್ಧವ್​ ಠಾಕ್ರೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ತಿರುಗೇಟು ನೀಡಿದ್ದಾರೆ. ನಾವು ಮುಂಬೈ ಕರ್ನಾಟಕ ಭಾಗದವರು. ಮುಂಬೈ ನಮ್ಮದು ಎಂದು ಹೇಳಿದ್ದಾರೆ.

ಬೋರಗಾಂವ್​ ಗ್ರಾಮದಲ್ಲಿ ಮಾತನಾಡಿದ ಅವರು, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಸಂಬಂಧ ಮಹಾಜನ್​ ತೀರ್ಪು ಬಂದಾಗಿದೆ. ಇನ್ನು ಮುಂಬೈ ಮೇಲೆ ನಮಗೂ ಹಕ್ಕಿದ್ದು, ಮುಂಬೈ ನಮಗೆ ಬೇಕು ಎಂದು ಈಗಿನಿಂದಲೇ ಬೇಡಿಕೆ ಇಡಲು ಶುರು ಮಾಡುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಮುಂಬೈನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಇಡಲು ಆಗ್ರಹಿಸುತ್ತೇವೆ. ನಾವು ಮುಂಬೈಯನ್ನು ಪಡೆದೇ ಪಡೆಯುತ್ತೇವೆ ಎಂದು ಡಿಸಿಎಂ ಹೇಳಿಕೆ ನೀಡಿದ್ದಾರೆ.

ಎಂಇಎಸ್​ ಮುಗಿಸುತ್ತೇವೆ
ಇದೇ ವೇಳೆ ಎಂಇಎಸ್​ ಬಗ್ಗೆ ಮಾತನಾಡಿದ ಡಿಸಿಎಂ, ಎಂಇಎಸ್​ನಲ್ಲಿರುವವರನ್ನು ನಮ್ಮ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು, ಆ ಸಂಘಟನೆಯನ್ನು ಸಂಪೂರ್ಣವಾಗಿ ಮುಗಿಸುತ್ತೇವೆ ಎಂದು ಹೇಳಿದ್ದಾರೆ.

ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇನೆ – ಉದ್ಧಟತನ ಮಾತುಗಳನ್ನು ಉದುರಿಸಿದ ಉದ್ಧವ ಠಾಕ್ರೆ