Weekly Horoscope ವಾರ ಭವಿಷ್ಯ | ಈ ವಾರ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ?; ಒಂದು ವಾರದ ಭವಿಷ್ಯ

Weekly Horoscope ವಾರ ಭವಿಷ್ಯ | ಈ ವಾರ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ?; ಒಂದು ವಾರದ ಭವಿಷ್ಯ
ವಾರ ಭವಿಷ್ಯ

ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

TV9kannada Web Team

| Edited By: ganapathi bhat

Apr 06, 2022 | 7:08 PM

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

ತಾ.15-03-2021 ರಿಂದ ತಾ.21-03-2021 ರ ವರೆಗೆ

ಮೇಷ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಲಿದೆ. ಕಾರ್ಯ ನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸಾಂಸಾರಿಕವಾಗಿ ಅನಗತ್ಯ ಮಾತುಗಳಿಗೆ ಅವಕಾಶ ಕೊಡಬೇಡಿ. ಶುಭವರ್ಣ: ಕೆಂಪು, ಶುಭಸಂಖ್ಯೆ: 9

ವೃಷಭ: ಆರ್ಥಿಕ ಪರಿಸ್ಥಿತಿಯೂ ಆತಂಕಕಾರಿಯಾಗಿದ್ದರೂ ಅನಿರೀಕ್ಷಿತ ರೀತಿಯಲ್ಲಿ ಸ್ನೇಹಿತರ ಸಹಾಯ ಸಿಗಲಿದೆ. ದೇಹಾರೋಗ್ಯದಲ್ಲಿ ಏರುಪೇರಾದೀತು ಎಚ್ಚರಿಕೆ ಅಗತ್ಯ. ವೃತ್ತಿರಂಗದಲ್ಲಿ ಮುನ್ನಡೆ ತೋರಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ. ಶುಭವರ್ಣ: ಬಿಳಿ, ಶುಭಸಂಖ್ಯೆ: 6

ಮಿಥುನ: ಸರಕಾರಿ ಉದ್ಯೋಗಿಗಳಿಗೆ ಉತ್ತಮ ಧನಾದಾಯ ಕಂಡುಬರಲಿದೆ. ಬಂಧು ಬಳಗದವರ ಸಹಾಯದಿಂದ ಕಷ್ಟಗಳು ತೀರಲಿವೆ. ವೃತ್ತಿರಂಗದಲ್ಲಿ ಅನವಶ್ಯಕ ಕಲಹಗಳಾಗದಂತೆ ಎಚ್ಚರಿಕೆ ವಹಿಸಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಶುಭವರ್ಣ: ಪಚ್ಚೆ, ಶುಭಸಂಖ್ಯೆ: 5

ಕರ್ಕಟಕ: ಅನಿರೀಕ್ಷಿತ ರೀತಿಯಲ್ಲಿ ಹಳೆಯ ಮಿತ್ರನ ಭೇಟಿಯಾಗಲಿದ್ದು, ಸಂತಸವಾಗಲಿದೆ. ಮನೆಯಲ್ಲಿ ಸಂತೋಷದಾಯಕ ವಾತಾವರಣವಿರಲಿದೆ. ಆದರೆ ನಿಮ್ಮ ದುಡುಕಿನ ಮಾತಿನಿಂದ ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ಳಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ. ಶುಭವರ್ಣ: ತಿಳಿ ಹಳದಿ, ಶುಭಸಂಖ್ಯೆ: 2

ಸಿಂಹ: ಮಹಿಳೆಯರಿಗೆ ಗೃಹ ಕೃತ್ಯಗಳಲ್ಲಿ ಬಿಡುವಿಲ್ಲದ ದುಡಿಮೆಯಿಂದ ದೇಹಾಯಾಸವಾದೀತು. ಕುಲದೇವರ ಆಶೀರ್ವಾದದಿಂದ ನೀವು ಅಂದುಕೊಂಡ ಕೆಲಸಗಳು ಹಂತ ಹಂತವಾಗಿ ನೆರವೇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಶುಭವರ್ಣ: ಕೆಂಪು, ಶುಭಸಂಖ್ಯೆ: 1

ಕನ್ಯಾ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ ನಿಮ್ಮದಾಗುವುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿವೆ. ಶುಭವರ್ಣ: ಪಚ್ಚೆ, ಬಿಳಿಪು, ಶುಭಸಂಖ್ಯೆ: 3

ತುಲಾ: ನಿಮ್ಮ ಮನಸ್ಸಿನ ಭಾರವನ್ನು ಸಂಗಾತಿಯ ಜತೆ ಹಂಚಿಕೊಳ್ಳಲಿದ್ದೀರಿ. ನಿರುದ್ಯೋಗಿಗಳು ಉದ್ಯೋಗ ಬೇಟೆಗಾಗಿ ದೂರ ಸಂಚಾರ ಮಾಡಬೇಕಾದೀತು. ವಿವಾಹ ಪ್ರಸ್ತಾಪಗಳು ಸ್ವಲ್ಪದರಲ್ಲೇ ಕೈ ತಪ್ಪಿ ಹೋದೀತು. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ. ಶುಭವರ್ಣ: ಬಿಳಿಪು, ಶುಭಸಂಖ್ಯೆ: 9

ವೃಶ್ಚಿಕ: ದೈವಾನುಕೂಲದಿಂದ ಇಂದು ನೀವು ಅಂದುಕೊಂಡಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ಹೊಸ ಯೋಜನೆಗಳಿಗೆ ಇದುವರೆಗೆ ಇದ್ದ ವಿಘ‍್ನಗಳು ದೂರವಾಗಲಿದೆ. ಸರಕಾರಿ ಕೆಲಸದಲ್ಲಿರುವವರಿಗೆ ಕಾರ್ಯದೊತ್ತಡ ತಪ್ಪದು. ತಾಳ್ಮೆಯಿರಲಿ. ಶುಭವರ್ಣ: ಕೆಂಪು, ಶುಭಸಂಖ್ಯೆ: 9

ಧನು: ಅನಗತ್ಯ ವಿಚಾರಗಳಿಗೆ ತಾವೂ ನೆಮ್ಮದಿ ಹಾಳು ಮಾಡಿಕೊಂಡು ಬೇರೆಯವರ ನೆಮ್ಮದಿಯನ್ನೂ ಹಾಳು ಮಾಡುವುದು ಬೇಡ. ಅನಿರೀಕ್ಷಿತ ರೀತಿಯಲ್ಲಿ ಕಾರ್ಯ ಸಾಧನೆಯಾಗಲಿದೆ. ಮಹಿಳೆಯರಿಗೆ ಚಿನ್ನಾಭರಣಗಳನ್ನು ಕಾಪಾಡುವ ಹೊಣೆಗಾರಿಕೆ ಸಿಗಲಿದೆ. ಶುಭವರ್ಣ: ಹಳದಿ, ಶುಭಸಂಖ್ಯೆ: 3

ಮಕರ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲು ಇದು ಸಕಾಲವಾಗಿದೆ. ದೇಹಾರೋಗ್ಯದಲ್ಲಿ ಏರುಪೇರಾದರೂ ನಿಮ್ಮ ಮನೋಬಲದಿಂದ ಎಲ್ಲವನ್ನೂ ಗೆಲ್ಲಲಿದ್ದೀರಿ. ನಿರುದ್ಯೋಗಿಗಳಿಗೆ ಹಲವು ಅವಕಾಶಗಳು ಬರಲಿವೆ. ಜಾಣತನದಿಂದ ಬಳಸಿಕೊಳ್ಳಿ. ಶುಭವರ್ಣ: ನೀಲಿ, ಶುಭಸಂಖ್ಯೆ: 8

ಕುಂಭ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಎಲ್ಲರಿಗೂ ಇಷ್ಟವಾಗಲಿದೆ. ಕ್ರಿಯಾತ್ಮಕವಾಗಿ ಆಲೋಚಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಬರಲಿದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಕುಲದೇವರ ಪ್ರಾರ್ಥನೆ ಮಾಡಿ. ಶುಭವರ್ಣ: ಕಪ್ಪು, ಶುಭಸಂಖ್ಯೆ: 8

ಮೀನ: ಸಾಂಸಾರಿಕವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಸಾಮಾನ್ಯ. ಹಿರಿಯರ ಮಧ್ಯಸ್ಥಿಕೆಯಲ್ಲಿ ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಎಲೆಕ್ಟ್ರಿಕಲ್ ವೃತ್ತಿಯವರಿಗೆ ಉದ್ಯೋಗದಲ್ಲಿ ಮುನ್ನಡೆ ಕಂಡುಬರಲಿದೆ. ಗೃಹ ಬಳಕೆ ವಸ್ತುಗಳ ಖರೀದಿ ಮಾಡುವಿರಿ. ಶುಭವರ್ಣ: ಹಳದಿ ಬಣ್ಣ, ಶುಭಸಂಖ್ಯೆ: 8

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Follow us on

Related Stories

Most Read Stories

Click on your DTH Provider to Add TV9 Kannada