ನನಗೇಕೆ ಅಸಮಾಧಾನ… ಸಿಎಂ ನಿರ್ಧಾರವನ್ನು ಪ್ರಶ್ನೆ ಮಾಡಲು ಹೋಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ಹೊಸಬರಿಗೆ ಖಾತೆ ನೀಡಬೇಕಾಗಿದೆ  ಎಂದು ಮುಖ್ಯಮಂತ್ರಿ ಹೇಳಿದ್ದರು. ಹೀಗಾಗಿ ನಾನು ಆ ಬಗ್ಗೆ ಏನು ಮಾತನಾಡಲಿಲ್ಲ. ಸಣ್ಣ ನೀರಾವರಿ ನನಗೆ ಹೆಚ್ಚುವರಿಯಾಗಿ ಕೊಟ್ಟಿದ್ದರು. ನನಗೆ ಇಂತಹ ಖಾತೆ ಬೇಕೆಂದು ಕೇಳುವುದಿಲ್ಲ ಎಂದಿದ್ದಾರೆ ಸಚಿವ ಮಾಧುಸ್ವಾಮಿ

  • TV9 Web Team
  • Published On - 18:51 PM, 21 Jan 2021
ನನಗೇಕೆ ಅಸಮಾಧಾನ... ಸಿಎಂ ನಿರ್ಧಾರವನ್ನು ಪ್ರಶ್ನೆ ಮಾಡಲು ಹೋಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ
ಜೆ.ಸಿ. ಮಾಧುಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು: ನಾನು ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಣ್ಣ ನೀರಾವರಿ ಬಗ್ಗೆ ಆಸಕ್ತಿ ಇದೆ ಎಂದಿದ್ದೇನೆ. 2 ದಿನದ ಹಿಂದೆ ಸಿಎಂ ಕೇಳಿದಾಗ ಹೇಳಿದ್ದೇನೆ. ಅದು ಬಿಟ್ಟರೆ ಬೇರೆ ಯಾವುದೇ ಅಸಮಾಧಾನವಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಹೊಸಬರಿಗೆ ಖಾತೆ ನೀಡಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಹೀಗಾಗಿ ನಾನು ಆ ಬಗ್ಗೆ ಏನು ಮಾತನಾಡಲಿಲ್ಲ. ಸಣ್ಣ ನೀರಾವರಿ ನನಗೆ ಹೆಚ್ಚುವರಿಯಾಗಿ ಕೊಟ್ಟಿದ್ದರು. ನನಗೆ ಇಂತಹ ಖಾತೆ ಬೇಕೆಂದು ಕೇಳುವುದಿಲ್ಲ. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಖಾತೆಯನ್ನು ನಾನು ನಿಭಾಯಿಸುತ್ತೇನೆ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.

ಡಾ.ಶಿವಕುಮಾರಶ್ರೀಗಳ 2ನೇ ಪುಣ್ಯಸ್ಮರಣೆ ವಿಚಾರದ ಬಗ್ಗೆ ಮಾತನಾಡಿದ ಮಾಧುಸ್ವಾಮಿ ಈಗ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಕೇಂದ್ರ ಸಚಿವ ಸಾರಂಗಿಯವರು ಬರುತ್ತಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ. ನಾನ್ಯಾಕೆ ಅಸಮಾಧಾನ ಮಾಡಿಕೊಳ್ಳಲಿ? ನಾನು ಸಿಟ್ಟಾಗುವುದಕ್ಕೆ ಖಾತೆ ಬದಲಾವಣೆಗೇನು ಸಂಬಂಧ? ನಾನು ಸಿಎಂ ನಿರ್ಧಾರವನ್ನು ಪ್ರಶ್ನೆ ಮಾಡಲು ಹೋಗಲ್ಲ ಎಂದಿದ್ದಾರೆ.

ಖಾತೆ ಬದಲಾವಣೆ: ಪೋನ್ ಸಂಪರ್ಕಕ್ಕೆ ಸಿಗದೆ ಸಚಿವ ಮಾಧುಸ್ವಾಮಿ ಕೋಪತಾಪ, ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೂ ಗೈರು?