ಶಾಸಕ ಜಮೀರ್ ಅವರನ್ನ ಯಾಕಿನ್ನೂ ಬಂಧಿಸಿಲ್ಲ? ಸಂಸದ ಪ್ರತಾಪ್ ಸಿಂಹ ಪ್ರಶ್ನೆ

  • Publish Date - 2:23 pm, Thu, 10 September 20
ಶಾಸಕ ಜಮೀರ್ ಅವರನ್ನ ಯಾಕಿನ್ನೂ ಬಂಧಿಸಿಲ್ಲ? ಸಂಸದ ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು: ಚಂದನವನಕ್ಕೆ ಮಾದಕ ವಸ್ತುವಿನ ನಂಟಿದೆ ಎಂಬ ಪ್ರಕರಣ ಸಂಬಂಧ ಶಾಸಕ ಜಮೀರ್ ಅಹ್ಮದ್‌ರನ್ನು ಏಕೆ ಬಂಧಿಸಿಲ್ಲವೆಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಪ್ರಕರಣ ಸಂಬಂಧ ಮಾತನಾಡಿದ ಪ್ರತಾಪ್ ಸಿಂಹ, ಶಾಸಕ ಜಮೀರ್ ಅಹ್ಮದ್‌ರನ್ನು ಏಕೆ ಬಂಧಿಸಿಲ್ಲ? ಪ್ರಶಾಂತ್ ಸಂಬರಗಿ ಜಮೀರ್ ಅಹ್ಮದ್ ಹೆಸರು ಹೇಳಿದ್ದಾರೆ. ಆ ಪಟ್ಟಿಯಲ್ಲಿ ಶಾಸಕ ಜಮೀರ್ ಹೆಸರು ಕೂಡ ಇದೆ. ಆದ್ರೆ ಈವರೆಗೆ ಜಮೀರ್ ಅಹ್ಮದ್‌ರನ್ನು ಏಕೆ ಬಂಧಿಸಿಲ್ಲ. ಇದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಶಾಂತ್ ಸಂಬರಗಿ ಆರೋಪಗಳ ಬಗ್ಗೆ ಅನುಮಾವಿದ್ದರೆ ಸಂಬರಗಿಯನ್ನು ತನಿಖೆಗೆ ಒಳಪಡಿಸಲಿ. ಅವರು ಕೊಟ್ಟ ಮಾಹಿತಿಯಂತೆ ತನಿಖೆಯನ್ನು ಮುಂದುವರಿಸಲಿ. ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರೋದು ಸತ್ಯ. ಇಂತಹ ಕೇಸ್‌ಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದು ಸಹಜ. ಆದ್ರೆ ಗೃಹ ಸಚಿವರು ಪ್ರಭಾವಕ್ಕೆ ಮಣಿಯಲ್ಲ. ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದ್ರು.

Click on your DTH Provider to Add TV9 Kannada