ಅನೈತಿಕ ಸಂಬಂಧ: ಗೃಹಿಣಿಯ ಕತ್ತು ಹಿಸುಕಿ ಕೊಂದ ಪ್ರಿಯಕರ

  • Updated On - 6:19 pm, Sat, 12 September 20
ಅನೈತಿಕ ಸಂಬಂಧ: ಗೃಹಿಣಿಯ ಕತ್ತು ಹಿಸುಕಿ ಕೊಂದ ಪ್ರಿಯಕರ

ಯಾದಗಿರಿ: ಮಹಿಳೆಯೊಬ್ಬಳನ್ನು ಆಕೆಯ ಪ್ರಿಯಕರ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಜಿಲ್ಲೆಯ ವರ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಮಾದೇವಿ (35) ಕೊಲೆಯಾದ ಮಹಿಳೆ. ಗ್ರಾಮದ ನಿವಾಸಿ ಬಾವಸಾಬ್ ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಬಾವಸಾಬ್ ಮೃತ ಮಹಿಳೆಯೊಟ್ಟಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಉಮಾದೇವಿ ಗಂಡನಿಂದ ದೂರವಾದ ಬಳಿಕ ಬಾವಸಾಬ್ ಜೊತೆ ವಾಸವಾಗಿದ್ದಳು. ಬಾವಸಾಬ್​ಗೆ ಮದುವೆಯಾಗಿದ್ರು ಉಮಾದೇವಿ ಆತನ ಜೊತೆ ವಾಸ್ತವ್ಯ ಹೂಡಿದ್ದಳಂತೆ.

ಘಟನೆಗೆ ಸಂಬಂಧಿಸಿ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾದಿದೆ. ಕೊಲೆ ಮಾಡಿ ಸ್ಥಳದಿಂದ ಪರಾರಿಯಾದ ಆರೋಪಿ ಬಾವಸಾಬ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Click on your DTH Provider to Add TV9 Kannada