ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಬಳಿಕ ನಿರ್ಲಕ್ಷ್ಯ: ಬೆಡ್​ ಸಿಗದೆ ಆಸ್ಪತ್ರೆ ಮೆಟ್ಟಿಲಿನ ಮೇಲೆ ಮಲಗಿದ ಮಹಿಳೆಯರ ಪರದಾಟ

ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಬಳಿಕ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಿಳೆಯರು ಪರದಾಡುವಂಥ ಸ್ಥಿತಿ ಜಿಲ್ಲೆಯ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ವೈದ್ಯರ ವಿರುದ್ಧ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರ ಕುಟುಂಬಸ್ಥರು ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

  • TV9 Web Team
  • Published On - 19:40 PM, 23 Jan 2021
ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಬಳಿಕ ನಿರ್ಲಕ್ಷ್ಯ: ಬೆಡ್​ ಸಿಗದೆ ಆಸ್ಪತ್ರೆ ಮೆಟ್ಟಿಲಿನ ಮೇಲೆ ಮಲಗಿದ ಮಹಿಳೆಯರ ಪರದಾಟ
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಂಕಷ್ಟ ಎದುರಿಸಿದ ಮಹಿಳೆಯರು

ಯಾದಗಿರಿ: ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಬಳಿಕ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಿಳೆಯರು ಪರದಾಡುವಂಥ ಸ್ಥಿತಿ ಜಿಲ್ಲೆಯ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ವೈದ್ಯರ ವಿರುದ್ಧ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರ ಕುಟುಂಬಸ್ಥರು ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯರಿಗೆ ಬೆಡ್​ ನೀಡದ ಹಿನ್ನೆಲೆಯಲ್ಲಿ ಅವರೆಲ್ಲರೂ ಆಸ್ಪತ್ರೆಯ ಗೇಟ್ ಮತ್ತು ಮೆಟ್ಟಿಲುಗಳ ಮೇಲೆ ಮಲಗಿ ಸಂಕಷ್ಟ ಎದುರಿಸಬೇಕಾಯ್ತು. ಕೊವಿಡ್ ನಿಯಮ ಪಾಲನೆ ಮಾಡದೆ ನಿರ್ಲಕ್ಷ್ಯ ತೋರಿದ ಆಸ್ಪತ್ರೆ ಸಿಬ್ಬಂದಿಯಿಂದ ಮಹಿಳೆಯರು ಪರದಾಡಬೇಕಾಯಿತು. ಹಾಗಾಗಿ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮಹಿಳೆಯರ ಕುಟುಂಬದವರು ಆಕ್ರೋಶಗೊಂಡರು.

 

ತೂಕದಲ್ಲಿ ಏರುಪೇರು ಮಾಡಿ ರೈತರಿಗೆ ಮೋಸ: ದಲ್ಲಾಳಿ‌ಯ ಧೋಖಾಗೆ ತೀವ್ರ ಆಕ್ರೋಶ