ಚಿಕ್ಕಬಳ್ಳಾಪುರ: ಮಗಳನ್ನು ಪ್ರೀತಿಸಿದ ಯುವಕನನ್ನ ಆಕೆಯ ತಂದೆ ಬರ್ಬರವಾಗಿ ಕೊಲಗೈದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮದ್ದಲಖಾನೆ ಗ್ರಾಮದ ಬಳಿ ನಡೆದಿದೆ. ಹತ್ಯೆಯಾದ ಯುವಕನನ್ನು ಹರೀಶ್(22) ಎಂದು ಗುರುತಿಸಲಾಗಿದೆ.
ಹರೀಶ್ ತನ್ನ ಮಗಳನ್ನು ಪ್ರೀತಿಸಿದ್ದಕ್ಕೆ ಆಕೆಯ ತಂದೆ ಕೋಳಿ ವೆಂಕಟೇಶ ಮತ್ತು ಆತನ ಸಹಚರ ಗಣೇಶ್ ಸೇರಿ ಯುವಕನನ್ನ ಕೊಲೆಮಾಡಿದ್ದಾರೆ.
ಯುವಕ ಬೈಕ್ನಲ್ಲಿ ಹೋಗುವಾಗ ಆತನನ್ನ ಅಡ್ಡಗಟ್ಟಿ ಬರ್ಬರವಾಗಿ ಹತ್ಯೆಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳಾದ ಕೋಳಿ ವೆಂಕಟೇಶ ಮತ್ತು ಗಣೇಶನನ್ನ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.