ಕುಂದಾನಗರಿಯಲ್ಲಿ ಕನ್ನಡ ಪ್ರೇಮ: ಕಾಲ್ನಡಿಗೆ ಮೂಲಕ ಕನ್ನಡಾಂಬೆಗೆ ಯುವಕನ ಸೇವೆ

ಕುಂದಾನಗರಿಯಲ್ಲಿ ಕನ್ನಡ ಪ್ರೇಮ: ಕಾಲ್ನಡಿಗೆ ಮೂಲಕ ಕನ್ನಡಾಂಬೆಗೆ ಯುವಕನ ಸೇವೆ

ಬೆಳಗಾವಿ: ನಮ್ಮ ಕನ್ನಡ ಅಂದ್ರೇನೆ ಹಾಗೆ ಅನಿಸುತ್ತೆ. ಒಮ್ಮೆ ಕನ್ನಡಾಂಬೆಯನ್ನು ನಮ್ಮ ಮೈ-ಮನದಲ್ಲಿ ತುಂಬಿಕೊಂಡರೇ ಸಾಕು ಆಕೆಗಾಗಿ ಏನೆಲ್ಲಾ ಮಾಡಿ ಬಿಡಬಹುದು ಅನ್ನುವುದಕ್ಕೆ ಈ ಯುವಕನೇ ಸಾಕ್ಷಿ. ನಾಡದ್ರೋಹಿಗಳು ನಮ್ಮಲ್ಲೇ ಇರುವಾಗಲೇ ಕನ್ನಡದ ಕಿಚ್ಚನ್ನು ಮನದಲ್ಲಿಟ್ಟುಕೊಂಡು ಭಾಷೆ ಮತ್ತು ಅಕ್ಷರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಯುವಕ ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂಥದ್ದು. ಇಂಗ್ಲೀಷ್ ಮೋಹಕ್ಕೆ ಬಿದ್ದ ಯುವಕರು ಇಂದು ಕನ್ನಡವನ್ನೇ ಮರೆಯುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬ ಯುವಕ ಕನ್ನಡಕ್ಕಾಗಿ ಮಾಡಿರುವ ಸೇವೆಯಿಂದ ಎಲ್ಲರ ಮನಗೆದ್ದಿದ್ದಾನೆ. […]

KUSHAL V

| Edited By: sadhu srinath

Nov 19, 2020 | 6:34 PM

ಬೆಳಗಾವಿ: ನಮ್ಮ ಕನ್ನಡ ಅಂದ್ರೇನೆ ಹಾಗೆ ಅನಿಸುತ್ತೆ. ಒಮ್ಮೆ ಕನ್ನಡಾಂಬೆಯನ್ನು ನಮ್ಮ ಮೈ-ಮನದಲ್ಲಿ ತುಂಬಿಕೊಂಡರೇ ಸಾಕು ಆಕೆಗಾಗಿ ಏನೆಲ್ಲಾ ಮಾಡಿ ಬಿಡಬಹುದು ಅನ್ನುವುದಕ್ಕೆ ಈ ಯುವಕನೇ ಸಾಕ್ಷಿ. ನಾಡದ್ರೋಹಿಗಳು ನಮ್ಮಲ್ಲೇ ಇರುವಾಗಲೇ ಕನ್ನಡದ ಕಿಚ್ಚನ್ನು ಮನದಲ್ಲಿಟ್ಟುಕೊಂಡು ಭಾಷೆ ಮತ್ತು ಅಕ್ಷರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಯುವಕ ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂಥದ್ದು. ಇಂಗ್ಲೀಷ್ ಮೋಹಕ್ಕೆ ಬಿದ್ದ ಯುವಕರು ಇಂದು ಕನ್ನಡವನ್ನೇ ಮರೆಯುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬ ಯುವಕ ಕನ್ನಡಕ್ಕಾಗಿ ಮಾಡಿರುವ ಸೇವೆಯಿಂದ ಎಲ್ಲರ ಮನಗೆದ್ದಿದ್ದಾನೆ.

ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಅಂದ ಹಾಗೆ, ಈ ಯುವಕನ ಹೆಸರು ಮಂಜುನಾಥ ಭದ್ರಶೆಟ್ಟಿ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದ ಮಂಜುನಾಥ ಚಿಕ್ಕಮಗಳೂರಿನ ಕೆಎಂಎಫ್​ ಸಂಸ್ಥೆಯ ಉದ್ಯೋಗಿ. ಈತನಿಗೆ ಕನ್ನಡದ ಬಗ್ಗೆ ಎಲ್ಲಿಲ್ಲದ ಅಭಿಮಾನ, ಪ್ರೀತಿ.

ಹಾಗಾಗಿ, ತನ್ನ ಕೆಲಸಕ್ಕೆ ರಜೆ ಪಡೆದು ಆಂಧ್ರಪ್ರದೇಶದ ಅನಂತಪೂರ ಜಿಲ್ಲೆಯಿಂದ ಬೆಳಗಾವಿಯವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾನೆ. ಆದರೆ ಹಾಗೆ ಸುಮ್ಮನೆ ಬಂದಿಲ್ಲ. ಕನ್ನಡದ ಕಂಪನ್ನ ತನ್ನೊಂದಿಗೆ ಹೊತ್ತು ಕುಂದಾನಗರಿವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾನೆ.

ಹಲವು ದಿನಗಳ ಹಿಂದೆ ಆಂಧ್ರದಿಂದ ಹೊರಟ ಮಂಜುನಾಥ ಇಂದು ನಗರದ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ. ಬೆಳಗಾವಿಯ ಗಡಿ ಭಾಗದಲ್ಲಿರುವ MES ಪುಂಡರ ಅಟಾಟೋಪ, ಕನ್ನಡ ನಾಡು ನುಡಿ ವಿರೋಧಿ ಚಟುವಟಿಕೆಯ ಬಗ್ಗೆ ಇವನಿಗೆ ಸ್ಪಷ್ಟ ಕಲ್ಪನೆಯಿದೆ.

ಹೀಗಾಗಿ, ಕರ್ನಾಟಕದ ಗಡಿಯಲ್ಲಿ ಕನ್ನಡ ಉಳಿಯಬೇಕು, ಬೆಳೆಯಬೇಕು ಎಂಬ ಉತ್ಕಟ ಇಚ್ಛೆಯೊಂದಿಗೆ ತನ್ನ ಕಾಲ್ನಡಿಗೆಯಲ್ಲಿ ದಾರಿಯುದ್ದಕ್ಕೂ ನೂರಾರು ಹಳ್ಳಿ, ನಗರಗಳಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಾ ಬಂದಿದ್ದಾನೆ. ಇನ್ನೂ, ಈತನ ಬಳಿ ಸಿರಿಗನ್ನಡಂ ಬಾಳ್ಗೆ ಎಂಬ ಪುಸ್ತಕ ಕೂಡ ಇದ್ದು ಅದರಲ್ಲಿ ಈ ಮಂಜುನಾಥ ತನ್ನ ನೆತ್ತರನ್ನು ಶಾಹಿಯಾಗಿ ಬಳಸಿ ಅನೇಕ ಕವನಗಳನ್ನೂ ಬರೆದಿದ್ದಾನೆ.

ಆಂಧ್ರದಿಂದ ಬೆಳಗಾವಿ ಗಡಿವರೆಗೂ ಕನ್ನಡದ ಕಂಪು ಮಂಜುನಾಥ ಚೆನ್ನಮ್ಮ ವೃತ್ತಕ್ಕೆ ಬಂದು ಅಲ್ಲಿ ಸ್ವಲ್ಪ ಕಾಲವಿದ್ದು ಕೆಲ ಕನ್ನಡಪರ ಸಂಘಟನೆಗಳ ಮುಖಂಡರನ್ನ ಭೇಟಿಯಾದ. ಈತನಿಗೆ ಇವರಿಂದ ಆತ್ಮೀಯ ಸ್ವಾಗತ ಕೂಡ ಸಿಕ್ಕಿತು. ಇನ್ನು, ಕನ್ನಡ ಕ್ರೀಯಾಶೀಲ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈತನಿಗೆ ಹಣ ಕೊಟ್ಟು ನೆರವಿನ ಹಸ್ತ ಚಾಚಿದ್ದಾರೆ.

ಇದಾದ ಬಳಿಕ ಮಂಜುನಾಥ ಬೆಳಗಾವಿಯಿಂದ ನಿಪ್ಪಾಣಿಯತ್ತ ಪ್ರಯಾಣ ಬೆಳೆಸಿದ್ದು ನಿಪ್ಪಾಣಿ ಮತ್ತು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿಭಾಗದಲ್ಲಿ ತನ್ನ ಕಾಲ್ನಡಿಗೆಯನ್ನ ಕೊನೆಗೊಳಿಸಲಿದ್ದಾನೆ. ಈ ಯುವಕನ ಕನ್ನಡಾಭಿಮಾನ ಯುವ ಸಮುದಾಯಕ್ಕೆ ಮಾದರಿಯಾಗಿದ್ದು ಇತ್ತ ನಮ್ಮ ನಾಡಿನಲ್ಲಿದ್ದುಕೊಂಡು ನಾಡದ್ರೋಹಿ ಕೆಲಸ ಮಾಡುವ MESನವರು ಇನ್ನಾದರೂ ಕೂಡ ಈತನನ್ನ ನೋಡಿ ಕಲಿಯಲಿ ಎಂಬುದು ಎಲ್ಲರ ಆಶಯ. -ಸಹದೇವ ಮಾನೆ

Follow us on

Related Stories

Most Read Stories

Click on your DTH Provider to Add TV9 Kannada