ರೇವಣ್ಣ ಕೊಲಂಬೊ ಕ್ಯಾಸಿನೋಗೆ ಬಂದಿರಲಿಲ್ಲ; ಶಾಸಕ ಜಮೀರ್ ಕೊಟ್ಟ ಸರ್ಟಿಫಿಕೇಟ್

  • Updated On - 1:48 pm, Sat, 12 September 20
ರೇವಣ್ಣ ಕೊಲಂಬೊ ಕ್ಯಾಸಿನೋಗೆ ಬಂದಿರಲಿಲ್ಲ; ಶಾಸಕ ಜಮೀರ್ ಕೊಟ್ಟ ಸರ್ಟಿಫಿಕೇಟ್

ಬೆಂಗಳೂರು: ತಮ್ಮ ಕೊಲೊಂಬೊ ಕ್ಯಾಸಿನೋ ಭೇಟಿ ಬಗ್ಗೆ ಶಾಸಕ ಜಮೀರ್ ಅಹ್ಮದ್​ ಖಾನ್​​ ಪ್ರತಿಕ್ರಿಯೆ ನೀಡಿದ್ದಾರೆ. HD ರೇವಣ್ಣ ಬಿಟ್ಟು JDS​​ನ 28 ಶಾಸಕರು ಕೊಲಂಬೊ ಕ್ಯಾಸಿನೋಗೆ ಹೋಗಿದ್ದರು ಎಂದು ಸಹ ಹೇಳಿದ್ದಾರೆ.

ಇದನ್ನೂ ಓದಿ: ಕೊಲಂಬೊ ಕ್ಯಾಸಿನೋಗೆ ಹೋಗಿದ್ದೇನೆ, ಕುಮಾರಸ್ವಾಮಿ ಸಹ ಬಂದಿದ್ರು-ಜಮೀರ್​ ಬಾಂಬ್​!

ನಾನಷ್ಟೇ ಅಲ್ಲ JDS​​ನಲ್ಲಿದ್ದಾಗ ಕುಮಾರಸ್ವಾಮಿ ಸೇರಿ ಪಕ್ಷದ 28 ಶಾಸಕರು ಕೊಲಂಬೊ ಕ್ಯಾಸಿನೋಗೆ ಹೋಗಿದ್ದರು. ಇದಲ್ಲದೆ, BJP ಶಾಸಕರು ಮತ್ತು ಮಂತ್ರಿಗಳೂ ಸಹ ಕೊಲಂಬೊಗೆ ಹೋಗಿದ್ದರು ಎಂದು ಸಹ ಹೇಳಿದ್ದಾರೆ. ಡ್ರಗ್ಸ್​ ಜಾಲಕ್ಕೂ ನಮಗೂ ಯಾವುದೇ ರೀತಿ ಸಂಬಂಧವಿಲ್ಲ. ನಾನು ಸಂಜನಾ ಜೊತೆ ಕೊಲಂಬೊಗೆ ಹೋಗಿದ್ದು ಸಾಬೀತಾದರೆ ನಾನು ಹೇಳಿದಂತೆ ನನ್ನ ಆಸ್ತಿಯನ್ನು ಬರೆದುಕೊಡುತ್ತೇನೆ. ಪ್ರಶಾಂತ್​ ಸಂಬರಗಿ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ. ಪ್ರೂವ್​ ಮಾಡಲು ದಾಖಲೆ ಇದ್ದರೆ ಸಂಬರಗಿ ಕೊಡಲಿ. ನಾನು ಹೋಗಿದ್ದು ಕೊಲಂಬೊಗೆ. ಏನು ಪಾಕಿಸ್ತಾನಕ್ಕೆ ಹೋಗಿದ್ನಾ? ಎಂದು ಸಂಬರಗಿಗೆ ತಿರುಗೇಟು ನೀಡಿದ್ದಾರೆ.

ಸರ್ಕಾರ ಡ್ರಗ್ಸ್​ ಜಾಲದ ಪ್ರಕರಣ ಬಗ್ಗೆ ತನಿಖೆ ಮಾಡುತ್ತಿದೆ. ಸರ್ಕಾರದ ಮೇಲೆ ನಂಬಿಕೆ ಇದೆ, ಮುಕ್ತ ತನಿಖೆ ಮಾಡಲಿ. ಆದರೆ, ಲೀಗಲ್​ ಆಗಿರುವ ಕ್ಯಾಸಿನೋಗೆ ಹೋಗುವುದು ತಪ್ಪಾ? ಅಂತಾ ಟಿವಿ9ಗೆ ಶಾಸಕ ಜಮೀರ್ ಅಹ್ಮದ್​ ಖಾನ್​​ ಪ್ರತಿಕ್ರಿಯೆ ನೀಡಿದ್ದಾರೆ.

Click on your DTH Provider to Add TV9 Kannada