ಜಾಡಿಸಿ ಒದ್ದರೆ.. ಎಂದು AEEಗೆ ಬೈದ ಸಚಿವ ಮಾಧುಸ್ವಾಮಿ! ಅಧಿಕಾರಿ ಪತ್ನಿಗೂ ಬೈದ ಕಾನೂನು ಸಚಿವ!

ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೆಲಸಗಳು ಆಗಿಲ್ಲ. ನಾನು ಸೂಚನೆ ನೀಡಿ ಎಷ್ಟೋ ದಿನಗಳಾದವು ಎಂದು ಸಿಟ್ಟಾದ ಮಾಧುಸ್ವಾಮಿ, ಕೆಲಸ ಮಾಡದ ಎಇಇಯನ್ನು ಅಮಾನತು ಮಾಡುವಂತೆ ಸಿಇಒಗೆ ಸೂಚಿಸಿದ್ದಾರೆ.

  • TV9 Web Team
  • Published On - 12:54 PM, 7 Jan 2021
ಜೆ.ಸಿ ಮಾಧುಸ್ವಾಮಿ

ತುಮಕೂರು: ಕೆಲವು ತಿಂಗಳುಗಳ ಹಿಂದೆ ಕೋಲಾರದಲ್ಲಿ ರೈತ ಮಹಿಳೆಯೊಬ್ಬರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ (ರಾಸ್ಕಲ್​) ಎಂದು ನಿಂದಿಸಿ, ತೀವ್ರ ಟೀಕೆಗೆ ಗುರಿಯಾಗಿದ್ದ ಕಾನೂನು ಸಚಿವ ಮಾಧುಸ್ವಾಮಿ ಇದೀಗ ಮತ್ತೊಮ್ಮೆ ಅದೇ ಶಬ್ದಗಳ ಪ್ರಯೋಗ ಮಾಡಿದ್ದಾರೆ.. ಅದೂ ಸರ್ಕಾರಿ ಅಧಿಕಾರಿಗೆ.. ಜೊತೆಗೆ ಅವರ ಪತ್ನಿಗೂ!

ಯಾವ ಸೋಪು ನಿನ್ನ ಹೆಂಡ್ತಿ ಸೀರೆ ತೊಳೆಯೋಕೆ ತಗೊಂಡು ಹೋಗೋದು ನೀನು
ತುಮಕೂರು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಎಇಇ ವಿರುದ್ಧ ಗರಂ ಆದ ಮಾಧುಸ್ವಾಮಿ ಅವರು ಜಾಡ್ಸಿ ಒದ್ದುಬಿಟ್ರೆ ಎಲ್ಲಿಗೆ ಹೋಗಿ ಬೀಳ್ತೀಯಾ ಗೊತ್ತಾ ನೀನೀಗಾ..? ರಾಸ್ಕಲ್ ಕತ್ತೆ ಕಾಯೋಕೆ ಹೇಳಿದ್ನಾ ಇಲ್ಲಿ? ಯಾರನ್ನ ಕೇಳಿದ್ದೀರಿ, ಏನೇನೂ ಇಲ್ವಾ, ಮತ್ ಯಾಕ್ ಮಾಡಿಲ್ಲ. ಯಾವ ಸೋಪು ನಿನ್ನ ಹೆಂಡ್ತಿ ಸೀರೆ ತೊಳೆಯೋಕೆ ತಗೊಂಡು ಹೋಗೋದು ನೀನು.. ರಾಸ್ಕಲ್ಸ್ ಏನ್ ತಿಳ್ಕೊಂಡಿದ್ದೀರಾ ನೀವು.. ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ ಎಂದು ಸಭೆಯಲ್ಲಿ ಕೂಗಾಡಿದ್ದಾರೆ.

ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೆಲಸಗಳು ಆಗಿಲ್ಲ. ನಾನು ಸೂಚನೆ ನೀಡಿ ಎಷ್ಟೋ ದಿನಗಳಾದವು ಎಂದು ಸಿಟ್ಟಾದ ಮಾಧುಸ್ವಾಮಿ, ಕೆಲಸ ಮಾಡದ ಎಇಇಯನ್ನು ಅಮಾನತು ಮಾಡುವಂತೆ ಸಿಇಒಗೆ ಸೂಚಿಸಿದ್ದಾರೆ. ಈ ಸಭೆಯಲ್ಲಿ ಸಂಸದ ಬಸವರಾಜ್, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಡಿಸಿ ಡಾ. ರಾಕೇಶ್ ಕುಮಾರ್, ಜಿಪಂ ಸಿಇಒ ಶುಭಕಲ್ಯಾಣ್‌ ಇತರರು ಇದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು!