ಏಕಾಏಕಿ ಚಿಂತಾಜನಕ ಸ್ಥಿತಿಗೆ ತಿರುಗಿದ ಎಸ್​​ಪಿಬಿ ಆರೋಗ್ಯ

ಕೊವಿಡ್-19 ಸೋಂಕಿಗೀಡಾಗಿ ಆಗಸ್ಟ 5 ನೇ ತಾರೀಖಿನಿಂದ ಚೆನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೆಜೆಂಡರಿ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯ ಕಳೆದ 24 ಗಂಟೆಗಳಲ್ಲಿ ಇದ್ದಕ್ಕಿದ್ದಂತೆ ತೀವ್ರ ಚಿಂತಾಜನಕವಾಗಿದೆಯೆಂದು ಅಸ್ಪತ್ರೆ ಇಂದು ಬಿಡುಗಡೆ ಮಾಡಿರುವ ಬುಲೆಟಿನ್​ನಲ್ಲಿ ಹೇಳಲಾಗಿದೆ.

ಬುಲೆಟಿನ್ ಪ್ರಕಾರ ಎಸ್​ಪಿಬಿ ಅವರಿಗೆ ಇಸಿಎಮ್ಒ ಮತ್ತು ಇನ್ನಿತರ ಜೀವರಕ್ಷಕ ಸಾಧನಗಳ ಮೂಲಕ ಚಿಕಿತ್ಸೆ ಮುಂದುವರಿಸಲಾಗಿದೆ.

‘‘ಕಳೆದ 24 ಗಂಟೆಗಳಲ್ಲಿ ಅವರ ಆರೋಗ್ಯ ತೀವ್ರ ಚಿಂತಾಜನಕ ಸ್ಥಿತಿ ತಲುಪಿದ್ದರಿಂದ ಜೀವರಕ್ಷಕ ಸಾಧನಗಳನ್ನು ಹೆಚ್ಚಿಸಲಾಗಿದೆ. ಅವರ ಆರೋಗ್ಯ ಬಹಳ ಗಂಭೀರವಾಗಿದೆ. ಪರಿಣಿತ ವೈದ್ಯರ ತಂಡವೊಂದು ಅವರ ದೇಹಸ್ಥತಿಯನ್ನು ಸೂಕ್ಷ್ಮವಾಗಿ ಮಾನಿಟರ್ ಮಾಡುತ್ತಿದೆ,’’ ಎಂದು ಬುಲೆಟಿನ್​ನಲ್ಲಿ ಹೇಳಲಾಗಿದೆ.

ಕೊವಿಡ್-19 ಟೆಸ್ಟ್ ಪಾಸಿಟಿವ್ ರಿಪೋರ್ಟ್ ಬಂದ ನಂತರ ಆಸ್ಪತ್ರೆಗೆ ದಾಖಲಾದ ಅವರು ಇತ್ತೀಚಿಗೆ ಚೇತರಿಸಿಕೊಂಡಿದ್ದರು. ಅವರ ಮಗ ಎಸ್ ಪಿ ಚರಣ್ ಹೇಳಿದ ಹಾಗೆ, ಬೆಡ್ ಮಲಗಿದ್ದುಕೊಂಡೇ ಅವರು ತಮ್ಮ ಟ್ಯಾಬ್ಲೆಟ್ ಕಂಪ್ಯೂಟರ್​ನಲ್ಲಿ ಟೆನಿಸ್ ಮತ್ತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದರಂತೆ. ಇಂಡಿಯನ್ ಪ್ರಿಮೀಯರ್ ಲೀಗ್ ಶುರುವಾಗುವುದನ್ನು ಬಹಳ ಕಾತರದಿಂದ ಎದುರು ನೋಡುತ್ತ್ತಿದ್ದರೆಂದು ಚರಣ್ ಹೇಳಿದ್ದರು.

ಅವರು ಚೇತರಿಸಿಕೊಂಡ ವಿಷಯ ಕೇಳಿ ಸಂತೋಷದಿಂದ ಕುಣಿದಾಡಿದ್ದ ಅವರ ಕೋಟ್ಯಾಂತರ ಅಭಿಮಾನಿಗಳು ಇವತ್ತಿನ ಬೆಳವಣಿಗೆ ಬಗ್ಗೆ ಕೇಳಿ ಆತಂಕಗೊಂಡಿದ್ದಾರೆ.

Related Tags:

Related Posts :

Category:

error: Content is protected !!