ಉಸ್ತುವಾರಿ ಅರುಣ್​ ಸಿಂಗ್ ಭೇಟಿಯಾದ ಅತೃಪ್ತ ಶಾಸಕರು; ಡಿಸಿಎಂ ಅಶ್ವತ್ಥ್​ ನಾರಾಯಣ, ಸಚಿವ ಸುಧಾಕರ್ ಸಾಥ್​

ಒಂದೆಡೆ ಏಳು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಖುಷಿಯಾಗಿದ್ದರೆ, ತಮಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಅತಿಯಾದ ವಿಶ್ವಾಸದಲ್ಲಿದ್ದ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಮುನಿರತ್ನ ಮತ್ತಿತರರಿಗೆ ಅತಿಯಾದ ನಿರಾಸೆಯಾಗಿದೆ.

  • TV9 Web Team
  • Published On - 17:58 PM, 13 Jan 2021
ಮುನಿರತ್ನ ಮತ್ತು ಎಚ್​. ನಾಗೇಶ್​

ಬೆಂಗಳೂರು: ಬಹುದಿನಗಳಿಂದ ಕಗ್ಗಂಟಾಗಿದ್ದ ಸಚಿವ ಸಂಪುಟ ವಿಸ್ತರಣೆ ಇಂದು ಮುಕ್ತಾಯವಾಯಿತು. ಆದರೆ ಸಚಿವ ಸ್ಥಾನ ಆಕಾಂಕ್ಷಿಗಳ ಆಕ್ರೋಶ ಭುಗಿಲೆದ್ದಿದ್ದು, ಮತ್ತೊಂದಷ್ಟು ಅಸಮಾಧಾನಗಳು ಸೃಷ್ಟಿಯಾಗಿವೆ.

ಒಂದೆಡೆ ಏಳು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿ ಖುಷಿಯಾಗಿದ್ದರೆ, ಇನ್ನೊಂದೆಡೆ, ತಮಗೆ ಸಚಿವ ಸmuniatna ್ಥಾನ ಸಿಕ್ಕೇ ಸಿಗುತ್ತದೆ ಎಂದು ಅತಿಯಾದ ವಿಶ್ವಾಸದಲ್ಲಿದ್ದ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಮುನಿರತ್ನ ಮತ್ತಿತರರಿಗೆ ಅತಿಯಾದ ನಿರಾಸೆಯಾಗಿದೆ. ಈ ಮಧ್ಯೆ ಎಚ್​.ನಾಗೇಶ್​ಗೆ ರಾಜೀನಾಮೆ ನೀಡಲು ಹೇಳಿದ್ದರಿಂದ ಅವರೂ ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ.

ಇದೀಗ ಇನ್ನೊಂದು ಮಹತ್ವದ ಬೆಳವಣಿಗೆಯಾಗಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯುತ್ತಿದ್ದಂತೆ ಅತೃಪ್ತ ಶಾಸಕರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ರನ್ನು ಭೇಟಿಯಾಗಿದ್ದಾರೆ. ಎಚ್​. ನಾಗೇಶ್​ ಮತ್ತು ಮುನಿರತ್ನ ಅವರು ಕುಮಾರ ಕೃಪಾದಲ್ಲಿ ಅರುಣ್​ ಸಿಂಗ್​ರನ್ನು ಭೇಟಿಯಾಗಿದ್ದು, ಈ ವೇಳೆ ಉಪ ಮುಖ್ಯಮಂತ್ರಿ ಅಶ್ವತ್ಥ್​ ನಾರಾಯಣ್​, ಸಚಿವ ಸುಧಾಕರ್​ ಉಪಸ್ಥಿತರಿದ್ದರು.

Karnataka BS Yediyurappa Cabinet Expansion ಮೂರನೇ ಬಾರಿಗೆ ವಿಸ್ತರಣೆಗೊಂಡ ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 7 ಮಂದಿ ಸೇರ್ಪಡೆ, ಯಾರವರು?