AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lunar Eclipse 2022: ಮೇ 15-16ರ ರಕ್ತ ಚಂದ್ರಗ್ರಹಣ ಎಲ್ಲಿಂದ, ಯಾವಾಗ ಕಾಣುತ್ತದೆ? ಈ ಗ್ರಹಣದ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು

Chandra Grahan: 2022ರ ಮೊದಲ ಚಂದ್ರಗ್ರಹಣ ಮೇ 15- 16ನೇ ತಾರೀಕಿನಂದು ಸಂಭವಿಸಲಿದೆ. ಇದು ಎಲ್ಲೆಲ್ಲಿ ಕಾಣಿಸುತ್ತದೆ ಮತ್ತು ಹೇಗೆ ನೋಡುವುದು ಎಂಬಿತ್ಯಾದಿ ವಿವರ ಇಲ್ಲಿದೆ.

Lunar Eclipse 2022: ಮೇ 15-16ರ ರಕ್ತ ಚಂದ್ರಗ್ರಹಣ ಎಲ್ಲಿಂದ, ಯಾವಾಗ ಕಾಣುತ್ತದೆ? ಈ ಗ್ರಹಣದ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು
ಸಾಂದರ್ಭಿಕ ಚಿತ್ರ
TV9 Web
| Updated By: Digi Tech Desk|

Updated on:May 11, 2022 | 1:05 PM

Share

2022ನೇ ಇಸವಿಯ ಮೊದಲ ಚಂದ್ರ ಗ್ರಹಣ (Lunar Eclipse) ಆಯಾ ಕಾಲಮಾನಕ್ಕೆ ಆಧಾರವಾಗಿ ಇದೇ ವಾರಾಂತ್ಯದ ಮೇ 15 ಮತ್ತು 16ರಂದು ಸಂಭವಿಸಲಿದೆ. ಗ್ರಹಣ ಸಂಭವಿಸುವ ವೇಳೆ ಚಂದ್ರ ಗಾಢವಾದ, ಕೆಂಪು ಬಣ್ಣಕ್ಕೆ ತಿರುಗಲಿದೆ. ಆದ್ದರಿಂದ ಇದನ್ನು ರಕ್ತ ಚಂದ್ರಗ್ರಹಣ ಎನ್ನಲಾಗುತ್ತದೆ. ಯಾವಾಗ ಭೂಮಿಯ ನೆರಳಲ್ಲಿ ಚಂದ್ರ ಹಾದುಹೋಗುತ್ತದೋ ಆಗ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಗ್ರಹಣದ ವೇಳೆ ಚಂದ್ರನಿಗೆ ರವಿಯ ಕಿರಣಗಳು ಮಾತ್ರ ಭೂಮಿಯ ವಾತಾವರಣದ ಮೂಲಕ ದೊರೆಯುತ್ತದೆ. ಕೆಲ ನಿಮಿಷಗಳ ಕಾಲ ಬಣ್ಣವು ಬದಲಾಗಲಿದೆ; ಬೂದು ಬಣ್ಣದಿಂದ ಗುಲಾಬಿ, ಕಿತ್ತಳೆ ಮತ್ತು ಕೆಂಪು ಬಣ್ಣಕ್ಕೆ ಮಾರ್ಪಡಲಿದೆ. ಕಳೆದ ಬಾರಿ ಚಂದ್ರ ಗ್ರಹಣ ಸಂಭವಿಸಿದ ಹತ್ತಿರ ಹತ್ತಿರ ವರ್ಷದ ನಂತರ ಈ ಬಾರಿಯದು ಸಂಭವಿಸುತ್ತಿದೆ. ಭೂಮಿಯ ನೆರಳಿಗೆ ಸಾಗುವ ಚಂದ್ರ ಮತ್ತೆ ನೋಡಲು ಹಿಂತಿರುಗುತ್ತದೆ ಮತ್ತು ಆಕಾಶವನ್ನು ಅಲಂಕರಿಸುತ್ತದೆ.

ರಕ್ತ ಚಂದ್ರ ಗ್ರಹಣ ಎಲ್ಲೆಲ್ಲಿ ಕಾಣಿಸುತ್ತದೆ? ಈ ಸಂಪೂರ್ಣ ಚಂದ್ರಗ್ರಹಣವು ಅಮೆರಿಕ, ಅಂಟಾರ್ಟಿಕಾ, ಯುರೋಪ್, ಆಫ್ರಿಕಾ ಮತ್ತು ಪೂರ್ವ ಪೆಸಿಫಿಕ್ ಭಾಗಗಳಿಂದ ಸಂಪೂರ್ಣ ಹಂತದಲ್ಲಿ ಗೋಚರಿಸುತ್ತದೆ. ಇನ್ನು ಭಾಗಶಃ ನೆರಳು ಬೀಳುವ ಸಮಯದಲ್ಲಿ ನ್ಯೂಜಿಲೆಂಡ್, ಪೂರ್ವ ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಗೋಚರಿಸುತ್ತದೆ. ಬೇಸಿಗೆಯ ಕ್ಷೀರ ಪಥ (Milky Way Galaxy) ಹೊಳೆಯುವುದನ್ನು ನೋಡುಗರು ಆನಂದಿಸಬಹುದು. ಏಕೆಂದರೆ ಚಂದ್ರನ ವಿಪರೀತ ಹೊಳಪು ಭೂಮಿಯ ನೆರಳಿನಿಂದಾಗಿ ಕಡಿಮೆ ಆಗುತ್ತದೆ.

ರಕ್ತ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತದೆ? ಭೂಮಿಯ ದಕ್ಷಿಣಾರ್ಧ ಭಾಗದಿಂದ ಸಾಗಿಬರುವ ಚಂದ್ರ ಅಂತಿಮ ಘಟ್ಟದಲ್ಲಿ 85 ನಿಮಿಷಗಳ ಕಾಲ ಇರುವ ನಿರೀಕ್ಷೆ ಇದೆ. ಗ್ರಹಣದ ಮಧ್ಯ ಕಾಲ ಮೇ 16 (ಸಾರ್ವಕಾಲಿಕ ಸಮಯ 4.12) ಆಗಲಿದ್ದು, ಪೆರಿಗಿ ಎಂದು ಕರೆಯುವ ಭೂಮಿಗೆ ಅತ್ಯಂತ ಹತ್ತಿರದ ಕಕ್ಷೆ ತಲುಪುವ ಒಂದೂವರೆ ದಿನದ ಮೊದಲಿಗೆ ನಡೆಯಲಿದೆ. ಗ್ರಹಣ ದಿನದ ರಾತ್ರಿ ತನ್ನು ಅಪೋಜಿ (ಭೂಮಿಯ ಕಕ್ಷೆಗಿಂತ ಅತ್ಯಂತ ದೂರದಲ್ಲಿ ಇರುವುದು)ಯಲ್ಲಿ ಇರುವಾಗ ಚಂದ್ರ ಕಾಣುವ ಅದರ ಗಾತ್ರಕ್ಕಿಂತ ಶೇ 12ರಷ್ಟು ದೊಡ್ಡದಾಗಿ ಕಾಣುತ್ತದೆ. ಚಂದ್ರನಲ್ಲಾಗುವ ಈ ಬದಲಾವಣೆಯನ್ನು ಶ್ರದ್ಧೆಯಿಂದ ಗಮನಿಸುತ್ತಿರುವವರು ಅನುಭವಕ್ಕೆ ಪಡೆಯುತ್ತಾರೆ. ಮೇ 15-16ರ ಗ್ರಹಣವು ಕತ್ತಲೆಯಿಂದ ಕೂಡಿರುವುದು ಹೌದು. ಆದರೆ ಚಂದ್ರನ ದಕ್ಷಿಣದ ಭಾಗ ಸ್ವಲ್ಪ ಮಟ್ಟಿಗೆ ಪ್ರಕಾಶಮಾನವಾಗಿ ಇರುತ್ತದೆ.

ಗ್ರಹಣದ ಹಂತಗಳು ಎಲ್ಲರಿಗೂ ಏಕಕಾಲದಲ್ಲಿ ಸಂಭವಿಸುತ್ತವೆ. ಆದರೆ ಎಲ್ಲರೂ ಪೂರ್ಣ ಗ್ರಹಣವನ್ನು ನೋಡುವುದಿಲ್ಲ. ಹವಾಮಾನಕ್ಕೆ ತಕ್ಕಂತೆ ಉತ್ತರ ಅಮೆರಿಕಾದ ಪೂರ್ವಾರ್ಧದ ವೀಕ್ಷಕರು ಮೇ 15ರ ಸಂಜೆ ಪ್ರಾರಂಭವಾಗುವ ಸಂಪೂರ್ಣ ಘಟನೆಗೆ ಸಾಕ್ಷಿಯಾಗುತ್ತಾರೆ. ಪೂರ್ವ ಕರಾವಳಿಗೆ ಸೂರ್ಯಾಸ್ತದ ಎರಡು ಗಂಟೆಗಳ ನಂತರ ಮತ್ತು ಮಧ್ಯಪ್ರಾಚ್ಯಕ್ಕೆ ಸೂರ್ಯಾಸ್ತದ ನಂತರ ಸುಮಾರು ಒಂದು ಗಂಟೆಯಾದ ಮೇಲೆ ಭಾಗಶಃ ಗ್ರಹಣ ಹಂತವು ಪ್ರಾರಂಭವಾಗುತ್ತದೆ. ಪಶ್ಚಿಮ ಕರಾವಳಿಯಲ್ಲಿ, ಸೂರ್ಯಾಸ್ತದ ಸುತ್ತ ಉದಯಿಸುತ್ತಿರುವಾಗ ಚಂದ್ರನು ಸಂಪೂರ್ಣತೆ ಹಂತವನ್ನು ಪ್ರವೇಶಿಸಲಿದ್ದಾನೆ. ಮತ್ತು ವಾಯವ್ಯದಲ್ಲಿ, ಗ್ರಹಣದ ನಂತರದ ಹಂತಗಳು ಈಗಾಗಲೇ ನಡೆಯುತ್ತಿರುವುದರಿಂದ ಚಂದ್ರನು ಉದಯಿಸುತ್ತಾನೆ. ಅಲಾಸ್ಕಾದ ಹೆಚ್ಚಿನ ಭಾಗ ಇದರಿಂದ ಹೊರಗುಳಿಯುತ್ತದೆ.

ದಕ್ಷಿಣ ಅಮೆರಿಕಾ ಮೇ 15ರ ಸಂಜೆ ಪ್ರಾರಂಭವಾಗುವ ಸಂಪೂರ್ಣ ಗ್ರಹಣಕ್ಕೆ ಸಾಕ್ಷಿ ಆಗುತ್ತದೆ. ಆದರೆ ಪಶ್ಚಿಮ ಯುರೋಪ್ ಮತ್ತು ಆಫ್ರಿಕಾದ ವೀಕ್ಷಕರು ಮೇ 16ರಂದು ಮುಂಜಾನೆ ಸಮಯದಲ್ಲಿ ಈ ಬಾಹ್ಯಾಕಾಶ ಕೌತುಕದ ವೀಕ್ಷಣೆಗೆ ಸಮಯ ಮಾಡಿಕೊಳ್ಳಬೇಕಾಗುತ್ತದೆ. ಬ್ರಿಟಿಷ್ ದ್ವೀಪಗಳಲ್ಲಿನ ವೀಕ್ಷಕರಿಗೆ ಚಂದ್ರನು ಭೂಮಿಯ ಕತ್ತಲೆಯ ಒಳ ನೆರಳಿನಲ್ಲಿ ಸಂಪೂರ್ಣವಾಗಿ ಮುಳುಗಿದಂತೆ ಅಸ್ತಮಿಸಿದರೆ, ನ್ಯೂಜಿಲೆಂಡ್‌ನ ವೀಕ್ಷಕರು ಮೇ 16ರ ಸಂಜೆ ಗ್ರಹಣದ ಕೊನೆಯ ಭಾಗಕ್ಕೆ ಸಾಕ್ಷಿ ಆಗುತ್ತಾರೆ, ಚಂದ್ರನು ಭೂಮಿಯ ನೆರಳಿನಿಂದ ನಿರ್ಗಮಿಸುವಾಗ ಉದಯಿಸುತ್ತಾನೆ.

ಚಂದ್ರ ಗ್ರಹಣದ ಸ್ಥಿತಿ “ಸೂರ್ಯ, ಭೂಮಿ ಮತ್ತು ಪೂರ್ಣ ಚಂದ್ರನು ಬಾಹ್ಯಾಕಾಶದಲ್ಲಿ ಪರಿಪೂರ್ಣ ಒಂದೇ ಸಾಲಿನಲ್ಲಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ, ಇದನ್ನು ಸಿಜಿಜಿ ಎಂದು ಕರೆಯಲಾಗುತ್ತದೆ” ಎಂದು ಸ್ಕೈ ಮತ್ತು ಟೆಲಿಸ್ಕೋಪ್‌ನ ವೀಕ್ಷಣಾ ಸಂಪಾದಕರಾದ ಡಯಾನಾ ಹ್ಯಾನಿಕೈನೆನ್ ಹೇಳುತ್ತಾರೆ. ಚಂದ್ರನು ಭೂಮಿಯ ನೆರಳಿನಲ್ಲಿ ಜಾರುತ್ತಾನೆ, ಕ್ರಮೇಣ ಕಪ್ಪಾಗುತ್ತಾನೆ, ಸಂಪೂರ್ಣ ಚಂದ್ರನ ಡಿಸ್ಕ್ ಬೆಳ್ಳಿಯ ಬೂದು ಬಣ್ಣದಿಂದ ವಿಲಕ್ಷಣವಾದ ಮಂದ ಕಿತ್ತಳೆ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆ ನಂತರ ಘಟನೆಗಳು ಚಂದ್ರನು ಅದಕ್ಕೆ ಮುಂಚಿನ ಪೂರ್ಣ ತೇಜಸ್ಸಿಗೆ ಹಿಂತಿರುಗುವವರೆಗೆ ಹಿಮ್ಮುಖ ಕ್ರಮದಲ್ಲಿ ತೆರೆದುಕೊಳ್ಳುತ್ತವೆ. ಮೇ 16ರ ಗ್ರಹಣದ ಸಂಪೂರ್ಣ ಪ್ರಕ್ರಿಯೆಯು ಸುಮಾರು ಐದು ಗಂಟೆ 20 ನಿಮಿಷಗಳ ಕಾಲ ಸಂಭವಿಸಲಿದೆ. ಈ ಘಟನೆಯು ಐದು ಹಂತಗಳನ್ನು ಹೊಂದಿದ್ದು, ಪ್ರತಿಯೊಂದರಲ್ಲೂ ವೀಕ್ಷಣೆಗೆ ವಿಭಿನ್ನ ವಿಷಯಗಳಿವೆ.

ಈ ಸಂಪೂರ್ಣ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ? ಏಪ್ರಿಲ್ 30ರ ಸೂರ್ಯಗ್ರಹಣದಂತೆಯೇ ಮೇ 15-16ರ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಭಾರತದಲ್ಲಿ ಈ ವರ್ಷ ಮುಂದಿನ ಎರಡು ಗ್ರಹಣಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಅಕ್ಟೋಬರ್ 25ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ ಮತ್ತು ಈ ವರ್ಷ ನವೆಂಬರ್ 7-8 ರಂದು ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:20 am, Wed, 11 May 22

ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ