Pledge: ಬಿಹಾರದ ಈ ಮನುಷ್ಯ 22 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ! ಕಾರಣ ಏನಿರಬಹುದು?

ಸ್ನಾನ ಮಾಡುವುದರಿಂದ ಮನಸು ಮತ್ತು ದೇಹದ ಆರೋಗ್ಯವನ್ನು ಕಾಪಾಡಬಹುದು. ಅದಕ್ಕಾಗಿಯೇ ಬಹುತೇಕ ಜನರು ದಿನಕ್ಕೆ ಎರಡು ಬಾರಿ ಸ್ನಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಳೆದ 22 ವರ್ಷಗಳಿಂದ ಸ್ನಾನವನ್ನೇ ಮಾಡದೆ, ಮುಂದೆಯೂ ಸಗ್ನಾನ ಮಾಡುವ ಮಾತಿಲ್ಲ ಎಂದೇ ಭೀಷ್ಮ ಪ್ರತಿಜ್ಞೆ ತೊಟ್ಟವನಂತೆ ಜೀವನ ನಡೆಸುತ್ತಿದ್ದಾನೆ.

Pledge: ಬಿಹಾರದ ಈ ಮನುಷ್ಯ 22 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ! ಕಾರಣ ಏನಿರಬಹುದು?
ಈ ಮನುಷ್ಯ 22 ವರ್ಷಗಳಿಂದ ಸ್ನಾನ ಮಾಡಿಲ್ಲ! ಕಾರಣ ಏನಿರಬಹುದು?
Updated By: ಸಾಧು ಶ್ರೀನಾಥ್​

Updated on: Aug 09, 2022 | 9:15 PM

ಸ್ನಾನ ಮಾಡುವುದರಿಂದ ಮನಸು ಮತ್ತು ದೇಹದ ಆರೋಗ್ಯವನ್ನು ಕಾಪಾಡಬಹುದು. ಅದಕ್ಕಾಗಿಯೇ ಬಹುತೇಕ ಜನರು ದಿನಕ್ಕೆ ಎರಡು ಬಾರಿ ಸ್ನಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಳೆದ 22 ವರ್ಷಗಳಿಂದ ಸ್ನಾನವನ್ನೇ (Bathing) ಮಾಡದೆ, ಮುಂದೆಯೂ ಸಗ್ನಾನ ಮಾಡುವ ಮಾತಿಲ್ಲ ಎಂದೇ ಭೀಷ್ಮ ಪ್ರತಿಜ್ಞೆ (pledge) ತೊಟ್ಟವನಂತೆ ಜೀವನ ನಡೆಸುತ್ತಿದ್ದಾನೆ (Lifestlye). ಹೀಗೆ ಸ್ನಾನ ಮಾಡದಿರುವುದಕ್ಕೆ ಕಾರಣವನ್ನೂ ನೀಡುತ್ತಾನೆ ಈತ. ಕಾರಣ ತಿಳಿದ ಕೆಲವರು ಮೆಚ್ಚುಗೆಯ ಮಳೆಗೆರೆದರೆ, ಇನ್ನು ಕೆಲವರು ಬೆಚ್ಚಿಬೀಳುವುದು ಗ್ಯಾರಂಟಿ. ಈ ವ್ಯಕ್ತಿ ಮೂಲತಃ ಬಿಹಾರದವನು. ಇನ್ನೂ ಹೆಚ್ಚಿನ ವಿವರಗಳಿಗೆ ಹೋಗುವುದಾದರೆ…

ಬಿಹಾರದ ಪಾಲ್ಗಂಜ್ ಜಿಲ್ಲೆಯ ಬೈಕುಂಠಪುರದ 62 ವರ್ಷದ ಧರ್ಮ ದೇವ್ ರಾಮ್ 2000 ರಿಂದ ಸ್ನಾನ ಮಾಡಿಲ್ಲ! ಈ ವಿಷಯ ತಿಳಿದು ಆಶ್ಚರ್ಯವಾಯಿತೇ!? ಹೌದು ಧರಂ ದೇವ್ ಇಷ್ಟು ವರ್ಷ ಸ್ನಾನ ಮಾಡದಿದ್ದರೂ… ದೇಹದಿಂದ ದುರ್ವಾಸನೆಯೇನೂ ಬೀರಿಲ್ಲ. ಎಂದಿಗೂ ಅನಾರೋಗ್ಯಕ್ಕೆ ಒಳಗಾಗಲಿಲ್ಲ. ಧರಂ ದೇವ್ ತಮ್ಮ 40ನೇ ವಯಸ್ಸಿನಲ್ಲಿ ಜೀವನದಲ್ಲಿ ಇನ್ನೆಂದಿಗೂ ಸ್ನಾನ ಮಾಡುವುದಿಲ್ಲ ಎಂಬ ಅಸಾಮಾನ್ಯ ಪ್ರತಿಜ್ಞೆ ಮಾಡಿದರರಂತೆ!

ಮಹಿಳೆಯರ ವಿರುದ್ಧದ ಅಪರಾಧಗಳು, ಭೂ ವಿವಾದಗಳು ಮತ್ತು ಪ್ರಾಣಿ ಹತ್ಯೆಯನ್ನು ನಿಲ್ಲಿಸುವವರೆಗೆ ಸ್ನಾನ ಮಾಡುವುದಿಲ್ಲ ಎಂದು ಧರ್ಮ ದೇವ್ ಪ್ರತಿಜ್ಞೆ ಮಾಡಿದ್ದಾರೆ. ಕೆಲಸ ವ್ಯರ್ಥವಾಗುತ್ತದೆ ಎಂಬ ಕಾರಣಲ್ಲೂ ಪುಣ್ಯಾತ್ಮ ಸ್ನಾನ ಮಾಡುತ್ತಿಲ್ಲವಂತೆ. ಧರ್ಮ ದೇವ್ ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ತನ್ನ ಮಾತಿಗೆ ಬದ್ಧನಾಗಿರುತ್ತಾನೆ. ಕೊನೆಗೆ ಹೆಂಡತಿ ಮಕ್ಕಳು ಸತ್ತರೂ ಸ್ನಾನ ಮಾಡಲಿಲ್ಲವಂತೆ. ಧರ್ಮ ದೇವ್ ಅವರ ನಿರ್ಧಾರಕ್ಕೆ ಅವರ ಕುಟುಂಬದವರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೇನು ಹೇಳೊಕೆ ಸಾಧ್ಯ?

To read more in Telugu click here