ವರ್ಜಿನ್ ಗ್ಯಾಲಕ್ಸಿಯ ರಿಚರ್ಡ್ ಬ್ರಾನ್ಸನ್ ಇತ್ತೀಚೆಗಷ್ಟೇ ಬಾಹ್ಯಾಕಾಶ ಪ್ರವಾಸ ಕೈಗೊಂಂಡಿದ್ದರು. ಇದರ ಬೆನ್ನಲ್ಲೇ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಕೂಡ ಅಂತರಿಕ್ಷದತ್ತ ಪ್ರಯಾಣ ಬೆಳೆಸಿದ್ದರು. ವಿಶ್ವದ ಶ್ರೀಮಂತ ಉದ್ಯಮಿಗಳು ಬಾಹ್ಯಾಕಾಶದ ಪ್ರಯಾಣ ಹೊಸ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಬ್ರಾನ್ಸನ್ ಹಾಗೂ ಜೆಫ್ ಬೆಜೋಸ್ ಅವರ ಬಾಹ್ಯಾಕಾಶದ ಪ್ರಯಾಣ ಹೊಸ ಪ್ರವಾಸದ ಕ್ರೇಜ್ಗೆ ನಾಂದಿ ಹಾಡಿದೆ ಎಂದೇ ಹೇಳಬಹುದು.
ಇದೀಗ ಅನೇಕರು ತಾವು ಕೂಡ ಬಾಹ್ಯಾಕಾಶ ಪರಿಶೋಧನಾ ಪ್ರಯಾಣಗಳನ್ನು ಆರಂಭಿಸಲು ಬಯಸಿದ್ದಾರೆ. ಚಂದ್ರನ ಮೇಲ್ಮೈಯಲ್ಲಿ ಮತ್ತುಮಂಗಳ ಗ್ರಹದಲ್ಲಿ ವಸಾಹತು ಸ್ಥಾಪಿಸಲು ಚಿಂತನೆ ಆರಂಭವಾಗಿದೆ. ಆದರೆ ಈ ಪ್ರಯಾಣದ ವೇಳೆ ಮತ್ತು ಅಲ್ಲಿ ತಲುಪಿದ ಬಳಿಕ ಈ ವಿಕಿರಣಗಳ ವಿರುದ್ಧದ ರಕ್ಷಣೆಯು ಬಹಳ ಮುಖ್ಯ. ಹಾಗಿದ್ರೆ ಬಾಹ್ಯಾಕಾಶ ವಿಕಿರಣ ಎಂದರೇನು? ಅದು ಮಾನವ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ.
ಬಾಹ್ಯಾಕಾಶ ವಿಕಿರಣ ಎಂದರೇನು? ಬಾಹ್ಯಾಕಾಶ ವಿಕಿರಣವು ಹೆಚ್ಚಿನ ಶಕ್ತಿಯ ಪ್ರೊಟೋನ್ ಮತ್ತು ಭಾರೀ ಆಯಾನುಗಳ ಹರಿವನ್ನು ಹೊಂದಿರುತ್ತವೆ. ಈ ಅಣುಗಳು ಅತೀ ವೇಗವನ್ನು ಒಳಗೊಂಡಿರುತ್ತವೆ. ಇದನ್ನು ಮತ್ತಷ್ಟು ವೇಗಗೊಂಡರೆ ಕಾಂತೀಯ ಕ್ಷೇತ್ರಗಳ ಪ್ರಭಾವ, ಪರಮಾಣುವಿನಲ್ಲಿರುವ ಎಲೆಕ್ಟ್ರಾ ಶಕ್ತಿಯನ್ನು ಉತ್ಪಾದಿಸುತ್ತದೆ. ಬಾಹ್ಯಾಕಾಶ ವಿಕಿರಣದ ಇನ್ನೊಂದು ಪ್ರಮುಖ ಅಂಶವೆಂದರೆ ಗ್ಯಾಲಟಿಕ್ ಕಾಸ್ಮಿಕ್ ಕಿರಣಗಳು (ಜಿಸಿಆರ್). ಇದು ನಮ್ಮ ಸೌರವ್ಯೂಹದ ಹೊರಗಿನ ಪ್ರದೇಶದಿಂದ ಹುಟ್ಟಿಕೊಂಡಿರುತ್ತವೆ. ಆದರೆ ಕ್ಷೀರಪಥದ ನಕ್ಷತ್ರಪುಂಜದಲ್ಲಿ, ಗ್ಯಾಲಕ್ಸಿಯ ಕಾಸ್ಮಿಕ್ ಕಿರಣಗಳು ಆಲ್ಫಾ ಕಣಗಳು, ಪ್ರೋಟಾ ಬಳಕೆಗಳು ಮತ್ತು ಭಾರೀ ಆಯಾನುಗಳನ್ನು (HZE) ಬಳಸಲಾಗುತ್ತಿದೆ. ಇನ್ನು ಕಕ್ಷಾ ಸಮಯದಲ್ಲಿ ಸಂಚರಿಸುವ ನ್ಯೂಕ್ಲಿಯಸ್ ಗಳ ಸಂಗ್ರಹವಾಗಿದೆ. ಕೆಲವು ಮಿಲಿಯನ್ ವರ್ಷಗಳ ಕಾಲ ಸೂಪರ್ನೋವಾ ಅವಶೇಷಗಳ ಕಾಂತೀಯ ಕ್ಷೇತ್ರಗಳಿಂದ ಇದು ವೇಗವರ್ಧಿತವಾಗಿದೆ.
ಗಗನಯಾತ್ರಿಗಳು ವಿಕಿರಣಗಳಿಗೆ ಹೇಗೆ ಒಗ್ಗಿಕೊಳ್ಳುತ್ತಾರೆ? ವಿಕಿರಣಗಳು ಪರಮಾಣು ಗಾತ್ರದ ಫಿರಂಗಿ ಚೆಂಡಿನಂತೆ ವರ್ತಿಸುವ ಕಣಗಳಿಂತಿರುತ್ತವೆ. ಇದು ಗಗನಯಾತ್ರಿಗಳ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಈ ವಿಕಿರಣಗಳನ್ನು ಮಿಲ್ಲಿ-ಸೀವರ್ಟ್ (mSV) ನಲ್ಲಿ ಅಳೆಯಲಾಗುತ್ತದೆ. ಬಾಹ್ಯಾಕಾಶ ಪ್ರಯಾಣದ ವಳೆ ಗಗನಯಾತ್ರಿಗಳು 50-2,000 ಎಮ್ಎಸ್ಗಳ ನಡುವೆ ಎಲ್ಲಿ ಬೇಕಾದರೂ ವಿಕಿರಣಗಳಿಗೆ ಒಳಗಾಗಬಹುದು. 1 ಎಮ್ಎಸ್ವಿ ವಿಕಿರಣವು ಮೂರು ಎದೆ ಎಕ್ಸ್-ರೇ ಕಿರಣಗಳಿಗೆ ಸಮಾನವಾಗಿರುತ್ತವೆ. ಹೀಗೆ, ಗಗನಯಾತ್ರಿಗಳು ಸುಮಾರು 150-6,000 ಎದೆ ಎಕ್ಸ್-ರೇ ಕಿರಣಗಳ ನಡುವೆ ಇರುತ್ತಾರೆ.
ಆರೋಗ್ಯದ ಮೇಲೆ ವಿಕಿರಣಗಳ ದುಷ್ಪರಿಣಾಮಗಳೇನು? ವಿಕಿರಣಗಳು ಮಾನವರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ನೋಡುವುದಾದರೆ, ಪ್ರಮುಖವಾಗಿ ಅದು ಮಾನವನ ಡಿಎನ್ಎ ಎಳೆಗಳನ್ನೇ ಹಾನಿಗೊಳಿಸುತ್ತದೆ. ಈ ಹಾನಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವಾಗ ಜೀವಕೋಶಗಳು ರೂಪಾಂತರಕ್ಕೆ ಒಳಗಾಗುತ್ತವೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ವಿಕಿರಣಗಳು ಹೃದಯ, ಅಪಧಮನಿಗಳು ಅಥವಾ ರಕ್ತನಾಳಗಳಲ್ಲಿನ ಕೋಶಗಳ ಒಳಪದರಗಳನ್ನು ಹಾನಿಗೊಳಿಸುವುದರ ಮೂಲಕ ಹೃದಯರಕ್ತನಾಳದ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು. ಇದಲ್ಲದೆ ಮನುಷ್ಯನ ಕೇಂದ್ರ ನರಮಂಡಲವನ್ನು ಕೂಡ ಹಾನಿಗೊಳಿಸುತ್ತದೆ.
ನಾಸಾ ವಿಜ್ಞಾನಿಗಳು ಹೇಗೆ ವ್ಯವಹರಿಸುತ್ತಾರೆ? ನಾಸಾ ಬಾಹ್ಯಾಕಾಶ ಪ್ರಯಾಣಿಕರು ಮತ್ತು ಸಂಶೋಧಕರು ಸುರಕ್ಷಿತ ಅಂತರಿಕ್ಷ ಪ್ರಯಾಣಕ್ಕಾಗಿ ಅತ್ಯಂತ ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗುತ್ತಾರೆ. ಅದಕ್ಕಾಗಿಯೇ ಮೀಸಲು ಹ್ಯುಮನ್ ರಿಸೋರ್ಸ್ ಪ್ರೋಗ್ರಾಮ್ (HRP) ಅನ್ನು ಸ್ಥಾಪಿಸಲಾಗಿದೆ. ಈ ಪ್ರೋಗ್ರಾಮ್ನ ಮುಖ್ಯ ಗಮನವು ಮಾನವ ಆರೋಗ್ಯ, ವಾಸ ಯೋಗ್ಯ ಮಾನದಂಡಗಳು, ಪ್ರತಿಕ್ರಮಗಳು ಮತ್ತು ಅಪಾಯಗಳಿಂದ ಪರಾಗುವಿಕೆ ಮತ್ತು ಪರಿಹಾರಗಳನ್ನು ಒಳಗೊಂಡಿರುತ್ತವೆ. ಇವೆಲ್ಲವನ್ನೂ ಪರಿಶೀಲಿಸಿದ ಬಳಿಕ ನಾಸಾ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸುವುದನ್ನು ನಿರ್ಧರಿಸುತ್ತದೆ.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ