ನಿಮಗೆ ಗೊತ್ತಾ ಮಧುಮೇಹದ ಅಪಾಯ ಈ ರಕ್ತದ ಗುಂಪಿನವರಿಗೇ ಜಾಸ್ತಿಯಂತೆ? ನಿಮ್ಮ ಬ್ಲಡ್​ ಗ್ರೂಪ್​ ಯಾವುದು ನೋಡಿಕೊಳ್ಳಿ !

ಒಟ್ಟಿನಲ್ಲಿ ಯಾವುದೇ ಕಾರಣಕ್ಕೆ, ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಈ ಮಧುಮೇಹ ಬರಬಹುದು. ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಹಾಗೂ ಒಮ್ಮೆ ನಿಮ್ಮಲ್ಲಿ ಡಯಾಬಿಟಿಸ್​ ಕಾಣಿಸಿಕೊಂಡರೆ ಜೀವನವೇ ಮುಗಿದುಹೋಯಿತು ಎಂದು ಯಾವ ಕಾರಣಕ್ಕೂ ಭಾವಿಸಬೇಡಿ.

ನಿಮಗೆ ಗೊತ್ತಾ ಮಧುಮೇಹದ ಅಪಾಯ ಈ ರಕ್ತದ ಗುಂಪಿನವರಿಗೇ ಜಾಸ್ತಿಯಂತೆ? ನಿಮ್ಮ ಬ್ಲಡ್​ ಗ್ರೂಪ್​ ಯಾವುದು ನೋಡಿಕೊಳ್ಳಿ !
ಪ್ರಾತಿನಿಧಿಕ ಚಿತ್ರ

ನಮ್ಮ ದೇಶದಲ್ಲಿ ಸುಮಾರು 70 ಮಿಲಿಯನ್​ (7 ಕೋಟಿ) ಜನರು ಮಧುಮೇಹ (Diabetes)ದಿಂದ ಬಳಲುತ್ತಿದ್ದಾರೆ. ಒಂದು ಸಲ ಮಧುಮೇಹ ಬಂದರೆ ಅದು ಜೀವನಪರ್ಯಂತ ಇರುವ ಕಾಯಿಲೆ. ಇದು ನಮ್ಮ ಜೀವನಶೈಲಿ, ಆಹಾರ ಪದ್ಧತಿಯಿಂದಲೇ ಬರುವ ಆರೋಗ್ಯ ಸಮಸ್ಯೆಯಾಗಿದೆ. ಹಾಗೇ, ಒಮ್ಮೆ ಡಯಾಬಿಟಿಸ್​ ಬಂತೆಂದರೆ ಅದನ್ನು ನಿಯಂತ್ರಣದಲ್ಲಿ ಇಡಲು ನಮ್ಮ ಲೈಫ್​ಸ್ಟೈಲ್​ ಬದಲಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

ಆದರೆ ಅಧ್ಯಯನವೊಂದು ಇಂಟರೆಸ್ಟಿಂಗ್​ ವಿಷಯವನ್ನು ಹೊರಹಾಕಿದೆ. 2014ರಲ್ಲಿ ಮಧುಮೇಹಕ್ಕೆ ಸಂಬಂಧಪಟ್ಟ ಅಧ್ಯಯನ ವರದಿಯೊಂದು ದಿ ಯುರೋಪಿಯನ್ ಅಸೋಸಿಯೇಟ್​ ಆಫ್​ ಜರ್ನಲ್​ ಮ್ಯಾಗಜಿನ್​​ನಲ್ಲಿ ಪ್ರಕಟವಾಗಿತ್ತು. ಈ ಅಧ್ಯಯನದ ಪ್ರಕಾರ ಒ (0) ರಕ್ತದ ಗುಂಪಿನ ಜನರಿಗೆ ಮಧುಮೇಹದ ಅಪಾಯ ಕಡಿಮೆಯಂತೆ. ಒ ಹೊರತಾದ ಬೇರೆ ರಕ್ತದ ಗುಂಪು ಹೊಂದಿರುವವರಿಗೆ ಡಯಾಬಿಟಿಸ್​ ರಿಸ್ಕ್​ ಜಾಸ್ತಿ ಎಂದು ಹೇಳಲಾಗಿದೆ.

ರಕ್ತದ ಗುಂಪು ಮತ್ತು ಟೈಪ್ 2 ಡಯಾಬಿಟಿಸ್ ಒಂದಕ್ಕೊಂದು ಹೇಗೆ ತಳುಕು ಹಾಕಿಕೊಂಡಿವೆ ಎಂಬುದನ್ನು ಪತ್ತೆಹಚ್ಚಲು ಸುಮಾರು 80ಸಾವಿರ ಮಹಿಳೆಯರನ್ನು ಅಧ್ಯಯನದಲ್ಲಿ ಒಳಪಡಿಸಿಕೊಳ್ಳಲಾಗಿತ್ತು. ಇವರೆಲ್ಲರೂ ಬೇರೆಬೇರೆ ರಕ್ತದ ಗುಂಪಿನವರಾಗಿದರು. ಇವರಲ್ಲಿ 3553 ಮಹಿಳೆಯರಲ್ಲಿ ಟೈಪ್​ 2 ಡಯಾಬಿಟಿಸ್​ ಇರುವುದು ಪತ್ತೆಯಾಯಿತು ಮತ್ತು ಹೀಗೆ ಡಯಾಬಿಟಿಸ್ ಹೊಂದಿರುವವರಲ್ಲಿ ಹೆಚ್ಚಿನ ಪಾಲು ಒ ಹೊರತಾದ ರಕ್ತದ ಗುಂಪು ಹೊಂದಿರುವವರು ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ.

0 ಬ್ಲಡ್​ ಗ್ರುಪ್​ ಹೊಂದಿರುವ ಮಹಿಳೆಯರಿಗಿಂದ ಎ ರಕ್ತದ ಗುಂಪಿನ ಮಹಿಳೆಯರಲ್ಲಿ ಡಯಾಬಿಟಿಸ್​ ಅಪಾಯ ಶೇ.10ರಷ್ಟು ಜಾಸ್ತಿ ಇರುತ್ತದೆ. ಹಾಗೇ, ಬಿ ರಕ್ತದ ಗುಂಪಿನವರಲ್ಲಿ ಡಯಾಬಿಟಿಸ್​ ರಿಸ್ಕ್​ ಶೇ.21ರಷ್ಟು ಜಾಸ್ತಿ ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. ಹಾಗೇ, ಇದನ್ನು ಒ ನೆಗೆಟಿವ್​ ಬ್ಲಡ್​ ಗ್ರೂಪ್​​ನೊಂದಿಗೂ ಹೋಲಿಕೆ ಮಾಡಿ ನೋಡಲಾಯಿತು. ಕೊನೆಗೂ ಬಿ ಪಾಸಿಟಿವ್​ ಬ್ಲಡ್​ ಗ್ರುಪ್​ನ ಮಹಿಳೆಯರಲ್ಲೇ ಟೈಪ್​ 2 ಡಯಾಬಿಟಿಸ್​ ರಿಸ್ಕ್ ಜಾಸ್ತಿ ಎಂಬುದು ಸ್ಪಷ್ಟವಾಗಿದೆ ಎಂದು ಜರ್ನಲ್​​ ವರದಿ ಮಾಡಿದೆ.

ಬಿ ರಕ್ತದ ಗುಂಪಿನವರಿಗೇ ಅಪಾಯ ಹೆಚ್ಚೇಕೆ?
ರಕ್ತದ ಗುಂಪು ಮತ್ತು ಮಧುಮೇಹಕ್ಕೆ ಇರುವ ಸಂಬಂಧ ಏನು ಎಂಬುದು ಸ್ಪಷ್ಟವಾಗಿ ಇನ್ನೂ ಗೊತ್ತಾಗಿಲ್ಲ. ಆದರೂ ಅಧ್ಯಯನಕಾರರು ಕೆಲವು ಸಾಧ್ಯತೆಗಳನ್ನು ವಿವರಿಸಿದ್ದಾರೆ. ಒ ರಕ್ತದ ಗುಂಪಿಗೆ ಹೋಲಿಸಿದರೆ ಉಳಿದ ಗುಂಪುಗಳ ರಕ್ತದಲ್ಲಿ ಪ್ರೊಟೀನ್​ ಪ್ರಮಾಣ ಜಾಸ್ತಿ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹಜವಾಗಿ ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಬಹುಶಃ ಒ ಅಲ್ಲದ ರಕ್ತದ ಗುಂಪಿನವರಲ್ಲಿ ಟೈಪ್ 2 ಮಧುಮೇಹದ ಅಪಾಯ ಜಾಸ್ತಿ ಇರಬಹುದು ಎಂದು ಅಂದಾಜಿಸಿದ್ದಾರೆ.

ಒಟ್ಟಿನಲ್ಲಿ ಯಾವುದೇ ಕಾರಣಕ್ಕೆ, ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಈ ಮಧುಮೇಹ ಬರಬಹುದು. ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಹಾಗೂ ಒಮ್ಮೆ ನಿಮ್ಮಲ್ಲಿ ಡಯಾಬಿಟಿಸ್​ ಕಾಣಿಸಿಕೊಂಡರೆ ಜೀವನವೇ ಮುಗಿದುಹೋಯಿತು ಎಂದು ಭಾವಿಸದೆ, ಸರಿಯಾದ ಆಹಾರ, ನಿಯಮಿತ ವ್ಯಾಯಾಮಗಳನ್ನು ಅಳವಡಿಸಿಕೊಂಡು ಆರೋಗ್ಯವಾಗಿರಿ.

ಇದನ್ನೂ ಓದಿ: ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು

Health Tips: ಡಯಟ್ ಮಾಡೋಕೆ ಆಗ್ತಿಲ್ಲ ಎಂದು ಚಿಂತೆ ಬೇಡ; ಫಿಟ್​ ಆಗಿ, ಆರೋಗ್ಯಕರವಾಗಿರಲು ಇಷ್ಟೆಲ್ಲ ದಾರಿಗಳಿವೆ ನೋಡಿ..