Brain Ageing: ಮೆದುಳಿಗೆ ದೊಡ್ಡ ಪೆಟ್ಟು ನೀಡಬಹುದು ನಿಮ್ಮ ಜಡ ಜೀವನಶೈಲಿ, ಈ ಬಗ್ಗೆ ಇರಲಿ ಎಚ್ಚರ
ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಆತನ ದೈಹಿಕ ಸಾಮರ್ಥ್ಯದ ಜೊತೆಗೆ ಮೆದುಳಿನ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಇದೇ ಕಾರಣದಿಂದ ವಯಸ್ಸಾದವರಿಗೆ ನೆನಪಿನ ಶಕ್ತಿ ಕುಂಠಿತಗೊಳ್ಳೋದು. ಆದ್ರೆ ಕೆಲವು ಕಾರಣಗಳಿಂದ ಸಣ್ಣ ಪ್ರಾಯದಲ್ಲೇ ಮೆದುಳಿನ ವಯಸ್ಸಾಗುವಿಕೆಯ ಲಕ್ಷಣ ಕಾಣಿಸಿಕೊಳ್ಳಬಹುದು ಎಂದು ಸಂಶೋಧನೆ ತಿಳಿಸಿದೆ. ಹೌದು ಜಡ ಮತ್ತು ಅನಾರೋಗ್ಯಕರ ಜೀವನ ಶೈಲಿಯಿಂದ ಜನರಲ್ಲಿ ಸಣ್ಣ ಪ್ರಾಯದಲ್ಲೇ ಮೆದುಳಿನ ವಯಸ್ಸಾಗುವಿಕೆ ಹೆಚ್ಚಾಗಬಹುದು ಎಂಬ ವಿಚಾರವನ್ನು ಬಹಿರಂಗಪಡಿಸಿದೆ.

ವಯಸ್ಸು (Age) ಹೆಚ್ಚಾಗುತ್ತಾ ಹೋದಂತೆ ಮನುಷ್ಯನ (Human) ದೈಹಿಕ ಸಾಮಾರ್ಥ್ಯ (Physical Strength) ಕೂಡ ಕಡಿಮೆಯಾಗುತ್ತದೆ. ವಯಸ್ಸಾದಂತೆ ದೃಷ್ಟಿ (Eye), ಶ್ರವಣ, ಮೆದುಳಿನ ಸಾಮರ್ಥ್ಯ, ಶಕ್ತಿಯ ಮಟ್ಟ, ಚುರುಕುತನ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ 60 ವರ್ಷ ದಾಟುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು (Health Problem) ಕೂಡಾ ಕಾಣಿಸಿಕೊಳ್ಳುತ್ತದೆ. ಇನ್ನೊಂದು ಏನಪ್ಪಾ ಅಂದ್ರೆ ವಯಸ್ಸು ಹೆಚ್ಚಾದಂತೆ, ಮೆದುಳಿನ (Brain) ಸಾಮರ್ಥ್ಯ ಕುಗ್ಗಿ ಮೆದುಳಿನ ವಯಸ್ಸಾಗುವಿಕೆ (Brain Ageing) ಆಗುವುದರಿಂದ ವಯಸ್ಸಾದವರಲ್ಲಿ ನೆನಪಿನ ಶಕ್ತಿ ಕುಂಠಿತಗೊಳ್ಳುವ, ಮರೆವಿನ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ರೆ ವಯಸ್ಸು ಮಾತ್ರವಲ್ಲ ಕೆಲವೊಂದು ಚಟುವಟಿಕೆಗಳು ವಯಸ್ಸಿಗೆ ಮುಂಚೆಯೇ ಅಂದ್ರೆ ಸಣ್ಣ ಪ್ರಾಯದಲ್ಲಿಯೇ ಜನರಲ್ಲಿ ಮೆದುಳಿನ ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಎಂದು ದಿ ಲ್ಯಾನ್ಸೆಟ್ (The Lancet) ವರದಿ ತಿಳಿಸಿದೆ. ಜಡ ಮತ್ತು ಅನಾರೋಗ್ಯಕರ ಜೀವನಶೈಲಿಯ ಕಾರಣದಿಂದ ಸಣ್ಣ ಪ್ರಾಯದಲ್ಲಿಯೇ ಮೆದುಳಿನ ಆಯಸ್ಸು ಕಡಿಮೆಯಾಗುತ್ತದೆ ಎಂಬ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದೆ.
ಮೆದುಳಿನ ವಯಸ್ಸಾಗುವಿಕೆ ಎಂದರೇನು?
ಸರಳವಾಗಿ ಹೇಳುವುದಾದರೆ ವಯಸ್ಸಾದಂತೆ ಮನುಷ್ಯನ ಮೆದುಳಿನ ಕಾರ್ಯ, ಸಾಮರ್ಥ್ಯ ಮತ್ತು ರಚನೆಯಲ್ಲಿ ಕುಸಿತ ಕಾಣುವುದೇ ಮೆದುಳಿನ ವಯಸ್ಸಾಗುವಿಕೆಯಾಗಿದೆ. ಮೆದುಳು ಪ್ರತಿ ಸೆಕೆಂಡಿಗೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಹೊಸ ನರ ಸಂಪರ್ಕಗಳನ್ನು ರೂಪಿಸುತ್ತದೆ. ಜೊತೆಗೆ ಆರನೇ ವಯಸ್ಸಿಗೆ ಮತ್ತು ಪ್ರೌಢಾವಸ್ಥೆಯಲ್ಲಿ ಮೆದುಳಿನ ಗಾತ್ರವು ಅದರ ಪರಿಮಾಣದ ಸುಮಾರು 90% ಕ್ಕೆ ಹೆಚ್ಚಾಗುತ್ತದೆ. ಮತ್ತು 30 ರಿಂದ 40 ನೇ ವಯಸ್ಸಿಗೆ ಮೆದುಳಿನ ಸಾಮರ್ಥ್ಯ ಕುಗ್ಗಲು ಪ್ರಾರಂಭಿಸುತ್ತದೆ ಮತ್ತು 60 ವರ್ಷಗಳ ನಂತರ ಮೆದುಳಿನ ಸಾಮರ್ಥ್ಯ ಕುಗ್ಗುವಿಕೆಯ ಪ್ರಮಾಣ ಹೆಚ್ಚಾಗುತ್ತದೆ. ಇದುವೇ ಮೆದುಳಿನ ವಯಸ್ಸಾಗುವಿಕೆ.
ಆಘಾತಕಾರಿ ಸಂಗತಿಯೇನೆಂದರೆ ವಯಸ್ಸು ಮಾತ್ರವಲ್ಲ ಜಡ ಮತ್ತು ಅನಾರೋಗ್ಯಕರ ಜೀವನಶೈಲಿಯು ಮೆದುಳಿನ ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ ಎಂದು ದಿ ಲ್ಯಾನ್ಸೆಟ್ ವರದಿ ತಿಳಿಸಿದೆ. ಜಡ ಮತ್ತು ಅನಾರೋಗ್ಯಕರ ಜೀವನಶೈಲಿಯು ವಯಸ್ಸಿಗಿಂತ ಮುಂಚೆಯೇ ಮೆದುಳಿನ ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ ಎಂಬುದನ್ನು ಸಂಶೋದಕರು ಕಂಡುಕೊಂಡಿದ್ದಾರೆ ಎಂದು ದಿ ಲ್ಯಾನ್ಸೆಟ್ ವರದಿ ತಿಳಿಸಿದೆ.
ಇದನ್ನೂ ಓದಿ: ಇಲ್ಲಿಗಿಂತ ಭಾರತದ ಜೀವನ ಗುಣಮಟ್ಟ ಉತ್ತಮವಾಗಿದೆ; ಕೆನಡಾ ಬಿಟ್ಟು ತಾಯ್ನಾಡಿಗೆ ವಾಪಸಾಗಲು ನಿರ್ಧರಿಸಿದ ಅನಿವಾಸಿ ಭಾರತೀಯ
ಮೆದುಳಿನ ವಯಸ್ಸಾಗುವಿಕೆಯನ್ನು ತಡೆಗಟ್ಟುವುದು ಹೇಗೆ?
ಅನಾರೋಗ್ಯಕರ ಮತ್ತು ಜಡ ಜೀವನಶೈಲಿಯೇ ಮೆದುಳಿನ ವಯಸ್ಸಾಗುವಿಕೆಗೆ ಕಾರಣ. ಹೀಗಿರುವಾಗ ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆ, ಹೃದಯರಕ್ತನಾಳಗಳ ಫಿಟ್‌ನೆಸ್ (CRF), ಆರೋಗ್ಯಕರ ಜೀವನಶೈಲಿಯ ಪಾಲನೆ, ಆರೋಗ್ಯಕರ ಆಹಾರ ಸೇವನೆ ಈ ಎಲ್ಲದರ ಮೂಲಕ ಮೆದುಳಿನ ವಯಸ್ಸಾಗುವಿಕೆಯ ಲಕ್ಷಣವನ್ನು ಕಡಿಮೆ ಮಾಡಬಹುದು. ಮತ್ತು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ