Chanakya Niti: ವಿದ್ಯಾರ್ಥಿಗಳು ಈ ಅಭ್ಯಾಸಗಳನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ಶಿಕ್ಷಣವಿಲ್ಲದೆ, ಒಬ್ಬ ವ್ಯಕ್ತಿಯು ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ, ಪ್ರತಿಯೊಬ್ಬರೂ ಸರಿಯಾದ ಜ್ಞಾನವನ್ನು ಪಡೆಯಬೇಕು, ವಿದ್ಯೆ ಕಲಿಯಬೇಕು ಎಂದಿದ್ದಾರೆ. ಅದೇ ರೀತಿ ವಿದ್ಯೆ ಕಲಿಯುವ ವಿದ್ಯಾರ್ಥಿಗಳು ಈ ಒಂದಷ್ಟು ಅಭ್ಯಾಸಗಳನ್ನು ತ್ಯಜಿಸಬೇಕು. ಇಲ್ಲದಿದ್ದರೆ ಜೀವನದಲ್ಲಿ ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಹಾಗಿದ್ದರೆ ವಿದ್ಯಾರ್ಥಿಗಳು ಯಾವೆಲ್ಲಾ ಅಭ್ಯಾಸಗಳನ್ನು ತ್ಯಜಿಸಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ವಿದ್ಯಾರ್ಥಿಗಳು ಈ ಅಭ್ಯಾಸಗಳನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿ
Image Credit source: Pinterest

Updated on: Oct 18, 2025 | 10:09 AM

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಯಲ್ಲಿ ಮಾನವಕುಲದ ಕಲ್ಯಾಣಕ್ಕಾಗಿ ಅಗತ್ಯವಾಗಿ ಬೇಕಾಗಿರುವಂತಹ ಅನೇಕ ವಿಚಾರಧಾರೆಗಳನ್ನು ತಿಳಿಸಿಕೊಟ್ಟಿದ್ದಾರೆ. ಜೀವನದಲ್ಲಿ ಯಶಸ್ಸು ಸಾಧಿಸಲು ಏನು ಮಾಡಬೇಕು, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು, ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಪತಿ ಪತ್ನಿಯರು ಹೇಗಿರಬೇಕು ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಂತಹ ಚಾಣಕ್ಯರು, ಜ್ಞಾನ ಪಡೆಯುವುದು ಏಕೆ ಮುಖ್ಯ, ಯಶಸ್ಸನ್ನು ಸಾಧಿಸಲು ಶಿಕ್ಷಣ ವಹಿಸುವ ಪಾತ್ರದ ಬಗ್ಗೆಯೂ ವಿವರಿಸಿದ್ದಾರೆ. ಜೊತೆಗೆ ವಿದ್ಯೆ ಪಡೆಯುವ ವಿದ್ಯಾರ್ಥಿಗಳು ಒಂದಷ್ಟು ಅಭ್ಯಾಸಗಳನ್ನು ತ್ಯಜಿಸಬೇಕು, ಇಲ್ಲದಿದ್ದರೆ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಿದ್ದಾರೆ. ಹಾಗಿದ್ರೆ ವಿದ್ಯಾರ್ಥಿಗಳು ಯಾವೆಲ್ಲಾ ಅಭ್ಯಾಸಗಳನ್ನು ತ್ಯಜಿಸಬೇಕು ಎಂಬುದನ್ನು ನೋಡೋಣ ಬನ್ನಿ.

ವಿದ್ಯಾರ್ಥಿಗಳು ತ್ಯಜಿಸಬೇಕಾದ ಅಭ್ಯಾಸಗಳು ಯಾವುವು?

ವಿದ್ಯಾರ್ಥಿಗಳು ಕೋಪ ಬಿಡಬೇಕು: ಆಚಾರ್ಯ ಚಾಣಕ್ಯರು ಕೋಪವನ್ನು ವ್ಯಕ್ತಿಯ ಬಹು ದೊಡ್ಡ ಶತ್ರು ಎಂದು ಹೇಳಿದ್ದಾರೆ.  ಇವರು ಹೇಳುವಂತೆ ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಅವನು ತನ್ನ ಕೋಪವನ್ನು ಜಯಿಸಬೇಕು. ಸಮಯಕ್ಕೆ ಸರಿಯಾಗಿ ಕೋಪವನ್ನು ಜಯಿಸದಿದ್ದರೆ, ನೀವು ಜೀವನದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ದೇಹ ಅಲಂಕಾರ ತ್ಯಜಿಸುವುದು: ವಿದ್ಯಾರ್ಥಿಯ ಮೇಕಪ್‌, ಫ್ಯಾಶನ್‌, ತನ್ನನ್ನು ತಾನು ಹೆಚ್ಚು ಅಂದಗೊಳಿಸುವಂತೆ ಕಾಣಿಸುವ ಬಯಕೆಯು ಶಿಕ್ಷಣದ ಬಯಕೆಯನ್ನು ಮೀರಿದರೆ, ಅಂತಹ ವಿದ್ಯಾರ್ಥಿ  ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅಂತಹ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕಿಂತ ತಮ್ಮ ದೈಹಿಕ ಸೌಂದರ್ಯದ ಮೇಲೆ ಹೆಚ್ಚು ಗಮನಹರಿಸುತ್ತಾರೆ.  ನೀವು ಯಶಸ್ವಿಯಾಗಲು ಬಯಸಿದರೆ, ವಿದ್ಯಾರ್ಥಿಗಳು ಈ ಆಸೆಯನ್ನು ತ್ಯಜಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಇದನ್ನೂ ಓದಿ
ಚಾಣಕ್ಯರ ಪ್ರಕಾರ ಈ ಅಭ್ಯಾಸಗಳಿರುವ ಜನ ಮಾತ್ರ ಶ್ರೀಮಂತರಾಗುತ್ತಾರಂತೆ
ಇಂತಹ ಸ್ನೇಹಿತರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ
ಈ ನಾಲ್ಕು ಕೆಲಸಗಳನ್ನು ಏಕಾಂತದಲ್ಲಿರುವಾಗಲೇ ಮಾಡಿದರೆ ಒಳ್ಳೆಯದಂತೆ
ನಾಯಿಯಿಂದ ಮನುಷ್ಯ ಕಲಿಯಬೇಕಾದ ಜೀವನ ಪಾಠಗಳಿವು

ಇದನ್ನೂ ಓದಿ:  ಚಾಣಕ್ಯರ ಪ್ರಕಾರ ಅಭ್ಯಾಸಗಳಿರುವ ಜನ ಮಾತ್ರ ಶ್ರೀಮಂತರಾಗುತ್ತಾರಂತೆ

ನಿದ್ರೆಯನ್ನು ತ್ಯಾಗ ಮಾಡಬೇಕು: ಚಾಣಕ್ಯ ನೀತಿಯ ಪ್ರಕಾರ,  ದಿನವಿಡೀ ಮಲಗುವ ಅಭ್ಯಾಸ ಹೊಂದಿರುವ ಹಾಗೂ ಹೆಚ್ಚು ಹೊತ್ತು ಮಲಗುವ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲವಂತೆ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ನಿದ್ರೆಯನ್ನು ತ್ಯಜಿಸಿ  ಅಧ್ಯಯನದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ಎಂದಿದ್ದಾರೆ. ಜೊತೆಗೆ ಸೋಮಾರಿತನವನ್ನು ತ್ಯಜಿಸುವುದು ಕೂಡ ಅತ್ಯಗತ್ಯ.

ದುರಾಸೆಯನ್ನು ತ್ಯಜಿಸುವುದು: ಜೀವನದಲ್ಲಿ ಯಶಸ್ಸನ್ನು ಸಾಧಿಸಲು, ಒಬ್ಬ ವಿದ್ಯಾರ್ಥಿಯು ದುರಾಸೆಯನ್ನು ತ್ಯಜಿಸಬೇಕು. ದುರಾಸೆಯನ್ನು ಹೊಂದಿರುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಯಶಸ್ಸಿನ ಮೊದಲ ಹೆಜ್ಜೆಯೇ ದುರಾಸೆಯನ್ನು ತ್ಯಜಿಸುವುದು ಎಂದು ಅವರು ಹೇಳುತ್ತಾರೆ. ಜೊತೆಗೆ ವಿದ್ಯಾರ್ಥಿಯಾದವನಿಗೆ ಅಹಂಕಾರ ಕೂಡ ಇರಬಾರದು. ಏಕೆಂದರೆ ಈ ಅಹಂಕಾರ ಆತನನ್ನೇ ನಾಶ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ