ಟಿವಿ, ಮೊಬೈಲ್ ನೋಡುವುದರಿಂದ ಮಕ್ಕಳ ಯೋಚನಾ ಶಕ್ತಿ ಕಡಿಮೆಯಾಗಬಹುದು ಎಚ್ಚರ!

2021ರ ಕಾಮನ್ ಸೆನ್ಸ್ ಮೀಡಿಯಾ ವರದಿಯು 10-14 ವರ್ಷದೊಳಗಿನ ಮಕ್ಕಳು ಪ್ರತಿದಿನ ಸರಾಸರಿ 5 ಗಂಟೆ 33 ನಿಮಿಷಗಳನ್ನು ಟಿವಿ, ಮೊಬೈಲ್ ಆಧಾರಿತ ಮನರಂಜನೆಗಾಗಿ ಕಳೆಯುತ್ತಾರೆ. ಆದರೆ ಹದಿಹರೆಯದವರು 8 ಗಂಟೆ 39 ನಿಮಿಷಗಳನ್ನು ಇದಕ್ಕಾಗಿ ಮೀಸಲಿಡುತ್ತಾರೆ ಎಂದು ತಿಳಿಸಿದೆ.

ಟಿವಿ, ಮೊಬೈಲ್ ನೋಡುವುದರಿಂದ ಮಕ್ಕಳ ಯೋಚನಾ ಶಕ್ತಿ ಕಡಿಮೆಯಾಗಬಹುದು ಎಚ್ಚರ!
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 18, 2023 | 11:30 AM

ಮಕ್ಕಳು ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಂಡರೆ ಅದನ್ನು ಬಿಡಿಸುವುದು ಬಹಳ ಕಷ್ಟ. ಅದರಲ್ಲೂ ಟಿವಿ, ಮೊಬೈಲ್ ಎಂದರೆ ಮಕ್ಕಳಿಗೆ ಬಹಳ ಇಷ್ಟ. ಆದರೆ, ಇವುಗಳನ್ನು ನೋಡುವುದರಿಂದ ಮಕ್ಕಳ ಕಣ್ಣಿಗೆ ಮಾತ್ರವಲ್ಲ ಮೆದುಳಿನ ಆರೋಗ್ಯಕ್ಕೂ ಅಪಾಯಕಾರಿ ಎಂದು ನಿಮಗೆ ಗೊತ್ತಾ? ಮೊಬೈಲ್, ಟಿವಿ ಸ್ಕ್ರೀನ್ ನೋಡುವ ಮಕ್ಕಳ ಯೋಚನಾ ಶಕ್ತಿ ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ವಿಜ್ಞಾನಿಗಳು ಮತ್ತು ಸಂಶೋಧಕರ ಗುಂಪು ಫೋನ್‌ಗಳು ಮತ್ತು ಟಿವಿಗಳಂತಹ ಸ್ಕ್ರೀನ್​ಗಳನ್ನು ನೋಡುವ ಮಕ್ಕಳ ಕುರಿತು ಅನೇಕ ಅಧ್ಯಯನಗಳನ್ನು ನಡೆಸಿದೆ. ಅದರಿಂದ ವಿಭಿನ್ನ ಫಲಿತಾಂಶಗಳನ್ನು ಕಂಡುಕೊಂಡಿದೆ. ಸ್ಕ್ರೀನಿಂಗ್ ಸಮಯವು ಮಕ್ಕಳ ಆರೋಗ್ಯ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ನೋಡಲು ಅವರು ಈ ಅಧ್ಯಯನ ನಡೆಸಿದ್ದರು.

ಈ ಅಧ್ಯಯನದ ಫಲಿತಾಂಶವನ್ನು ನೋಡಿದಾಗ, ಮಕ್ಕಳ ಮೇಲೆ ಮೊಬೈಲ್, ಟಿವಿ ಪ್ರಭಾವವು ಮಿಶ್ರಣವಾಗಿದೆ ಎಂದು ಕಂಡುಬಂದಿದೆ. ಉದಾಹರಣೆಗೆ, ವಯಸ್ಕರು ಟಿವಿ, ಮೊಬೈಲ್ ನೋಡದಿದ್ದರೆ ಮಕ್ಕಳು ಕೂಡ ನೋಡುವ ಸಾಧ್ಯತೆ ಕಡಿಮೆ. ಹಾಗೇ, ಟಿವಿ, ವಿಡಿಯೋ ಗೇಮ್, ಮೊಬೈಲ್​ನಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳ ಶಾಲೆಯಲ್ಲಿ ಅವರು ಹೆಚ್ಚು ಆ್ಯಕ್ಟಿವ್ ಆಗಿರುವುದಿಲ್ಲ ಎಂದು ಕೂಡ ಕಂಡುಬಂದಿದೆ.

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಪೌಷ್ಟಿಕಾಂಶದ ಕೊರತೆಗಳೇನು? ಅದನ್ನು ತಡೆಯುವುದು ಹೇಗೆ?

ಈ ಫಲಿತಾಂಶಗಳನ್ನು ನೇಚರ್ ಹ್ಯೂಮನ್ ಬಿಹೇವಿಯರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. 2021ರ ಕಾಮನ್ ಸೆನ್ಸ್ ಮೀಡಿಯಾ ವರದಿಯು 10-14 ವರ್ಷದೊಳಗಿನ ಮಕ್ಕಳು ಪ್ರತಿದಿನ ಸರಾಸರಿ 5 ಗಂಟೆ 33 ನಿಮಿಷಗಳನ್ನು ಟಿವಿ, ಮೊಬೈಲ್ ಆಧಾರಿತ ಮನರಂಜನೆಗಾಗಿ ಕಳೆಯುತ್ತಾರೆ. ಆದರೆ ಹದಿಹರೆಯದವರು 8 ಗಂಟೆ 39 ನಿಮಿಷಗಳನ್ನು ಇದಕ್ಕಾಗಿ ಮೀಸಲಿಡುತ್ತಾರೆ ಎಂದು ತಿಳಿಸಿದೆ.

ಇದನ್ನೂ ಓದಿ: ನಿಮ್ಮ ಮಗುವಿನ ಹೊಟ್ಟೆ ತುಂಬಿದೆಯೇ ಎಂದು ತಿಳಿಯುವುದು ಹೇಗೆ?

ಡಿಸಾರ್ಡರ್ಡ್ ಸ್ಕ್ರೀನ್ ಬಳಕೆ ಎಂದರೆ ಡ್ಯುಯಲ್ ಎಫೆಕ್ಟ್ ಸ್ಕ್ರೀನ್ ಬಳಕೆ ನಮ್ಮ ಮೆದುಳಿನ ಮೇಲೆ ಬೀರುತ್ತದೆ. ಇದರಿಂದ ಮಕ್ಕಳು ಯಾವುದೇ ವಿಚಾರವನ್ನೂ ಯೋಚಿಸುವ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ. ಟಿವಿಯಲ್ಲಿ ಬರುವ ಅಂಶಗಳು ಮಕ್ಕಳ ಯೋಚನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ