ಕೊರೋನಾ ಬಿಟ್ರೂ ಮೊಬೈಲ್ ಬಿಡ್ತಿಲ್ಲ, ಮೊಬೈಲ್ ದಾಸರಾಗಿರೋ ಮಕ್ಕಳು

ಪ್ರಸ್ತುತ ಮಕ್ಕಳು ಮೊಬೈಲ್​​ಗೆ ಅಡಿಕ್ಟ್ ಆಗಿದ್ದು, ಮಕ್ಳಳ ಮೊಬೈಲ್ ಚಟ ಬಿಡಿಸೋದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದ್ದು, ಈ ಬಗ್ಗೆ ವೈದ್ಯರು ಹೇಳುವುದೇನು. ಇಲ್ಲಿದೆ ವರದಿ

ಕೊರೋನಾ ಬಿಟ್ರೂ ಮೊಬೈಲ್ ಬಿಡ್ತಿಲ್ಲ, ಮೊಬೈಲ್ ದಾಸರಾಗಿರೋ ಮಕ್ಕಳು
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 04, 2022 | 10:50 PM

ಬೆಂಗಳೂರು: ಮಕ್ಕಳು ಮೊಬೈಲ್ ಮುಟ್ಟಿದರೇ ರೇಗಾಡುತ್ತಿದ್ದ ಪೋಷಕರು, ಕೋವಿಡ್ ಕಾಲದಲ್ಲಿ ತಾವೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟರು. ಸರ್ಕಾರ ಸಹ ಆನ್ಲೈನ್ ಕ್ಲಾಸ್ ಅಂತ ಸಿಕ್ಕಾಪಟ್ಟೆ ಹೈಪ್ ಕೊಟ್ಟಿತು. ಆದರೆ ಈಗ ಇದರ ಎಫೆಕ್ಟ್ ಸರಿಹೋಗೋ ಲಕ್ಷಣ ಕಾಣಿಸುತ್ತಿಲ್ಲ. ಮಕ್ಕಳು ಮೊಬೈಲ್​​ಗೆ ಅಡಿಕ್ಟ್ ಆಗಿದ್ದು, ಮಕ್ಳಳ ಮೊಬೈಲ್ ಚಟ ಬಿಡಿಸೋದು ವೈದ್ಯರಿಗೊಂದು ಸವಾಲಾಗಿ ಪರಿಣಮಿಸಿದೆ.

ಕಲಿಕಾ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ, ಡ್ರಗ್ ನಷ್ಟೇ ಅಪಾಯಕಾರಿ

ಕೋವಿಡ್ ಕಾಲದಲ್ಲಿ ಮಕ್ಕಳು ಮೊಬೈಲಿನಲ್ಲೇ ಮುಳುಗಿದರೂ ಪೋಷಕರು ಚಿಂತೆ ಮಾಡುತ್ತಿರಲಿಲ್ಲ. ಮಕ್ಕಳು ಆನ್ಲೈನ್ ತರಗತಿ ಮೂಲಕ ಕಲಿತು ಗುಡ್ಡೆ ಹಾಕುತ್ತಾರೆ ಎಂದು ಅಂದ್ಕೊಂಡಿದ್ದರು. .ಆದರೆ ಈಗ ಅದೇ ಮೊಬೈಲ್ ಮಕ್ಕಳ ಕಲಿಕಾ ಸಾಮರ್ಥ್ಯವನ್ನೇ ಕಿತ್ತುಕೊಂಡಿದೆ. ನಿಜ, ಈಗಾಗಲೇ ಆನ್ಲೈನ್ ತರಗತಿ ಯುಗ ಮುಗಿದು ಮತ್ತೆ ರೆಗ್ಯುಲರ್ ಕ್ಲಾಸ್​​ಗಳು ಆರಂಭವಾಗಿ ಏಳೆಂಟು ತಿಂಗಳು ಕಳೆದಿದೆ. ಆದರೆ ಮಕ್ಕಳು ಮಾತ್ರ ಮೊಬೈಲ್​ನಿಂದ ಹೊರ ಬರುವ ಲಕ್ಷಣಕಾಣಿಸುತ್ತಿಲ್ಲ. ಅದರಲ್ಲೂ 12 ರಿಂದ 18 ವರ್ಷದ ಮಕ್ಕಳೇ ಹೆಚ್ಚಾಗಿ ಮೊಬೈಲ್ ದಾಸರಾಗುತ್ತಿದ್ದು, ಇದು ಈ ಬಾರಿಯ ಕಲಿಕೆಯ ಮೇಲೆ ಪರಿಣಾಮ ಬರಲಾರಂಭಿಸಿದೆ. ಮಕ್ಕಳು ಓದಿನ ಬಗ್ಗೆ ಗಮನ ಹರಿಸದೇ ವೀಡಿಯೋ ಗೇಮ್, ಸೋಷಿಯಲ್ ಮೀಡಿಯಾ ಅಂತ ಕಾಲಕಳೆಯೋಕೆ ಇಷ್ಟಪಡುತ್ತಿದ್ದಾರೆ.

ಜೊತೆಗೆ ಹೊರಾಂಗಣ ಆಟಗಳಿಗಿಂತ ಹೆಚ್ಚಾಗಿ ಮೊಬೈಲ್ ಗೇಮ್​​ಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ಈ ಸ್ಥಿತಿಯಿಂದ ಹೊರ ತರೋದು ದೊಡ್ಡ ಸವಾಲಿನ ಕೆಲಸವಾಗಿದೆ ಅಂತಾರೇ ಹಿರಿಯ ಮನೋವೈದ್ಯ ಡಾ. ಗಿರೀಶ್.

ಇನ್ನು ವೈದ್ಯರ ಬಳಿಯೂ ನಿತ್ಯ ಹತ್ತಾರು ಕೇಸ್​​ಗಳು ಬರುತ್ತಿವೆ. ಮಕ್ಕಳನ್ನು ಮೊಬೈಲ್ ಅಡಿಕ್ಷನ್ ಮಾಡಿಸೋದು ವೈದ್ಯರಿಗೂ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ನಿಮಾನ್ಸ್​​ನಲ್ಲಿ ಮೊಬೈಲ್ ಅಡಿಕ್ಷನ್ ಕ್ಯಾಂಪ್​​ಗಳನ್ನು ಆರಂಭಿಸಲಾಗಿದೆ. ಇನ್ನು ವಾರಕ್ಕೊಂದು ದಿನ ಮಕ್ಕಳಿಗೆ ಮೊಬೈಲ್ ಮುಕ್ತ ದಿನವನ್ನಾಗಿ ಆಚರಿಸಲು ಚೈಲ್ಡ್ ರೈರ್ಟ್ಸ್ ಕಮಿಷನ್ ಆಗ್ರಹಿಸಿದೆ. ಸದ್ಯ ಮೊಬೈಲ್ ಬಳಕೆ ಬಗ್ಗೆ ಪೋಷಕರು ನಿಗಾವಹಿಸಬೇಕು. ಇದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ ಎನ್ನುತ್ತಿದ್ದಾರೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೇ ಅಂಜಲಿ ರಾಮಣ್ಣ ಹೇಳಿದ್ದಾರೆ.

KC ಜನರಲ್ ವೈದ್ಯರು ಹೇಳೋದೇನು.!?

  1. ಪ್ರತಿ ದಿನ KC ಜನರಲ್ ಆಸ್ಪತ್ರೆ 6 ರಿಂದ‌ 8 ಪ್ರಕರಣ ದಾಖಲು
  2. ಕಳೆದ 7 ತಿಂಗಳಲ್ಲಿ 50ಕ್ಕೂ ಅಧಿಕ ಮಕ್ಕಳಿಗೆ ಈ ಸಂಬಂಧ ಕೌನ್ಸಿಲಿಂಗ್
  3. ಈ ಪೈಕಿ 12 ರಿಂದ 18 ವಯಸ್ಸಿನ ವಯೋಮಿತಿಯ ಮಕ್ಕಳೇ ಹೆಚ್ಚು
  4. ಆಗಸ್ಟ್ ನಲ್ಲಿ ಎರಡು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದಾಖಲು
  5. ಮಕ್ಕಳನ್ನು ವಾಸ್ತವ ಬದುಕಿನಿಂದ ಭ್ರಮೆಗೆ ತಳ್ಳುತ್ತಿರುವ ಮೊಬೈಲ್ ಚಟ

ಈ ರೀತಿಯ ಮಕ್ಕಳಿಗೆ ನೀಡಲಾಗುವ ಟ್ರೀಟ್ಮೆಂಟ್ ಏನು.!?

  1. ಸೈಕೊ ಥೆರಾಪಿ
  2. ಡಿಜಿಟಲ್ ಡಿಟಾಕ್ಸಿಫಿಕೇಷನ್
  3. ಫಾರ್ಮೊಕಲಾಜಿಕಲ್ ಟ್ರೀಟ್ಮೆಂಟ್

ಒಟ್ಟಾರೆ ಚಿಕ್ಕ ಮಕ್ಕಳ ಮೇಲೆ ಮೊಬೈಲ್ ತೀರಾ ದುಷ್ಪರಿಣಾಮ ಬೀರ್ತಿದೆ. ಮಕ್ಕಳ ಮಿಟ್ಟರ್ಮ್ ಎಕ್ಸಾಂ ಹಾಗೂ ಟೆಸ್ಟ್ ರಿಲಸ್ಟ್ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಮಕ್ಕಳ ಮೊಬೈಲ್ ಡಿಅಡಿಕ್ಷನ್ ಸದ್ಯ ವೈದ್ಯಕೀಯ ಲೋಕಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

ವರದಿ-ಕಿರಣ್ ಸೂರ್ಯ ಟಿವಿ9 ಬೆಂಗಳೂರು

Published On - 10:50 pm, Fri, 4 November 22