AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chocolate Breakfast: ಚಾಕೊಲೇಟ್ ರುಚಿಯೊಂದಿಗಿನ ಬೆಳಗಿನ ಸಿಂಪಲ್​​ ಉಪಹಾರ ತಯಾರಿಸಿ

ನಿಮ್ಮ ದಿನವನ್ನು ಆರೋಗ್ಯಕರವಾಗಿ ಸಿಹಿಯೊಂದಿಗೆ ಪ್ರಾರಂಭಿಸಿ. ನೀವೂ ಇದಕ್ಕಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಕೇವಲ ಹತ್ತು ನಿಮಿಷದಲ್ಲಿ ನೀವು ಹಾಟ್ ಚಾಕೊಲೇಟ್ ಬೌಲ್ ತಯಾರಿಸಬಹುದು.

Chocolate Breakfast: ಚಾಕೊಲೇಟ್ ರುಚಿಯೊಂದಿಗಿನ ಬೆಳಗಿನ ಸಿಂಪಲ್​​ ಉಪಹಾರ ತಯಾರಿಸಿ
ಅಕ್ಷತಾ ವರ್ಕಾಡಿ
|

Updated on: Jan 23, 2023 | 7:30 AM

Share

ನಿಮ್ಮ ದಿನವನ್ನು ಚಾಕೊಲೇಟ್ ರುಚಿಯೊಂದಿಗೆ ಪ್ರಾರಂಭಿಸಲು ಬಯಸಿದ್ದೀರಾ? ಆದರೆ ಸಾಮಾನ್ಯ ಶೇಕ್ ಅಥವಾ ಸ್ಮೂಥಿ ಸವಿಯಲು ಇಷ್ಟವಿಲ್ಲದಿದ್ದರೆ, ಈ ಸಿಂಪಲ್ ರೆಸಿಪಿ ತಯಾರಿಸಿ. ಹಾಟ್ ಚಾಕೊಲೇಟ್ ಬೌಲ್ ಹಾಲಿನಿಂದ ಮಾಡುವ ರೆಸಿಪಿಯಾಗಿದ್ದು, ಇದು ನಿಮ್ಮ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಈ ಚಾಕೊಲೇಟ್ ಉಪಹಾರವನ್ನು ಇನ್ನಷ್ಟು ಆರೋಗ್ಯಕರವಾಗಿಸಲು ನೀವು ಓಟ್ಸ್, ಹಣ್ಣುಗಳು, ಡ್ರೈ ಫ್ರೂಟ್ಸ್​​ ಸೇರಿಸಬಹುದು. ಆದ್ದರಿಂದ ನಿಮ್ಮ ದಿನವನ್ನು ಆರೋಗ್ಯಕರವಾಗಿ ಸಿಹಿಯೊಂದಿಗೆ ಪ್ರಾರಂಭಿಸಿ. ನೀವೂ ಇದಕ್ಕಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಕೇವಲ ಹತ್ತು ನಿಮಿಷದಲ್ಲಿ ನೀವು ಹಾಟ್ ಚಾಕೊಲೇಟ್ ಬೌಲ್ ತಯಾರಿಸಬಹುದು.

ಹಾಟ್ ಚಾಕೊಲೇಟ್ ಬೌಲ್ ರೆಸಿಪಿ:

ಹಾಟ್ ಚಾಕೊಲೇಟ್ ಬೌಲ್​​ಗೆ ಬೇಕಾಗುವ ಸಾಮಾಗ್ರಿಗಳು:

2 ಚಮಚ ಕೋಕೋ ಪೌಡರ್ 1/2 ಕಪ್ ಫ್ರೆಶ್ ಕ್ರೀಮ್​​ 3 ಚಮಚ ಬಾದಾಮಿ ಚೂರುಗಳು 2 ಚಮಚ ತೆಂಗಿನ ತುರಿ 1/4 ಕಪ್ ಡಾರ್ಕ್ ಚಾಕೊಲೇಟ್ 1ಕಪ್ ಪೂರ್ಣ ಕೆನೆ ಹಾಲು 1 ಚಮಚ ಜೋಳದ ಹಿಟ್ಟು 1 ಬಾಳೆಹಣ್ಣು 2 ಚಮಚ ಸಕ್ಕರೆ 2 ದಾಲ್ಚಿನ್ನಿ

ಇದನ್ನೂ ಓದಿ: ಬೆಳ್ಳುಳ್ಳಿಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದಿದೆಯೇ?

ಹಾಟ್ ಚಾಕೊಲೇಟ್ ಬೌಲ್ ಮಾಡುವ ವಿಧಾನ:

ಹಂತ 1 ಹಾಲು ಕುದಿಸಿ:

ಈ ಸುಲಭ ಉಪಹಾರ ಪಾಕವಿಧಾನವನ್ನು ಪ್ರಾರಂಭಿಸಲು, ಒಂದು ಪಾತ್ರೆ ಅಥವಾ ಪ್ಯಾನ್ ತೆಗೆದುಕೊಂಡು ಹಾಲನ್ನು ಸೇರಿಸಿ. ಹಾಲು ಕುದಿಬರುತ್ತಿದ್ದಂತೆ ಅದಕ್ಕೆ ಡಾರ್ಕ್ ಚಾಕೊಲೇಟ್ ಸೇರಿಸಿ ತಳ ಹಿಡಿಯದಂತೆ ಚೆನ್ನಾಗಿ ಕುದಿಸಿ.

ಹಂತ 2 ಕೋಕೋ ಪೌಡರ್ ಸೇರಿಸಿ:

ಹಾಲು ಕುದಿಯುತ್ತಿರುವಾಗಲೇ ಅದಕ್ಕೆ ಕೋಕೋ ಪೌಡರ್ ಹಾಕಿ ಬೆರೆಸಿ. ಜೊತೆಗೆ ಜೋಳದ ಹಿಟ್ಟು ಸೇರಿಸಿ. ಈ ಮಿಶ್ರಣ ಉಂಡೆಗಟ್ಟದಂತೆ ಕೈಯಾಡಿಸುತ್ತಾ ಇರಿ. ಜೊತೆಗೆ ತಳ ಹಿಡಿಯದಂತೆ ನೋಡಿಕೊಳ್ಳಿ.

ಹಂತ 3 ಚೆನ್ನಾಗಿ ಬೆರೆಸಿ:

ನಂತರ ಇದಕ್ಕೆ ಫ್ರೆಶ್ ಕ್ರೀಮ್​​, ಬಾದಾಮಿ ಚೂರುಗಳು, ತೆಂಗಿನಕಾಯಿ ತುರಿ ಸೇರಿಸಿ. ಬಾದಾಮಿ ಮತ್ತು ತೆಂಗಿನಕಾಯಿ ತುರಿಯನ್ನು ಅಲಂಕಾರಕ್ಕಾಗಿ ಸ್ವಲ್ಪ ಉಳಿಸಿ. ಈ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.

ಹಂತ 4 ಸವಿಯಿರಿ:

ಈಗ ಒಲೆಯಿಂದ ಕೆಳಗಿಳಿಸಿ ಮತ್ತು ಒಂದು ಬಟ್ಟಲಿನಲ್ಲಿ ಸುರಿಯಿರಿ. ನಂತರ ಬಾಳೆಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಸೇರಿಸಿ. ಸ್ವಲ್ಪ ದಾಲ್ಚಿನ್ನಿ, ತೆಂಗಿನಕಾಯಿ ತುರಿ ಮತ್ತು ಬಾದಾಮಿ ಚೂರುಗಳಿಂದ ಅಲಂಕರಿಸಿ ಸವಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ