AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಸರಿಯಾದ ನಿದ್ರೆಯಿಲ್ಲ ಎಂಬ ಚಿಂತೆಯೇ? ಈ ಕೆಲವು ವಿಷಯಗಳನ್ನು ತಿಳಿಯಲೇಬೇಕು

ಕೆಲವರಿಗೆ ಕಾಫಿ ಎಂದರೆ ತುಂಬಾ ಇಷ್ಟ. ಯಾವ ಸಮಯದಲ್ಲಿ ಕಾಫಿ ಕೊಟ್ಟರೂ ಸಹ ಕುಡಿಯುವ ಅಭ್ಯಾಸವಿರುತ್ತದೆ. ಅಂಥವರು ರಾತ್ರಿ ಮಲಗುವ ಮುನ್ನವೂ ಕಾಫಿ ಕುಡಿದು ಮಲಗುವ ಅಭ್ಯಾಸ ಹೊಂದಿರುತ್ತಾರೆ. ಈ ಅಭ್ಯಾಸವನ್ನು ಆದಷ್ಟು ತಪ್ಪಿಸಿ.

Health Tips: ಸರಿಯಾದ ನಿದ್ರೆಯಿಲ್ಲ ಎಂಬ ಚಿಂತೆಯೇ? ಈ ಕೆಲವು ವಿಷಯಗಳನ್ನು ತಿಳಿಯಲೇಬೇಕು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 08, 2021 | 10:53 AM

Share

ಸುದೀರ್ಘ ಬದುಕಿನಲ್ಲಿ ನಿದ್ರೆ ಅತಿ ಮುಖ್ಯ. ಆರೋಗ್ಯದ ದೃಷ್ಟಿಯಿಂದ ಎಲ್ಲಾ ಜೀವಿಗಳಿಗೂ ಸಹ ನಿದ್ರೆ ಅತ್ಯವಶ್ಯಕ. ಮುಖ್ಯವಾಗಿ ಮನುಷ್ಯರಲ್ಲಿ ದೈಹಿಕ ಮತ್ತು ಮಾನಸಿಕ ಸ್ಥಿತಿಗೆ ನಿದ್ರೆ ಪ್ರಮುಖ ಪಾತ್ರವನ್ನುವಹಿಸುತ್ತದೆ. ನಿದ್ರೆಯ ಸಮಸ್ಯೆಯಿಂದ ನಿದ್ರಾಹೀನತೆ, ಸ್ಲೀಪ್ ಅಪ್ನಿಯಾದಂಥಹ ಸಮಸ್ಯೆಗಳಿಗೆ ಜನರು ಗುರಿಯಾಗುತ್ತಿದ್ದಾರೆ. ಜೀವನ ಶೈಲಿಯಲ್ಲಿನ ಹಲವು ಬದಲಾವಣೆಗೆ ಜತೆಗೆ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಒಳ್ಳೆಯ ನಿದ್ರೆ ಅತ್ಯವಶ್ಯಕವಾಗಿದೆ. ಕೆಲವರು ರಾತ್ರಿ ಸರಿಯಾದ ನಿದ್ರೆ ಆಗುತ್ತಿಲ್ಲ ಎಂದು ತುಂಬಾ ತಲೆಕೆಡಿಕೊಳ್ಳುವುದುಂಟು. ಮುಖ್ಯ ಕಾರಣವೆಂದರೆ ಆಹಾರ ಪದ್ಧತಿ ಮತ್ತು ಜೀವನಶೈಲಿ. ಇವುಗಳ ಕೆಲವು ಬದಲಾವಣೆಗಳು ನಿದ್ರಾ ಹೀನತೆ ಸಮಸ್ಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಈ ಕೆಲವು ಅಂಶಗಳನ್ನು ಪಾಲಿಸುವ ಮೂಲಕ ನಿದ್ರೆಯನ್ನು ಸುಧಾರಿಸಿಕೊಳ್ಳಬಹುದು: ಕಾಫಿ ಕುಡಿಯುವುದುದನ್ನು ತಪ್ಪಿಸಿ ಕೆಲವರಿಗೆ ಕಾಫಿ ಎಂದರೆ ತುಂಬಾ ಇಷ್ಟ. ಯಾವ ಸಮಯದಲ್ಲಿ ಕಾಫಿ ಕೊಟ್ಟರೂ ಸಹ ಕುಡಿಯುವ ಅಭ್ಯಾಸವಿರುತ್ತದೆ. ಅಂಥವರು ರಾತ್ರಿ ಮಲಗುವ ಮುನ್ನವೂ ಕಾಫಿ ಕುಡಿದು ಮಲಗುವ ಅಭ್ಯಾಸ ಹೊಂದಿರುತ್ತಾರೆ. ಈ ಅಭ್ಯಾಸವನ್ನು ಆದಷ್ಟು ತಪ್ಪಿಸಿ. ನಿಮ್ಮ ಮೆದುಳನ್ನು ಎಚ್ಚರವಾಗಿರಿಸಲು ಕಾಫಿ ಸಹಾಯ ಮಾಡುತ್ತದೆ. ಕೆಫೀನ್ ಅಂಶ ನಿಮ್ಮನ್ನು ಹೆಚ್ಚು ಎಚ್ಚರವಾಗಿರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ರಾತ್ರಿ ಮಲಗುವ 6ರಿಂದ 8 ಗಂಟೆಗಳ ಒಳಗೆ ಎಂದಿಗೂ ಕಾಫಿ ಸೇವನೆ ಒಳ್ಳೆಯದಲ್ಲ.

ದೀರ್ಘ ನಿದ್ರೆ ತೆಗೆದುಕೊಳ್ಳುವುದು ಸ್ವಲ್ಪ ಸಮಯದ ನಿದ್ರೆ ಆರೋಗ್ಯವನ್ನು ಹದಗೆಡಿಸುತ್ತದೆ. ಕೆಲವರು ಮಧ್ಯಾಹ್ನದ ಸಮಯದಲ್ಲಿ ಕೆಲ ಸಮಯ ನಿದ್ರೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದು ರಾತ್ರಿಯ ಸಮಯದ ನಿದ್ರೆಯನ್ನು ಹದಗೆಡಿಸುತ್ತದೆ. ಹಾಗಾಗಿ ಮಧ್ಯಾಹ್ನದಲ್ಲಿ ಕೆಲಹೊತ್ತು ನಿದ್ರೆ ಮಾಡುವ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡಿ. ರಾತ್ರಿಯ ವೇಳೆ ದೀರ್ಘನಿದ್ರೆಯು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಅರೆ ನಿದ್ರೆಯಿಂದ ತಲೆನೋವು, ರಕ್ತದೊತ್ತಡ, ಮಾನಸಿಕ ಸ್ಥಿತಿ ಏರುಪೇರಿನಂತಹ ಸಮಸ್ಯೆ ಉಂಟಾಗುತ್ತದೆ.

ಬೆಳಕು ಮರೆಮಾಚಲು ಪರದೆ ಬಳಕೆ ಮಲಗುವಾಗ ಕತ್ತಲೆಯಲ್ಲಿ ಮಲಗುವುದು ಉತ್ತಮ. ಇದು ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಬೆಳಕು ಬರುವ ಕಿಟಕಿ, ಬಾಗಿಲುಗಳಿಗೆ ಪರದೆಯನ್ನು ಬಳಸಿ. ಇದರಿಂದ ಕೋಣೆಯ ಒಳಗೆ ಬೆಳಕು ಪ್ರವೇಶಿಸುವುದಿಲ್ಲ. ಆಗ ನೀವು ದೀರ್ಘಕಾಲ ನಿದ್ರೆಯನ್ನು ಪಡೆಯಬಹುದು. ರಾತ್ರಿ ನಿದ್ರೆಯಲ್ಲಿ ಪದೆ ಪದೆ ಎಚ್ಚರವಾಗುವುದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗಾಗಿ ನಿಮ್ಮ ಒಳ್ಳೆಯ ನಿದ್ರೆಯ ಬಗ್ಗೆ ಗಮನವಿರಲಿ.

ಇದನ್ನೂ ಓದಿ:

Health Tips: ಪ್ರತಿದಿನ ಒಂದು ಮೊಟ್ಟೆ ತಿಂದ್ರೆ ಸಿಗುವ ಪ್ರಯೋಜನಗಳೇನು ಗೊತ್ತಾ?

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಿವಿ ಹಣ್ಣು ತಿನ್ನಿ; ಇದರ ಪ್ರಯೋಜನಗಳು ಎಷ್ಟಿವೆ ಗೊತ್ತಾ?

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ