ನೀರಿಗೂ ಎಕ್ಸ್ಪೈರಿ ದಿನಾಂಕವಿದೆಯೇ?, ನೀರನ್ನು ಎಷ್ಟು ದಿನಗಳ ಕಾಲ ಶೇಖರಿಸಿಡಬಹುದು, ಹೆಚ್ಚು ದಿನಗಳ ಕಾಲ ನೀರು ಕುಡಿಯಲು ಯೋಗ್ಯವಾಗಿಡುವಂತೆ ಮಾಡುವುದು ಹೇಗೆ? ಇದರ ಕುರಿತು ಇಲ್ಲಿದೆ ಮಾಹಿತಿ. ನೀವು ಎಲ್ಲೋ ಪ್ರಯಾಣಿಸುವಾಗ ನೀರಿನ ಬಾಟಲಿ ಖರೀದಿಸುತ್ತೀರಿ, ಬಾಟಲಿ ಮೇಲಿರುವ ಲೇಬಲ್ ನೋಡಿದಾಗ ಒಂದೊಮ್ಮೆ ಎಕ್ಸ್ಪೈರಿ ದಿನಾಂಕ ಮುಗಿದಿದ್ದರೆ ಆಶ್ಚರ್ಯಪಡಬೇಡಿ.
ನೀರಿಗೆ ಎಕ್ಸ್ಪೈರಿ ದಿನಾಂಕವೆಂಬುದೇ ಇಲ್ಲ, ಎಕ್ಸ್ಪೈರಿ ದಿನಾಂಕವಿರುವುದು ಕೇವಲ ಪ್ಲಾಸ್ಟಿಕ್ ಬಾಟಲಿಗೆ ಮಾತ್ರ ಹೌದು, ಪ್ಲಾಸ್ಟಿಕ್ ಬಾಟಲಿಯಲ್ಲಿ ಹೆಚ್ಚು ದಿನ ನೀರು ಶೇಖರಿಸಿದ್ದರೆ ಕ್ರಮೇಣವಾಗಿ ಬಾಟಲಿ ತನ್ನ ಅಂಶವನ್ನು ನೀರಿನಲ್ಲಿ ಬಿಡುತ್ತದೆ ಹೀಗಾಗಿ ಆ ನೀರನ್ನು ಕುಡಿಯಬಾರದು ಅಷ್ಟೇ.
ನೀರು ಸ್ವಚ್ಛವಾಗಿದ್ದರೆ ಅದಕ್ಕೆ ಎಕ್ಸ್ಪೈರಿ ದಿನಾಂಕವೇ ಇರುವುದಿಲ್ಲ, ತಾಪಮಾನದ ಬದಲಾವಣೆಯಿಂದಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿರುವ ಕೆಮಿಕಲ್ ಅಂಶವು ನೀರನ್ನು ಸೇರುವುದರಿಂದ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ.
ಎಕ್ಸ್ಪೈರಿ ದಿನಾಂಕ ಮುಗಿದ ಬಳಿಕ ನೀರಿನ ಬಾಟಲಿ ಏನಾಗುತ್ತದೆ?
ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಸಂಶೋಧನೆಯಲ್ಲಿ ಕೆಲವು ಅಂಶಗಳು ಬೆಳಕಿಗೆ ಬಂದಿವೆ. ಘನ ಪ್ಲಾಸ್ಟಿಕ್ ಅಥವಾ ಪಾಲಿಕಾರ್ಬೋನೇಟ್ ಬಾಟಲಿಗಳಲ್ಲಿ ಒಂದು ವಾರಗಳ ಕಾಲ ನೀರು ಕುಡಿದವರ ಮೂತ್ರದಲ್ಲಿ ಕೆಮಿಕಲ್ ಬಿಸ್ಪೋನೇಲ್ ಕಂಡುಬಂದಿತ್ತು.
ನಲ್ಲಿ ನೀರನ್ನು ಉತ್ತಮವಾಗಿ ಶೇಖರಿಸಿಟ್ಟರೆ ಆರು ತಿಂಗಳುಕಾಲ ಕುಡಿದರೂ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಿರಲಿಲ್ಲ. ಹಾಗಾಗಿ ಶುದ್ಧ ನೀರನ್ನು ಶೇಖರಿಸಿಟ್ಟರೆ 1 ರಿಂದ 2 ವರ್ಷಗಳ ಕಾಲ ಬಳಕೆ ಮಾಡಬಹುದು ಎಂಬುದು ಸಾಬೀತಾದಂತಾಗಿದೆ. ಒಂದೊಮ್ಮೆ ನೀರಿನ ಜತೆ ಕಾರ್ಬನ್ ಡಯಾಕ್ಸೈಡ್ ಸೇರಿಕೊಂಡರೆ ನೀರಿನ ರುಚಿ ಬದಲಾಗುತ್ತದೆ.
ನೀರು ಶೇಖರಣೆ ಹೇಗೆ?
ಹೆಚ್ಚು ದಿನಗಳ ಕಾಲ ನೀರನ್ನು ಬಳಕೆ ಮಾಡಬೇಕೆಂದರೆ ಫಿಲ್ಟರ್ ಮಾಡಬೇಕು, 15 ನಿಮಿಷಗಳ ಕಾಲ ಕುದಿಸಬೇಕು, ತಣ್ಣಗಾಗಲು ಬಿಡಬೇಕು, ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ವಾಟರ್ ಪ್ಯೂರಿಫೈಯರ್ಗಳಿವೆ.
ನಲ್ಲಿ ನೀರು ಕಲುಷಿತಗೊಳ್ಳುತ್ತದೆಯೇ?
ನಾವು ಎರಡು ಬಗೆಯ ನೀರನ್ನು ಕುಡಿಯುತ್ತೇವೆ, ಮೇಲ್ಮೈ ನೀರು ಹಾಗೂ ಅಂತರ್ಜಲ, ಮೇಲ್ಮೈ ನೀರನ್ನು ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳು ಒದಗಿಸುತ್ತವೆ ಅದರಲ್ಲಿ ಮೈಕ್ರೋಬ್ಸ್ಗಳು ಇರುತ್ತವೆ. ಮತ್ತೊಂದು ಅಂತರ್ಜಲ ಅದಕ್ಕೆ ಬೋರ್ವೆಲ್ ನೀರು ಎನ್ನಬಹುದು. ಇದು ಸುರಕ್ಷಿತವಾಗಿದ್ದು, ಇದನ್ನು ಹೆಚ್ಚು ದಿನಗಳ ಕಾಲ ಶೇಖರಿಸಿಡಬಹುದಾಗಿದೆ.
ನಮ್ಮ ಮನೆಗಳಲ್ಲಿ ನಲ್ಲಿ ನೀರು ತುಂಬಾ ಸುಲಭವಾಗಿ ಲಭ್ಯವಾಗುತ್ತದೆ. ಆದರೆ ಹೆಚ್ಚು ದಿನಗಳ ಕಾಲ ಈ ನೀರನ್ನು ಶೇಖರಿಸಿಡಲು ಸಾಧ್ಯವಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Mon, 23 May 22