AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಪ್ಯೂಟರ್​, ಮೊಬೈಲ್​ ಒತ್ತಡದಿಂದ ನಮ್ಮ ಕಣ್ಣನ್ನು ಕಾಪಾಡುವುದು ಹೇಗೆ?

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಟಿವಿಗಳು ಮತ್ತು ಟ್ಯಾಬ್ಲೆಟ್‌ಗಳವರೆಗೆ ನಮ್ಮ ಕಣ್ಣುಗಳು ನಿರಂತರವಾಗಿ ಸ್ಕ್ರೀನ್​ನ ಬೆಳಕಿಗೆ ಒಗ್ಗಿಕೊಂಡಿರುತ್ತದೆ. ಇದು ನಮ್ಮ ಕಣ್ಣುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ.

ಕಂಪ್ಯೂಟರ್​, ಮೊಬೈಲ್​ ಒತ್ತಡದಿಂದ ನಮ್ಮ ಕಣ್ಣನ್ನು ಕಾಪಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Dec 09, 2023 | 1:47 PM

Share

ನಾವು ಡಿಜಿಟಲ್ ಯುಗದಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ನಮ್ಮ ಗ್ಯಾಜೆಟ್‌ಗಳಿಲ್ಲದೆ ಏನನ್ನೂ ಮಾಡಲಾಗದಂತಹ ಅನಿವಾರ್ಯತೆಯನ್ನು ನಾವೇ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಮೊಬೈಲ್,. ಲ್ಯಾಪ್​ಟಾಪ್, ಟಿವಿ, ನೋಟ್​ಬುಕ್, ಐಪಾಡ್ ಹೀಗೆ ನಾನಾ ರೀತಿಯ ಡಿಜಿಟಲ್ ವಸ್ತುಗಳನ್ನು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಟಿವಿಗಳು ಮತ್ತು ಟ್ಯಾಬ್ಲೆಟ್‌ಗಳವರೆಗೆ ನಮ್ಮ ಕಣ್ಣುಗಳು ನಿರಂತರವಾಗಿ ಸ್ಕ್ರೀನ್​ನ ಬೆಳಕಿಗೆ ಒಗ್ಗಿಕೊಂಡಿರುತ್ತದೆ. ಇದು ನಮ್ಮ ಕಣ್ಣುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಆಫೀಸ್ ಕೆಲಸ ಮಾಡುವವರು ದಿನದಲ್ಲಿ 9ರಿಂದ 10 ಗಂಟೆಗಳ ಕಾಲ ಲ್ಯಾಪ್​ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತಿರಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ಮೊಬೈಲ್ ನೋಡುವುದು ಪ್ರತ್ಯೇಕ ಅಭ್ಯಾಸ. ಹೀಗಿರುವಾಗ ನಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಡಿಜಿಟಲ್ ವಸ್ತುಗಳನ್ನು ವೀಕ್ಷಿಸುವುದರಿಂದ ಈ ಸಮಸ್ಯೆಗಳು ಎದುರಾಗಬಹುದು.

– ಕಣ್ಣುಗಳು ಒಣಗುವುದು

– ಮಂದ ದೃಷ್ಟಿ

– ತಲೆನೋವು

– ಕುತ್ತಿಗೆ ನೋವು

– ಕಣ್ಣಿನ ಆಯಾಸ

ಇದನ್ನೂ ಓದಿ: ಅತಿಯಾಗಿ ಮೊಬೈಲ್ ಬಳಸುತ್ತೀರಾ? ಪೋಷಕರು ಓದಲೇಬೇಕಾದ ಸುದ್ದಿಯಿದು

ಈ ಅಹಿತಕರ ಲಕ್ಷಣಗಳನ್ನು ತಡೆಗಟ್ಟಲು ಮತ್ತು ಡಿಜಿಟಲ್ ಒತ್ತಡದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಕೆಲವು ಸಲಹೆಗಳು ಇಲ್ಲಿವೆ. ಡಿಜಿಟಲ್ ಸ್ಟ್ರೈನ್​ನಿಂದ ಕಣ್ಣುಗಳನ್ನು ರಕ್ಷಿಸಲು 5 ಸಲಹೆಗಳು ಇಲ್ಲಿವೆ.

20-20-20 ನಿಯಮವನ್ನು ಅನುಸರಿಸಿ:

ಪ್ರತಿ 20 ನಿಮಿಷಗಳಿಗೊಮ್ಮೆ ಕನಿಷ್ಠ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಲು 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಿ. ಇದು ನಿಮ್ಮ ಕಣ್ಣಿನ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಪರದೆಯ ಸೆಟ್ಟಿಂಗ್‌ಗಳನ್ನು ಹೊಂದಿಸಿ:

ನಿಮ್ಮ ಕಂಪ್ಯೂಟರ್​ ಅಥವಾ ಲ್ಯಾಪ್​ಟಾಪ್​ನ ಬ್ರೈಟ್​ನೆಸ್​ ಮತ್ತು ಕಾಂಟ್ರಾಸ್ಟ್ ಅನ್ನು ಆರಾಮದಾಯಕ ಮಟ್ಟಕ್ಕೆ ಅಡ್ಜಸ್ಟ್​ ಮಾಡಿ. ನಿಮ್ಮ ಸಿಸ್ಟಂನಲ್ಲಿ ರಾತ್ರಿ ಮೋಡ್ ಸೆಟ್ಟಿಂಗ್‌ಗಳನ್ನು ಸಹ ನೀವು ಆ್ಯಕ್ಟಿವ್ ಮಾಡಿಕೊಳ್ಳಬಹುದು. ಇದು ಕಣ್ಣುಗಳ ಮೇಲೆ ಕಡಿಮೆ ಒತ್ತಡ ಉಂಟುಮಾಡುತ್ತದೆ.

ವಿರಾಮಗಳನ್ನು ತೆಗೆದುಕೊಳ್ಳಿ ಮತ್ತು ಆಗಾಗ ಕಣ್ಣು ಮಿಟುಕಿಸಿ:

ಡಿಜಿಟಲ್ ಸಾಧನಗಳನ್ನು ಬಳಸುವಾಗ ದಿನವಿಡೀ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಆಗಾಗ ಎದ್ದು ತಿರುಗಿ, ನಿಮ್ಮ ಕಾಲುಗಳನ್ನು ಹಿಗ್ಗಿಸಿ ಮತ್ತು ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ. ಸಿಸ್ಟಂ ನೋಡುವಾಗ ದಿಟ್ಟಿಸಿ ನೋಡುತ್ತಿರುವ ಬದಲು ಆಗಾಗ ಕಣ್ಣು ಮಿಟುಕಿಸಲು ಮರೆಯಬೇಡಿ.

ಇದನ್ನೂ ಓದಿ: ಅತಿಯಾಗಿ ಟಿವಿ, ಮೊಬೈಲ್ ನೋಡುವ ಮಕ್ಕಳನ್ನು ನಿಯಂತ್ರಿಸೋದು ಹೇಗೆ?

ನಿಮ್ಮ ಕಾರ್ಯಕ್ಷೇತ್ರವನ್ನು ಸುಧಾರಿಸಿ:

ನಿಮ್ಮ ಕಂಪ್ಯೂಟರ್ ಪರದೆಯನ್ನು ನಿಮ್ಮ ಕಣ್ಣುಗಳಿಂದ ಒಂದು ತೋಳಿನ ದೂರದಲ್ಲಿ ಮತ್ತು ಕಣ್ಣಿನ ಮಟ್ಟಕ್ಕಿಂತ ಸ್ವಲ್ಪ ಕೆಳಗೆ ಇರಿಸಿ. ಇದು ಕುತ್ತಿಗೆಯ ಆಯಾಸವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕಣ್ಣುಗಳು ಹೆಚ್ಚು ಗಮನಹರಿಸದಂತೆ ಮಾಡುತ್ತದೆ. ಕಂಪ್ಯೂಟರ್​ ಮೇಲೆ ಸರಿಯಾಗಿ ಬೆಳಕು ಬೀಳುವಂತಿರಲಿ. ಇದರಿಂದ ಕಣ್ಣಿಗೆ ಆಯಾಸವಾಗುವುದಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!