ವಿಶೇಷ ವ್ಯಕ್ತಿಯನ್ನು ಮೊದಲು ಭೇಟಿ (Dating) ಮಾಡುವಾಗ ಆಗುವ ಆತಂಕ (Anxiety), ತಳಮಳ, ಭಯ ಸಹಜವಾಗಿರುತ್ತದೆ. ಕೆಲವರು ಮಿತವಾಗಿ ಮಾತನಾಡುವವರಿದ್ದರೆ ಹೊಸ ವ್ಯಕ್ತಿ ಎದುರು ಪದಗಳೇ ಹೊರಡಲ್ಲ. ಪಟ್ ಪಟ ಅಂತ ಮಾತನಾಡುವವರಿಗೆ ಹೊಸ ವ್ಯಕ್ತಿಯ ಮೊದಲ ಭೇಟಿ ಕಷ್ಟವಾಗಲ್ಲ. ಆದರೂ ಕೆಲವರಿಗೆ ಕೈ-ಕಾಲುಗಳು ನಡುಗುತ್ತವೆ. ಮುಖ ಬೆವರುತ್ತದೆ. ಯಾವತ್ತು ಆಗದೇ ಇರುವ ಅನುಭವ ಆಗುತ್ತದೆ. ಹೊಸ ವ್ಯಕ್ತಿ ಅದರಲ್ಲೂ ನಮ್ಮ ಜೀವನದಲ್ಲಿ ಅವರಿಗೆ ವಿಶೇಷ ಸ್ಥಾನ ನೀಡುವ ವ್ಯಕ್ತಿಯಾಗಿದ್ದರೆ, ಅವರನ್ನು ಭೇಟಿ ಮಾಡುವ ಮೊದಲು ಕೆಲ ವಿಚಾರಗಳು ನಿಮ್ಮ ತಲೆಯಲ್ಲಿ ಇರಬೇಕು.
ಹಾಗಾದರೇ ಹೊಸ ವ್ಯಕ್ತಿಯನ್ನು ಮೊದಲ ಭೇಟಿ ಮಾಡುವಾಗ ಆತಂಕ, ಭಯದಿಂದ ಹೊರಬರಲು ಏನು ಮಾಡಬೇಕು? ಚಿಂತೆ ಬಿಡಿ. ಕೆಲ ಸಲಹೆಗಳನ್ನ ನಾವು ನಿಮಗೆ ತಿಳಿಸುತ್ತೇವೆ. ಈ ಸಲಹೆಗಳು ನಿಮಗೆ ಹೊಸ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಲು ತುಂಬಾ ಸಹಾಯವಾಗುತ್ತದೆ.
- ಫೋನಿನಲ್ಲಿ ಮೊದಲು ಮಾತನಾಡಿ: ಈಗಿನ ಕಾಲಘಟ್ಟದಲ್ಲಿ ಎಲ್ಲರ ಕೈಯಲ್ಲು ಫೋನ್ ಇದ್ದೇ ಇರುತ್ತದೆ. ಹೀಗಿರುವಾಗ ಮೊದಲ ಭೇಟಿ ಅಷ್ಟು ಕಠಿಣ ಅನಿಸಲ್ಲ. ಹೊಸ ವ್ಯಕ್ತಿಯನ್ನು ಭೇಟಿ ಮಾಡುವ ಮೊದಲು ಆ ವ್ಯಕ್ತಿ ಜೊತೆ ಕೆಲ ದಿನಗಳ ಕಾಲ ಮಾತನಾಡಿ. ಆ ವ್ಯಕ್ತಿ ಅಭಿರುಚಿಗೂ ನಿಮ್ಮ ಅಭಿರುಚಿಗೂ ಸರಿ ಹೊಂದುತ್ತದೆಯೇ ಎಂಬ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಿ. ನಂತರ ಭೇಟಿ ಮಾಡಲು ಮುಂದಾಗಿ. ಫೋನಿನಲ್ಲಿ ಮಾತನಾಡುವುದರಿಂದ ಅವರ ಧ್ವನಿ, ಅವರ ಉಚ್ಚಾರಣೆ, ಅವರ ಮಾತನಾಡುವ ಶೈಲಿ ಭೇಟಿ ಮಾಡಲು ಸಹಾಯ ಮಾಡುತ್ತದೆ. ಫೋನ್ನಲ್ಲಿ ಮಾತನಾಡುವಾಗ ಉತ್ತಮ ಎಂದು ಅನಿಸಿದರೆ ವೈಯಕ್ತಿಕ ಭೇಟಿಯ ಸಮಯದಲ್ಲಿ ನಿಮ್ಮ ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ.

- ನಿಮಗೆ ಇಷ್ಟವಾಗುವ ಸ್ಥಳ ಆಯ್ಕೆ ಮಾಡಿ: ಭೇಟಿ ಮಾಡಬೇಕು ಅಂದಾಗ, ಎಲ್ಲಿ? ಎಂಬ ಪ್ರಶ್ನೆ ಹುಟ್ಟುತ್ತದೆ. ಇಬ್ಬರಿಗೂ ಸೂಕ್ತವೆನಿಸುವ ಅಂದರೆ ಕಂಫರ್ಟ್ ಆಗುವ ಸ್ಥಳವನ್ನು ಮೊದಲು ಆಯ್ಕೆ ಮಾಡಿ. ಅದು ದೇವಸ್ಥಾನ, ಹೋಟೆಲ್, ರೆಸ್ಟೋರೆಂಟ್, ಸಂಬಂಧಿಕರ ಮನೆ ಆಗಿರಬಹುದು. ರೆಸ್ಟೋರೆಂಟ್ ಅಥವಾ ಹೋಟೆಲ್ ಆಗಿದ್ದರೆ ನಿಮಗೆ ಇಷ್ಟವಾಗುವ ಫುಡ್ನ ಆರ್ಡರ್ ಮಾಡಿ. ಅದನ್ನು ಸವಿಯುತ್ತಾ ಮಾತನಾಡಲು ಶುರುಮಾಡಿ.
- ನೀನು ನೀನಾಗಿರು: ನೀವು ಹೊಸ ವ್ಯಕ್ತಿಯನ್ನು ಭೇಟಿ ಮಾಡುವಾಗ, ನಿಮ್ಮ ವರ್ತನೆಗಳನ್ನ ಬದಲಾಯಿಸಬಾರದು. ಅಂದರೆ ನೀವು ಹೇಗಿರುತ್ತೀರೋ ಹಾಗೇ ಇರಿ. ನಟಿಸಬಾರದು. ಪ್ರಾಮಾಣಿಕವಾಗಿ ಮಾತನಾಡಿ. ನೀವು ಏನನ್ನಾದರೂ ಹೇಳುವ ಮೊದಲು ಒಮ್ಮೆ ಯೋಚಿಸಿ. ಈ ಸಂದರ್ಭ ಸೂಕ್ತವಾಗಿದೆಯಾ ಅಂತ ಯೋಚಿಸಿ ಮಾತನಾಡಿ.
- ಕಣ್ಣಿನ ಸಂಪರ್ಕ: ಕಣ್ಣಲ್ಲೇ ಮಾತನಾಡಬಹುದು. ಪರಸ್ಪರ ಕಣ್ಣುಗಳನ್ನ ನೋಡಿಕೊಂಡಾಗ ಮಾತನಾಡಲು ಸುಲಭವೆನಿಸುತ್ತದೆ. ಸಾಮಾನ್ಯವಾಗಿ ಭಯದಿಂದ ಬೇರೆ ಬೇರೆ ಕಡೆ ನೋಡಿಕೊಂಡು ಮಾತನಾಡುತ್ತಾರೆ. ಆದರೆ ಹೀಗೆ ಮಾಡಬಾರದು. ಮುಂದೆ ಕುಳಿತಿರುವ ವ್ಯಕ್ತಿಯನ್ನು ನೋಡುತ್ತಾ ಮಾತನಾಡಿದರೆ ಆತ್ಮವಿಶ್ವಾಸವನ್ನು ನೀಡುತ್ತದೆ.ಇದನ್ನೂ ಓದಿ
ಕೀವ್ನಿಂದ ಆಗಮಿಸುತ್ತಿದ್ದ ಭಾರತದ ವಿದ್ಯಾರ್ಥಿಗೆ ಗುಂಡು; ಆಸ್ಪತ್ರೆಗೆ ದಾಖಲು: ವಿಕೆ ಸಿಂಗ್ ಮಾಹಿತಿ
IND vs SL: ಮೊಹಾಲಿ ಟೆಸ್ಟ್ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ಗೆ ಹೊಸ ಅಧ್ಯಾಯ ಬರೆಯಲಿದೆ ರೋಹಿತ್ ಪಡೆ