ಪ್ರತಿಯೊಬ್ಬರಿಗೂ ಕೂಡಾ ಅಂದವಾಗಿ ಕಾಣಿಸಬೇಕು ಎಂಬ ಆಸೆ ಇರುವುದು ಸಹಜ. ಅದೇ ರೀತಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ನೈಸರ್ಗಿಕ ಔಷಧಿಗಳನ್ನು ಬಳಸುತ್ತಾರೆ. ಆದರೆ ಮಹಿಳೆಯರಲ್ಲಿ ಮೊಡವೆಗಳು ಹೆಚ್ಚು ಕಾಣಿಸುತ್ತಿವೆ. ಮೊಡವೆ ನಿವಾರಣೆಯೇ ದೊಡ್ಡ ತಲೆನೋವು ಎಂದು ತಲೆ ಮೇಲೆ ಕೈಹೊತ್ತು ಕುಳಿತವರೂ ಇದ್ದಾರೆ. ಹೀಗಿರುವಾಗ ಈ ಸಮಸ್ಯೆಗೆ ಕೆಲವು ಪರಿಹಾರ ಕ್ರಮ ಇಲ್ಲಿದೆ. ಇವುಗಳನ್ನು ಪಾಲಿಸುವ ಮುಲಕ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದಾಗಿದೆ.
ಮುಖದ ಚರ್ಮವು ಹೆಚ್ಚು ಎಣ್ಣೆಯುಕ್ತವಾಗುತ್ತದೆ, ಇದರಿಂದ ಮುಖದಲ್ಲಿ ಮೊಡವೆಗಳು ಏಳುತ್ತವೆ. ಬೆವರು, ಧೂಳು ಮುಖಕ್ಕೆ ಅಂಟಿಕೊಂಡಾಗ ಚರ್ಮದ ಸಣ್ಣ ರಂಧ್ರದೊಳಗೆ ಸಿಲುಕಿ ಗುಳ್ಳೆಗಗಳು ಏಳುತ್ತವೆ. ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಯಾವುದೇ ರೀತಿಯ ಅಡ್ಡ ಪರಿಣಾಮಗಳಿದ್ದ ನೃಸರ್ಗಿಕ ಔಷಧಿಗಳನ್ನು ಮನೆಲ್ಲಿಯೇ ಸುಲಭದಲ್ಲಿ ತಯಾರಿಸಬಹುದು ಜತೆಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಜೇನು ತುಪ್ಪ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಹಾಗೆಯೇ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಸ್ವಚ್ಛಗೊಳಿಸಿ. ಈ ರೀತಿ ವಾರಕ್ಕೆ ಮೂರು ದಿನ ಮಾಡುವುದರ ಮೂಲಕವಾಗಿ ಮುಖದಲ್ಲಿನ ಮೊಡವೆಗಳನ್ನು ವಾಸಿಮಾಡಿಕೊಳ್ಳಬಹುದಾಗಿದೆ.
ಗ್ರೀನ್ ಟೀ ಗ್ರೀನ್ ಟೀ ಸೇವಿಸುವುದರ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಜತೆಗೆ ಗ್ರೀನ್ ಟೀ ತಯಾರಿಸಿ, ಬಿಸಿ ಆರಿದ ಬಳಿಕ ಮುಖಕ್ಕೆ ಹಚ್ಚಿ ಕೆಲ ಗಂಟೆಗಳ ಕಾಲ ಹಾಗೆಯೇ ಬಿಡಿ. ಬಳಿಕ ಮುಖ ತೊಳೆಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.
ನಿಂಬೆ ರಸ ನಿಂಬೆ ರಸಕ್ಕೆ ಸ್ವಲ್ಪ ನೀರು ಸೇರಿಸಿ, ಹತ್ತಿಯ ಸಹಾಯದಿಂದ ಮುಖಕ್ಕೆ ಉಜ್ಜಿ. ನೀರು ಒಣಗುತ್ತಿದ್ದಂತೆಯೇ ಪುನಃ ಲೇಪನ ಮಾಡಿ. 10 ನಿಮಿಷಗಳ ಸಮಯವಾದರೂ ಮುಖದಲ್ಲಿನ ಲೇಪನ ಹಾಗೆಯೇ ಇರಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮುಖದಲ್ಲಿನ ಮೊಡವೆಯ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಕಿತ್ತಳೆ ಸಿಪ್ಪೆ ಮೊಡವೆ ಸಮಸ್ಯೆಯನ್ನು ತೆಗೆದು ಹಾಕಲು ಕಿತ್ತಳೆ ಸಿಪ್ಪೆ ಅತ್ಯಂತ ಉತ್ತಮ ಮಾರ್ಗ. ಕಿತ್ತಳೆ ಸಿಪ್ಪೆಯಲ್ಲಿನ ಅಂಶ ಮುಖಕ್ಕೆ ತುಂಬಾ ಪ್ರಯೋಜನಕಾರಿ. ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬಳಿಕ ಪುಡಿ ಮಾಡಿ ಸಂಗ್ರಹಿಸಿಡಿ. ಆ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುವುದರ ಜತೆಗೆ ಮೊಡವೆಗಳ ನಿವಾರಣೆ ಮಾಡಿಕೊಳ್ಳಬಹುದು.
ಇದನ್ನೂ ಓದಿ:
ದ್ರಾಕ್ಷಿ ಹಣ್ಣಿನ ಬೀಜದ ಆರೋಗ್ಯ ಪ್ರಯೋಜನಗಳು; ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಒಳ್ಳೆಯ ಔಷಧ
(Follow these remedies for skin care check in kannada)