ಡೇಟಿಂಗ್​ ಆತಂಕ ದೂರ ಮಾಡಿಕೊಳ್ಳಲು ಈ ಟಿಪ್ಸ್​ ಫಾಲೋ ಮಾಡಿ

ಡೇಟಿಂಗ್​ ಆತಂಕ ದೂರ ಮಾಡಿಕೊಳ್ಳಲು ಈ ಟಿಪ್ಸ್​ ಫಾಲೋ ಮಾಡಿ
ಪ್ರಾತಿನಿಧಿಕ ಚಿತ್ರ

ನಿಮ್ಮನ್ನು ನೀವು ಸ್ಟ್ರಾಂಗ್​ ಆಗಿ ಇಟ್ಟುಕೊಂಡರೆ ಭಯ ಪಡುವ ಅಗತ್ಯವಿಲ್ಲ. ಹೀಗೂ ನಿಮಗೆ ಭಯ ಕಾಡುತ್ತಿದೆ ಎಂದರೆ ಈ ಟಿಪ್ಸ್​ ಫಾಲೋ ಮಾಡಿ ಡೇಟಿಂಗ್​ ಆತಂಕವನ್ನು ದೂರ ಮಾಡಿಕೊಳ್ಳಿ.

TV9kannada Web Team

| Edited By: Pavitra Bhat Jigalemane

Mar 03, 2022 | 5:49 PM

ಈಗಿನ ಕಾಲದಲ್ಲಿ ಡೇಟಿಂಗ್ (Dating)​, ಸಾಮಾಜಿಕ ಜಾಲತಾಣಗಳ ಬಳಕೆ, ಹೊಸ ಸ್ನೇಹಿತರನ್ನು ಹುಡುಕುವುದು ಎಲ್ಲವೂ ಸಹಜ, ಆದರೆ ಒಬ್ಬ ಹೊಸ ವ್ಯಕ್ತಿಯನ್ನು ಮೊದಲ ಬಾರಿ ಭೇಟಿಯಾಗಲು ಹೋಗುವುದೆಂದರೆ ಭಯ ಕಾಡುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಬಳಕೆ ಅಥವಾ ಜನರೊಂದಿಗೆ ಬೆರೆಯುವ ಅಭ್ಯಾಸ ಕಡಿಮೆಯಿದ್ದರೆ ಹೊಸ ಪರಿಚಯಕ್ಕೆ ಆತಂಕಗೊಳ್ಳುವುದು ಸಾಮಾನ್ಯವಾಗಿದೆ. ಆದರೆ ಅದರ ಅಗತ್ಯವಿಲ್ಲ. ನಿಮ್ಮನ್ನು ನೀವು ಸ್ಟ್ರಾಂಗ್​ ಆಗಿ ಇಟ್ಟುಕೊಂಡರೆ ಭಯ ಪಡುವ ಅಗತ್ಯವಿಲ್ಲ. ಹೀಗೂ ನಿಮಗೆ ಭಯ ಕಾಡುತ್ತಿದೆ ಎಂದರೆ ಈ ಟಿಪ್ಸ್​ ಫಾಲೋ ಮಾಡಿ ಡೇಟಿಂಗ್​ ಆತಂಕ (Dating Anxiety) ವನ್ನು ದೂರ ಮಾಡಿಕೊಳ್ಳಿ. ಎಲ್ಲಕಿಂತ ಮೊದಲು ನೀವು ಡೇಟಿಂಗ್​ಗೆ ಹೋಗಲು ತಯಾರಿ ನಡೆಸಿದ್ದರೆ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ. ಗೊಂದಲ, ಟೆನ್ಷನ್ (Tension)​ ಬೇಡ. ಡೇಟಿಂಗ್​ಗಾಗಿ ಯಾವೆಲ್ಲ ಟಿಪ್ಸ್​ ಫಾಲೋ ಮಾಡಿದರೆ ಆತಂಕವನ್ನು ನಿವಾರಿಸಿಕೊಳ್ಳಬಹುದು ಎನ್ನು ಮಾಹಿತಿ ಇಲ್ಲಿದೆ ನೋಡಿ,

ಭೇಟಿಯಾಗುವ ಮೊದಲು ಫೋನ್​ನಲ್ಲಿ ಮಾತನಾಡಿಕೊಳ್ಳಿ: ಹೊಸ ವ್ಯಕ್ತಿಯನ್ನು ಭೇಟಿಯಾಗುವ ಮೊದಲು ಫೋನ್​ನಲ್ಲಿ ಮಾತಾಡಿಕೊಳ್ಳಿ. ಆಗ ಅವರ ಧ್ವನಿ, ಮಾತನಾಡುವ ಶೈಲಿ, ಅವರ ಭಾಷೆಯ ಪರಿಚಯವಿರುತ್ತದೆ. ಆಗ ಭೇಟಿಯಾದ ಸಂದರ್ಭದಲ್ಲಿ ಹೊಸ ಪರಿಚಯ ಎನಿಸುವುದಿಲ್ಲ. ಜತೆಗೆ ಯಾವುದೇ ಅಂಜಿಕೆಯಿಲ್ಲದೆ ಮಾತನಾಡಬಹುದು. ನೀವೇನಾದರೂ ನಿಮ್ಮ ಸಂಗಾತಿಯನ್ನು ಮೊದಲ ಬಾರಿಗೆ ಭೇಟಿಯಾಗಲು ಹೋಗುತ್ತಿದ್ದರೆ, ಫೋನಿನಲ್ಲಿ ಮಾತನಾಡಿಕೊಳ್ಳಿ.

ನಿಮ್ಮೊಂದಿಗೆ ಮಾತನಾಡಿಕೊಳ್ಳಿ: ನಿಮಗೆ ನೀವೇ ಬೆಸ್ಟ್​ ಮೋಟಿವೇಟರ್​.  ಹೊಸ ವ್ಯಕ್ತಿಯನ್ನು ಭೇಟಿಯಾಗುವ ಮೊದಲು ಮಾತನಾಡಬೇಕೆಂದಿದ್ದ ಮುಖ್ಯ ವಿಷಯವನ್ನು ನಿಮ್ಮೊಂದಿಗೆ ನೀವು ಮಾತನಾಡಿಕೊಳ್ಳಿ. ಆಗ ಆಂತರಿಕವಾಗಿ ಧೈರ್ಯ ಮೂಡುತ್ತದೆ. ಹೇಳಬೇಕೆಂದಿದ್ದ ವಿಷಯಗಳ ಬಗ್ಗೆ ಚಿತ್ರಣ ಸಿಗುತ್ತದೆ.

ಕಂಫರ್ಟ್​ ಝೋನ್​ ಕ್ರಿಯೇಟ್​ ಮಾಡಿಕೊಳ್ಳಿ: ಮೊದಲ ಬಾರಿಗೆ ಭೇಟಿಯಾಗಲು ಹೋಗುವ ವೇಳೆ ನಿಮಗೆ ಕಂಫರ್ಟ್​ ಆಗಿರುವ ಡ್ರೆಸ್​ ಹಾಕಿಕೊಳ್ಳಿ. ಇಬ್ಬರಿಗೂ ಸರಿಯಾದ ಸಮಯಕ್ಕೆ ಭೇಟಿಯಾಗಬಹುದಾದ ರೆಸ್ಟೋರೆಂಟ್​ಗೆ ಹೋಗಿ, ನಿಮಗೆ ಇಷ್ಟವಾಗುವ ಆಹಾರವನ್ನು ಆರ್ಡರ್​ ಮಾಡಿ. ಮಾತು ಆರಂಭಿಸುವ ವೇಳೆ ಭಯ ಬೇಡ.

ನೀವು ನೀವಾಗಿರಿ: ಹೊಸ ವ್ಯಕ್ತಿಗಳ ಪರಿಚಯದ ವೇಳೆ ಅವರೆದುರು ಹೆಚ್ಚಿನ ತೋರಿಕೆಗಳು ಬೇಡ. ನೀವು ನೀವಾಗಿರಿ. ಹೇಳಬೇಕು ಅಂದುಕೊಂಡಿದ್ದನ್ನು ನೇರವಾಗಿ ಹೇಳಿ. ತೋರ್ಪಡಿಸುವಿಕೆ ಬೇಡ. ಯಾವುದೇ ವಿಷಯಗಳನ್ನು ಹೇಳುವಾಗ ಭಯ ಬೇಡ. ಸಂವಹನದಲ್ಲಿ ಮುಚ್ಚುಮರೆ ಇಲ್ಲದಂತೆ ಮಾತನಾಡಿ.ನಿಮ್ಮ ನೈಜ ವ್ಯಕ್ತತ್ವದಲ್ಲಿರಿ.

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ: ಯಾವುದೇ ವ್ಯಕ್ತಿಯೊಂದಿಗೆ ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ. ಎದುರು ಕುಳಿತ ವ್ಯಕ್ತಿಗೆ ತಮ್ಮನ್ನು ನಿರ್ಲಕ್ಷಿಸಿ ಮಾತನಾಡುತ್ತಿದ್ದಾರೆ ಎನಿಸಬಾರದು. ಹೀಗಾಗಿ ಸುತ್ತಮುತ್ತಲಿನ ಪರಿಸರ ನೋಡಿಕೊಂಡು ಮಾತನಾಡುವ ಬದಲು ನೇರವಾಗಿ ಮಾತನಾಡಿ. ಆಗ ಅವರಿಗೂ ನಿಮ್ಮ ಮಾತಿನ ಮೇಲೆ ನಂಬಿಕೆ ಬರುತ್ತದೆ.

ಇದನ್ನೂ ಓದಿ:

ನಿಮ್ಮ ಸಂಗಾತಿಯ ಜೊತೆ ಗಾಢವಾದ ಸಂಬಂಧ ಬೆಳೆಸಿಕೊಳ್ಳಲು 6 ಮಾರ್ಗಗಳು ಇಲ್ಲಿವೆ

Follow us on

Related Stories

Most Read Stories

Click on your DTH Provider to Add TV9 Kannada