AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಗ್ರಾಹಕರಿಂದ ಸೇವಾ ಶುಲ್ಕ ವಸೂಲಿ, ಆಹಾರ ಪ್ರಿಯರ ಜೇಬಿಗೆ ಬೀಳುತ್ತಿದೆ ಕತ್ತರಿ

ದೊಡ್ಡ ದೊಡ್ಡ ಹೋಟೆಲ್ ಅಥವಾ ರೆಸ್ಟೋರೆಂಟ್​ಗಳಿಗೆ ನಾವು ಹೋದಾಗ ನಾವು ತಿನ್ನುವ ಆಹಾರದ ಜೊತೆಗೆ ಸೇವಾ ಶುಲ್ಕವನ್ನು ಪಾವತಿಸುತ್ತೇವೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು 2022 ರಲ್ಲಿ ಗ್ರಾಹಕರು ಸೇವಾ ಶುಲ್ಕವನ್ನು ಪಾವತಿಸಲು ಒತ್ತಾಯಿಸುವಂತಿಲ್ಲ ಎನ್ನುವ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಗ್ರಾಹಕರಿಂದ ವಸೂಲಿ ಮಾಡುವ ಈ ಸೇವಾ ಶುಲ್ಕಕ್ಕೆ ಸಂಬಂಧಪಟ್ಟಂತೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಇದೀಗ ಮಾಯಾನಗರಿ ಬೆಂಗಳೂರಿನ ದೊಡ್ಡ ದೊಡ್ಡ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಸರ್ವಿಸ್ ಚಾರ್ಜ್ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಗ್ರಾಹಕರಿಂದ ಸೇವಾ ಶುಲ್ಕ ವಸೂಲಿ, ಆಹಾರ ಪ್ರಿಯರ ಜೇಬಿಗೆ ಬೀಳುತ್ತಿದೆ ಕತ್ತರಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Dec 11, 2024 | 12:53 PM

Share

ಆಹಾರ ಪ್ರಿಯರಿಗೆ ತಿನ್ನುವುದೆಂದರೆ ಬಹಳ ಇಷ್ಟ. ರಜಾ ಸಿಕ್ಕಲೆಲ್ಲಾ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಫ್ಯಾಮಿಲಿ ಸಮೇತರಾಗಿ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಭೇಟಿ ನೀಡುತ್ತಾರೆ. ಅದಲ್ಲದೇ, ಮಾಯಾನಗರಿ ಬೆಂಗಳೂರಿನಲ್ಲಿ ರೆಸ್ಟೋರೆಂಟ್‌, ಕೆಫೆ, ಹೋಟೆಲ್ ಗಳಿಗೇನು ಕೊರತೆಯಿಲ್ಲ. ಬೆಂಗಳೂರಿನಲ್ಲಿ ರುಚಿಗೆ ಅನುಗುಣವಾಗಿ ಆಸ್ವಾದಿಸಬಹುದಾದ ಅದೆಷ್ಟೋ ರೆಸ್ಟೋರೆಂಟ್‌ ಗಳಿವೆ. ಆದರೆ ದೊಡ್ಡದೊಡ್ಡ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕವನ್ನು ವಿಧಿಸಲಾಗುತ್ತಿದೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು 2022 ರಲ್ಲಿ ಗ್ರಾಹಕರು ಸೇವಾ ಶುಲ್ಕವನ್ನು ಪಾವತಿಸಲು ಒತ್ತಾಯಿಸುವಂತಿಲ್ಲ ಎನ್ನುವ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದರೂ ಸರ್ವಿಸ್ ಚಾರ್ಜ್ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಕೆಲವು ರೆಸ್ಟೋರೆಂಟ್‌ಗಳಲ್ಲಿ ಯಾವುದೇ ರೀತಿಯ ಸೇವಾ ಶುಲ್ಕವನ್ನು ವಿಧಿಸದಿದ್ದರೂ, ಇನ್ನು ಕೆಲವು ಕಡೆಗಳಲ್ಲಿ ಸೇವಾ ಶುಲ್ಕದ ಹೆಸರಿನಿಂದ ಗ್ರಾಹಕರಿಂದ ಇಂತಿಷ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ. ಅದರಲ್ಲಿಯೂ ಹೈ-ಎಂಡ್ ಫೈನ್ ಡೈನಿಂಗ್ ಸ್ಪಾಟ್‌ಗಳು ಮತ್ತು ರೆಸ್ಟೋಬಾರ್‌ಗಳಲ್ಲಿ ಸೇವಾ ಶುಲ್ಕ ಕಡ್ಡಾಯ ಎಂದು ಮೆನುವಿನಲ್ಲಿ ನಮೂದಿಸಲಾಗಿದೆ. ಈ ರೆಸ್ಟೊರೆಂಟ್‌ಗಳಲ್ಲಿ ಆಹಾರ ಪದಾರ್ಥಗಳೇ ದುಬಾರಿ ಎನ್ನುವುದು ಒಂದೆಡೆಯಾದರೆ, ಸೇವಾ ಶುಲ್ಕ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ.

ನಾನು ಇತ್ತೀಚೆಗೆ ಜೆಪಿ ನಗರದ ಜನಪ್ರಿಯ ರೆಸ್ಟೋಬಾರ್‌ಗೆ ಹೋಗಿದ್ದೆ. ಮೆನು ಕೊಡುವಾಗ ವೆರೈಟ್ ಕೂಡ ಸೇವಾ ಶುಲ್ಕ ಕಡ್ಡಾಯ ಎಂದು ಹೇಳಿದರು. ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಎನ್ನುವ ನಿಯಮಗಳಿದ್ದರೂ ಏಕೆ ಕಡ್ಡಾಯಗೊಳಿಸಿದ್ದಾರೆ ಎಂದು ನಾನು ಪ್ರಶ್ನಿಸಿದಾಗ, ಅದು ನಿರ್ವಹಣೆಯ ವೆಚ್ಚ ಎಂದು ಉತ್ತರಿಸಿದರು. ಹೀಗಾಗಿ ನಾನು 10% ಸೇವಾ ಶುಲ್ಕದೊಂದಿಗೆ 150 ರೂಪಾಯಿಯನ್ನು ಪಾವತಿಸಿದೆ ಎಂದು ಗ್ರಾಹಕರೊಬ್ಬರಾದ ದಿವ್ಯಾ ರಾವ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹೇಳಿದ್ದಾರೆ.

ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ (NRAI)ದ ಬೆಂಗಳೂರಿನ ಚಾಪ್ಟರ್ ಹೆಡ್ ಚೇತನ್ ಹೆಗ್ಡೆ, ಹೆಚ್ಚಿನ “ಮಧ್ಯಮ ಮತ್ತು ಉನ್ನತ ಶ್ರೇಣಿಯ” ರೆಸ್ಟೋರೆಂಟ್‌ಗಳು ಕಡ್ಡಾಯ ಸೇವಾ ಶುಲ್ಕವನ್ನು ವಿಧಿಸಲಾಗಿದೆ. ಗ್ರಾಹಕರು ಕೆಲವು ರೆಸ್ಟೋರೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೇ ಅವರು ನಿರ್ದಿಷ್ಟ ಸೇವಾ ಶುಲ್ಕವನ್ನು ಪಾವತಿಸಬೇಕು ಎನ್ನುವ ಬಗ್ಗೆ ಉಲ್ಲೇಖ ಮಾಡಿದ್ದೇವೆ. ಸೇವಾ ಶುಲ್ಕವೂ ಆ ರೆಸ್ಟೋರೆಂಟ್ ಸಿಬ್ಬಂದಿಗೆ ಸೇರುತ್ತದೆ ಎಂದು ವಿವರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರತನ್‌ ಟಾಟಾರಿಂದ ಐಪಿಎಲ್‌ ವರೆಗೆ ಭಾರತೀಯರು ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಟಾಪ್‌ 10 ವಿಷಯಗಳಿವು

ಗ್ರಾಹಕ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ವೈ.ಜಿ.ಮುರಳೀಧರನ್ ರೆಸ್ಟೋರೆಂಟ್ ಗಳಲ್ಲಿರುವ ಸೇವಾ ತೆರಿಗೆಯ ಬಗ್ಗೆ ಮಾತನಾಡಿದ್ದು, ಗ್ರಾಹಕರು ಮೊದಲು ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ದೂರು ಸಲ್ಲಿಸಿ, ಆ ಸೇವಾ ತೆರಿಗೆಯನ್ನು ರದ್ದುಗೊಳಿಸಬಹುದು. ಒಂದು ವೇಳೆ ಸೇವಾ ತೆರಿಗೆಯನ್ನು ರದ್ದುಗೊಳಿಸದೇ ಇದ್ದಲ್ಲಿ ಗ್ರಾಹಕರ ವೇದಿಕೆಗಳಿಗೆ ದೂರು ಸಲ್ಲಿಸಬಹುದು. ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೂ ಹೋಗಿ ಈ ಬಗ್ಗೆ ದೂರು ನೀಡಬಹುದು. ಆದರೆ ದೂರು ಸಲ್ಲಿಸುವ ವೇಳೆ ರೆಸ್ಟೋರೆಂಟ್‌ನ ಹೆಸರು ಮತ್ತು ಪಾವತಿಸಿದ ಬಿಲ್ ತೋರಿಸಬೇಕಾಗುತ್ತದೆ. ರೆಸ್ಟೋರೆಂಟ್ ಗಳಲ್ಲಿನ ಸೇವಾ ಶುಲ್ಕವನ್ನು ಪಾವತಿಸಲು ಒತ್ತಾಯಿಸುವಂತಿಲ್ಲ ಎಂದು ಹೆಚ್ಚಿನ ಗ್ರಾಹಕರಿಗೆ ತಿಳಿದಿಲ್ಲ. ರೆಸ್ಟೊರೆಂಟ್‌ನಲ್ಲಿ ಇದು ಕಡ್ಡಾಯ ನಮೂದಿಸಿದ್ದರೆ ಗ್ರಾಹಕರು ಅದನ್ನೇ ಕಣ್ಣು ಮುಚ್ಚಿ ನಂಬುತ್ತಾರೆ. ಹೀಗಾಗಿ ಸರ್ವಿಸ್ ಚಾರ್ಜ್ ಪಾವತಿಸುತ್ತಾರೆ, ಆ ರೀತಿಯಾಗಬಾರದು ಎಂದು ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ